ರಕ್ಷಣಾ ಸಚಿವಾಲಯ

ರಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸೇನಾ ಕ್ರೀಡಾಕೂಟ – 2021 ರಲ್ಲಿ ಭಾಗವಹಿಸಲಿರುವ ಭಾರತೀಯ ಸೇನೆ

Posted On: 09 AUG 2021 9:56AM by PIB Bengaluru

2021 ಆಗಸ್ಟ್ 22 ರಿಂದ 2021 ಸೆಪ್ಟೆಂಬರ್ 04 ವರೆಗೆ ರಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸೇನಾ ಕ್ರೀಡಾಕೂಟ2021 ರಲ್ಲಿ ಭಾಗವಹಿಸಲು ಭಾರತೀಯ ಸೇನೆಯ 101 ಸದಸ್ಯರ ತಂಡ ರಷ್ಯಾಗೆ ತೆರಳಲಿದೆ.

ಭಾರತೀಯ ತಂಡ ಆರ್ಮಿ ಸ್ಕೌಟ್ಸ್ ಮಾಸ್ಟರ್ಸ್ ಸ್ಪರ್ಧೆ [.ಎಸ್.ಎಂ.ಸಿ], ಎಲ್ಬ್ರಸ್ ರಿಂಗ್, ಪೊಲಾರ್ ಸ್ಟಾರ್, ಸ್ನೈಪೆರ್ ಪ್ರೆಂಟಿಯರ್ ಮತ್ತು ಸೇಫ್ ರೂಟ್ ಆಟಗಳಲ್ಲಿ ಭಾಗವಹಿಸಲಿದ್ದು, ಅತಿ ಎತ್ತರದ ಭೂ ಪ್ರದೇಶಗಳಲ್ಲಿ ವಿವಿಧ ಬಗೆಯ ಡ್ರಿಲ್ ಗಳು, ಹಿಮ ಪ್ರದೇಶದಲ್ಲಿ ಕಾರ್ಯಾಚರಣೆ, ಸ್ನೈಪರ್ ನಲ್ಲಿ ಪಾಲ್ಗೊಳ್ಳಲಿದೆ. ಅಲ್ಲದೇ ಅಡೆತಡೆಯುಳ್ಳ ಭೂ ಪ್ರದೇಶದಲ್ಲಿ ವಿವಿಧ ರೀತಿಯ ಯುದ್ಧ ತಾಂತ್ರಿಕ ಕೌಶಲ್ಯಗಳನ್ನು ಸಹ ಪ್ರದರ್ಶಿಲಿದೆ.

ಓಪನ್ ವಾಟರ್ ಮತ್ತು ಫಾಲ್ಕನ್ ಹಂಟಿಂಗ್ ಕ್ರೀಡೆಗಳಲ್ಲಿ ಭಾಗವಹಿಸಲು ಇಬ್ಬರು ವೀಕ್ಷಕರ[ತಲಾ ಒಬ್ಬರಂತೆ]ನ್ನು ನಿಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸುವ ತಂಡಗಳು ಪಾಂಟೂನ್ ಸೇತುವೆ ಮತ್ತು ಯು..ವಿ ಸಿಬ್ಬಂದಿ ಕೌಶಗಳನ್ನು ಪ್ರದರ್ಶಿಸಲಿವೆ.

ಭಾರತೀಯ ಸೇನೆಯ ವಿವಿಧ ಸಶಸ್ತ್ರಪಡೆಗಳಲ್ಲಿ ಮೂರು ಹಂತಗಳ ಪರಿಶೀಲನೆಯ ನಂತರ ಅತ್ಯುತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ವಾರ್ಷಿಕ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ಭಾರತೀಯ ಸೇನೆಯ ವೃತ್ತಿಪರತೆ ಯಾವ ಮಟ್ಟದಲ್ಲಿದೆ ಎಂಬುದರ ಪ್ರತೀಕವಾಗಿದೆ ಸ್ಪರ್ಧೆ ಸೇನೆಯಿಂದ ಸೇನೆಯ ನಡುವೆ ಸಹಕಾರವನ್ನು ಪೋಷಿಸಲಿದ್ದು, ಭಾಗವಹಿಸುವ ರಾಷ್ಟ್ರಗಳ ನಡುವೆ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಸಹಕಾರಿಯಾಗಲಿದೆ. 2019 ರಲ್ಲಿ ಜೈಸಲ್ಮೇರ್ ನಲ್ಲಿ ನಡೆದ ಆರ್ಮಿ ಸ್ಕೌಟ್ಸ್ ಮಾಸ್ಟರ್ಸ್ ಸ್ಪರ್ಧೆಯಲ್ಲಿ ಎಂಟು ರಾಷ್ಟ್ರಗಳು ಪಾಲ್ಗೊಂಡಿದ್ದು, ಭಾರತ ಪ್ರಥಮ ಸ್ಥಾನ ಪಡೆದಿತ್ತು.

***



(Release ID: 1743998) Visitor Counter : 307