ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಆಲ್ಪಾ ರೂಪಾಂತರಿಗಿಂತ B.1.617.2 ಎಂದು ಕರೆಯಲ್ಪಡುವ ಡೆಲ್ಪಾ ರೂಪಾಂತರಿ ಶೇ 40ರಿಂದ 60ರಷ್ಟು ಹೆಚ್ಚು ಪ್ರಸರಣ: ಐಎನ್ ಎಸ್ಎಸಿಒಜಿ ಸಹಾಧ್ಯಕ್ಷ ಡಾ.ಎನ್.ಕೆ.ಅರೋರ


ಐಸಿಎಂಆರ್ ಅಧ್ಯಯನಗಳ ಪ್ರಕಾರ ಸದ್ಯದ ಲಸಿಕೆಗಳು ಡೆಲ್ಪಾ ರೂಪಾಂತರಿ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ

ಹೆಚ್ಚಿನ ಜನರು ಲಸಿಕೆ ಪಡೆದರೆ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಪರಿಣಾಮಕಾರಿಯಾಗಿ ಪಾಲಿಸಿದರೆ ಯಾವುದೇ ಭವಿಷ್ಯದ ಅಲೆಗಳನ್ನು ತಡೆಯಬಹುದು ಮತ್ತು ವಿಳಂಬ ಮಾಡಬಹುದು

ಡೆಲ್ಪಾ ರೂಪಾಂತರಿಯಿಂದ ಉಂಟಾಗುವ ರೋಗವು ಹೆಚ್ಚು ತೀವ್ರತೆಯಿಂದ ಕೂಡಿದೆಯೆಂದು ಹೇಳುವುದು ಕಷ್ಟಕರ - ಡಾ.ಎನ್.ಕೆ.ಅರೋರ

Posted On: 19 JUL 2021 11:09AM by PIB Bengaluru

ಇಂಡಿಯನ್ ಸಾರ್ಸ್-ಸಿಒವಿ-2 ಜಿನೋಮಿಕ್ಸ್ ಕನ್ಸೋರ್ಟಿಯಂ (ಐಎನ್ ಎಸ್ಎಸಿಒಜಿ) ಸಹ ಅಧ್ಯಕ್ಷ ಡಾ.ಎನ್. ಕೆ.ಅರೋರ ಇತ್ತೀಚಿನ ಸಂದರ್ಶನವೊಂದರಲ್ಲಿ, ರೂಪಾಂತರಿಗಳು ಇತ್ತೀಚಿನ ಬೆಳವಣಿಗೆಗಳು ಮತ್ತು ಪರೀಕ್ಷಗಳ ಕುರಿತು ಪ್ರಮಾಣಿಕೃತ ಕಾರ್ಯಾಚರಣೆ ನಿಯಮ (ಮಾರ್ಗಸೂಚಿ), ಡೆಲ್ಟಾ ರೂಪಾಂತರ ಹೇಗೆ ಪ್ರಸರಣಗೊಳ್ಳುತ್ತದೆ, ಹೇಗೆ ಜಿನೋಮ್ ಕಣ್ಗಾವಲಿನಿಂದಾಗಿ ಸೋಂಕು ಹರಡುವುದುನ್ನು ತಡೆಯುವುದು ಮತ್ತು ಕೋವಿಡ್ ಸೂಕ್ತ ನಡವಳಿಕೆ ಪ್ರಾಮುಖ್ಯತೆಯನ್ನು ಮತ್ತೆ ಪ್ರತಿಪಾದಿಸುವ ಅಂಶಗಳ ಬಗ್ಗೆ ವಿಸ್ತೃತವಾಗಿ ಹೇಳಿದ್ದಾರೆ.

ಐಎನ್ ಎಸ್ಎಸಿಒಜಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಜೈವಿಕ ತಂತ್ರಜ್ಞಾನ ಇಲಾಖೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ ಐಆರ್) 28 ಪ್ರಯೋಗಾಲಯಗಳ ಒಕ್ಕೂಟವಾಗಿದ್ದು, ಅದು ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜಿನೋಮ್ ಸಿಕ್ವೆನ್ಸಿಂಗ್ ನಡೆಸಲಿದೆ. ಐಎನ್ ಎಸ್ಎಸಿಒಜಿ ಅನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 2020 ಡಿಸೆಂಬರ್ 20ರಂದು ಸ್ಥಾಪಿಸಿತು.

ಇತ್ತೀಚೆಗೆ ಐಎನ್ ಎಸ್ಎಸಿಒಜಿ  ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ವಿಸ್ತರಣೆ ಹಿಂದಿನ ಚಿಂತನೆಯೇನು?

ಹೊಸ ರೂಪಾಂತರಿಗಳ ಬಗ್ಗೆ ನಿಗವಾಹಿಸಲು ಮತ್ತು ಅವುಗಳು ಹರಡದಂತೆ ಕಟ್ಟುನಿಟ್ಟಿನ ನಿಗಾವಹಿಸಬೇಕಿದೆ, ಮೂಲಕ ಅವು ಹೆಚ್ಚಿನ ಪ್ರದೇಶಗಳಿಗೆ ಹರಡುವುದನ್ನು ನಿಯಂತ್ರಿಸಬಹುದಾಗಿದೆ. ಇಂಡಿಯನ್ ಸಾರ್ಸ್-ಸಿಒವಿ-2 ಜಿನೋಮಿಕ್ಸ್ ಕನ್ಸೋರ್ಟಿಯಂ (ಐಎನ್ ಎಸ್ಎಸಿಒಜಿ) ಅನ್ನು 2020 ಡಿಸೆಂಬರ್ ನಲ್ಲಿ ಸ್ಥಾಪಿಸಲಾಗಿದೆ, ಅದು 10 ಪ್ರಯೋಗಾಲಯಗಳ ಒಕ್ಕೂಟವಾಗಿದೆ. ಇತ್ತೀಚೆಗೆ 18 ಇತರೆ ಪ್ರಯೋಗಾಲಯಗಳೂ ಸಹ ಅದರ ಭಾಗವಾಗಿ ಸೇರ್ಪಡೆಯಾಗಿವೆ.

ಬಲಿಷ್ಠ ಪ್ರಯೋಗಾಲಯದ ಜಾಲದ ಮೂಲಕ ಸಾರ್ಸ್-ಸಿಒವಿ-2 ಜಿನೋಮಿಕ್ ಸರ್ವೇಲೆನ್ಸ್ ನಡೆಸಲು ಮತ್ತು ಇಡೀ ಜಿನೋಮಿಕ್ಸ್ ಸೀಕ್ವೆನಿಂಗ್ (ಡಬ್ಲೂಜಿಎಸ್) ದತ್ತಾಂಶದ ಉದ್ದೇಶ ಕ್ಲಿನಿಕಲ್ ಮತ್ತು ಸಾಂಕ್ರಾಮಿದ ದತ್ತಾಂಶದೊಂದಿಗೆ ಪರಸ್ಪರ ಸಂಬಂಧ ಹೊಂದಲು, ಒಂದು ರೂಪಾಂತರವು ಹೆಚ್ಚು ಹರಡುತ್ತದೆಯೋ ಇಲ್ಲವೋ ಎಂದು ನೋಡಲು, ಕಾಯಿಲೆಯ ತೀವ್ರತೆಗೆ ಕಾರಣವಾಗುತ್ತದೆಯೇ, ರೋಗನಿರೋಧಕ ಶಕ್ತಿಯಿಂದ ಆಥವಾ ಬೆಳವಣಿಗೆಯಾಗುತ್ತಿರುವ ಸೋಂಕುಗಳನ್ನು ಕಂಡುಹಿಡಿಯುವುದು, ಲಸಿಕೆಯ ದಕ್ಷತೆಯ ಪರಿಣಾಮವನ್ನು ಗಮನಿಸುವುದು ಮತ್ತು ಸದ್ಯದ ರೋಗಪತ್ತೆಯುವ ಪರೀಕ್ಷೆಗಳನ್ನು ಮಾಡುವುದು ಮೊದಲಾದವುಗಳ ಬಗ್ಗೆ ಗಮನಹರಿಸಲಾಗುವುದು

ನಂತರ ದತ್ತಾಂಶವನ್ನು ರಾಷ್ಟ್ರೀಯ ರೋಗನಿಯಂತ್ರಣ ಕೇಂದ್ರ (ಎನ್ ಸಿಡಿಸಿ) ವಿಶ್ಲೇಷಿಸುತ್ತದೆ. ಇಡೀ ದೇಶವನ್ನು ಭೌಗೋಳಿಕ ಪ್ರದೇಶಗಳನ್ನಾಗಿ ವಿಭಜಿಸಲಾಗಿದೆ ಮತ್ತು ಪ್ರತಿ ಪ್ರಯೋಗಾಲಯಕ್ಕೆ ನಿರ್ದಿಷ್ಟ ಪ್ರದೇಶದ ಜವಾಬ್ದಾರಿಯನ್ನು ನೀಡಲಾಗಿದೆ.

ನಾವು ಪ್ರತಿ ಕ್ಲಸ್ಟರ್ ನಲ್ಲಿ ಸುಮಾರು 4 ಜಿಲ್ಲೆಗಳೊಂದಿಗೆ 180-190 ಕ್ಲಸರ್ ಗಳನ್ನು ರಚಿಸಿದ್ದೇವೆ. ನಿರಂತರವಾಗಿ ಮಾದರಿ ಸ್ವ್ಯಾಬ್ ಸಂಗ್ರಹ ಮತ್ತು ಗಂಭೀರ ಅನಾರೋಗ್ಯ ಪೀಡಿತ ರೋಗಿಗಳ ಮಾದರಿ ಸಂಗ್ರಹ, ಲಸಿಕೆಯಿಂದಾಗಿ ಆಗುವ ಸೋಂಕುಗಳು ಮತ್ತು ಇತರೆ ಕ್ಲಿನಿಕಲ್ ಪ್ರಕ್ರಿಯೆಯಲ್ಲಿ ಆಗುವ ವ್ಯತ್ಯಯಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಅವುಗಳ ವಿಶ್ಲೇಷಣೆಗಾಗಿ ಪ್ರಾದೇಶಿಕ ಪ್ರಯೋಗಾಲಯಗಳಿಗೆ ಕಳುಹಿಸಲಾಗುವುದು. ಸದ್ಯ ಪ್ರತಿ ತಿಂಗಳು 50 ಸಾವಿರ ಮಾದರಿಗಳನ್ನು ವಿಶ್ಲೇಷಿಸುವ ಸಾಮರ್ಥ್ಯವನ್ನು ದೇಶ ಹೊಂದಿದೆ. ಮೊದಲು ಸುಮಾರು 30 ಸಾವಿರ ಮಾದರಿಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಹೊಂದಿತ್ತು

ರೂಪಾಂತರಿಗಳ ಮೇಲೆ ನಿಗಾ ಇಡಲು ಮತ್ತು ಪರೀಕ್ಷೆ ನಡೆಸಲು ದೇಶದಲ್ಲಿ ಯಾವ ಬಗೆಯ ಕಾರ್ಯತಂತ್ರವನ್ನು ಅನುಸರಿಸಲಾಗುತ್ತಿದೆ ?

ಭಾರತವು ವ್ಯವಸ್ಥಿತವಾದ ಸಮಗ್ರ ರೋಗ ಕಣ್ಗಾವಲಿನ ಕಾರ್ಯತಂತ್ರವನ್ನು ಹೊಂದಿದೆ. ಐಡಿಎಸ್ ಪಿ ಜಿಲ್ಲೆಗಳು/ಸ್ಥಳಗಳಿಂದ ಮಾದರಿ ಸಂಗ್ರಹ ಮತ್ತು ಸಾಗಾಣೆಗೆ ಪ್ರಾದೇಶಿಕ ಜಿನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳಿಂದ(ಆರ್ ಜಿಎಸ್ಎಲ್) ಸಮನ್ವಯ ನಡೆಸಲಿದೆ. ಆರ್ ಜಿಎಸ್ಎಲ್ ಗಳು ಜಿನೋಮ್ ಸೀಕ್ವೆನ್ಸಿಂಗ್ ಮತ್ತು ಆತಂಕಕಾರಿ ರೂಪಾಂತರಿ ಸೋಂಕುಗಳನ್ನು ಗುರುತಿಸುವುದು(ವಿಒಸಿ)/ಆಸಕ್ತಿಕರ ವೈರಾಣುಗಳು(ವಿಒಐ), ಸಂಭಾವ್ಯ ಆಸಕ್ತಿಕರ ಮತ್ತು ರೂಪಾಂತರಗೊಳ್ಳುವ ವೈರಾಣುಗಳ ವಿಶ್ಲೇಷಣೆ ಜವಾಬ್ದಾರಿಯನ್ನು ಹೊಂದಿವೆ. ರಾಜ್ಯ ಕಣ್ಗಾವಲು ಅಧಿಕಾರಿಗಳ ಸಮನ್ವಯದೊಂದಿಗೆ ಕ್ಲಿನಿಕಲ್  ಎಪಿಡಮಿಯೋಲಾಜಿಕಲ್ ಪರಸ್ಪರ ಸಂಬಂಧಕ್ಕಾಗಿ ವಿಒಸಿ/ವಿಒಐ ಕುರಿತ ಮಾಹಿತಿಯನ್ನು ನೇರವಾಗಿ ವಿಶ್ಲೇಷಣೆಗಾಗಿ ಕೇಂದ್ರೀಯ ನಿಗಾ ಘಟಕಕ್ಕೆ ಸಲ್ಲಿಸಲಾಗುವುದು. ನಂತರ ಮಾದರಿಗಳನ್ನು ನಿಯೋಜಿತ ಜೈವಿಕ ಬ್ಯಾಂಕ್ ಗಳಿಗೆ ಕಳುಹಿಸಲಾಗುವುದು.

ಆರ್ ಜಿಎಸ್ಎಲ್ ಗಳು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಪ್ರಸ್ತುತವೆನಿಸುವ ಜಿನೋಮಿಕ್ ರೂಪಾಂತರಿಯನ್ನು ಗುರುತಿಸಲಿವೆ ಮತ್ತು ಅವು ಕುರಿತ ಮಾಹಿತಿಯನ್ನು ವೈಜ್ಞಾನಿಕ ಮತ್ತು ಕ್ಲಿನಿಕಲ್ ಸಲಹಾ ಸಮಿತಿ(ಎಸ್ ಸಿಎಜಿ)ಗೆ ಸಲ್ಲಿಕೆ ಮಾಡಲಿವೆ. ನಂತರ ಎಸ್ ಸಿಎಜಿ ಆಸಕ್ತಿಕರ ಮತ್ತು ಸಂಭವನೀಯ ವೈರಾಣುಗಳ ರೂಪಾಂತರದ ಬಗ್ಗೆ ತಜ್ಞರೊಡನೆ ಚರ್ಚಿಸಲಿದೆ ಮತ್ತು ಅಗತ್ಯಬಿದ್ದರೆ ಮುಂದಿನ ವಿಶ್ಲೇಷಣೆಗಾಗಿ ಕೇಂದ್ರೀಯ ನಿಗಾ ಘಟಕಕ್ಕೆ ಶಿಫಾರಸ್ಸು ಮಾಡಲಿದೆ.

ಐಡಿಎಸ್ ಪಿ ನಡೆಸುವ ಕ್ಲಿನಿಕಲ್ ಎಪಿಡೆಮಿಯೋಲಾಜಿಕಲ್ ಕೊರ್ರೆಲೋಷನ್ ಸಂಬಂಧ ಮಾಹಿತಿಯನ್ನು ಎನ್ ಸಿಡಿಸಿ ಘಟಕ, ಆರೋಗ್ಯ ಸಚಿವಾಲಯ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ಜೈವಿಕ ತಂತ್ರಜ್ಞಾನ ಇಲಾಖೆ, ವೈಜ್ಞಾನಿಕ ಮತ್ತು ಕೈಗಾರಿಕಾ ಅಭಿವೃದ್ಧಿ ಮಂಡಳಿ ಹಾಗೂ ರಾಜ್ಯಗಳ ಇತರೆ ಪ್ರಾಧಿಕಾರದೊಂದಿಗೆ ಹಂಚಿಕೊಳ್ಳಲಿದೆ.

ಅಂತಿಮವಾಗಿ ಹೊಸ ರೂಪಾಂತರಿ ಮತ್ತು ಆತಂಕಕಾರಿ ವೈರಾಣುಗಳ ವಿಶ್ಲೇಷಣೆ ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಹಾಗೂ ಅವುಗಳು ಹರಡಬಹುದಾದ ಸೋಂಕಿನ ತೀವ್ರತೆ, ಲಸಿಕೆ ಪರಿಣಾಮಗಳು, ರೋಗ ನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಕುರಿತು ಪರಿಶೀಲಿಸಲಿದೆ.

ಡೆಲ್ಟಾ ರೂಪಾಂತರ ಜಾಗತಿಕವಾಗಿ ಹೆಚ್ಚು ಆತಂಕ ಹುಟ್ಟಿಸಿದೆ. ರೂಪಾಂತರ ಅಷ್ಟೊಂದು ತೀವ್ರತೆ ಹೊಂದಿದೆಯೇ ?

B.1.617.2 ರೂಪಾಂತರಿ ಕೋವಿಡ್-19 ಅನ್ನು ಡೆಲ್ಟಾ ರೂಪಾಂತರಿ ಎಂದೂ ಸಹ ಕರೆಯಲಾಗುವುದು. ಇದು ಮೊದಲು ಭಾರತದಲ್ಲಿ 2020 ಅಕ್ಟೋಬರ್ ನಲ್ಲಿ ಪತ್ತೆಯಾಯಿತು ಮತ್ತು ಇದು ದೇಶದಲ್ಲಿ ಎರಡನೇ ಅಲೆಗೆ ಅತ್ಯಂತ ಪ್ರಮುಖ ಕಾರಣವಾಗಿದೆ. ಇಂದು ಇದರಿಂದಾಗಿ ಶೇಕಡ 80ರಷ್ಟು ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದು ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿತು ಮತ್ತು ನಂತರ ಉತ್ತರಾಭಿಮುಖವಾಗಿ ಸಾಗಿ ಪಶ್ಚಿಮದ ರಾಜ್ಯಗಳಿಗೆ ಹರಡಿ, ಆನಂತರ ಕೇಂದ್ರ ಹಾಗೂ ಪೂರ್ವದ ರಾಷ್ಟ್ರಗಳಿಗೂ ಪ್ರವೇಶಿಸಿತು.

ತನ್ನ ರೂಪಾಂತರದಲ್ಲಿ ಸ್ಪೈಕ್ ಪ್ರೋಟಿನ್ ಹೊಂದಿರುವ ಇದು ಸದ್ಯದ ಸ್ಥಿತಿಗತಿಯಲ್ಲಿ ಜೀವಕೋಶಗಳ ಮೇಲ್ಮೈನಲ್ಲಿರುವ ಎಸಿಇ2  ಸ್ವೀಕೃತಿಗಳನ್ನು ದೃಢವಾಗಿ ಬಂಧಿಸಲು ಸಹಾಯ ಮಾಡುತ್ತವೆ. ಅವು ಅತ್ಯಂತ ವೇಗವಾಗಿ ಪ್ರಸರಣಗೊಳ್ಳುತ್ತವೆ ಮತ್ತು ದೇಹದ ರೋಗ ನಿರೋಧಕ ಶಕ್ತಿಯಿಂದಲೂ ಸಹ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದು ತನ್ನ ಉತ್ತರಾಧಿಕಾರಿ (ಆಲ್ಫಾ ವೈರಾಣು)ಗಿಂತ 40 ರಿಂದ 60ರಷ್ಟು ಹೆಚ್ಚು ಪ್ರಸರಣವಾಗಲಿದೆ ಮತ್ತು ಅದು ಈಗಾಗಲೇ ಬ್ರಿಟನ್, ಅಮೆರಿಕ, ಸಿಂಗಪುರ ಮತ್ತು ಇತರ ರಾಷ್ಟ್ರಗಳು ಸೇರಿದಂತೆ 80ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಈಗಾಗಲೇ ಹರಡಿದೆ.  

ಇತರೆ ರೂಪಾಂತರಿಗಳಿಗೆ ಹೋಲಿಸಿದರೆ ಇದು ಅತ್ಯಂತ ಗಂಭೀರ ಕಾಯಿಲೆಗೆ ಕಾರಣವಾಗಲಿದೆಯೇ?

ರೂಪಾಂತರಿಯಲ್ಲಿ ಕೆಲವು ವೈರಾಣುಗಳು ಸಿನಿಟಿಯಂ ರನಚೆಯನ್ನು ಉತ್ತೇಜಿಸುತ್ತದೆ ಎಂಬುದು ಅಧ್ಯಯನಗಳಿಂದ ಕಂಡುಬಂದಿದೆ. ಅಲ್ಲದೆ ಮಾನವನ ಜೀವ ಕಣಗಳನ್ನು ಸೇರಿದ ನಂತರ ಅದು ಅತ್ಯಂತ ವೇಗವಾಗಿ ಹರಡುತ್ತಿದೆ. ಇದು ಶ್ವಾಸಕೋಶಗಳು ಸೇರಿದಂತೆ ಇತರೆ ಅಂಗಗಳ ಮೇಲೆ ಬಲಿಷ್ಠ ಪರಿಣಾಮಗಳನ್ನು ಉಂಟುಮಾಡುತ್ತದೆ. ಆದರೂ ಡೆಲ್ಟಾ ವೈರಾಣು ಗಂಭೀರ ರೋಗಗಳನ್ನು ತಂದೊಡ್ಡುತ್ತದೆ ಎಂದು ಹೇಳುವುದು ಕಷ್ಟಕರ. ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆಯ ವೇಳೆ ಭಾರತದಲ್ಲಿ ಸಂಭವಿಸಿದ ಸಾವುಗಳು ಮತ್ತು ಸತ್ತವರ ವಯೋಮಾನ ಒಂದೇ ಆಗಿದೆ.

ಡೆಲ್ಟಾ ಪ್ಲಸ್ ರೂಪಾಂತರಿ ಡೆಲ್ಟಾ ರೂಪಾಂತರಿಗಿಂತ ಆಕ್ರಮಣಕಾರಿಯೇ ?

ಡೆಲ್ಟಾ ಪ್ಲಸ್ ರೂಪಾಂತರಿ ಎವೈ.1 ಮತ್ತು ಎವೈ.2 ಸದ್ಯ ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ಸೇರಿದಂತೆ  11 ರಾಜ್ಯಗಳಲ್ಲಿ 55 ರಿಂದ 60 ಪ್ರಕರಣಗಳಲ್ಲಿ ಕಂಡುಬಂದಿದೆ. ಎವೈ.1 ನೇಪಾಳ, ಪೋರ್ಚುಗಲ್, ಸ್ವಿಟ್ಜರ್ ಲ್ಯಾಂಡ್, ಪೋಲೆಂಡ್, ಜಪಾನ್ ರಾಷ್ಟ್ರಗಳಲ್ಲಿ ಕಂಡುಬಂದಿದೆ. ಆದರೆ ಎವೈ.2 ಹೆಚ್ಚು ಕಾಣಿಸಿಕೊಂಡಿಲ್ಲ. ವೈರಾಣುವನ್ನು ಇನ್ನೂ ಅದರ ಹರಡುವಿಕೆ ಅದು ಲಸಿಕೆಯಿಂದ ತಪ್ಪಿಸಿಕೊಳ್ಳಲಿದೆಯೇ ಎಂಬ ಸ್ವರೂಪದ ಬಗ್ಗೆ ಅಧ್ಯಯನ ನಡೆಯುತ್ತಿದೆ

ಡೆಲ್ಟಾ ರೂಪಾಂತರಿ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಲಿದೆಯೇ?

ಹೌದು, ವಿಷಯದ ಬಗ್ಗೆ ಐಸಿಎಂಆರ್ ನಡೆಸಿರುವ ಅಧ್ಯಯನದ ಪ್ರಕಾರ ಸದ್ಯದ ಲಸಿಕೆಗಳು ಡೆಲ್ಟಾ ರೂಪಾಂತರಿ ವಿರುದ್ಧ ಪರಿಣಾಮಕಾರಿ ಕಾರ್ಯನಿರ್ವಹಿಸುತ್ತವೆ.

ದೇಶದ ಕೆಲವು ಭಾಗಗಳಲ್ಲಿ ಇನ್ನೂ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತದೆ, ಏಕೆ?

ದೇಶದ ಬಹುತೇಕ ಪ್ರದೇಶಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ, ಆದರೆ ಕೆಲವೇ ಕೆಲವು ಭಾಗದಲ್ಲಿ ವಿಶೇಷವಾಗಿ ದೇಶದ ಈಶಾನ್ಯ ಭಾಗದಲ್ಲಿ ಮತ್ತು ದಕ್ಷಿಣದ ಕೆಲವು ರಾಜ್ಯಗಳಲ್ಲಿ ಅಧಿಕ ಪರೀಕ್ಷೆ ಪಾಸಿಟಿವಿಟಿ ದರ(ಟಿಪಿಆರ್ ) ಇದೆ, ಅವುಗಳಲ್ಲಿ ಬಹುತೇಕ ಪ್ರಕರಣಗಳಿಗೆ ಡೆಲ್ಟಾ ರೂಪಾಂತರಿ ಕಾರಣವಾಗಿದೆ.

ಭವಿಷ್ಯದ ಅಲೆಗಳನ್ನು ನಿಯಂತ್ರಿಸಬಹುದೇ?

ಸೋಂಕು ಜನಸಂಖ್ಯೆಯ ಒಂದು ಭಾಗಕ್ಕೆ ತಗುಲಲು ಆರಂಭವಾಗುತ್ತದೆ, ಆನಂತರ ಅದು ಹೆಚ್ಚು ಜನರಿಗೆ ಹರಡಬಹುದು ಮತ್ತು ಸೋಂಕಿಗೆ ಜನರು ಒಳಗಾಗುತ್ತಾರೆ. ಜನಸಂಖ್ಯೆಯ ಹೆಚ್ಚಿನ ಭಾಗವನ್ನು ಯಶಸ್ವಿಯಾಗಿ ತಗುಲಿದ ನಂತರ ಸೋಂಕು ಕಡಿಮೆಯಾಗುತ್ತದೆ ಮತ್ತು ನೈಸರ್ಗಿಕ ಸೋಂಕಿನ ನಂತರದ ಜನರಲ್ಲಿ ರೋಗ ನಿರೋಧಕ ಶಕ್ತಿ ಅಭಿವೃದ್ಧಿಯಾದಾಗ ಮತ್ತೆ ಕಾಣಿಸಿಕೊಳ್ಳುತ್ತದೆ. ಸೋಂಕಿನ ಹೊಸ ಬಗೆಯ ರೂಪಾಂತರಗಳು ಕಂಡುಬಂದಾಗ ಪ್ರಕರಣಗಳ ಸಂಖ್ಯೆ ಹೆಚ್ವಾಗಬಹುದು. ಮುಂದಿನ ಅಲೆಯಲ್ಲಿನ ರೂಪಾಂತರ ಸೋಂಕು ಗಣನೀಯ ಜನಸಂಖ್ಯೆಗೆ ಹರಡಬಹುದು.

ಎರಡನೇ ಅಲೆ ಇನ್ನೂ ಇದೆ. ಹೆಚ್ಚು ಹೆಚ್ಚು ಜನರು ಲಸಿಕೆ ಪಡೆಯುವುದರಿಂದ ಮತ್ತು ನಮ್ಮ ಜನಸಂಖ್ಯೆಯ ಸಾಕಷ್ಟು ಪ್ರಮಾಣದ ಜನರು ಲಸಿಕೆ ಪಡೆಯುವವರೆಗೆ ಕೋವಿಡ್ ಸೂಕ್ತ ನಡವಳಿಕೆ ಪಾಲನೆ ಮಾಡುವುದರಿಂದ  ನಾವು ಭವಿಷ್ಯದ ಅಲೆಗಳನ್ನು ನಿಯಂತ್ರಿಸಬಹುದು ಮತ್ತು ತಡ ಮಾಡಬಹುದು.

ಕೋವಿಡ್-19 ನಿರ್ವಹಣೆಗೆ ಜನರು ಲಸಿಕೀಕರಣಕಕ್ಕೆ ಮತ್ತು ಕೋವಿಡ್ ಸೂಕ್ತ ನಡವಳಿಕೆ ಪಾಲನೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ

***(Release ID: 1737512) Visitor Counter : 264