ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಟೊಕಿಯೋ ಒಲಿಂಪಿಕ್ಸ್ 57 ಕೆ.ಜಿ. ಪ್ರೀಸ್ಟೈಲ್ ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ, ಭಾರತಕ್ಕೆ ಹೆಮ್ಮೆ ತಂದ ಕುಸ್ತಿಪಟು ರವಿ ಕುಮಾರ್ ದಹಿಯಾ

Posted On: 05 AUG 2021 5:55PM by PIB Bengaluru

ಪ್ರಮುಖ ಅಂಶಗಳು:

  • ರವಿ ಕುಮಾರ್ ದಹಿಯಾ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
  • ರವಿ ಕುಮಾರ್ ದಹಿಯಾ ಅವರಿಗೆ ಅಭಿನಂದನೆ ಸಲ್ಲಿಸಿದ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್: ನಿಮ್ಮ ಉತ್ಸಾಹಪೂರ್ಣ ಕಾರ್ಯಕ್ಷಮತೆ ಪ್ರತಿಯೊಬ್ಬ ಭಾರತೀಯನಿಗೆ ಅಪಾರ ಹೆಮ್ಮೆಯ ವಿಷಯ

ಟೊಕಿಯೋ ಒಲಿಂಪಿಕ್ಸ್ ನ 57 ಕೆ.ಜಿ. ಪ್ರೀಸ್ಟೈಲ್ ಪುರುಷರ ವಿಭಾಗದ ಪೈನಲ್ ನಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ರಷ್ಯಾದ ಚಾಂಪಿಯನ್ ಝೌರ್ ಉಗೇವ್ ವಿರುದ್ಧ 4-7 ರ ಅಂತರದಲ್ಲಿ ಪರಾಭಗೊಂಡ ಭಾರತದ ಕುಸ್ತಿ ಪಟು ರವಿ ಕುಮಾರ್ ದಹಿಯಾ ಅವರು ಬೆಳ್ಳಿ ಪದಕ ಗಳಿಸಿದ್ದಾರೆ. 23 ವರ್ಷದ ಪುರುಷ ಕುಸ್ತಿಪಟು ಪದಕ ಗಳಿಸಿದ್ದು, ಭಾರತಕ್ಕೆ ಎರಡನೇ ಬಾರಿಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿಪದಕ ಲಭಿಸಿದೆ. ಇದಕ್ಕೂ ಮುನ್ನ ಸುಶೀಲ್ ಕುಮಾರ್ ಪದಕ ಗಳಿಸಿದ್ದರು. ಇದು ಭಾರತಕ್ಕೆ ಐದನೇ ಪದಕವಾಗಿದ್ದು, ಇದಕ್ಕೂ ಮುನ್ನ ಮೀರಾಭಾಯಿ ಚಾನು, ಪಿ.ವಿ. ಸಿಂಧು, ಲವ್ಲಿನ ಬೊರ್ಗೊಹೈನ್ ಮತ್ತು ಪುರುಷರ ಹಾಕಿಯಲ್ಲಿ ಭಾರತಕ್ಕೆ ಪದಕ ಲಭಿಸಿದೆ.

ಬೆಳ‍್ಳಿ ಪದಕ ಗೆದ್ದಿರುವ ಕುಸ್ತಿಪಟು ರವಿ ಕುಮಾರ್ ದಹಿಯಾ ಅವರನ್ನು ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ, ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ದೇಶಾದ್ಯಂತ ಎಲ್ಲಾ ವಲಯದ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

 

ಟೊಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ರವಿ ಕುಮಾರ್ ದಹಿಯಾ ಅವರನ್ನು ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅಭಿನಂದನೆ ಸಲ್ಲಿಸಿದ್ದಾರೆ.

ಶ್ರೀ ರಾಮ್ ನಾಥ್ ಕೋವಿಂದ್ ಅವರು ತಮ್ಮ ಟ್ವೀಟ್ ನಲ್ಲಿ ಟೊಕಿಯೋ 2020 ರಲ್ಲಿ ಕುಸ್ತಿಪಟು ರವಿ ಕುಮಾರ್ ದಹಿಯಾ ಅವರು ಬೆಳ್ಳಿ ಪದಕ ಗೆದ್ದಿರುವುದರಿಂದ ಇಡೀ ದೇಶದ ಜನತೆ ಹೆಮ್ಮೆಪಡುತ್ತಿದ್ದಾರೆ. ನೀವು ಕಷ್ಟಕರ ಸನ್ನಿವೇಶದಿಂದ ವಾಪಸ್ ಬಂದಿದ್ದೀರಿ ಮತ್ತು ಗೆಲುವು ಸಾಧಿಸಿದ್ದೀರಿ. ನಿಜವಾದ ಚಾಂಪಿಯನ್ ರೀತಿಯಲ್ಲಿ ನಿಮ್ಮ ಆಂತರಿಕ ಶಕ್ತಿಯನ್ನು ಸಹ ಪ್ರದರ್ಶಿಸಿದ್ದೀರಿ. ನಿಮ್ಮ ಅನುಕರಣೀಯ ಗೆಲುವು ಮತ್ತು ಭಾರತಕ್ಕೆ ಕೀರ್ತಿ ತಂದಿರುವುದಕ್ಕೆ ಅಭಿನಂದನೆಗಳು” ಎಂದು ಹೇಳಿದ್ದಾರೆ.

 

ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಅವರು ಕುಸ್ತಿಪಟು ರವಿ ಕುಮಾರ್ ಅವರನ್ನು ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. “ ರವಿ ಕುಮಾರ್ ದಹಿಯಾ ಅವರು ಗಮನಾರ್ಹ ಕುಸ್ತಿಪಟು. ಅವರ ಹೋರಾಟದ ಸ್ಫೂರ್ತಿ ಮತ್ತು ದೃಢತೆ ಅತ್ಯುತ್ತಮವಾಗಿದೆ. ಟೊಕಿಯೋ 2020 ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ನಿಮಗೆ ಅಭಿನಂದನೆ. ಇವರ ಸಾಧನೆಗೆ ಭಾರತ ಹೆಮ್ಮೆಪಡುತ್ತದೆ” ಎಂದು ಹೇಳಿದ್ದಾರೆ. 

ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್, ಕುಸ್ತಿಪಟು ರವಿ ಕುಮಾರ್ ದಹಿಯಾ ಅವರಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಟ್ವೀಟ್ ಮಾಡಿರುವ ಅವರು “ ಭಾರತ ಗೆದ್ದಿದೆ! ನೀವು ಇದನ್ನು ಸಾಧಿಸಿದ್ದೀರಿ ರವಿ. ಅಭಿನಂದನೆಗಳು, ನಿಮ್ಮ ಉತ್ಸಾಹಪೂರ್ಣ ಕಾರ್ಯಕ್ಷಮತೆ ಪ್ರತಿಯೊಬ್ಬ ಭಾರತೀಯನಿಗೂ ಅಪಾರ ಹೆಮ್ಮೆಯ ವಿಷಯವಾಗಿದೆ! ಇದು ನಿಮ್ಮ ಸ್ಫೂರ್ತಿದಾಯಕ ಸಾಧನೆಯ ಅದ್ಭುತ ಪಯಣ! ಭಾರತೀಯ ಕ್ರೀಡೆಗಳಿಗೆ ಎಂತಹ ಅದ್ಭುತ ದಿನ! ಭಾರತೀಯ ಕ್ರೀಡೆಗೆ ಎಂತಹ ಅದ್ಭುತ ದಿನ!” ಎಂದು ಹೇಳಿದ್ದಾರೆ.  

 

ರವಿ ಕುಮಾರ್ ದಹಿಯಾ ಹರ್ಯಾಣದ ಸೋನಿಪತ್ ನ ನರ್ಹಿ ಗ್ರಾಮದಿಂದ ಬಂದವರು. ಇವರು ಕೃಷಿಕ ಕುಟುಂಬದವರು ಮತ್ತು ಅವರ ತಂದೆ ತಮ್ಮ ಹಳ್ಳಗಳ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. 10 ವರ್ಷದಲ್ಲಿ ಇವರು ಕುಸ್ತಿ ಅಭ್ಯಾಸ ಆರಂಭಿಸಿದರು. 2017 ರಲ್ಲಿ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟ ಸಂದರ್ಭದಲ್ಲಿ ಮೊಣಕಾಲು ಗಾಯಕ್ಕೆ ಒಳಗಾಗಿದ್ದರು. ಈ ಕಾರಣದಿಂದ ಇವರಿಗೆ ಪ್ರಾಯೋಜಕರು ಇರಲಿಲ್ಲ ಮತ್ತು ಗಾಯದಿಂದ ಚೇತರಿಸಿಕೊಳ್ಳಲು ಅವರ ಸ್ನೇಹಿತರನ್ನು ಅವಲಂಬಿಸಬೇಕಾಯಿತು. 

ವೈಯಕ್ತಿಕ ವಿವರಗಳು

ಹುಟ್ಟಿದ ದಿನಾಂಕ: ಡಿಸೆಂಬರ್ 12, 1997

ಮನೆ ವಿಳಾಸ : ನಿಹರಿ, ಸೋನಿಪತ್, ಹರ್ಯಾಣ

ಕ್ರೀಡೆ : ಕುಸ್ತಿ

ತರಬೇತಿ ನೆಲೆ : ಸೋನಿಪತ್ ನ ಎನ್.ಆರ್.ಸಿ – ಎಸ್.ಎ.ಐ/ ಚತ್ರಸಾಲ್ ಕ್ರೀಡಾಂಗಣ

ವೈಯಕ್ತಿಕ ತರಬೇತುದಾರ : ಕಮಲ್ ಮಲಿಕೋವ್

ರಾಷ್ಟ್ರೀಯ ಕೋಚ್ : ಜಗ್ಮುಂದೆರ್ ಸಿಂಗ್

ಸಾಧನೆಗಳು:

  • ವಿಶ್ವ ಚಾಂಪಿಯನ್ ಶಿಪ್ ನಲ್ಲಿ - ಕಂಚು
  • ಏಷ್ಯನ್ ಚಾಂಪಿಯನ್ ಶಿಪ್ – 2 ಚಿನ್ನ
  • 23 ವಯೋಮಿತಿಯೊಳಗಿನ ಚಾಂಪಿಯನ್ ಶೀಪ್ – 1 ಬೆಳ್ಳಿ ಪದಕ
  • ವಿಶ‍್ವ ಜೂನಿಯರ್ ಚಾಂಪಿಯನ್ ಶಿಪ್ – ಬೆಳ‍್ಳಿ
  • ಏಷ್ಯನ್ ಜೂನಿಯರ್ ಚಾಂಪಿಯನ್ ಶಿಪ್ - ಚಿನ್ನ

ಸರ್ಕಾರದ ಪ್ರಮುಖ ಮಧ್ಯಸ್ಥಿಕೆಗಳು

  • ರಾಷ್ಟ್ರೀಯ ಶಿಬಿರಗಳಲ್ಲಿ ವೈಯಕ್ತಿಕ ಬೆಂಬಲದ ಸಿಬ್ಬಂದಿಯನ್ನು ಸೇರ್ಪಡೆಗೊಳಿಸಿರುವುದು
  • ಏಷ್ಯಾ ಚಾಂಪಿಯನ್ ಶಿಪ್, ಹಿರಿಯರ ವಿಶ‍್ವ ಚಾಂಪಿಯನ್ ಶಿಪ್, ಮಟ್ಟೇಯೊ ಪೆಲ್ಲಿಕೊನೆ ರಾ ಕ‍ಯಂಕಿಂಗ್ ಟೂರ್ನಿ, ಯಸರ್ ಡೊಗು ಮತ್ತು ಎಸಿಟಿಸಿ ಮೂಲಕ 2018 ಮತ್ತು 2021 ರ ವಿಶ್ವಕಪ್ ಗೆ ಬೆಂಬಲ
  • 2020 ರ ಒಲಿಂಪಿಕ್ಸ್ ಸಿದ್ಧತೆ ಕುರಿತು ರಷ್ಯಾದಲ್ಲಿ ತರಬೇತಿ ಶಿಬಿರದಲ್ಲಿ ವೈಯಕ್ತಿಕ ಸಿಬ್ಬಂದಿ ಬೆಂಬಲ
  • ಪೊಲೆಂಡ್ ಓಪನ್ 2020 ಯಲ್ಲಿ ಪಾಲ್ಗೊಳ್ಳುವವರಿಗೆ ವೀಸಾ ಬೆಂಬಲ

ಆರ್ಥಿಕ ನೆರವು

ಟಾಪ್ಸ್

ಎ.ಸಿ.ಟಿ.ಸಿ.

ಒಟ್ಟು

ರೂ. 15,17,188

ರೂ. 47,47,249

ರೂ. 62,91,437

ಕೋಚ್ ಗಳ ವಿವವರಗಳು ; ಕ್ಯೂ

ತಳಮಟ್ಟದ ಬೆಂಬಲ; ಹನ್ಸರಾಜ್

ಅಭಿವೃದ್ಧಿ ಹಂತ : ಲಲಿತ್/ ಮಹಾಬಲಿ ಸತ್ಪಾಲ್

ಎಲೈಟ್ ಹಂತ : ಮಹಾಬಲಿ ಸತ್ಪಾಲ್/ ಜಗ್ಮಂದೆರ್ ಸಿಂಗ್/ ಕಮಲ್ ಮಲಿಕೊವ್

***



(Release ID: 1743031) Visitor Counter : 222