ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
189 ಕ್ರೀಡಾ ಮೂಲ ಸೌಕರ್ಯ ಯೋಜನೆಗಳು, 360 ಖೇಲೋ ಇಂಡಿಯಾ ಕೇಂದ್ರಗಳು, 24 ಖೇಲೋ ಇಂಡಿಯಾ ರಾಜ್ಯಮಟ್ಟದ ಉತ್ಕೃಷ್ಟತಾ ಕೇಂದ್ರಗಳು ಮತ್ತು 160 ಖೇಲೋ ಇಂಡಿಯಾ ಅಕಾಡೆಮಿಗಳನ್ನು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ – ವೈ.ಎ.ಎಸ್ ನಿಂದ ಸ್ಥಾಪಿಸಲಾಗಿದೆ – ಶ್ರೀ ಅನುರಾಗ್ ಠಾಕೂರ್
Posted On:
05 AUG 2021 2:39PM by PIB Bengaluru
ಪ್ರಮುಖ ಅಂಶಗಳು :
- ಕ್ರೀಡೆಯನ್ನು ಉತ್ತೇಜಿಸಲು ಯುವಜನ ಸೇವೆ ಮತ್ತು ಕ್ರಿಡಾ ಸಚಿವಾಲಯ ಬಹು ಹಂತದ ಕಾರ್ಯಕ್ರಮಗಳನ್ನು ರೂಪಿಸಿದೆ: ಖೇಲೋ ಇಂಡಿಯಾ ಕಾರ್ಯಕ್ರಮ, ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕ್ರೀಡಾ ಕಲ್ಯಾಣ ನಿಧಿ
ಕ್ರೀಡೆ ರಾಜ್ಯದ ವಿಷಯವಾಗಿದ್ದು, ಕ್ರೀಡಾ ಅಭಿವೃದ್ಧಿ, ಕ್ರೀಡೆಗಳ ಉತ್ತೇಜನಕ್ಕೆ ನೀತಿ ರೂಪಿಸುವುದು ಮತ್ತು ಗ್ರಾಮೀಣ ಭಾಗದಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದು ರಾಜ್ಯಗಳು/ ಕೇಂದ್ರಾಡಳಿತ ಸರ್ಕಾರಗಳ ಜವಾಬ್ದಾರಿಯಾಗಿದೆ. ಈ ಪ್ರಯತ್ನಗಳಿಗೆ ಕೇಂದ್ರ ಸರ್ಕಾರ ಪೂರಕವಾಗಿ ಕಾರ್ಯನಿರ್ವಹಿಸಲಿದೆ.
ಯುವ ವ್ಯಹಾರಗಳು ಮತ್ತು ಕ್ರೀಡಾ ಸಚಿವಾಲಯ ಕ್ರೀಡೆಯನ್ನು ಉತ್ತೇಜಿಸಲು ಈ ಕೆಳಕಂಡ ಕಾರ್ಯಕ್ರಮಗಳನ್ನು ರೂಪಿಸಿದೆ ಮತ್ತು ಗ್ರಾಮೀಣ ಪ್ರದೇಶ ಒಳಗೊಂಡಂತೆ ದೇಶದಲ್ಲಿ ಕ್ರೀಡಾಪಟುಗಳನ್ನು ಉತ್ತೇಜಿಸುತ್ತಿದೆ.
- ಖೇಲೋ ಇಂಡಿಯಾ ಕಾರ್ಯಕ್ರಮ
- ರಾಷ್ಟ್ರೀಯ ಕ್ರೀಡಾ ಒಕ್ಕೂಟಕ್ಕೆ ನೆರವು
- ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಗೆದ್ದ ತಂಡ ಮತ್ತು ತರಬೇತುದಾರರಿಗೆ ವಿಶೇಷ ಪ್ರಶಸ್ತಿಗಳು
- ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು, ಪ್ರತಿಷ್ಟಿತ ಕ್ರೀಡಾಪಟುಗಳಿಗೆ ಪಿಂಚಣಿ
- ಪಂಡಿತ್ ದೀನ್ ದಯಾಳ್ ರಾಷ್ಟ್ರೀಯ ಕ್ರೀಡಾ ಕಲ್ಯಾಣ ನಿಧಿ
- ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ
- ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಕ್ರೀಡಾ ತರಬೇತಿ ಕೇಂದ್ರಗಳನ್ನು ಆರಂಭಿಸುವುದು
ಈ ಮೇಲ್ಕಂಡ ಕಾರ್ಯಕ್ರಮಗಳ ಮಾಹಿತಿಗಳು ಸಾರ್ವಜನಿಕವಾಗಿ ಸಚಿವಾಲಯ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ವೆಬ್ ಸೈಟ್ ಗಳಲ್ಲಿ ಲಭ್ಯವಿದೆ. ಕ್ರೀಡಾ ಚಟುವಟಿಕೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಂದ ಕೇಂದ್ರ ಸರ್ಕಾರ ಕಾಲ ಕಾಲಕ್ಕೆ ಪ್ರಸ್ತಾವನೆಗಳನ್ನು ಸ್ವೀಕರಿಸುತ್ತಿದೆ. ಕಾರ್ಯಕ್ರಮಗಳಲ್ಲಿ ಲಭ್ಯವಿರುವ ಹಣ, ತಾಂತ್ರಿಕ ಸಾಧ್ಯತೆಗಳನ್ನು ಒಳಗೊಂಡಂತೆ ಪ್ರಸ್ತಾವನೆಗಳ ಪರಿಪೂರ್ಣತೆಗೆ ಒಳಪಟ್ಟು ಆಯಾ ಯೋಜನೆಗಳ ನಿಯತಾಂಕಗಳ ಪ್ರಕಾರ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ 189 ಕ್ರೀಡಾ ಮೂಲ ಸೌಕರ್ಯ ಯೋಜನೆಗಳು, 360 ಖೇಲೋ ಇಂಡಿಯಾ ಕೇಂದ್ರಗಳು, 24 ಖೇಲೋ ಇಂಡಿಯಾ ರಾಜ್ಯಮಟ್ಟದ ಉತ್ಕೃಷ್ಟತಾ ಕೇಂದ್ರಗಳು ಮತ್ತು 160 ಖೇಲೋ ಇಂಡಿಯಾ ಅಕಾಡೆಮಿಗಳನ್ನು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಸ್ಥಾಪನೆ ಮಾಡಲಾಗಿದೆ.
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
***
(Release ID: 1742830)
Visitor Counter : 250