ಪ್ರಧಾನ ಮಂತ್ರಿಯವರ ಕಛೇರಿ

ಮಹಿಳಾ ಹಾಕಿ ತಂಡವು ದಿಟ್ಟತನದಿಂದ ಆಡಿ, ಉತ್ತಮ ಕೌಶಲ್ಯವನ್ನು ಪ್ರದರ್ಶಿಸಿದೆ: ಪ್ರಧಾನಿ

Posted On: 04 AUG 2021 5:51PM by PIB Bengaluru

ಟೋಕಿಯೊ ಒಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ನಮ್ಮ ಮಹಿಳಾ ಹಾಕಿ ತಂಡವು ಇಂದು ಕ್ರೀಡಾಕೂಟದುದ್ದಕ್ಕೂ ದಿಟ್ಟತನ ಮತ್ತು ಉತ್ತಮ ಕೌಶಲ್ಯವನ್ನು ಪ್ರದರ್ಶಿಸಿತು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ತಂಡದ ಬಗ್ಗೆ ತಮಗೆ ಹೆಮ್ಮೆ ಇದೆ ಎಂದಿರುವ ಅವರು, ಮುಂದಿನ ಪಂದ್ಯಗಳು ಮತ್ತು ಪ್ರಯತ್ನಗಳಿಗಾಗಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ಬಗ್ಗೆ ಟ್ವೀಟ್ಮಾಡಿರುವ ಪ್ರಧಾನಿ: "#ಟೋಕಿಯೊ 2020 ಬಗ್ಗೆ ನಮ್ಮ ನೆನಪಿನಲ್ಲಿ ಉಳಿಯಲಿರುವ ಒಂದು ವಿಷಯವೆಂದರೆ ಅದು ನಮ್ಮ ಹಾಕಿ ತಂಡಗಳ ಅದ್ಭುತ ಪ್ರದರ್ಶನ."

"ಇಂದು ಮತ್ತು ಕ್ರೀಡಾಕೂಟದುದ್ದಕ್ಕೂ ನಮ್ಮ ಮಹಿಳಾ ಹಾಕಿ ತಂಡವು ದಿಟ್ಟತನದಿಂದ ಆಡಿದೆ ಮತ್ತು ಉತ್ತಮ ಕೌಶಲ್ಯವನ್ನು ಪ್ರದರ್ಶಿಸಿದೆ. ತಂಡದ ಬಗ್ಗೆ ಹೆಮ್ಮೆಯಾಗುತ್ತಿದೆ. ಮುಂದಿನ ಪಂದ್ಯಗಳು ಮತ್ತು ಭವಿಷ್ಯದ ಪ್ರಯತ್ನಗಳಿಗೆ ಅವರಿಗೆ ಶುಭವಾಗಲಿ." ಎಂದಿದ್ದಾರೆ.

***


(Release ID: 1742549) Visitor Counter : 224