ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಭವಿಷ್ಯ ಸನ್ನದ್ಧ ಕಾರ್ಯಪಡೆಯನ್ನು ತಯಾರಿಸುವ ಸಲುವಾಗಿ ಶಿಕ್ಷಣ ಮತ್ತು ಕೌಶಲ್ಯಗಳ ನಡುವೆ ಹೆಚ್ಚಿನ ಸಮನ್ವಯವನ್ನು ಸೃಷ್ಟಿಸಲು ಸರಕಾರ ಕಾರ್ಯಪ್ರವೃತ್ತವಾಗಿದೆ: ಕೇಂದ್ರ ಶಿಕ್ಷಣ ಸಚಿವರು


ಕೌಶಲ್ಯ ಸಾಮರ್ಥ್ಯ ಹೆಚ್ಚಳವು ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಆರ್ಥಿಕತೆಯನ್ನು ಮುನ್ನಡೆಸಲು ನಿರ್ಣಾಯಕವಾಗಿದೆ:  ಶ್ರೀ ಧರ್ಮೇಂದ್ರ ಪ್ರಧಾನ್

'ಉದ್ಯೋಗ ಸೃಷ್ಟಿ ಮತ್ತು ಉದ್ಯಮಶೀಲತೆ - ಜೀವನೋಪಾಯಕ್ಕಿಂತ ಮಿಗಿಲಾದುದುʼ ವಿಷಯದ ಬಗ್ಗೆ ʻಸಿಐಐʼನ ಸರ್ವಸದಸ್ಯರ ವರ್ಚುವಲ್ ಅಧಿವೇಶನ ಉದ್ದೇಶಿಸಿ ಕೇಂದ್ರ ಶಿಕ್ಷಣ ಸಚಿವರು ಮಾತನಾಡಿದರು

Posted On: 12 AUG 2021 1:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಆರ್ಥಿಕತೆಯು ತ್ವರಿತ ಗತಿಯಲ್ಲಿ ಬೆಳೆಯುತ್ತಿದೆ ಮತ್ತು ಭಾರತದ ಭವಿಷ್ಯವು ಬಹಳ ಆಶಾದಾಯಕವಾಗಿ ಕಾಣುತ್ತಿದೆ ಎಂದು ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಹೇಳಿದರು. ʻಉದ್ಯೋಗ ಸೃಷ್ಟಿ ಮತ್ತು ಉದ್ಯಮಶೀಲತೆಜೀವನೋಪಾಯಕ್ಕಿಂತ ಮಿಗಿಲಾದುದುʼ ವಿಷಯದ ಬಗ್ಗೆ ಸಿಐಐನ ಸರ್ವಸದಸ್ಯರ ವರ್ಚುಯಲ್‌ ಅಧಿವೇಶನದಲ್ಲಿ ಮಾತನಾಡಿದ ಅವರು, ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಆರ್ಥಿಕತೆಯನ್ನು ಮುನ್ನಡೆಸಲು ಕೌಶಲ್ಯ ಸಾಮರ್ಥ್ಯ ವರ್ಧನೆಯು ನಿರ್ಣಾಯಕವಾಗಿದೆ ಎಂದರು.

 

ಯುವ ಜನತೆಯನ್ನು 21ನೇ ಶತಮಾನಕ್ಕೆ ಸಜ್ಜುಗೊಳಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಶ್ರೀ ಪ್ರಧಾನ್ ಅವರು ಒತ್ತಿ ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) -2020  ದೃಷ್ಟಿಕೋನದಂತೆ, ಭವಿಷ್ಯ ಸನ್ನದ್ಧ ಕಾರ್ಯಪಡೆಯನ್ನು ರೂಪಿಸಲು ಶಿಕ್ಷಣ ಮತ್ತು ಕೌಶಲ್ಯಗಳ ನಡುವೆ ಹೆಚ್ಚಿನ ಸಮನ್ವಯವನ್ನು ಸೃಷ್ಟಿಸಲು ಸರಕಾರ ಕಾರ್ಯೋನ್ಮುಖವಾಗಿದೆ ಎಂದು ಅವರು ಹೇಳಿದರು. ದೃಢವಾದ ಶಿಕ್ಷಣ ಪರಿಸರ ವ್ಯವಸ್ಥೆಯನ್ನು ರೂಪಿಸಲು ಮತ್ತು ಅಂತಿಮವಾಗಿ ಆರ್ಥಿಕ ಬೆಳವಣಿಗೆಗೆ ಅನುಕೂಲ ಮಾಡಿಕೊಡುವಲ್ಲಿ ʻಎನ್‌ಇಪಿʼ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.

ಸಾಂಕ್ರಾಮಿಕವು ಶಿಕ್ಷಣ ಸಂಸ್ಥೆಗಳು ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಮೇಲೆ ಪರಿಣಾಮ ಬೀರಿದೆ. ಆದರೆ ಸರಕಾರವು ದೊಡ್ಡ ಮಟ್ಟದಲ್ಲಿ ಡಿಜಿಟಲ್ ವಿಷಯ ವಸ್ತುವನ್ನು ಅಭಿವೃದ್ಧಿಪಡಿಸುವ ಮೂಲಕ ಶಿಕ್ಷಣದ ನಿರಂತರತೆಯನ್ನು ಕಾಯ್ದುಕೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಹಳ್ಳಿಯೂ ಹೈಸ್ಪೀಡ್ ಇಂಟರ್ನೆಟ್‌ನೊಂದಿಗೆ ಸಂಪರ್ಕ ಹೊಂದಲಿದೆ ಮತ್ತು ಸಾಮೂಹಿಕ ಪ್ರಮಾಣದ ಡಿಜಿಟಲೀಕರಣ ಪ್ರಯತ್ನಗಳು ಹೊಸ ಶಿಕ್ಷಣ, ಕೌಶಲ್ಯ ಮತ್ತು ಉದ್ಯಮಶೀಲ ಪರಿಸರ ವ್ಯವಸ್ಥೆಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು.

ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ತಂತ್ರಜ್ಞಾನವು ಸಮಾಜವನ್ನು ಮರುರೂಪಿಸುತ್ತಿದೆ ಎಂದು ಶ್ರೀ ಪ್ರಧಾನ್ ಒತ್ತಿ ಹೇಳಿದರು. ಸುಧಾರಿತ ತಂತ್ರಜ್ಞಾನದ ಆಗಮನ ಮತ್ತು ಬದಲಾಗುತ್ತಿರುವ ಸಮಾಜದೊಂದಿಗೆ, ನಮ್ಮ ಶಿಕ್ಷಕರು ಮರು ಕೌಶಲ್ಯ ಹೊಂದುವುದು ಮತ್ತು ಕೌಶಲ್ಯ ವೃದ್ಧಿಗೆ ಮುಂದಾಗುವುದು ಅಗತ್ಯ ಎಂದು ಅವರು ಸಲಹೆ ನೀಡಿದರು.

ನಾವು ʻಸ್ವಾತಂತ್ರ್ಯದ ಅಮೃತ ಮಹೋತ್ಸವʼವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಆತ್ಮನಿರ್ಭರ ಭಾರತದ ಗುರಿಯತ್ತ ಭಾರತವನ್ನು ಮುನ್ನಡೆಸುವ ನಿಟ್ಟಿನಲ್ಲಿ ನಮ್ಮ ಯುವ ಜನತೆಯ ಭವಿಷ್ಯ ಸನ್ನದ್ಧಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಶ್ರೀ ಪ್ರಧಾನ್ ಕರೆ ನೀಡಿದರು. ಗುರಿಯೊಂದಿಗೆ ಭಾರತವು ತ್ವರಿತ ಆರ್ಥಿಕ ಬೆಳವಣಿಗೆಗೆ ಸಾಕ್ಷಿಯಾಗಲಿದೆ ಮತ್ತು ಜಾಗತಿಕ ಬೆಳವಣಿಗೆಯ ಎಂಜಿನ್ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ನಿಟ್ಟಿನಲ್ಲಿ ಕೊಡುಗೆ ನೀಡುವಂತೆ ಸಚಿವರು ಉದ್ಯಮಕ್ಕೆ ಕರೆ ನೀಡಿದರು.

 

ʻಡಿಸಿಎಂ ಶ್ರೀರಾಮ್ ಲಿಮಿಟೆಡ್ʼ ಅಧ್ಯಕ್ಷ ಮತ್ತು ಹಿರಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಜಯ್ ಶ್ರೀರಾಮ್, ʻಸಿಐಐʼ ಮಹಾ ನಿರ್ದೇಶಕ ಶ್ರೀ ಚಂದ್ರಜಿತ್ ಬ್ಯಾನರ್ಜಿ, ʻಪ್ರಥಮ್ ಎಜುಕೇಶನ್ ಫೌಂಡೇಶನ್ʼ ಡಾ. ಗಾಯತ್ರಿ ವಾಸುದೇವನ್ ಮತ್ತು ಇತರ  ತಜ್ಞರು ಅಧಿವೇಶನದಲ್ಲಿ ಭಾಗವಹಿಸಿದ್ದರು.

***



(Release ID: 1745150) Visitor Counter : 166