ಹಣಕಾಸು ಸಚಿವಾಲಯ

ಜಿಎಸ್ಟಿ ಪರಿಹಾರದ ಕೊರತೆಗಾಗಿ ರಾಜ್ಯಗಳು ಮತ್ತು ಶಾಸನ ಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳಿಗೆ ₹75,000 ಕೋಟಿ ಬಿಡುಗಡೆ


ಇಡೀ ವರ್ಷದ ಒಟ್ಟು ಕೊರತೆಯ ಶೇ.50ರಷ್ಟು ಹಣ ಒಂದೇ ಕಂತಿನಲ್ಲಿ ಬಿಡುಗಡೆ

ಕರ್ನಾಟಕಕ್ಕೆ ಒಟ್ಟು 8542.17 ಕೋಟಿ ರೂ. ಬಿಡುಗಡೆ

Posted On: 15 JUL 2021 6:23PM by PIB Bengaluru

ಕೇಂದ್ರ ಹಣಕಾಸು ಸಚಿವಾಲಯ, ಇಂದು ಜಿಎಸ್ಟಿ ಪರಿಹಾರದ ಬದಲಾಗಿ ಮತ್ತೆ ಮತ್ತೆ ಸಾಲ ಪಡೆಯುವ ಸೌಲಭ್ಯದ ಅಡಿಯಲ್ಲಿ 75,000 ಕೋಟಿ ರೂ.ಗಳನ್ನು ರಾಜ್ಯಗಳು ಮತ್ತು ಶಾಸನ ಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಿದೆ. ಈ ಬಿಡುಗಡೆಯು ಪ್ರತಿ 2 ತಿಂಗಳಿಗೊಮ್ಮೆ ವಾಸ್ತವ ಕರ ಸಂಗ್ರಹಣೆಯಲ್ಲಿ ಜಿಎಸ್ಟಿ ಪರಿಹಾರವಾಗಿ ಬಿಡುಗಡೆ ಮಾಡುವ ಸಾಮಾನ್ಯ ಜಿಎಸ್ಟಿ ಪರಿಹಾರಕ್ಕೆ ಹೆಚ್ಚುವರಿಯಾಗಿದೆ.

28.05.2021ರಂದು ನಡೆದ 43ನೇ ಜಿಎಸ್ಟಿ ಮಂಡಳಿ ಸಭೆಯ ತರುವಾಯ, ಪರಿಹಾರ ನಿಧಿಯಲ್ಲಿನ ಕೊರತೆಯ ಮೊತ್ತದ ಕಾರಣದಿಂದ ಪರಿಹಾರದ ಬಿಡುಗಡೆ ಕೊರತೆಯಿಂದಾಗಿ ಸಂಪನ್ಮೂಲದ ಅಂತರವನ್ನು ಸರಿದೂಗಿಸಲು ಕೇಂದ್ರ ಸರ್ಕಾರ 1.59 ಲಕ್ಷ ಕೋಟಿ ಸಾಲ ಪಡೆದು ಅದನ್ನು ರಾಜ್ಯಗಳು ಮತ್ತು ಶಾಸನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತೆ ಮತ್ತೆ ಸಾಲದ ಆಧಾರದಲ್ಲಿ ನೀಡಲು ನಿರ್ಧರಿಸಲಾಗಿದೆ. ಈ ಮೊತ್ತವು 2020-21ರ ಹಣಕಾಸು ವರ್ಷದಲ್ಲಿ ಇದೇ ರೀತಿಯ ಸೌಲಭ್ಯ ಅಳವಡಿಸಿಕೊಳ್ಳುವ ನೀತಿಯ ಅನುಗುಣವಾಗಿದ್ದು, ಅದರಲ್ಲಿ 1.10 ಲಕ್ಷ ಕೋಟಿ ರೂ.ಗಳನ್ನು ಇದೇ ವ್ಯವಸ್ಥೆಯಡಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿತ್ತು. 1.59 ಲಕ್ಷ ಕೋಟಿ ರೂಪಾಯಿಗಳ ಈ ಮೊತ್ತವು ಈ ಹಣಕಾಸು ವರ್ಷದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲು ಅಂದಾಜು ಮಾಡಲಾಗಿದ್ದ 1 ಲಕ್ಷ ಕೋಟಿ ರೂ. (ಕರ ಸಂಗ್ರಹಣೆ ಅಧಾರ)ಪರಿಹಾರಕ್ಕಿಂತ ಹೆಚ್ಚಾಗಿದೆ. 2.59 ಲಕ್ಷ ಕೋಟಿ ರೂ. ಮೊತ್ತವು 2021-22ರ ಹಣಕಾಸು ವರ್ಷದಲ್ಲಿನ ಜಿಎಸ್ಟಿ ಪರಿಹಾರದ ಮೊತ್ತಕ್ಕಿಂತ ಹೆಚ್ಚಾಗುವ ನಿರೀಕ್ಷೆ ಇದೆ. 

ಎಲ್ಲ ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಶಾಸನ ಸಭೆ) ಮತ್ತೆ ಮತ್ತೆ ಸಾಲ ಪಡೆವ ಸೌಲಭ್ಯದ ಅಡಿಯಲ್ಲಿ ಪರಿಹಾರದ ಕೊರತೆ ತುಂಬುವ ನಿಧಿಯ ವ್ಯವಸ್ಥೆಗೆ ಒಪ್ಪಿಕೊಂಡಿವೆ. ಕೋವಿಡ್ -19 ಸಾಂಕ್ರಾಮಿಕದ ಸಮರ್ಥ ಸ್ಪಂದನೆ ಮತ್ತು ನಿರ್ವಹಣೆ ಹಾಗೂ ಬಂಡವಾಳ ವೆಚ್ಚದಲ್ಲಿ ಮುಂದಡಿಯಿಡಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ರಾಜ್ಯಗಳು/ಕೇಂದ್ರಡಳಿತ ಪ್ರದೇಶಗಳಿಗೆ ನೆರವಾಗುವ ಪ್ರಯತ್ನವಾಗಿ, ಕೇಂದ್ರ ಹಣಕಾಸು ಸಚಿವಾಲಯವು 2021-22ರ ಹಣಕಾಸು ವರ್ಷದಲ್ಲಿ ಮತ್ತೆ ಮತ್ತೆ ಸಾಲ ಪಡೆಯುವ ಸೌಲಭ್ಯವನ್ನು ಮುಂದಿಟ್ಟಿದ್ದು, 75,000 ಕೋಟಿ ರೂ.(ಇಡೀ ವರ್ಷದ ಒಟ್ಟು ಕೊರತೆಯ ಬಹುತೇಕ ಶೇ.50ರಷ್ಟು)ಗಳನ್ನು ಇಂದು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿದೆ. 2021-22ರ ದ್ವಿತಿಯಾರ್ಧದಲ್ಲಿ ಬಾಕಿ ಮೊತ್ತದ ಕಂತನ್ನು ಬಿಡುಗಡೆ ಮಾಡಲಾಗುವುದು. 

ಈಗ ಬಿಡುಗಡೆ ಮಾಡಲಾಗಿರುವ 75,000 ಕೋಟಿ ರೂ.ಹಣವನ್ನು 5 ವರ್ಷಗಳ ಭದ್ರತೆಯೊಂದಿಗೆ ಭಾರತ ಸರ್ಕಾರ ಪಡೆದಿರುವ ಸಾಲದಿಂದ ನೀಡಲಾಗಿದ್ದು, ಒಟ್ಟು 68,500 ಕೋಟಿ ರೂ. ಮತ್ತು  ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಡುಗಡೆಯಾದ, 2 ವರ್ಷಗಳ ಭದ್ರತೆಯ 6,500 ಕೋಟಿ ರೂ. ಸೇರಿದೆ, ಅನುಕ್ರಮವಾಗಿ ವಾರ್ಷಿಕ ಶೇ. 5.60 ಮತ್ತು ಶೇ.4.25ರ ತೂಕದ ಸರಾಸರಿ ಇಳುವರಿಯಲ್ಲಿ ನೀಡಲಾಗುತ್ತದೆ.

ಈ ಬಿಡುಗಡೆಯು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಇತರ ಸಂಗತಿಗಳಾದ ಅಂದರೆ ಆರೋಗ್ಯ ಮೂಲಸೌಕರ್ಯ ಸುಧಾರಣೆ ಮತ್ತು ಮೂಲಸೌಕರ್ಯ ಯೋಜನೆ ಕೈಗೆತ್ತಿಕೊಳ್ಳಲು ತಮ್ಮ ಸಾರ್ವಜನಿಕ ವೆಚ್ಚದ ಯೋಜನೆ ರೂಪಿಸಿಕೊಳ್ಳಲು ನೆರವಾಗುತ್ತದೆ

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳವಾರು ಮೊತ್ತವನ್ನು ಜಿಎಸ್ಟಿ ಪರಿಹಾರದ ಕೊರತೆಯ ಬದಲಾಗಿ ಮತ್ತೆ ಮತ್ತೆ ಸಾಲಕ್ಕಾಗಿ 15.07.2021ರಂದು ಬಿಡುಗಡೆ ಮಾಡಲಾಗಿದೆ.

ಈ ಪೈಕಿ ಕರ್ನಾಟಕಕ್ಕೆ 5 ವರ್ಷಗಳ ಭದ್ರತೆಯಡಿ 7801.86 ಕೋಟಿ ರೂ ಮತ್ತು 2 ವರ್ಷದ ಅವಧಿಯ ಭದ್ರತೆಯಡಿ 740.31 ಕೋಟಿ ರೂ. ಸೇರಿ ಒಟ್ಟು 8542.17 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

(ಕೋಟಿ ರೂ.ಗಳಲ್ಲಿ)

ಕ್ರ.ಸಂ

ರಾಜ್ಯ/ಕೇಂದ್ರಾಡಳಿತ ಪ್ರದೇಶದ ಹೆಸರು

ಬಿಡುಗಡೆಯಾದ ಜಿಎಸ್ಟಿ ಪರಿಹಾರದ ಕೊರತೆ

5 ವರ್ಷಗಳ ಅವಧಿ

2 ವರ್ಷಗಳ ಅವಧಿ

ಒಟ್ಟು

1.

ಆಂಧ್ರಪ್ರದೇಶ

1409.67

133.76

1543.43

2.

ಅಸ್ಸಾಂ

764.29

72.52

836.81

3.

ಬಿಹಾರ

2936.53

278.65

3215.18

4.

ಛತ್ತೀಸಗಢ

2139.06

202.98

2342.04

5.

ಗೋವಾ

364.91

34.63

399.54

6.

ಗುಜರಾತ್

5618.00

533.10

6151.10

7.

ಹರಿಯಾಣ

3185.55

302.28

3487.83

8.

ಹಿಮಾಚಲ ಪ್ರದೇಶ

1161.08

110.18

1271.26

9.

ಜಾರ್ಖಂಡ್

1070.18

101.55

1171.73

10.

ಕರ್ನಾಟಕ

7801.86

740.31

8542.17

11.

ಕೇರಳ

3765.01

357.26

4122.27

12.

ಮಧ್ಯಪ್ರದೇಶ

3020.54

286.62

3307.16

13.

ಮಹಾರಾಷ್ಟ್ರ

5937.68

563.43

6501.11

14.

ಮೇಘಾಲಯ

60.75

5.76

66.51

15.

ಒಡಿಶಾ

2770.23

262.87

3033.10

16.

ಪಂಜಾಬ್

5226.81

495.97

5722.78

17.

ರಾಜಾಸ್ಥಾನ

3131.26

297.13

3428.39

18.

ತಮಿಳುನಾಡು

3487.56

330.94

3818.50

19.

ತೆಲಂಗಾಣ

1968.46

186.79

2155.25

20.

ತ್ರಿಪುರಾ

172.76

16.39

189.15

21.

ಉತ್ತರ ಪ್ರದೇಶ

3506.94

332.78

3839.72

22.

ಉತ್ತರಾಖಂಡ

1435.95

136.26

1572.21

23.

ಪಶ್ಚಿಮ ಬಂಗಾಳ

2768.07

262.66

3030.73

24.

ಕೇಂದ್ರಾಡಳಿತ ಪ್ರದೇಶ ದೆಹಲಿ

2668.12

253.18

2921.30

25.

ಕೇಂದ್ರಾಡಳಿತ ಪ್ರದೇಶ  ಜಮ್ಮು ಮತ್ತು ಕಾಶ್ಮೀರ

1656.54

157.19

1813.73

26.

ಕೇಂದ್ರಾಡಳಿತ ಪ್ರದೇಶ  ಪುದುಚೇರಿ

472.19

44.81

517.00

 

ಒಟ್ಟು:

68500.00

6500.00

75000.00

***


(Release ID: 1736027) Visitor Counter : 292