ಬಾಹ್ಯಾಕಾಶ ವಿಭಾಗ

2022ರ ಮೂರನೇ ತ್ರೈಮಾಸಿಕದಲ್ಲಿ ಚಂದ್ರಯಾನ-3 ಉಡಾವಣೆ ಸಾಧ್ಯತೆ- ಡಾ.ಜಿತೇಂದ್ರ ಸಿಂಗ್

Posted On: 28 JUL 2021 12:05PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ಹೊಣೆಗಾರಿಕೆ) ರಾಜ್ಯ ಸಚಿವ;ಭೂ ವಿಜ್ಞಾನ  (ಸ್ವತಂತ್ರ ಹೊಣೆಗಾರಿಕೆ) ಪಿಎಂಒ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಆಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವರಾದ ಡಾ.ಜಿತೇಂದ್ರ ಸಿಂಗ್ಮಾಮೂಲಿಯಂತೆ ಕೆಲಸ ಕಾರ್ಯಗಳು ನಡೆದರೆ 2022 ಮೂರನೇ ತ್ರೈಮಾಸಿಕದ ವೇಳೆಗೆ ಚಂದ್ರಯಾನ-3 ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಲೋಕಸಭೆಗೆ ಇಂದು ನೀಡಿದ ಲಿಖಿತ ಉತ್ತರದಲ್ಲಿ ಅವರು, ಚಂದ್ರಯಾನ-3 ಯೋಜನೆ ಸಾಕಾರದ ನಿಟ್ಟಿನಲ್ಲಿ ಪ್ರಗತಿ ಸಾಗಿದೆ ಎಂದು ತಿಳಿಸಿದ್ದಾರೆ.

ಚಂದ್ರಯಾನ-3 ಯೋಜನೆಯು ಸಂರಚನೆಯನ್ನು ಅಂತಿಮಗೊಳಿಸುವುದು, ಉಪವ್ಯವಸ್ಥೆಗಳನ್ನು ಸಾಕಾರಗೊಳಿಸುವುದು, ಜೋಡಿಸುವುದು, ಬಾಹ್ಯಾಕಾಶ ನೌಕಾ ಮಟ್ಟದ ವಿಸ್ತೃತ ಪರೀಕ್ಷೆ ಮತ್ತು ಭೂಮಿಯ ಮೇಲಿನ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುಲು ಹಲವು ವಿಶೇಷ ಪರೀಕ್ಷೆ ಒಳಗೊಂಡಂತೆ ವಿವಿಧ ಪ್ರಕ್ರಿಯೆಗಳು ಸೇರಿವೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯೋಜನೆಯ ಸಾಕಾರದ ಪ್ರಗತಿಗೆ ಅಡ್ಡಿಯುಂಟಾಗಿದೆ. ಆದರೂ ಲಾಕ್ ಡೌನ್ ಸಮಯದಲ್ಲೂ ಸಹ ಮನೆಯಿಂದಲೇ ಕೆಲಸ ಮಾಡುತ್ತಾ ಸಾಧ್ಯವಾದಷ್ಟೂ ಕೆಲಸಗಳನ್ನು ಕೈಗೊಳ್ಳಲಾಗಿದೆ. ಅನ್ ಲಾಕ್ ಅವಧಿ ಆರಂಭದ ನಂತರ ಚಂದ್ರಯಾನ-3 ಯೋಜನೆ ಸಾಕಾರದ ಕಾರ್ಯ ಆರಂಭವಾಗಿದೆ ಮತ್ತು ಅದು ಸಾಕಾರದ ಪ್ರಬುದ್ಧ ಹಂತದಲ್ಲಿದೆ

***(Release ID: 1739900) Visitor Counter : 244