ಪ್ರವಾಸೋದ್ಯಮ ಸಚಿವಾಲಯ

50 ಕೋಟಿ ಲಸಿಕೆಗಳು ಪ್ರವಾಸೋದ್ಯಮ ಕ್ಷೇತ್ರಕ್ಕೆ  ಬಹು ದೊಡ್ಡ ಆತ್ಮವಿಶ್ವಾಸವನ್ನು ನೀಡಿವೆ: ಶ್ರೀ ಜಿ. ಕಿಶನ್ ರೆಡ್ಡಿ

Posted On: 09 AUG 2021 4:11PM by PIB Bengaluru

ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ (ಡೊನೆರ್) ಸಚಿವರಾದ ಶ್ರೀ ಜಿ ಕಿಶನ್ ರೆಡ್ಡಿ ಅವರು ಕೋವಿಡ್ 19 ಲಸಿಕೆಯು 50 ಕೋಟಿ ಡೋಸ್‌ಗಳ ಹೆಗ್ಗುರುತನ್ನು ದಾಟಿರುವುದು  ಪ್ರವಾಸೋದ್ಯಮಕ್ಕೆ ಬಹು ದೊಡ್ಡ ಭರವಸೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.

"50 ಕೋಟಿ #COVID ಲಸಿಕೆಗಳನ್ನು ನೀಡುವುದರ ಮೂಲಕ, ನಮ್ಮ ಜನರು, ಆರೋಗ್ಯ ರಕ್ಷಣೆ ಪೂರೈಕೆದಾರರು  ಮತ್ತು @narendramodi ಸರ್ಕಾರದ ಸಂಘಟಿತ ಪ್ರಯತ್ನಗಳಿಂದ ಭಾರತವು ಸಾಂಕ್ರಾಮಿಕ ರೋಗದಿಂದ ಹೊರ ಬರುತ್ತಿದೆ ಎಂದು ನಾವು ಜಗತ್ತಿಗೆ ಸಾಬೀತುಪಡಿಸಿದ್ದೇವೆ! #SabkoVaccineMuftVaccine ” ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಟ್ವೀಟ್: https://twitter.com/kishanreddybjp/status/1423674302314868741?s=20

Image

ಪ್ರವಾಸೋದ್ಯಮದ ಪುನರುಜ್ಜೀವಕ್ಕೆ ಲಸಿಕೆನೀಡಿಕೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. "ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವು ಪ್ರವಾಸೋದ್ಯಮದ ಪುನರುಜ್ಜೀವಕ್ಕೆ ಸಹಾಯ ಮಾಡುವುದಲ್ಲದೆ  ವಿದೇಶಿ ಪ್ರವಾಸಿಗರ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಅದರಿಂದ ದೇಶದ ಪ್ರವಾಸೋದ್ಯಮದ ಚೇತರಿಕೆಗೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರುಎಲ್ಲಾ ನಾಗರಿಕರು ಮತ್ತು ಪ್ರವಾಸೋದ್ಯಮದ ಪಾಲುದಾರರು ಸಹಕರಿಸಬೇಕು ಮತ್ತು ಲಸಿಕೆ ಪಡೆಯಲು ಮುಂದಾಗಬೇಕು, ಇದರಿಂದ ಜನರು ತಮ್ಮನ್ನು ವೈರಸ್‌ನಿಂದ ರಕ್ಷಿಸಿಕೊಳ್ಳಬಹುದು ಎಂದು ಶ್ರೀ ರೆಡ್ಡಿಯವರು ಹೇಳಿದರು. ಆದಾಗ್ಯೂ, ಸಾಮಾಜಿಕ ಅಂತರಮುಖಗವಸು ಧರಿಸುವಿಕೆ ಸೇರಿದಂತೆ ನಾವೆಲ್ಲರೂ ಆರೋಗ್ಯ ಸಚಿವಾಲಯವು ಶಿಫಾರಸು ಮಾಡಿದ ಶಿಷ್ಟಾಚಾರಗಳನ್ನು ಅನುಸರಿಸಬೇಕು ಎಂದು ಅವರು ಒತ್ತಿ ಹೇಳಿದರು

ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಕೈಗೊಂಡ ಹಲವಾರು ಪೂರ್ವಭಾವಿ ಕ್ರಮಗಳು ಲಸಿಕೆನೀಡಿಕೆಯ ವೇಗವೂ ಕಾರಣ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.   "ಇಂದು ನಾವು ನೋಡುತ್ತಿರುವ ಫಲಿತಾಂಶಗಳು ಪ್ರಧಾನ ಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ನಮ್ಮ ಸರ್ಕಾರದ ಸತತ  ಪ್ರಯತ್ನಗಳಿಂದಾಗಿವೆ. ಲಸಿಕೆ ಅಭಿವೃದ್ಧಿಗೆ ಇನ್ಕ್ಯುಬೇಟರ್ ಕಾರ್ಯನಿರ್ವಹಿಸುವಂತೆ  ನಮ್ಮ ಸರ್ಕಾರ ಹಾಗು ನಾವು ಕೆಲಸ  ಮಾಡಿದ್ದೇವೆಆದ್ದರಿಂದ ಪ್ರಪಂಚದ ಯಾವುದೇ ದೇಶಗಳಿಗಿಂತ ಹೆಚ್ಚು ಜನರಿಗೆ ಪ್ರತಿದಿನ ಲಸಿಕೆ ನೀಡುವಂತಾಯಿತು.”

ಮುಂಚೂಣಿಯ ಕೆಲಸಗಾರರು ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಮಾಡಿದ ಕೆಲಸವನ್ನು ಕೇಂದ್ರ ಸಚಿವರು ಶ್ಲಾಘಿಸಿದರು "ವೈದ್ಯರು, ದಾದಿಯರು, ಮುನ್ಸಿಪಲ್ ಕಾರ್ಮಿಕರು, ಆಶಾ ಕಾರ್ಯಕರ್ತರು ಮತ್ತು ಸರ್ಕಾರಿ ನೌಕರರನ್ನು ಒಳಗೊಂಡ ಎಲ್ಲ ಆರೋಗ್ಯ ಕಾರ್ಯಕರ್ತರನ್ನು ನಾನು ಅಭಿನಂದಿಸುತ್ತೇನೆ. ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗುವ ಮುನ್ನವೇ ಅವರು ಕೋವಿಡ್ -19 ವಿರುದ್ಧಸುರಕ್ಷಾ ಕವಚವಾಗಿದ್ದರು '' ಎಂದು ಸಚಿವರು ಹೇಳಿದರು.

21 ನೇ ಜೂನ್ 2021 ರಿಂದ ಆರಂಭವಾದ ಕೋವಿಡ್ 19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತದ ನಂತರ ಲಸಿಕೆ ಅಭಿಯಾನದ ವೇಗವು ಜನರಲ್ಲಿ ಸುಭದ್ರತೆಯ ಭಾವನೆಯನ್ನು ಮೂಡಿಸಿದೆ ಎಂದು ಸಚಿವರು ಹೇಳಿದ್ದಾರೆ, “ 10 ಕೋಟಿ ಲಸಿಕೆಗಳನ್ನು ನೀಡಲು  ನಮಗೆ ಕೇವಲ 20 ದಿನಗಳು ಬೇಕಾಯಿತು ಮತ್ತು ಇದು ಸಾರ್ವತ್ರಿಕ ಲಸಿಕೆಯತ್ತ ಸರ್ಕಾರ ಕೆಲಸದಲ್ಲಿ ಮಾಡುತ್ತಿರುವ ಚುರುಕುತನವನ್ನು ತೋರಿಸುತ್ತದೆ "

***



(Release ID: 1744661) Visitor Counter : 205