ಜವಳಿ ಸಚಿವಾಲಯ
ಆಗಸ್ಟ್ 07, 2021ರಂದು 7ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಿರುವ ಜವಳಿ ಸಚಿವಾಲಯ
ಜಮ್ಮು ಮತ್ತು ಕಾಶ್ಮೀರದ ಕನಿಹಾಮಾ, ಕೇರಳದ ಕೋವಲಂ ಮತ್ತು ಅಸ್ಸಾಂನ ಮೊಹ್ಪಾರಾ ಕರಕುಶಲ ಗ್ರಾಮಗಳನ್ನು ಪ್ರದರ್ಶಿಸಲಾಗುವುದು
ತಮಿಳುನಾಡಿನ ಕಾಂಚೀಪುರಂನಲ್ಲಿ ವಿನ್ಯಾಸ ಸಂಪನ್ಮೂಲ ಕೇಂದ್ರದ ಉದ್ಘಾಟನೆ
ಛತಿಸ್‌ಗಢದ ರಾಯ್‌ಗಢದಲ್ಲಿ ನೇಕಾರರ ಸೇವಾ ಕೇಂದ್ರದ ಕಟ್ಟಡ ಉದ್ಘಾಟನೆ
ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದಿಂದ ವರ್ಚುವಲ್ ಖರೀದಿದಾರ ಮಾರಾಟಗಾರರ ಸಭೆ
ಆಗಸ್ಟ್ 7ರಿಂದ 11ರವರೆಗೆ ಮತ್ತು ಆಗಸ್ಟ್ 19 ರಿಂದ 22, 2021ರವರೆಗೆ ಕೈಮಗ್ಗಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗಾಗಿ ʻಮೈಗವ್ʼ (MyGov) ಪೋರ್ಟಲ್ನಿಂದ ರಸಪ್ರಶ್ನೆ ಆಯೋಜನೆ
Posted On:
06 AUG 2021 1:37PM by PIB Bengaluru
ಜವಳಿ ಸಚಿವಾಲಯವು ಆಗಸ್ಟ್ 07, 2021 ರಂದು 7ನೇ ʻರಾಷ್ಟ್ರೀಯ ಕೈಮಗ್ಗ ದಿನʼವನ್ನುಆಚರಿಸಲಿದೆ. ಈ ದಿನದಂದು ಕೈಮಗ್ಗ ನೇಕಾರರ ಸಮುದಾಯವನ್ನು ಗೌರವಿಸಲಾಗುತ್ತದೆ ಮತ್ತು ಈ ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಈ ವಲಯದ ಕೊಡುಗೆಯನ್ನು ಎತ್ತಿ ತೋರಲಾಗುತ್ತದೆ. ನಮ್ಮ ಕೈಮಗ್ಗ ಪರಂಪರೆಯನ್ನು ರಕ್ಷಿಸುವ ಮತ್ತು ಕೈಮಗ್ಗ ನೇಕಾರರು ಮತ್ತು ಕಾರ್ಮಿಕರನ್ನು ಹೆಚ್ಚಿನ ಅವಕಾಶಗಳೊಂದಿಗೆ ಸಬಲಗೊಳಿಸುವ ಸಂಕಲ್ಪವನ್ನು ಈ ದಿನದಂದು ಪುನರುಚ್ಚರಿಸಲಾಗುತ್ತದೆ. ಈ ವರ್ಷ, ಜವಳಿ ಸಚಿವಾಲಯವು ನವದೆಹಲಿಯ ಚಾಣಕ್ಯಪುರಿಯ ʻಅಶೋಕ್ ಕನ್ವೆನ್ಷನ್ ಸೆಂಟರ್ʼನಲ್ಲಿ ಕೈಮಗ್ಗ ದಿನ ಆಚರಣೆ ಸಮಾರಂಭವನ್ನು ಆಯೋಜಿಸಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಜವಳಿ, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಹಾಗೂ ನಾಗರಿಕ ಸರಬರಾಜು ಖಾತೆ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ವಹಿಸಲಿದ್ದು, ಜವಳಿ ಮತ್ತು ರೈಲ್ವೆ ಖಾತೆ ಸಹಾಯಕ ಸಚಿವೆ ಶ್ರೀಮತಿ ದರ್ಶನಾ ಜರ್ದೋಶ್ ಅವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜವಳಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಯು.ಪಿ. ಸಿಂಗ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಮ್ಮೆಲ್ಲರನ್ನೂ ಕುರಿತು ಒಂದು ದೇಶವಾಗಿ ಭಾರತೀಯ ಕೈಮಗ್ಗ ಉತ್ಪನ್ನಗಳನ್ನು ಖರೀದಿಸುವಂತೆ ಮತ್ತು #MyHandloomMyPride (ಕೈಮಗ್ಗ ನನ್ನ ಹೆಮ್ಮೆ) ಅಭಿಯಾನದೊಂದಿಗೆ ಕೈಜೋಡಿಸುವ ಮೂಲಕ ಅವುಗಳ ಭವ್ಯತೆಯನ್ನು ಪ್ರದರ್ಶಿಸುವಂತೆ ಒತ್ತಾಯಿಸಿದ್ದಾರೆ.
ನಮ್ಮ ದೇಶದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಸಂಕೇತ ಕೈಮಗ್ಗ. ಇದು ನಮ್ಮ ದೇಶದ ಗ್ರಾಮೀಣ ಮತ್ತು ಅರೆ-ಗ್ರಾಮೀಣ ಭಾಗಗಳಲ್ಲಿ ಜೀವನೋಪಾಯವನ್ನು ಒದಗಿಸುವ ಪ್ರಮುಖ ವಲಯವಾಗಿದೆ. ಮಹಿಳಾ ಸಬಲೀಕರಣದಲ್ಲೂ ಈ ವಲಯದ ಕೊಡುಗೆ ಮಹತ್ವದ್ದಾಗಿದೆ. ನೇಕಾರರು ಮತ್ತು ಕೈಮಗ್ಗ ಸಂಬಂಧಿತ ಕೆಲಸಗಾರರಲ್ಲಿ 70% ಕ್ಕಿಂತಲೂ ಹೆಚ್ಚು ಮಹಿಳೆಯರೇ ಆಗಿದ್ದಾರೆ. ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ರೂಪುರೇಷೆ ನೀಡಿದ ಚಳವಳಿಯೆಂದರೆ ಅದು ಸ್ವದೇಶಿ ಚಳವಳಿ. 1905ರ ಆಗಸ್ಟ್ 7ರಂದು ಪ್ರಾರಂಭವಾದ ಈ ಚಳವಳಿಯು ಕೈಮಗ್ಗವೂ ಸೇರಿದಂತೆ ದೇಶೀಯ ಕೈಗಾರಿಕೆಗಳನ್ನು ಹಾಗೂ ಸ್ವದೇಶಿ ಜಾಗೃತಿಯನ್ನು ಪ್ರೋತ್ಸಾಹಿಸಿತು. ಪ್ರತಿ ವರ್ಷ ಆಗಸ್ಟ್ 7 ಅನ್ನು ʻರಾಷ್ಟ್ರೀಯ ಕೈಮಗ್ಗ ದಿನʼವಾಗಿ (ಎನ್‌ಹೆಚ್‌ಡಿ) ಆಚರಿಸಲು 2015ರಲ್ಲಿ ಭಾರತ ಸರಕಾರವು ನಿರ್ಧರಿಸಿತು. ಆಗಸ್ಟ್ 07, 2015ರಂದು ಮೊದಲ ʻರಾಷ್ಟ್ರೀಯ ಕೈಮಗ್ಗ ದಿನʼವನ್ನು ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಅಂದಿನಿಂದ ರಾಷ್ಟ್ರೀಯ ಕೈಮಗ್ಗ ದಿನ ಆಚರಣೆ ಕಾರ್ಯಕ್ರಮಗಳು ವಾರಾಣಸಿ, ಗುವಾಹಟಿ, ಜೈಪುರ ಮತ್ತು ಭುವನೇಶ್ವರದಲ್ಲಿ ನಡೆದಿವೆ. ಕೈಮಗ್ಗ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಯನ್ನು ಖಾತರಿಪಡಿಸಲು ಭಾರತ ಸರಕಾರ ಸತತ ಪ್ರಯತ್ನ ನಡೆಸುತ್ತಿದೆ. ಆ ಮೂಲಕ ನಮ್ಮ ಕೈಮಗ್ಗ ನೇಕಾರರು ಮತ್ತು ಕಾರ್ಮಿಕರನ್ನು ಆರ್ಥಿಕವಾಗಿ ಸಬಲಗೊಳಿಸಿ, ಅವರಲ್ಲಿ ತಮ್ಮ ಸೊಗಸಾದ ಕರಕುಶಲತೆ ವೃತ್ತಿಯ ಬಗ್ಗೆ ಹೆಮ್ಮೆಯನ್ನು ತುಂಬುತ್ತಿದೆ.
ಕೇರಳದ ತಿರುವನಂತಪುರಂ ಜಿಲ್ಲೆಯ ಕೋವಲಂ, ಅಸ್ಸಾಂನ ಗೋಲಘಾಟ್ ಜಿಲ್ಲೆಯ ಮೊಹ್ಪಾರಾ, ಮತ್ತು ಜಮ್ಮು- ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಕನಿಹಾಮಾ ಗ್ರಾಮಗಳಲ್ಲಿ ಮೂರು ಕೈಮಗ್ಗ ಕರಕುಶಲ ಗ್ರಾಮಗಳನ್ನು ಜವಳಿ ಸಚಿವಾಲಯವು ಆಯಾ ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಸ್ಥಾಪಿಸುತ್ತಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವುದು ಮತ್ತು ಈ ಪ್ರದೇಶದ ಪ್ರಸಿದ್ಧ ಕೈಮಗ್ಗ ಹಾಗೂ ಕರಕುಶಲ ಉತ್ಪನ್ನಗಳನ್ನು ಉತ್ತೇಜಿಸುವುದು ಈ ಸ್ಥಳಗಳಲ್ಲಿ ಕರಕುಶಲ ಗ್ರಾಮಗಳನ್ನು ಸ್ಥಾಪಿಸುವುದರ ಹಿಂದಿನ ಉದ್ದೇಶವಾಗಿದೆ.
ನವದೆಹಲಿಯಲ್ಲಿ 7ನೇ ʻರಾಷ್ಟ್ರೀಯ ಕೈಮಗ್ಗ ದಿನʼದ ಅಂಗವಾಗಿ ʻವಿಸಿʼಮೂಲಕ ಈ ಕೆಳಗಿನ ಚಟುವಟಿಕೆಗಳನ್ನು ಆಯೋಜಿಸಲಾಗಿದೆ:
i. ಕಾಂಚೀಪುರಂನಲ್ಲಿ ವಿನ್ಯಾಸ ಸಂಪನ್ಮೂಲ ಕೇಂದ್ರ (ಡಿಆರ್‌ಸಿ) ಉದ್ಘಾಟನೆ
- ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಅಭಿವೃದ್ಧಿಪಡಿಸುತ್ತಿರುವ ಕೈಮಗ್ಗ ಗ್ರಾಮಗಳನ್ನು ಪ್ರದರ್ಶಿಸುವುದು:
- ಕೋವಲಂ (ಜಿಲ್ಲೆ ತಿರುವಂತಪುರಂ,ಕೇರಳ)
- ಮೊಹ್ಪಾರಾ (ಜಿಲ್ಲೆ ಗೋಲಾಘಾಟ್,ಅಸ್ಸಾಂ)
- ಕನಿಹಾಮಾ (ಜಿಲ್ಲೆ ಬುದ್ಗಾಮ್, ಜಮ್ಮು-ಕಾಶ್ಮೀರ)
- ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದಿಂದ (ಎನ್‌ಎಚ್‌ಡಿಸಿ) ವರ್ಚುವಲ್ ಖರೀದಿದಾರ ಮಾರಾಟಗಾರರ ಸಭೆ
- ರಾಯ್‌ಗಢದಲ್ಲಿ ನೇಕಾರರ ಸೇವಾ ಕೇಂದ್ರದ (ಡಬ್ಲ್ಯೂಎಸ್‌ಸಿ) ಕಟ್ಟಡ ಉದ್ಘಾಟನೆ
ಎಲ್ಲಾ ನೇಕಾರರ ಸೇವಾ ಕೇಂದ್ರಗಳಲ್ಲಿ (ಡಬ್ಲ್ಯೂಎಸ್ ಸಿ) ಹಂತ ಹಂತವಾಗಿ ʻಎನ್‌ಐಎಫ್‌ಟಿʼ ವತಿಯಿಂದ ಹಂತ ಹಂತವಾಗಿ ವಿನ್ಯಾಸ ಸಂಪನ್ಮೂಲಕ ಕೇಂದ್ರಗಳನ್ನು (ಡಿಆರ್‌ಸಿ) ಸ್ಥಾಪಿಸಲಾಗುತ್ತಿದೆ. ಇಲ್ಲಿ ರಫ್ತುದಾರರು, ತಯಾರಕರು, ವಿನ್ಯಾಸಕರು, ನೇಕಾರರು ಮತ್ತು ಇತರ ಸಂಬಂಧಪಟ್ಟ ವ್ಯಕ್ತಿಗಳ ಬಳಕೆಗೆ ವಿನ್ಯಾಸಗಳು ಮತ್ತು ಸಂಪನ್ಮೂಲಗಳ ಅಪಾರ ಬಂಢಾರ ಲಭ್ಯವಿರುತ್ತದೆ.
ಪ್ರಧಾನಿಯವರು ನೀಡಿದ ಕರೆಗೆ ಓಗುಟ್ಟು, ಹೊಸದಿಲ್ಲಿಯ ʻದಿಲ್ಲಿಹಾತ್ ಐಎನ್ಎʼನಲ್ಲಿ ರಾಷ್ಟ್ರೀಯ ಮಟ್ಟದ "ಮೈ ಹ್ಯಾಂಡ್ ಲೂಮ್ ಮೈ ಪ್ರೈಡ್ ಎಕ್ಸ್‌ಪೋ" ಆಯೋಜಿಸಲಾಗಿದೆ. 7ನೇ ರಾಷ್ಟ್ರೀಯ ಕೈಮಗ್ಗ ದಿನ ಆಚರಣೆ ಅಂಗವಾಗಿ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮವು (ಎನ್‌ಎಚ್‌ಡಿಸಿ) 2021ರ ಆಗಸ್ಟ್ 1ರಿಂದ ಆಗಸ್ಟ್ 15ರವರೆಗೆ ಈ ಪ್ರದರ್ಶನವನ್ನು ಆಯೋಜಿಸಿದೆ. ಕೈಮಗ್ಗ ಉತ್ಪನ್ನ ತಯಾರಿಕಾ ಸಂಸ್ಥೆಗಳು ಮತ್ತು ನೇಕಾರರು ದೇಶಾದ್ಯಂತದ ಕೈಮಗ್ಗ ಕ್ಲಸ್ಟರ್‌ಗಳು/ಕೇಂದ್ರಗಳ ಕೈಮಗ್ಗ ಉತ್ಪನ್ನಗಳನ್ನು ಮಾರಾಟಕ್ಕಾಗಿ ಇಲ್ಲಿ ಪ್ರದರ್ಶಿಸುತ್ತಿದ್ದಾರೆ. 22 ರಾಜ್ಯಗಳಿಗೆ ಸೇರಿದ 125ಕ್ಕೂ ಹೆಚ್ಚು ಕೈಮಗ್ಗ ಏಜೆನ್ಸಿಗಳು/ ರಾಷ್ಟ್ರೀಯ ಪ್ರಶಸ್ತಿ ವಿಜೇತರು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಪ್ರದರ್ಶನವು ಆಗಸ್ಟ್ 15, 2021ರವರೆಗೆ ರವರೆಗೆ ಹದಿನೈದು ದಿನಗಳ ಕಾಲ ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಈ ಅವಧಿಯಲ್ಲಿ 10,000ಕ್ಕೂ ಹೆಚ್ಚು ಜನರು ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಭಾರತದ ವಿಶಿಷ್ಟ ಸ್ಥಳಗಳಲ್ಲಿ ತಯಾರಿಸಲಾದ ಅಪರೂಪದ ಕೈಮಗ್ಗ ಉತ್ಪನ್ನಗಳನ್ನು ಇಲ್ಲಿ ಮಾರಾಟಕ್ಕಾಗಿ ಪ್ರದರ್ಶಿಸಲಾಗುತ್ತಿದೆ. ಅವುಗಳ ಒಂದು ಸಂಕ್ಷಿಪ್ತ ಪಟ್ಟಿ ಇಲ್ಲಿದೆ:
· ಆಂಧ್ರಪ್ರದೇಶ
|
ಕಲಾಂಕರಿ ಕೈಮಗ್ಗ ಡ್ರೆಸ್ ಮೆಟಿರಿಯಲ್‌ಗಳು
|
· ಬಿಹಾರ
|
ಭಗಲ್ಪುರಿ ಟಸರ್ ರೇಷ್ಮೆ ಸೀರೆಗಳು ಮತ್ತು ಡ್ರೆಸ್ ಮೆಟಿರಿಯಲ್‌ಗಳು
|
· ಕರ್ನಾಟಕ
|
ಇಳ್ಕಲ್ ಸೀರೆ, ಬೆಡ್‌ಶೀಟ್, ದುಪಟ್ಟಾ
|
· ಮಧ್ಯ ಪ್ರದೇಶ
|
ಚಂದೇರಿ ಸೀರೆ, ಸೂಟ್, ದುಪಟ್ಟಾ
|
· ಮಣಿಪುರ
|
ಮಣಿಪುರ ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನಗಳು
|
· ಮಿಜೋರಾಂ
|
ಮಿಜೋರಾಂ ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನಗಳು
|
· ಒಡಿಶಾ
|
ಸಂಬಲ್ಪುರಿ ಇಕಾತ್ ಸೀರೆಗಳು, ಡ್ರೆಸ್ ಮೆಟಿರಿಯಲ್
|
· ಪಂಜಾಬ್
|
ಫುಲ್ಕರಿ
|
· ರಾಜಸ್ಥಾನ
|
ಹತ್ತಿನ ಬೆಡ್‌ಶೀಟ್, ಟವೆಲ್, ಯೋಗಾ ಮ್ಯಾಟ್
|
· ಉತ್ತರ ಪ್ರದೇಶ
|
ಬನಾರಸಿ ಸೀರೆಗಳು, ಸೂಟ್, ಡ್ರೆಸ್ ಮೆಟಿರಿಯಲ್
|
ಪಶ್ಚಿಮ ಬಂಗಾಳ
|
ಜಮ್ದಾನಿ ಸೀರೆಗಳು, ಡ್ರೆಸ್ ಮೆಟಿರಿಯಲ್, ಸ್ಟೋಲ್‌ಗಳು
|
· ತಮಿಳುನಾಡು
|
ಸೇಲಂ ಸೀರೆಗಳು, ಡ್ರೆಸ್ ಮೆಟಿರಿಯಲ್
|
· ತೆಲಂಗಾಣ
|
ಪೋಚಂಪಲ್ಲಿ ಇಕಾತ್ ಸೀರೆಗಳು, ಡ್ರೆಸ್ ಮೆಟಿರಿಯಲ್
|
ಕೈಮಗ್ಗ ರಫ್ತು ಉತ್ತೇಜನ ಮಂಡಳಿಯು ಆಗಸ್ಟ್ 7ರಿಂದ 11ರವರೆಗೆ 2021 ದಿಲ್ಲಿಯ ಹೋಟೆಲ್ ಲೀಲಾ ಪ್ಯಾಲೇಸ್ ಬಳಿಯ ನ್ಯೂ ಮೋತಿಬಾಗ್‌ನ ಸಮುದಾಯ ಭವನದಲ್ಲಿ `ಮೈ ಹ್ಯಾಂಡ್‌ಲೂಮ್ ಮೈ ಪ್ರೈಡ್ʼ (#MyHandloomMyPride) ಪ್ರದರ್ಶನವನ್ನುಆಯೋಜಿಸಲಿದೆ.
ಇದಲ್ಲದೆ, ಎಲ್ಲಾ ನೇಕಾರರ ಸೇವಾ ಕೇಂದ್ರಗಳು, ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳು, ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದ ಕಚೇರಿಗಳು, ಕೈಮಗ್ಗ ರಫ್ತು ಉತ್ತೇಜನ ಮಂಡಳಿ, ಎನ್‌ಐಎಫ್‌ಟಿ ಕ್ಯಾಂಪಸ್‌ಗಳು, ರಾಜ್ಯ ಸರಕಾರಿ ಕೈಮಗ್ಗ ಇಲಾಖೆಗಳು ಮತ್ತು ಕೈಮಗ್ಗ ಕ್ಲಸ್ಟರ್‌ಗಳಲ್ಲಿ ಸ್ಥಳೀಯವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ʻಮೈಗವ್ ಪೋರ್ಟಲ್ʼ (MyGov Portal) ವತಿಯಿಂದ 2021ರ ಆಗಸ್ಟ್ 7 ರಿಂದ 11ರ ವರೆಗೆ ಮತ್ತು ಆಗಸ್ಟ್ 19ರಿಂದ 22ರವರೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಕೈಮಗ್ಗಗಳ ಬಗ್ಗೆ ತಲಾ ಒಂದು ರಸಪ್ರಶ್ನೆಯನ್ನು ಆಯೋಜಿಸಲಾಗಿದೆ.
ಕೈಮಗ್ಗ ಉತ್ಪನ್ನ ತಯಾರಿಸುವ ಪ್ರಮುಖ ರಾಜ್ಯಗಳು ಹಾಗೂ ಅಲ್ಲಿನ ಕೈಮಗ್ಗ ನೇಕಾರರು ಮತ್ತು ಕಾರ್ಮಿಕರ ಸಂಖ್ಯೆಯ ವಿವರಗಳನ್ನು ಕೆಳಗೆ ನೀಡಲಾಗಿದೆ:
4ನೇ ಅಖಿಲ ಭಾರತ ಕೈಮಗ್ಗ ಜನಗಣತಿ (2019-20)
ಸಂಖ್ಯೆ
|
ಮಾನದಂಡಗಳು
|
4ನೇ ಕೈಮಗ್ಗ ಜನಗಣತಿ
|
1
|
ಮಗ್ಗಗಳ ಸಂಖ್ಯೆ
|
28.20 ಲಕ್ಷ
|
2
|
ಕುಟುಂಬಗಳ ಸಂಖ್ಯೆ
|
31.44 ಲಕ್ಷ
|
3
|
ಕೈಮಗ್ಗ ಕಾರ್ಮಿಕರ ಒಟ್ಟು ಸಂಖ್ಯೆ
|
35.22 ಲಕ್ಷ
|
a)
|
ನೇಕಾರರ ಒಟ್ಟು ಸಂಖ್ಯೆ
|
26.74 ಲಕ್ಷ
|
b)
|
ಕೈಮಗ್ಗ ಸಂಬಂಧಿತ ಕೆಲಸಗಾರರ ಒಟ್ಟು ಸಂಖ್ಯೆ
|
8.48 ಲಕ್ಷ
|
5
|
ಒಂದು ವರ್ಷದಲ್ಲಿ ಕೈಮಗ್ಗ ಕಾರ್ಮಿಕರ ಸರಾಸರಿ ಕೆಲಸದ ದಿನಗಳ ಸಂಖ್ಯೆ
|
207
|
ಪ್ರಮುಖ ಕೈಮಗ್ಗ ರಾಜ್ಯಗಳು
ಸಂಖ್ಯೆ
|
ರಾಜ್ಯ
|
ಕೈಮಗ್ಗ ಕಾರ್ಮಿಕರ ಸಂಖ್ಯೆ
|
1
|
ಅಸ್ಸಾಂ
|
12,83,881
|
2
|
ಪಶ್ಚಿಮ ಬಂಗಾಳ
|
6,31,447
|
3
|
ತಮಿಳುನಾಡು
|
2,43,575
|
4
|
ಮಣಿಪುರ
|
2,24,684
|
5
|
ಉತ್ತರ ಪ್ರದೇಶ
|
1,90,957
|
6
|
ಆಂಧ್ರ ಪ್ರದೇಶ
|
1,77,447
|
7
|
ತ್ರಿಪುರಾ
|
1,37,639
|
8
|
ಒಡಿಶಾ
|
1,17,836
|
9
|
ಅರುಣಾಚಲ ಪ್ರದೇಶ
|
94,616
|
10
|
ಕರ್ನಾಟಕ
|
54,791
|
***
(Release ID: 1743216)
Visitor Counter : 369