ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧುವಿಗೆ ಅವಿಸ್ಮರಣೀಯ ಸ್ವಾಗತ


ಪಿವಿ ಸಿಂಧು  ಭಾರತದ ಐಕಾನ್, ಸ್ಫೂರ್ತಿ ಮತ್ತು ದೇಶಕ್ಕಾಗಿ ಆಡುವ ಕನಸು ಕಾಣುವ ಪ್ರತಿಯೊಬ್ಬ ಭಾರತೀಯನ ಆಸಕ್ತಿಯನ್ನು ಹೆಚ್ಚಿಸಿದ್ದಾರೆ :  ಶ್ರೀ ಅನುರಾಗ್ ಸಿಂಗ್ ಠಾಕೂರ್

ಪಿವಿ ಸಿಂಧು ಭಾರತದ ಶ್ರೇಷ್ಠ ಒಲಿಂಪಿಯನ್‌ಗಳಲ್ಲಿ ಒಬ್ಬರು: ಕ್ರೀಡಾ ಸಚಿವರು

Posted On: 03 AUG 2021 7:41PM by PIB Bengaluru

ಪ್ರಮುಖ  ಅಂಶಗಳು:

  • ಕೇಂದ್ರ ಸಚಿವರಾದ  ಶ್ರೀಮತಿ. ನಿರ್ಮಲಾ ಸೀತಾರಾಮನ್, ಶ್ರೀ ಜಿ ಕಿಶನ್ ರೆಡ್ಡಿ ಮತ್ತು ಶ್ರೀ ನಿಶಿತ್ ಪ್ರಮಾಣಿಕ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಮತ್ತು ಪಿ ವಿ ಸಿಂಧು ಅವರನ್ನು ಗೌರವಿಸಿದರು
  • ನನ್ನ ಪೋಷಕರ ನಿರಂತರ ಬೆಂಬಲ ಮತ್ತು ತ್ಯಾಗಕ್ಕಾಗಿ ಹಾಗು ನನ್ನ ತರಬೇತುದಾರರು ನನಗೆ ತರಬೇತಿ ನೀಡಿ ಕನಸನ್ನು ನನಸಾಗಿಸಿದ್ದಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ  ಎಂದು ಪಿ ವಿ ಸಿಂಧು ಹೇಳಿದರು

ಟೋಕಿಯೊ 2020 ರಲ್ಲಿ ಹೀ ಬಿಂಗ್ ಜಿಯಾವೊ ವಿರುದ್ಧ ನೇರ ಗೇಮ್‌ಗಳ ಜಯದೊಂದಿಗೆ ಕಂಚು ಪಡೆದು  ಎರಡು ಒಲಿಂಪಿಕ್   ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆಯಾದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ರವರು ಸ್ವದೇಶಕ್ಕೆ ಹಿಂದಿರುಗಿದ ನಂತರ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಇಂದು ಅವರನ್ನು ಗೌರವಿಸಿದರು.

ಸಿಂಧು ಮತ್ತು ಅವರ ತರಬೇತುದಾರರಾದ ಪಾರ್ಕ್ ಟೇ ಸಾಂಗ್ ಅವರನ್ನು ಅಭಿನಂದಿಸುವ ಸಮಾರಂಭದಲ್ಲಿ, ಶ್ರೀ ಠಾಕೂರ್ ಅವರನ್ನು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು  ಜೊತೆಯಾದರುಈಶಾನ್ಯ ಪ್ರದೇಶದ ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಸಚಿವ ಶ್ರೀ ಜಿ ಕಿಶನ್ ರೆಡ್ಡಿ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವ ಶ್ರೀ ನಿಶಿತ್ ಪ್ರಮಾಣಿಕ್, ಕ್ರೀಡಾ ಕಾರ್ಯದರ್ಶಿ, ಶ್ರೀ ರವಿ ಮಿತ್ತಲ್ ಮತ್ತು ಕ್ರೀಡಾ ಸಚಿವಾಲಯದ ಹಿರಿಯ ಅಧಿಕಾರಿಗಳು. ಸಿಂಧು ಅವರ ಪೋಷಕರು ಪಿ ವಿಜಯ ಮತ್ತು ಪಿವಿ ರಮಣ ಕಾರ್ಯಕ್ರಮದಲ್ಲಿ  ಭಾಗವಹಿಸಲು  ಹೈದರಾಬಾದ್‌ನಿಂದ ಪ್ರಯಾಣಿಸಿದರು. ಸಂಸತ್ ಸದಸ್ಯರಾದ ಶ್ರೀ ಶ್ಯಾಮ್‌ ಬಾಪು ರಾವ್, ಶ್ರೀ ಬಂಡಿ ಸಂಜಯ್ ಕುಮಾರ್, ಶ್ರೀ ಅರವಿಂದ ಧರ್ಮಪುರಿ ಮತ್ತು ಶ್ರೀ ಟಿ ಜಿ ವೆಂಕಟೇಶ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಠಾಕೂರ್ ರವರು  "ಪಿವಿ ಸಿಂಧು ಭಾರತದ ಶ್ರೇಷ್ಠ ಒಲಿಂಪಿಯನ್‌ಗಳಲ್ಲಿ ಒಬ್ಬರು. ಅವರು ಭಾರತದ ಐಕಾನ್, ಸ್ಫೂರ್ತಿ ಮತ್ತು ದೇಶಕ್ಕಾಗಿ ಆಡುವ ಕನಸು ಕಾಣುವ ಪ್ರತಿಯೊಬ್ಬ ಭಾರತೀಯನ ಆಸಕ್ತಿಯನ್ನು ಹೆಚ್ಚಿಸಿದ್ದಾರೆ. ಅವರ  ಅಪೂರ್ವ  ಸಾಧನೆಸತತ ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಎರಡು ಒಲಿಂಪಿಕ್ ಪದಕಗಳನ್ನು ಗೆಲ್ಲುವುದು ಒಂದು ಪೀಳಿಗೆಯ ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ. ಸರ್ಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ ನಮ್ಮ ಒಲಿಂಪಿಕ್ ಆಶಾವಾದಿಗಳನ್ನು ಪೋಡಿಯಂ ಫಿನಿಶ್ ಕಡೆಗೆ ಹೇಗೆ ಪೋಷಿಸಿದೆ ಎಂಬುದನ್ನು ಆಕೆಯ ಯಶಸ್ಸು ತೋರಿಸುತ್ತದೆಟೋಕಿಯೊ ಒಲಿಂಪಿಕ್ಸ್‌ಗೆ ಹೊರಡುವ ಮುನ್ನಪ್ರಧಾನಿ ನರೇಂದ್ರ ಮೋದಿಯವರು  ಸಿಂಧು ಅವರೊಡನೆ ಸಂವಾದ ನಡೆಸಿದ್ದರು ಮತ್ತು ಗೆಲುವಿನ ನಂತರ ಆಕೆಯನ್ನು ಕರೆದು ಅಭಿನಂದಿಸಿದ ಮೊದಲ ವ್ಯಕ್ತಿಯೂ ಅವರೇ ಆದರು. ಆಕೆಯ ಅದ್ಭುತ ಪ್ರದರ್ಶನದಿಂದ 130 ಕೋಟಿ ಭಾರತೀಯರ ರಾಷ್ಟ್ರ ರೋಮಾಂಚನಗೊಂಡಿದೆ!”

ಸಂತೋಷದಲ್ಲಿದ್ದ  ಸಿಂಧು, “ಬೆಂಬಲ ನೀಡಿದ್ದಕ್ಕೆ ನನ್ನ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾವು ಕ್ರೀಡಾಂಗಣದಲ್ಲಿ ಅಭಿಮಾನಿಗಳಿಲ್ಲದೆ ಆಡಿದರೂ, ಶತಕೋಟಿ ಜನರು ಭಾರತದಿಂದ ನನ್ನನ್ನು ಬೆಂಬಲಿಸಿದ್ದಾರೆ ಮತ್ತು ಯಶಸ್ಸು ಅವರ ಇಚ್ಛೆಯ ಫಲವಾಗಿದೆ . ನನ್ನ ಹೆತ್ತವರ ನಿರಂತರ ಬೆಂಬಲ ಮತ್ತು  ತ್ಯಾಗ ಹಾಗು  ನನ್ನ ತರಬೇತುದಾರರು ನನಗೆ ತರಬೇತಿ ಕೊಟ್ಟಿದ್ದಕ್ಕಾಗಿ ಮತ್ತು ಕನಸನ್ನು ನನಸಾಗಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆಎಂದು ಹೇಳಿದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ನಿರ್ಮಲ ಸೀತಾರಾಮನ್, ಸಿಂಧು ಒಬ್ಬ ಉತ್ತಮ ಕ್ರೀಡಾಪಟು ಮತ್ತು ಆಕೆ ಅದನ್ನು ಪದೇ ಪದೇ ಸಾಬೀತುಪಡಿಸಿದ್ದಾರೆ ಎಂದು ಹೇಳಿದರು. ಆಕೆಯ ಯಶಸ್ಸಿಗೆ ಕಾರಣವಾದದ್ದು ನಿಖರವಾದ ತಯಾರಿ, ಗಡ್ಚಿಬೌಲಿಯಲ್ಲಿ ವಿಶ್ವ ದರ್ಜೆಯ ತರಬೇತಿ ಸೌಲಭ್ಯಗಳು, ಉತ್ತಮ ತರಬೇತುದಾರ, ಕುಟುಂಬದ ಬೆಂಬಲ ಮತ್ತು ಸಿಂಧು ಅವರ ಸ್ವಂತ ಪರಿಶ್ರಮದಿಟ್ಟತನ  ಮತ್ತು ಆಟದ ಕ್ಷೇತ್ರದಲ್ಲಿ ಉತ್ಕೃಷ್ಟತೆಇದು ಎಲ್ಲಾ ಭಾರತೀಯರು ಸಂಪೂರ್ಣ ಸ್ಫೂರ್ತಿ ಮತ್ತು ಪ್ರೇರಣೆಯನ್ನು ಪಡೆಯಬಹುದಾದ ದಿನ "  “ಮುಂದಿನ ಪೀಳಿಗೆಗೆ ಆಕೆಯೊಂದು ಸ್ಫೂರ್ತಿಆಕೆಯೊಂದು ಪ್ರೇರಣೆ”  ಎಂದು ಅವರು ಹೇಳಿದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ರೆಡ್ಡಿ, "ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಿವಿ ಸಿಂಧು ಅವರ ಪೋಡಿಯಂ ಫಿನಿಶ್   ಅನೇಕ ಪ್ರಥಮಗಳ ಕಥೆಯಾಗಿದೆ - ಅವರು 2 ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಮತ್ತು ಸತತ 2 ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದ ಏಕೈಕ ಭಾರತೀಯರಾಗಿದ್ದಾರೆ. ಅಂಕಿಅಂಶಗಳ ಹಿಂದೆ ಜೀವನಪೂರ್ತಿ ಉತ್ಸಾಹ, ಧೈರ್ಯ ಮತ್ತು ತ್ಯಾಗಗಳಿವೆಮುಂಜಾನೆಯ ಅಭ್ಯಾಸಗಳು ಮತ್ತು ತಡರಾತ್ರಿಯ ತಾಲೀಮುಗಳು ಹಲವು ವರ್ಷಗಳಿಂದ ಅವರ "ಹೊಸ ಸಾಮಾನ್ಯ ಜೀವನ" ವಾಗಿದ್ದವುತೆಲುಗಿನವನಾಗಿ, ತೆಲುಗು ಬಿಡ್ಡ ಮತ್ತು ಹೈದರಾಬಾದಿನ ಪುತ್ರಿಯ ಸಾಧನೆಯನ್ನು ನೋಡಿ ನನ್ನ ಹೃದಯವು ಹೆಮ್ಮೆಯಿಂದ ತುಂಬುತ್ತದೆಸಿಂಧು ಅವರ ಯಶಸ್ಸು ಕೇವಲ 65 ಲಕ್ಷ ಹೈದರಾಬಾದಿಗಳಿಗೆ ಅಥವಾ 6.5 ಕೋಟಿ ತೆಲುಗರಿಗೆ ಅಥವಾ 65 ಕೋಟಿ ಭಾರತೀಯ ಮಹಿಳೆಯರು ಮತ್ತು ಹುಡುಗಿಯರಿಗೆ ಮಾತ್ರವಲ್ಲ ಇಡೀ ಭಾರತಕ್ಕೆ ಸ್ಫೂರ್ತಿ ನೀಡುತ್ತದೆ. ಅದ್ಭುತ ಸಾಧನೆಗೆ ನಾನು ಅವರನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ. ”

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ. ಪ್ರಮಾಣಿಕ್ ಹೇಳಿದರು, "ಪಿವಿ ಸಿಂಧು ಅವರಿಗೆ ಸತತ 2 ನೇ ಒಲಿಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸವನ್ನು ಸೃಷ್ಟಿಸಿದಕ್ಕಾಗಿ ಅಭಿನಂದನೆಗಳು. ಆಕೆಯ ಸಮರ್ಪಣೆ, ಪ್ರಾಮಾಣಿಕತೆ, ನಮ್ರತೆ ಮತ್ತು ಕ್ರೀಡಾ ಮನೋಭಾವ ಎಲ್ಲರಿಗೂ ಸ್ಫೂರ್ತಿಯಾಗಿ ಮುಂದುವರಿಯುತ್ತದೆ. ಭಾರತವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ.”

ಹೈದರಾಬಾದ್‌ನಲ್ಲಿ ತರಬೇತಿ ಶಿಬಿರಗಳಲ್ಲದೆ 52 ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ಪ್ರಯಾಣ ವೆಚ್ಚ ಸೇರಿದಂತೆ ಸಿಂಧುಗೆ ಸರ್ಕಾರ ಕಳೆದ ಒಲಿಂಪಿಕ್ ನಲ್ಲಿ ಸುಮಾರು 4 ಕೋಟಿ ರೂಪಾಯಿಯಷ್ಟು ಧನಸಹಾಯ ನೀಡಿತ್ತು. ಅದಲ್ಲದೆ, ತೆಲಂಗಾಣ ಸರ್ಕಾರದ ಸಹಯೋಗದೊಂದಿಗೆ, ಇದು ಒಲಿಂಪಿಕ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ಗಚಿಬೌಲಿ ಕ್ರೀಡಾಂಗಣದಲ್ಲಿ ಅವಳ ತರಬೇತಿಯನ್ನು ಸುಗಮಗೊಳಿಸಿತು.

ಸಿಂಧು, ಜುಲೈ 24 ರಂದು 49 ಕೆಜಿ ವರ್ಗದಲ್ಲಿ  ಬೆಳ್ಳಿ ಗೆದ್ದ ಮೀರಾಬಾಯಿ ಚಾನು ನಂತರ ಟೋಕಿಯೊ 2020 ಪದಕದೊಂದಿಗೆ ಸ್ವದೇಶಕ್ಕೆ ಮರಳಿದ ಎರಡನೇ ಭಾರತೀಯ ಕ್ರೀಡಾಪಟುವಾಗಿದ್ದಾರೆಬುಧವಾರ 69 ಕೆಜಿ ವರ್ಗದಲ್ಲಿ   ಪದಕದ ಭರವಸೆ ಹೊಂದಿರುವ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಬುಧವಾರ ಸೆಮಿಫೈನಲ್‌ನಲ್ಲಿ ಬುಸೆನಾಜ್ ಸುರ್ಮೆನೆಲಿ (ಟರ್ಕಿ) ವಿರುದ್ಧ ಸ್ಪರ್ಧಿಸಲಿದ್ದಾರೆ.

***



(Release ID: 1742143) Visitor Counter : 174