ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಜಿ 20 ರಾಷ್ಟ್ರಗಳ ಡಿಜಿಟಲ್ ಸಚಿವರ ಸಭೆಯಲ್ಲಿ "ಸ್ಥಿತಿಸ್ಥಾಪಕ, ಶಕ್ತಿಯುತ, ಸುಸ್ಥಿರ ಮತ್ತು ಅಂತರ್ಗತ ಚೇತರಿಕೆಗೆ ಡಿಜಿಟಲೀಕರಣವನ್ನು ಸದುಪಯೋಗಪಡಿಸಿಕೊಳ್ಳುವ" ಘೋಷಣೆ ಅಂಗೀಕಾರ


ಶೃಂಗಸಭೆಯಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿದ ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್

ಸಾಮಾಜಿಕ ಸೇರ್ಪಡೆಗೆ ಡಿಜಿಟಲ್ ಆರ್ಥಿಕತೆಯು ನಿರ್ಣಾಯಕ ಸಾಧನವಾಗಿದೆ: ಶ್ರೀ ಅಶ್ವಿನಿ ವೈಷ್ಣವ್

ಜಿ 20 ದೇಶಗಳು ಎಲ್ಲರಿಗೂ ಉಚಿತ, ಮುಕ್ತ, ಪಾರದರ್ಶಕ, ಸುರಕ್ಷಿತ ಮತ್ತು ನಂಬಲರ್ಹ ಅಂತರ್ಜಾಲಕ್ಕಾಗಿ ತಂತ್ರಜ್ಞಾನದ ಬಳಕೆಗೆ ಸಹಕರಿಸಬೇಕು: ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್

Posted On: 06 AUG 2021 11:49AM by PIB Bengaluru

ಆಗಸ್ಟ್ 5, 2020 ರಂದು ಇಟಲಿಯ ಟ್ರಿಸ್ಟೆಯಲ್ಲಿ ನಡೆದ ಜಿ 20 ರಾಷ್ಟ್ರಗಳ ಡಿಜಿಟಲ್ ಸಚಿವರ ಸಭೆಯಲ್ಲಿ, "ಸ್ಥಿತಿಸ್ಥಾಪಕ, ಶಕ್ತಿಯುತ, ಸುಸ್ಥಿರ ಮತ್ತು ಅಂತರ್ಗತ ಚೇತರಿಕೆಗೆ ಡಿಜಿಟಲೀಕರಣವನ್ನು ಸದುಪಯೋಗಪಡಿಸಿಕೊಳ್ಳುವ" ಘೋಷಣೆಯನ್ನು ಅಂಗೀಕರಿಸಲಾಯಿತು. ಡಿಜಿಟಲ್ ಆರ್ಥಿಕತೆ ಮತ್ತು ಡಿಜಿಟಲ್ ಸರ್ಕಾರದ ಸ್ತಂಭಗಳ ಮೇಲೆ ವರ್ಧಿತ ಸಹಕಾರಕ್ಕಾಗಿ ಕೆಲಸ ಮಾಡಲು ಸಚಿವರು ಒಪ್ಪಿದರು.

https://static.pib.gov.in/WriteReadData/userfiles/image/image0016QO7.jpg

ವರ್ಚುವಲ್ ಮಾದರಿಯಲ್ಲಿ ನಡೆದ ಸಭೆಯ ಭಾರತದ ನೇತೃತ್ವವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ವಹಿಸಿದ್ದರು. ಭಾರತದ ಡಿಜಿಟಲೀಕರಣದ ಯಶೋಗಾಥೆಯನ್ನು ಅವರು ಹಂಚಿಕೊಂಡರು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಡಿಜಿಟಲ್ ಸೇರ್ಪಡೆ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ 2015 ರಿಂದ ಡಿಜಿಟಲ್ ಇಂಡಿಯಾ ಮೂಲಕ ಸಾಧಿಸಿದ ಪರಿವರ್ತನೆಯನ್ನು ಶ್ರೀ ವೈಷ್ಣವ್ ಹಂಚಿಕೊಂಡರು. ಆಧಾರ್, ನೇರ ನಗದು ವರ್ಗಾವಣೆ (ಡಿಬಿಟಿ) ಮುಂತಾದ ಡಿಜಿಟಲ್ ತಂತ್ರಜ್ಞಾನಗಳು ಮತ್ತು ಸಾರ್ವಜನಿಕ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಜನರ ಸಬಲೀಕರಣದ ಕುರಿತು ಮಾತನಾಡಿದ ಅವರು, "ಡಿಜಿಟಲ್ ಗುರುತಾದ ಆಧಾರ್ ಅನ್ನು 1.29 ಬಿಲಿಯನ್ ಬಳಕೆದಾರರಿಗೆ ಒದಗಿಸಿರುವುದು, 430 ಮಿಲಿಯನ್ ಬಡ ಜನರ ಬ್ಯಾಂಕ್ ಖಾತೆಗಳನ್ನು ತೆರೆದಿರುವುದು ಮತ್ತು ಇವೆರಡನ್ನೂ ಜೋಡಿಸುವ ಮೂಲಕ ಹಣಕಾಸಿನ ಸೌಲಭ್ಯಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಕಳುಹಿಸುತ್ತಿರುವುದರಿಂದ ವಿತರಣಾ ವ್ಯವಸ್ಥೆಯಲ್ಲಿನ ಸೋರಿಕೆಯನ್ನು ನಿವಾರಿಸಲಾಗಿದೆ. ಸುಮಾರು 900 ಮಿಲಿಯನ್ ನಾಗರಿಕರು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಇದು ಸಾಮಾನ್ಯ ನಾಗರಿಕರನ್ನು ಸಬಲೀಕರಣಗೊಳಿಸುವುದಲ್ಲದೆ ಕಳೆದ ಏಳು ವರ್ಷಗಳಲ್ಲಿ 24 ಶತಕೋಟಿ ಡಾಲರ್ಗಳಷ್ಟು ಉಳಿತಾಯಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಸಾಂಕ್ರಾಮಿಕ ಸಮಯದಲ್ಲಿ ಭಾರತವು ಪ್ರಬಲವಾಗಿ ಪ್ರತಿಪಾದಿಸುವ ಡಿಜಿಟಲ್ ಸೇರ್ಪಡೆಯ ಪ್ರಾಮುಖ್ಯತೆಯನ್ನು ಶ್ರೀ ವೈಷ್ಣವ್ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ತಂತ್ರಜ್ಞಾನವು ಡಿಜಿಟಲ್ ಸೇರ್ಪಡೆಗಾಗಿ ಿರುವುದೇ ಹೊರತು, ಡಿಜಿಟಲ್ ವಿಭಜನೆಯನ್ನು ಸೃಷ್ಟಿಸುವುದಕ್ಕಾಗಿ ಅಲ್ಲ ಮತ್ತು ಡಿಜಿಟಲ್ ಆರ್ಥಿಕತೆಯು ಸಾಮಾಜಿಕ ಸೇರ್ಪಡೆಗೆ ಪ್ರಮುಖ ಸಾಧನವಾಗಿದೆ ಎಂದು ಭಾರತ ಯಾವಾಗಲೂ ಪ್ರತಿಪಾದಿಸುತ್ತಿದೆ ಎಂದರು. ಜಿ 20 ವೇದಿಕೆಯಲ್ಲಿ ನಿಕಟವಾದ ಪಾಲುದಾರಿಕೆಗೆ ಭಾರತದ ಬೆಂಬಲವನ್ನು ವ್ಯಕ್ತಪಡಿಸಿದ ಅವರು, ಡಿಜಿಟಲ್ ಸೇರ್ಪಡೆ ಮತ್ತು ಸಾಮಾಜಿಕ ಸಬಲೀಕರಣದ ಕಡೆಗೆ ಭವಿಷ್ಯದ ಸಹಕಾರಕ್ಕಾಗಿ ದೇಶಗಳನ್ನು ಆಹ್ವಾನಿಸಿದರು.

https://static.pib.gov.in/WriteReadData/userfiles/image/image0024L51.jpg

ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮತ್ತು ಸಂಪರ್ಕ ಸೇರಿದಂತೆ ದೃಢವಾದ ಮತ್ತು ಸುರಕ್ಷಿತವಾದ ಡಿಜಿಟಲ್ ಮೂಲಸೌಕರ್ಯಗಳ ಲಭ್ಯತೆಯ ಭಾರತದ ಮಾದರಿಯ ಬಗ್ಗೆ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಮಾತನಾಡಿದರು. ಆಧಾರ್ ಪಾತ್ರದ ಬಗ್ಗೆ ವನ್ನು ಒತ್ತಿಹೇಳಿದ ಅವರು, ಇದು ವಿಶಿಷ್ಟ ಡಿಜಿಟಲ್ ಗುರುತು, ಇದು ಭಾರತದ ನಿವಾಸಿಗಳಿಗೆ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ದೃಢೀಕರಿಸಲು ಮತ್ತು ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳನ್ನು ಸಮರ್ಥವಾಗಿ ಮತ್ತು ಪಾರದರ್ಶಕವಾಗಿ ತಲುಪಿಸುವ ಉದ್ದೇಶ ಹೊಂದಿದೆ. ಜಾಗತಿಕ ಇತಿಹಾದಲ್ಲಿ ಹಿಂದೆಂದಿಗಿಂತಲೂ ಈಗ ತಂತ್ರಜ್ಞಾನ ಮತ್ತು ಡಿಜಿಟಲೀಕರಣವು  ಮುನ್ನೆಲೆಯ ಮತ್ತು ಕೇಂದ್ರಬಿಂದುವಾಗಿದೆ ಎಂದು ವಿಶ್ವಾದ್ಯಂತ ಜೀವನ, ಜೀವನೋಪಾಯ ಮತ್ತು ಆರ್ಥಿಕತೆಗೆ ಅಡಚಣೆ ಮಾಡಿದ ಕೋವಿಡ್ಗೆ ಪ್ರತಿ ಸರ್ಕಾರದ  ಪ್ರತಿಕ್ರಿಯೆಯ ಟೂಲ್ಕಿಟ್ಗಳಲ್ಲಿ ಇದು ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಜಿ 20 ದೇಶಗಳು ಉಚಿತ, ಮುಕ್ತ, ಪಾರದರ್ಶಕ, ಸುರಕ್ಷಿತ ಮತ್ತು ನಂಬಲರ್ಹ ಅಂತರ್ಜಾಲದಲ್ಲಿ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಲು ಸಹಕರಿಸಬೇಕು ಎಂದು ಅವರು ಸಲಹೆ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಬಡವರು ಮತ್ತು ಹಿಂದುಳಿದ ವರ್ಗಗಳ ಜೀವನವನ್ನು ಪರಿವರ್ತಿಸುವ ತಂತ್ರಜ್ಞಾನದ ಮಾದರಿಯನ್ನು ಯಶಸ್ವಿಯಾಗಿ ತೋರಿಸಿಕೊಟ್ಟಿದೆ ಎಂದು ಸಚಿವರು ತಿಳಿಸಿದರು.

***



(Release ID: 1743227) Visitor Counter : 262