ಗೃಹ ವ್ಯವಹಾರಗಳ ಸಚಿವಾಲಯ

2021ರ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಅಗ್ನಿಶಾಮಕ ಸೇವೆ, ಗೃಹರಕ್ಷಕ ದಳ (ಎಚ್‌ಜಿ) ಮತ್ತು ನಾಗರಿಕ ರಕ್ಷಣಾ (ಸಿಡಿ) ಸಿಬ್ಬಂದಿಗೆ ರಾಷ್ಟ್ರಪತಿ ಪದಕಗಳ ಘೋಷಣೆ

प्रविष्टि तिथि: 14 AUG 2021 12:32PM by PIB Bengaluru

ಪ್ರತಿ ವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣೆ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗೆ ರಾಷ್ಟ್ರಪತಿ ಶೌರ್ಯ ಪದಕ ಮತ್ತು ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ, ಶೌರ್ಯ ಸೇವಾ ಪದಕ ಮತ್ತು ಪ್ರತಿಭಾನ್ವಿತ ಸೇವಾ ಪದಕಗಳನ್ನು ನೀಡಲಾಗುತ್ತದೆ.

2021ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 86 ಸಿಬ್ಬಂದಿಗೆ ಅಗ್ನಿಶಾಮಕ ಸೇವಾ ಪದಕಗಳನ್ನು ನೀಡಲಾಗಿದೆ.

ಈ ಪೈಕಿ 26 ಸಿಬ್ಬಂದಿಗೆ ಅವರ ಶೌರ್ಯ ಹಾಗೂ ಸಾಹಸಕ್ಕಾಗಿ ಅಗ್ನಿಶಾಮಕ ಶೌರ್ಯ ಸೇವಾ ಪದಕವನ್ನು ನೀಡಲಾಗಿದೆ.

10 ಸಿಬ್ಬಂದಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಅಗ್ನಿಶಾಮಕ ವಿಶಿಷ್ಟ ಸೇವಾ ಪದಕವನ್ನು ಮತ್ತು 50 ಸಿಬ್ಬಂದಿಗೆ ಪ್ರತಿಭಾನ್ವಿತ ಸೇವೆಗಾಗಿ ಅಗ್ನಿಶಾಮಕ ಸೇವಾ ಪದಕವನ್ನು ನೀಡಲಾಗಿದೆ. ಆಯಾ ಸೇವೆಯಲ್ಲಿ ವಿಶಿಷ್ಟ ಅರ್ಹತೆ ದಾಖಲೆಗಳನ್ನು ಗುರುತಿಸಿ ಈ ಪದಕಗಳನ್ನು ನೀಡಲಾಗಿದೆ.

ಇದಲ್ಲದೆ, 2021ರ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ 55 ಸಿಬ್ಬಂದಿಗೆ ಗೃಹ ರಕ್ಷಕ ಮತ್ತು ನಾಗರಿಕ ರಕ್ಷಣಾ ಪದಕಗಳನ್ನು ನೀಡಲಾಗಿದೆ. ಇವುಗಳಲ್ಲಿ 05 ಸಿಬ್ಬಂದಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಪದಕ ಹಾಗೂ 50 ಸಿಬ್ಬಂದಿಗೆ ಪ್ರತಿಭಾನ್ವಿತ ಸೇವೆಗಾಗಿ ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಪದಕವನ್ನು ನೀಡಲಾಗಿದೆ.

ಅಗ್ನಿಶಾಮಕ ಸೇವಾ ಪದಕಗಳು ಮತ್ತು ಗೃಹ ರಕ್ಷಕ ಮತ್ತು ನಾಗರಿಕ ರಕ್ಷಣಾ ಪದಕಗಳ ವಿಜೇತರ ಪಟ್ಟಿಯನ್ನು ಅನುಬಂಧದಲ್ಲಿ ನೀಡಲಾಗಿದೆ.

***


(रिलीज़ आईडी: 1745788) आगंतुक पटल : 426
इस विज्ञप्ति को इन भाषाओं में पढ़ें: Telugu , Bengali , English , Urdu , हिन्दी , Marathi , Punjabi , Odia , Tamil