ಹಣಕಾಸು ಸಚಿವಾಲಯ
ಡಿಜಿಟಲ್ ಮತ್ತು ಸುಸ್ಥಿರ ವ್ಯಾಪಾರ ಸೌಲಭ್ಯ ಕುರಿತ ವಿಶ್ವಸಂಸ್ಥೆಯ ಜಾಗತಿಕ ಸಮೀಕ್ಷೆಯಲ್ಲಿ ಭಾರತದ ಸ್ಥಾನಮಾನ(ಸ್ಕೋರ್ ಏರಿಕೆ) ಗಣನೀಯ ಸುಧಾರಣೆ
Posted On:
23 JUL 2021 8:49AM by PIB Bengaluru
ವಿಶ್ವಸಂಸ್ಥೆಯ ಸಾಮಾಜಿಕ ಮತ್ತು ಆರ್ಥಿಕ ಆಯೋಗವು ಇತ್ತೀಚೆಗೆ ಏಷ್ಯಾ ಪೆಸಿಫಿಕ್ ವಲಯ ರಾಷ್ಟ್ರಗಳ ಡಿಜಿಟಲ್ ಮತ್ತು ಸುಸ್ಥಿರ ವ್ಯಾಪಾರ ಸೌಲಭ್ಯ ಕುರಿತು ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ಭಾರತವು 90.32% ಅಂಕಗಳನ್ನು ಗಳಿಸಿ, ತನ್ನ ಸ್ಥಾನಮಾನವನ್ನು ಭದ್ರಪಡಿಸಿಕೊಂಡಿದೆ. 2019ರಲ್ಲಿ 78.49% ಅಂಕ ಗಳಿಸಿದ್ದ ಭಾರತ ಇದೀಗ 90.32%ಗೆ ಹೆಚ್ಚಿಸಿಕೊಂಡಿದೆ ಎಂದು ಸಮೀಕ್ಷೆ ಶ್ಲಾಘಿಸಿದೆ. ಸಮೀಕ್ಷೆಯ ಫಲಿತಾಂಶವನ್ನು ಇಲ್ಲಿ ನಮೂದಿಸಿರುವ ವೆಬ್|ಸೈಟ್|ನಲ್ಲಿ (https://www.untfsurvey.org/economy?id=IND) ನೋಡಬಹುದು.
ವಿಶ್ವಸಂಸ್ಥೆಯ 2021ರ ಸಮೀಕ್ಷೆಯಲ್ಲಿ 143 ದೇಶಗಳ (ಆರ್ಥಿಕತೆ) ಡಿಜಿಟಲ್ ಮತ್ತು ಸುಸ್ಥಿರ ವ್ಯಾಪಾರ ಸೌಲಭ್ಯದ ಮೌಲ್ಯಮಾಪನ ಮಾಡಲಾಗಿದ್ದು, ಭಾರತವು ಪ್ರಮುಖ ಐದು ಸೂಚಕಗಳಲ್ಲಿ ಮಹತ್ವದ ಸುಧಾರಣೆಗಳನ್ನು ಕಂಡಿರುವುದನ್ನು ಸಮೀಕ್ಷೆ ಬೆಳಕು ಚೆಲ್ಲಿದೆ. ಅವು ಇಂತಿವೆ.
- ಪಾರದರ್ಶಕತೆ: 2021ರಲ್ಲಿ 100% (2019ರಲ್ಲಿ 93.33% ಇತ್ತು)
- ನಿಯಮಗಳ ಪಾಲನೆ ಮತ್ತು ಅನುಷ್ಠಾನ: 2021ರಲ್ಲಿ 95.83% (2019ರಲ್ಲಿ 87.5% ಇತ್ತು)
- ಸಾಂಸ್ಥಿಕ ವ್ಯವಸ್ಥೆ ಮತ್ತು ಸಹಕಾರ: 2021ರಲ್ಲಿ 88.89% (2019ರಲ್ಲಿ 66.67% ಇತ್ತು)
- ಕಾಗದಮುಕ್ತ ವ್ಯಾಪಾರ: 2021ರಲ್ಲಿ 96.3% (2019ರಲ್ಲಿ 81.48% ಇತ್ತು)
- ಗಡಿಯಾಚೆಗಿನ ಕಾಗದಮುಕ್ತ ವ್ಯಾಪಾರ: 2021ರಲ್ಲಿ 66.67% (2019ರಲ್ಲಿ 55.56% ಇತ್ತು)
ದಕ್ಷಿಣ ಮತ್ತು ನೈರುತ್ಯ ಏಷ್ಯಾ ಭಾಗ (63.12%) ಮತ್ತು ಏಷ್ಯಾ ಪೆಸಿಫಿಕ್ ವಲಯ (65.85%) ಕ್ಕೆ ಹೋಲಿಸಿದರೆ ಭಾರತ ಅತ್ಯತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಮೀಕ್ಷೆ ಗುರುತಿಸಿದೆ. ಫ್ರಾನ್ಸ್, ಯುನೈಟೆಡ್ ಕಿಂಗ್|ಡಂ, ಕೆನಡಾ, ನಾರ್ವೆ, ಫಿನ್|ಲ್ಯಾಂಡ್ ಇತ್ಯಾದಿ ಒಇಸಿಡಿ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದ ಒಟ್ಟಾರೆ ಅಂಕ ಗಳಿಕೆ ಐರೋಪ್ಯ ಒಕ್ಕೂಟ ರಾಷ್ಟ್ರಗಳ ಸರಾಸರಿ ಅಂಕಗಳಿಗಿಂತ ಹೆಚ್ಚಿದೆ. ಪಾರದರ್ಶಕತೆ ಸೂಚ್ಯಂಕದಲ್ಲಿ ಭಾರತ 100% ಅಂಕ ಗಳಿಸಿದರೆ, ‘ವ್ಯಾಪಾರ ವಹಿವಾಟಿನಲ್ಲಿ ಮಹಿಳೆಯರು’ ವಿಭಾಗದಲ್ಲಿ 66% ಅಂಕ ಗಳಿಸಿದೆ.
ಪರೋಕ್ಷ ತೆರಿಗೆಗಳು ಮತ್ತು ಸೀಮಾಸುಂಕಳ ಕೇಂದ್ರೀಯ ಮಂಡಳಿ (ಸಿಬಿಐಸಿ)ಯು ಮಹತ್ವಾಕಾಂಕ್ಷಿ ಸುಧಾರಣಾ ಕ್ರಮಗಳಿಗೆ ಮುಂಚೂಣಿಯಲ್ಲಿದ್ದು, ತುರಂತ್ ಸೀಮಾಸುಂಕಗಳ ಸರಣಿ ತೆರಿಗೆ ಸುಧಾರಣಾ ಕಾರ್ಯಕ್ರಮಗಳಡಿ ಕಾಗದಮುಕ್ತ, ಸಂಪರ್ಕಮುಕ್ತ ಮತ್ತು ತೆರಿಗೆದಾರನ ಖುದ್ದು ಹಾಜರಾತಿ ಇಲ್ಲದ ತೆರಿಗೆ ಪಾವತಿ ಅಥವಾ ತೆರಿಗೆ ವಿವರ ಸಲ್ಲಿಕೆಗೆ ನಾನಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ರೀತಿಯ ವ್ಯಾಪಕ ಸುಧಾರಣಾ ಕ್ರಮಗಳು ಭಾರತದ ಸ್ಥಾಮಾನವನ್ನು ಡಿಜಿಟಲ್ ಮತ್ತು ಸುಸ್ಥಿರ ವ್ಯಾಪಾರ ಸೌಲಭ್ಯ ಕುರಿತ ವಿಶ್ವಸಂಸ್ಥೆಯ ಜಾಗತಿಕ ಸಮೀಕ್ಷೆಯಲ್ಲಿ ಮೇಲಕ್ಕೆ ಕೊಂಡೊಯ್ದಿದೆ.
ಹೆಚ್ಚುವರಿಯಾಗಿ, ಕೋವಿಡ್-19 ಸಂಕಷ್ಟ ಕಾಲಘಟ್ಟದಲ್ಲಿ, ಕೋವಿಡ್ ಸಂಬಂಧಿತ ಆಮದುಗಳಿಗೆ ಅದರಲ್ಲೂ ವಿಶಏಷವಾಗಿ ಆಮ್ಲಜನಕ ಉಪಕರಣಗಳು, ಜೀವ ಉಳಿಸುವ ಔಷಧಗಳು, ಲಸಿಕೆಗಳ ಆಮದಿಗೆ ಸೀಮಾಸುಂಕಗಳ ಸಡಿಲಿಕೆ ಮತ್ತು ವಿನಾಯಿತಿ ಸೌಲಭ್ಯ ಒದಗಿಸಲಾಯಿತು. ಅಲ್ಲದೆ, ರಫ್ತು-ಆಮದು (ಎಕ್ಸಿಂ) ವ್ಯಾಪಾರಕ್ಕೆ ಅನುವು ಕಲ್ಪಿಸಲು ಸಮರ್ಪಿತ ಕೋವಿಡ್-19 ಏಕಗವಾಕ್ಷಿ 24x7 ಸಹಾಯವಾಣಿಯನ್ನು ಸಿಬಿಐಸಿ ವೆಬ್|ಸೈಟ್|ನಲ್ಲಿ ಸೃಜಿಸಲಾಯಿತು. ಆಮದುದಾರರು ಎದುರಿಸುವ ನಾನಾ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವುದು ಇದರ ಉದ್ದೇಶವಾಗಿತ್ತು.
ಸಮೀಕ್ಷೆ ಕುರಿತು:
ವಿಶ್ವಸಂಸ್ಥೆಯ ಆರ್ಥಿಕ-ಸಾಮಾಜಿಕ ಆಯೋಗವು ಏಷ್ಯಾ ಪೆಸಿಫಿಕ್ ವಲಯದ ಡಿಜಿಟಲ್ ಮತ್ತು ಸುಸ್ಥಿರ ವ್ಯಾಪಾರ ಸೌಲಭ್ಯ ಕುರಿತು ಪ್ರತಿ 2 ವರ್ಷಗಳಿಗೊಮ್ಮೆ ಜಾಗತಿಕ ಸಮೀಕ್ಷೆ ನಡೆಸುತ್ತದೆ. 2021ರ ಸಮೀಕ್ಷೆಯು ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯುಟಿಒ)ಯ ವ್ಯಾಪಾರ ಸೌಲಭ್ಯ ಒಪ್ಪಂದದ ವ್ಯಾಪ್ತಿಗೆ ಒಳಪಟ್ಟ 58 ವ್ಯಾಪಾರ ಸೌಲಭ್ಯ ಕ್ರಮಗಳ ಮೌಲ್ಯಮಾಪನವನ್ನು ಒಳಗೊಂಡಿದೆ. ವ್ಯಾಪಾರ ಸುಗಮಗೊಳಿಸುವ ಕ್ರಮಗಳು ಅಪೇಕ್ಷಿತ ಪರಿಣಾಮ ಬೀರುತ್ತಿವೆಯೇ ಅಥವಾ ಇಲ್ಲವೇ ಎಂಬುದಕ್ಕೆ ಈ ಸಮೀಕ್ಷೆಯು ಜಾಗತಿಕ ಮಟ್ಟದಲ್ಲಿ ಸಾಕ್ಷಿಯಾಗುತ್ತಿದೆ, ದೇಶಗಳ ನಡುವೆ ಹೋಲಿಕೆ ಮಾಡಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಹೆಚ್ಚಿನ ಅಂಕ ಗಳಿಸುವ ದೇಶಗಳಿಗೆ ಹೂಡಿಕೆ ಒಳಹರಿವು ಹೆಚ್ಚಾಗಲು ಈ ಸಮೀಕ್ಷೆ ಸಹಾಯ ಮಾಡುತ್ತಿದೆ.
***
(Release ID: 1738132)
Visitor Counter : 292