ಪ್ರಧಾನ ಮಂತ್ರಿಯವರ ಕಛೇರಿ
ಧೋಲವಿರಾವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ
Posted On:
27 JUL 2021 5:37PM by PIB Bengaluru
ಯುನೆಸ್ಕೋ ಭಾರತದ ಹರಪ್ಪನ್ ನಗರದ ಧೋಲವಿರಾವನ್ನು ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿರುವ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ಕಡ್ಡಾಯವಾಗಿ ಅದರಲ್ಲೂ ವಿಶೇಷವಾಗಿ ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ವದ ಬಗ್ಗೆ ಆಸಕ್ತಿಯುಳ್ಳವರು ಭೇಟಿ ನೀಡಲೇ ಬೇಕಾದ ತಾಣ ಎಂದು ಹೇಳಿದ್ದಾರೆ.
ಯುನೆಸ್ಕೋದ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, ಇದು ನಿಜಕ್ಕೂ ಸಂತಸದ ಸುದ್ದಿ ಎಂದು ಹೇಳಿದ್ದಾರೆ.
ಧೋಲಾವಿರಾ ಒಂದು ಮಹತ್ವದ ನಗರ ಕೇಂದ್ರವಾಗಿದ್ದು, ನಮ್ಮ ಗತಕಾಲದೊಂದಿಗೆ ಅತ್ಯಂತ ಮಹತ್ವದ ನಂಟನ್ನು ಹೊಂದಿದೆ. ಇದು ಕಡ್ಡಾಯವಾಗಿ ಅದರಲ್ಲೂ, ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ವದ ಬಗ್ಗೆ ಆಸಕ್ತಿ ಇರುವವರು ಭೇಟಿ ನೀಡಲೇಬೇಕಾದ ತಾಣ.
ನಾನು ನನ್ನ ವಿದ್ಯಾರ್ಥಿ ದಿನಗಳಲ್ಲಿ ಮೊದಲ ಬಾರಿಗೆ ಧೋಲವಿರಾಗೆ ಭೇಟಿ ನೀಡಿದ್ದೆ ಮತ್ತು ಮೂಕವಿಸ್ಮಿತನಾಗಿದ್ದೆ.
ಗುಜರಾತ್ ಮುಖ್ಯಮಂತ್ರಿಯಾಗಿ, ಧೋಲವಿರಾದಲ್ಲಿ ಪಾರಂಪರಿಕ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಸಂಬಂಧಿಸಿದ ಅಂಶಗಳ ಬಗ್ಗೆ ಕಾರ್ಯ ನಿರ್ವಹಿಸಲು ನನಗೆ ಅವಕಾಶ ಸಿಕ್ಕಿತ್ತು. ಪ್ರವಾಸೋದ್ಯಮ ಸ್ನೇಹಿ ಮೂಲಸೌಕರ್ಯಗಳನ್ನು ರಚಿಸಲು ನಮ್ಮ ತಂಡವೂ ಕೆಲಸ ಮಾಡಿದೆ." ಎಂದು ತಿಳಿಸಿದ್ದಾರೆ.
***
(Release ID: 1739743)
Visitor Counter : 207
Read this release in:
Hindi
,
English
,
Urdu
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam