ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೇಂದ್ರ ಸರ್ಕಾರ ವ್ಯಾಪಾರ ಲಾಭಾಂಶಕ್ಕೆ ಮಿತಿ ಹೇರಿದ ಬಳಿಕ 5 ಬಗೆಯ ವೈದ್ಯಕೀಯ ಸಾಧನಗಳ ಶೇ.91ರಷ್ಟು ಬ್ರಾಂಡ್ ಗಳ ಬೆಲೆ ಶೇ.88ರವರೆಗೂ ಇಳಿಕೆ ಪ್ರವೃತ್ತಿ


ಪಲ್ಸ್ ಆಕ್ಸಿಮೀಟರ್, ರಕ್ತದೊತ್ತಡ ನಿಗಾ ಯಂತ್ರ ಮತ್ತು ನೆಬುಲೈಸರ್ ಬೆಲೆ ಆಮದುದಾರರಿಂದ ಅಧಿಕ ಪ್ರಮಾಣದಲ್ಲಿ ಇಳಿಕೆ

ಪರಿಷ್ಕೃತ ದರಗಳು 2021ರ ಜು.20ರಿಂದ ಜಾರಿ

Posted On: 24 JUL 2021 11:53AM by PIB Bengaluru

ಸಾರ್ವಜನಿಕ ಹಿತದೃಷ್ಟಿಯಿಂದ ಪರಮಾಧಿಕಾರ ಬಳಿಸಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಫಾರ್ಮಸುಟಿಕಲ್ ಬೆಲೆ ಪ್ರಾಧಿಕಾರ (ಎನ್ ಪಿಪಿಎ) 2021 ಜು.13ರಂದು ಅಧಿಸೂಚನೆ ಮೂಲಕ ಐದು ಬಗೆಯ ವೈದ್ಯಕೀಯ ಸಾಧನಗಳ ಮೇಲಿನ ವ್ಯಾಪಾರದ ಲಾಭಾಂಶಕ್ಕೆ ಮಿತಿ ಹೇರುವ ಮಹತ್ವದ ನಿರ್ಧಾರವನ್ನು ಕೈಗೊಂಡಿತು.

ಅವುಗಳೆಂದರೆ

  1. ಪಲ್ಸ್ ಆಕ್ಸಿಮೀಟರ್,
  2. ರಕ್ತದೊತ್ತಡ ನಿಗಾ ಯಂತ್ರ
  3. ನೆಬುಲೈಸರ್
  4. ಡಿಜಿಟಲ್ ಥರ್ಮಾಮೀಟರ್ ಮತ್ತು

ಗ್ಲುಕೋಮೀಟರ್

ವಿತರಕರ ಮಟ್ಟದಲ್ಲಿ ಬೆಲೆ (ಪಿಟಿಡಿ)ಯಲ್ಲಿ ಲಾಭಾಂಶದ ಮಿತಿಯನ್ನು ಶೇ.70ಕ್ಕೆ ನಿರ್ಬಂಧಿಸಲಾಯಿತು, ಅದರ ಪರಿಣಾಮ, 2021 ಜು.23ರವರೆಗೆ ವರದಿಯಾಗಿರುವಂತೆ ವೈದ್ಯಕೀಯ ಸಾಧನಗಳ 684 ಉತ್ಪನ್ನಗಳು/ಬ್ರಾಂಡ್ ಗಳು ಮತ್ತು 620 ಉತ್ಪನ್ನಗಳು/ಬ್ರಾಂಡ್ ಗಳು (ಶೇ.91)ರಷ್ಟು ಸಾಧನಗಳ ಎಂಆರ್ ಪಿ ದರ ಇಳಿಮುಖವಾಗಿದೆ.

ಗರಿಷ್ಠ ಇಳಿಕೆ ಪಲ್ಸ್ ಆಕ್ಸಿಮೀಟರ್ ಆಮದು ಬ್ರಾಂಡ್ ನಲ್ಲಿ ವರದಿಯಾಗಿದೆ, ಪ್ರತಿ ಘಟಕದ ಬೆಲೆ 2,95,375 ರೂ ಗೆ ಇಳಿಕೆಯಾಗಿದೆ. ಬೆಲೆ ಇಳಿಕೆಯ ವಿವರಗಳು ಕೆಳಗಿನ ಕೋಷ್ಠಕದಲ್ಲಿರುವಂತೆ ಇದೆ.

ಕ್ರ.ಸಂ

ವೈದ್ಯಕೀಯ ಸಾಧನಗಳು

ಅಧಿಸೂಚನೆ ನಂತರ ವರದಿಯಾಗಿರುವ ಬ್ರಾಂಡ್ ಗಳ ಸಂಖ್ಯೆ

ಎಂಆರ್ ಪಿ ಇಳಿಕೆ ಪ್ರವೃತ್ತಿ ಕಂಡುಬಂದಿರುವ ಬ್ರಾಂಡ್ ಗಳ ಸಂಖ್ಯೆ

ಎಂಆರ್ ಪಿಯಲ್ಲಿ ಆಗಿರುವ ಗರಿಷ್ಠ ದರ ಇಳಿಕೆ

 

 

 

 

ರೂ.

ಶೇಕಡಾವಾರು

1

ಪಲ್ಸ್ ಆಕ್ಸಿಮೀಟರ್- ಬೆರಳ ತುದಿಗೆ ಹಾಕುವ

136

127 (93%)

5,150

88%

1ಬಿ

ಇತರೆ ಪಲ್ಸ್ ಆಕ್ಸಿಮೀಟರ್

73

62 (85%)

2,95,375

47%

 

2

ರಕ್ತದೊತ್ತಡ ನಿಗಾ ಯಂತ್ರ

 

216

 

195 (90%)

 

6,495

 

83%

3

ನೆಬುಲೈಸರ್

137

124 (91%)

15,175

77%

 

4

ಡಿಜಿಟಲ್ ಥರ್ಮಾಮೀಟರ್  

 

88

 

80 (91%)

 

5,360

 

77%

5

ಗ್ಲುಕೋಮೀಟರ್

34

32 (94%)

1,500

80%

 

ಒಟ್ಟು

684

620 (91%)

 

 

ಎಂಆರ್ ಪಿ ಇಳಿಕೆ ಪರಿಷ್ಕರಣೆ ಎಲ್ಲ ಆಮದು ಮತ್ತು ದೇಶಿಯ ಬ್ರಾಂಡ್ ಗಳಲ್ಲಿ ಎಲ್ಲ ವರ್ಗಗಳಲ್ಲೂ ಆಗುತ್ತಿರುವುದು ವರದಿಯಾಗಿದೆ. ಆಮದು ಮಾಡಿಕೊಳ್ಳುತ್ತಿರುವ ಪಲ್ಸ್ ಆಕ್ಸಿಮೀಟರ್, ರಕ್ತದೊತ್ತಡ ನಿಗಾ ಯಂತ್ರ ಮತ್ತು ನೆಬುಲೈಸರ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.

ಎಲ್ಲ ಬ್ರಾಂಡ್ ಗಳ ಮೇಲೆ ಪರಿಷ್ಕೃತ  ಎಂಆರ್ ಪಿ 2021 ಜು.20ರಿಂದ ಜಾರಿಗೆ ಬಂದಿದೆ, ಅದರ ವಿವರಗಳನ್ನುರಾಜ್ಯಗಳ ಔಷಧ ನಿಯಂತ್ರಕರ ಜೊತೆ ಹಂಚಿಕೊಳ್ಳಲಾಗಿದ್ದು, ಮೇಲ್ವಿಚಾರಣೆ ನಡೆಸಿ, ಕಠಿಣ ರೀತಿಯಲ್ಲಿ ಜಾರಿಗೊಳಿಸುವಂತೆ ಸೂಚನೆ ನೀಡಲಾಗಿದೆ. ಸಂಬಂಧಿಸಿದ ನಿರ್ದೇಶನಗಳು ಎನ್ ಪಿಪಿಎ ವೆಬ್ ಸೈಟ್ (www.nppa.gov.in) ನಲ್ಲಿ ಲಭ್ಯವಿದೆ. ಲಭ್ಯತೆಯ ಮೇಲೆ ನಿಗಾವಹಿಸುವ ಉದ್ದೇಶದಿಂದ ಉತ್ಪಾದಕರು/ ಆಮದುದಾರರು ವೈದ್ಯಕೀಯ ಸಾಧನಗಳ ದಾಸ್ತಾನು ವಿವರಗಳನ್ನು ಪ್ರತಿ ತ್ರೈಮಾಸಿಕದಲ್ಲೂ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.

ಎಫ್ ಐಸಿಸಿಐ, ಅಡ್ವ ಮೇಡ್ ಮತ್ತು ಎಎಂಸಿಎಚ್ ಎಎಂ ಸೇರಿ ಉದ್ಯಮದ ಎಲ್ಲ ಒಕ್ಕೂಟಗಳಿಂದ ಮಹತ್ವದ ಕ್ರಮಕ್ಕೆ ವ್ಯಾಪಕ ಬೆಂಬಲ ದೊರೆತಿದೆ.

***


(Release ID: 1738728) Visitor Counter : 216