ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಒಟ್ಟು 53 ಕೋಟಿ ಹೆಗ್ಗುರುತು ದಾಟಿದ ಕೋವಿಡ್-19 ಲಸಿಕಾ ಅಭಿಯಾನ


ಕಳೆದ 24 ಗಂಟೆಗಳಲ್ಲಿ 63 ಲಕ್ಷಕ್ಕೂ ಹೆಚ್ಚು ಲಸಿಕಾ ಡೋಸ್ ಗಳ ನೀಡಿಕೆ

ಪ್ರಸ್ತುತ ಚೇತರಿಕೆ ದರ 97.45% ರಷ್ಟು

ಕಳೆದ 24 ಗಂಟೆಗಳಲ್ಲಿ 38,667 ಹೊಸ ದೈನಂದಿನ ಪ್ರಕರಣ ದಾಖಲು

ಭಾರತದಲ್ಲಿ ಸಕ್ರಿಯ ಪ್ರಕರಣಗಳು (3,87,673) ಪ್ರಸ್ತುತ ಒಟ್ಟು ಸಂಖ್ಯೆಯಲ್ಲಿ 1.12% ರಷ್ಟಿದೆ

ಕಳೆದ 19 ದಿನಗಳಿಂದ ದೈನಂದಿನ ಪಾಸಿಟಿವಿಟಿ ದರ (1.73%) 3% ಕ್ಕಿಂತ ಕಡಿಮೆ

Posted On: 14 AUG 2021 9:33AM by PIB Bengaluru

ಭಾರತದಲ್ಲಿ ಕೋವಿಡ್-19 ಲಸಿಕೆ 53 ಕೋಟಿ ಹೆಗ್ಗುರುತನ್ನು ದಾಟಿದೆ. ಇಂದು ಬೆಳಿಗ್ಗೆ 7 ಗಂಟೆವರೆಗೆ ದೊರೆತ ತಾತ್ಕಾಲಿಕ ಮಾಹಿತಿಯಂತೆ ಒಟ್ಟು 60,88,437 ಅವಧಿಗಳಲ್ಲಿ 53,61,89,903 ಕೋವಿಡ್ ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ. ಕಳೆದ 214 ಗಂಟೆಗಳಲ್ಲಿ 63,80,937 ಲಸಿಕಾ ಡೋಸ್ ಗಳನ್ನು ನೀಡಲಾಗಿದೆ.

ಇವುಗಳನ್ನು ಒಳಗೊಂಡಂತೆ:

ಎಚ್.ಸಿ.ಡಬ್ಲ್ಯೂಗಳು

ಮೊದಲ ಡೋಸ್

1,03,46,330

ಎರಡನೇ ಡೋಸ್

80,69,421

ಎಫ್.ಎಲ್.ಡಬ್ಲ್ಯೂಗಳು

ಮೊದಲ ಡೋಸ್

1,82,67,067

ಎರಡನೇ ಡೋಸ್

1,20,58,038

18-44 ವಯೋಮಿತಿಯೊಳಗಿನವರು

ಮೊದಲ ಡೋಸ್

19,16,49,945

ಎರಡನೇ ಡೋಸ್

1,44,94,525

45-59 ವಯೋಮಿತಿಯೊಳಗಿನವರು

ಮೊದಲ ಡೋಸ್

11,59,91,624

ಎರಡನೇ ಡೋಸ್

4,49,05,898

60 ವರ್ಷ ಮೀರಿದರು

ಮೊದಲ ಡೋಸ್

8,05,91,149

ಎರಡನೇ ಡೋಸ್

3,98,15,906

ಒಟ್ಟು

53,61,89,903

ಕೋವಿಡ್ – 19 ಲಸಿಕಾ ಅಭಿಯಾನದ ಹೊಸ ಸಾರ್ವತ್ರೀಕರಣದ ಹಂತ 2021 ರ ಜೂನ್ 21 ರಿಂದ ಪ್ರಾರಂಭವಾಯಿತು. ದೇಶಾದ್ಯಂತ ಕೋವಿಡ್ – 19 ಲಸಿಕಾ ಅಭಿಯಾನದ ವೇಗ ಹೆಚ್ಚಿಸಲು ಮತ್ತು ವ್ಯಾಪ್ತಿ ವಿಸ್ತರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಭಾರತದ ಚೇತರಿಕೆ ದರ 97.45% ರಷ್ಟಿದೆ.

ಸಾಂಕ್ರಾಮಿಕ ಆರಂಭವಾದ ನಂತರದಿಂದ ಈವರೆಗೆ 3,13,38,088 ಮಂದಿ ಈಗಾಗಲೇ ಕೋವಿಡ್ – 19 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 35,743 ಮಂದಿ ಗುಣಮುಖರಾಗಿದ್ದಾರೆ.

https://static.pib.gov.in/WriteReadData/userfiles/image/image001TL2C.jpg

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38,667 ಹೊಸ ಪ್ರಕರಣಗಳು ದಾಖಲಾಗಿವೆ. 48 ದಿನಗಳಿಂದ ನಿರಂತರವಾಗಿ 50,000 ಕ್ಕೂ ಕಡಿಮೆ ಪ್ರಕರಣಗಳು ಪತ್ತೆಯಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳ ಸಹಕಾರದ ಪ್ರಯತ್ನದಿಂದಾಗಿ ಈ ಫಲಿತಾಂಶ ದಾಖಲಾಗಿದೆ.

https://static.pib.gov.in/WriteReadData/userfiles/image/image002IZZ7.jpg

ಭಾರತದಲ್ಲಿ 3,87,673 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕು ಪ್ರಕರಣಗಳಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 1.12% ರಷ್ಟಿದೆ. 

https://static.pib.gov.in/WriteReadData/userfiles/image/image0031GTB.jpg

ದೇಶಾದ್ಯಂತ ಸೋಂಕು ಪತ್ತೆ ಪರೀಕ್ಷೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 22,29,798 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತದಲ್ಲಿ ಈವರೆಗೆ ಒಟ್ಟು 49.17 ಕೋಟಿ ಗೂ ಅಧಿಕ 49,17,00,577) ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಒಂದೆಡೆ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ವಾರದ ಪಾಸಿಟಿವಿಟಿ ದರ 2.05% ರಷ್ಟಿದೆ ಮತ್ತು ದೈನಂದಿನ ಪಾಸಿಟಿವಿಟಿ ದರ 1.73% ರಷ್ಟಿದೆ. 19 ದಿನಗಳಿಂದ ದೈನಂದಿನ ಪಾಸಿವಿಟಿ ದರ ಇಂದು 1.73% ರಷ್ಟಿದೆ ಮತ್ತು ನಿರಂತರ 68 ದಿನಗಳಿಂದ ಶೇ 5% ಕ್ಕೂ ಕಡಿಮೆ ದಾಖಲಾಗಿದೆ.

https://static.pib.gov.in/WriteReadData/userfiles/image/image004KGEA.jpg

***



(Release ID: 1745800) Visitor Counter : 248