ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲೂಟಿಒ)ಯಲ್ಲಿ ಭಾರತ ಮತ್ತು ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪರ ವಾಣಿಜ್ಯ ಸಚಿವರ ಪ್ರತಿಪಾದನೆ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಮೀನುಗಾರಿಕೆ ವಲಯ ಉತ್ತೇಜನಕ್ಕೆ ಆದ್ಯತೆ

ಭಾರತದ ಬಡ ಹಾಗೂ ಕುಶಲಕರ್ಮಿ ಮೀನುಗಾರರ ರಕ್ಷಣೆಗೆ ನೆರವು ಕೋರಿಕೆ

ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗೆ ಸಮನಾಗಿ ಭಾರತದ ಹೆಚ್ಚಿನ ಸಮುದ್ರಗಳು ಮತ್ತು ದೇಶೀಯ ಮೀನುಗಾರಿಕೆ ಹಕ್ಕು ಕಾಯ್ದುಕೊಳ್ಳಲು ವಾಣಿಜ್ಯ ಸಚಿವರ ಹೇಳಿಕೆ

ಭಾರತ ಭವಿಷ್ಯದ ಮಹತ್ವಾಕಾಂಕ್ಷೆಯನ್ನು ತ್ಯಾಗ ಮಾಡಲಾಗದು

ಕೃಷಿ ವಲಯದಲ್ಲಿ 30 ವರ್ಷಗಳ ಹಿಂದೆಯೇ ಮಾಡಿದ್ದ ತಪ್ಪುಗಳನ್ನು ಪುನರಾವರ್ತಿಸದಂತೆ ಕರೆ

Posted On: 15 JUL 2021 2:57PM by PIB Bengaluru

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಹಾಗೂ ಪಡಿತರ ವಿತರಣೆ ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಅತ್ಯಂತ ಗಂಭೀ

ರವಾದ ಮೀನುಗಾರರ ಸಬ್ಸಿಡಿ ಮಾತುಕತೆಗಳ ಕುರಿತಂತೆ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲೂಟಿಒ) ಆಯೋಜಿಸಿದ್ದ ಸಚಿವರ ಸಭೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಹಕ್ಕಿನ ಪರ ಬಲವಾಗಿ ಪ್ರತಿಪಾದಿಸಿದರು. ಸಭೆಯಲ್ಲಿ ಡಬ್ಲೂಟಿಒ ಸದಸ್ಯ ರಾಷ್ಟ್ರಗಳ ಸಚಿವರು ಮತ್ತು ರಾಯಭಾರಿಗಳು ಹಾಗೂ ಡಬ್ಲೂಟಿಒ ಮಹಾನಿರ್ದೇಶಕ ಡಾಎನ್ಗೊಜಿ ಭಾಗವಹಿಸಿದ್ದರು

ಭಾರತದ ಪರ ಬಲವಾದ ಹೇಳಿಕೆಯನ್ನು ನೀಡಿದ ಶ್ರೀ ಗೋಯಲ್ ಅವರು, ಏಕರೂಪದ ಸಬ್ಸಿಡಿಗಳು ಇಲ್ಲದ ಕಾರಣ ಭಾರತ ಒಪ್ಪಂದವನ್ನು ಅಂತಿಮಗೊಳಿಸಲು ಅತ್ಯಂತ ಉತ್ಸುಕವಾಗಿದೆ ಮತ್ತು  ಅನೇಕ ದೇಶಗಳಲ್ಲಿ ಅತಿಯಾದ ಮೀನುಗಾರಿಕೆ ನಡೆಯುತ್ತಿರುವುದರಿಂದ ಭಾರತೀಯ ಮೀನುಗಾರರು ಮತ್ತು ಅವರ ಜೀವನೋಪಾಯಕ್ಕೆ ಧಕ್ಕೆ ಆಗುತ್ತಿದೆ ಎಂದರು. ಒಪ್ಪಂದದಲ್ಲಿ ಸಮತೋಲನ ಮತ್ತು ನ್ಯಾಯಸಮ್ಮತವನ್ನು ಕಂಡುಕೊಳ್ಳಲು ಇನ್ನೂ ಸದಸ್ಯರ ಕೊರತೆ ಇದೆ ಎಂದು ಅವರು ನಿರಾಶೆ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೀನುಗಾರಿಕೆ ವಲಯವನ್ನು ಉತ್ತೇಜಿಸಲು ಮತ್ತು ಸಣ್ಣ ಮೀನುಗಾರರನ್ನು ರಕ್ಷಿಸಲು ಹೆಚ್ಚಿನ ಒತ್ತು ನೀಡುತ್ತಿದ್ದಾರೆಂದು ಪ್ರತಿಪಾದಿಸಿದರು.

ಮೂರು ದಶಕಗಳ ಹಿಂದೆ ಉರುಗ್ವೆ ಸುತ್ತಿನಲ್ಲಿ ಆಯ್ದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸದಸ್ಯರು ವಿಶೇಷವಾಗಿ ಕೃಷಿಯಲ್ಲಿ ಅಸಮಾನ ಮತ್ತು ವ್ಯಾಪಾರ ವಿರೂಪಗೊಳಿಸುವ ಅರ್ಹತೆಗಳನ್ನು ಪಡೆದುಕೊಂಡವು, ಅಂತಹ ತಪ್ಪುಗಳನ್ನು ನಾವು ಪುನಃ ಮಾಡಬಾರದು ಎಂದು ಶ್ರೀ ಗೋಯಲ್ ಅವರು ಎಚ್ಚರಿಕೆ ನೀಡಿದರುಆಗ ತಮ್ಮ ಉದ್ಯಮ ಮತ್ತು ರೈತರನ್ನು ಬೆಂಬಲಿಸುವ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಹೊಂದಿರದ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸದಸ್ಯರನ್ನು ಅನಾಯಾಸವಾಗಿ ನಿರ್ಬಂಧಿಸಲಾಗಿತ್ತು. ಯಾವುದೇ ಅಸಮತೋಲಿತ ಅಥವಾ ಸಹಮತವಿಲ್ಲದ  ಒಪ್ಪಂದವು ಸದ್ಯದ ಮೀನುಗಾರಿಕೆ ವ್ಯವಸ್ಥಗೆ ನಮ್ಮನ್ನು ಬಗ್ಗಿಸುತ್ತದೆ ಮತ್ತು ಅದು ಭವಿಷ್ಯದ ಅಗತ್ಯತೆಗಳನ್ನು ಪೂರೈಸುವುದಿಲ್ಲ ಎಂದು ಗೋಯಲ್ ಆತಂಕ ವ್ಯಕ್ತಪಡಿಸಿದರು. ‘ಮಾಲಿನ್ಯ ಕಾರಕ ವೇತನಗಳು ಮತ್ತುಸಾಮಾನ್ಯ ಆದರೆ ವ್ಯತ್ಯಯದ ಜವಾಬ್ದಾರಿಗಳುತತ್ವಗಳಿಗೆ ಅನುಗುಣವಾಗಿ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತಿರುವ ರಾಷ್ಟ್ರಗಳು ತಮ್ಮ ಮೀನುಗಾರಿಕೆ ಮತ್ತು ಸಬ್ಸಿಡಿಗಳನ್ನು ಕಡಿಮೆ ಮಾಡಲು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ಉಲ್ಲೇಖಿಸಿದರು.

ಯಾವುದೇ ಒಪ್ಪಂದವು ವಿವಿಧ ದೇಶಗಳು ಅಭಿವೃದ್ಧಿಯ ವಿವಿಧ ಹಂತದಲ್ಲಿವೆ ಎಂಬುದನ್ನು ಗುರುತಿಸಬೇಕು ಮತ್ತು ಸದ್ಯದ ಮೀನುಗಾರಿಕೆ ವ್ಯವಸ್ಥೆಗಳು ಅವರ ಪ್ರಸಕ್ತ ಆರ್ಥಿಕ ಸ್ಥಿತಿಗತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಗೋಯಲ್  ಹೇಳಿದರು. ಒಪ್ಪಂದವು ಸದ್ಯದ ಮತ್ತು ಭವಿಷ್ಯದ ಅಗತ್ಯತೆಗಳನ್ನು ಒದಗಿಸಬೇಕಾಗಿದೆ. ಭಾರತದ ಬೇಡಿಕೆಗಳನ್ನು ಮುಂದಿಡುವಾಗ, ಮುಂದುವರಿದ ಮೀನುಗಾರಿಕೆ ರಾಷ್ಟ್ರಗಳಿಗೆ ಹೋಲಿಸಿದರೆ ಹೆಚ್ಚಿನ ಅಭಿವೃದ್ಧಿ ರಾಷ್ಟ್ರಗಳು ನೀಡುವ ತಲಾ ಮೀನುಗಾರಿಕೆ ಸಬ್ಸಿಡಿ ಅತ್ಯಲ್ಪವಾಗಿದೆ. ಮೀನುಗಾರಿಕೆ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸದ ಭಾರತದಂತಹ ದೇಶಗಳು ತಮ್ಮ ಭವಿಷ್ಯದ ಮಹತ್ವಾಕಾಂಕ್ಷೆಗಳನ್ನು ತ್ಯಾಗ ಮಾಡಲಾಗದು ಎಂದು ಶ್ರೀ ಗೋಯಲ್ ಸ್ಪಷ್ಟವಾಗಿ ಆಗ್ರಹಿಸಿದರು. ಮುಂದುವರಿದ ರಾಷ್ಟ್ರಗಳಿಗೆ ಸಬ್ಸಿಡಿ ಅನುದಾನವನ್ನು ಮುಂದುವರಿಸಲು ಅವಕಾಶ ನೀಡುವುದು ಅಸಮಾನ ಮತ್ತು ಅನ್ಯಾಯಯುತವಾಗಿದೆ

ಮಹಾನಿರ್ದೇಶಕರು ಕೇಳಿದ ಪ್ರಶ್ನೆಗೆ ನಿರ್ದಿಷ್ಟವಾಗಿ ಉತ್ತರಿಸಿದ ಸಚಿವರು, ವಿಶೇಷ ಮತ್ತು ತಾರತಮ್ಯದ ನೋಡುವುದನ್ನು (ಎಸ್ ಮತ್ತು ಡಿಟಿಬಡವರು ಮತ್ತು ಕುಶಲಕರ್ಮಿ ಮೀನುಗಾರರಿಗೆ ಸೀಮಿತಗೊಳಿಸುವುದು ಸೂಕ್ತ ಮತ್ತು ಕೈಗೆಟುವಂತಹುದಲ್ಲ ಹಾಗೂ ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ಎಸ್ ಮತ್ತು ಡಿಟಿ ಬಡ ಮೀನುಗಾರರ ಜೀವನೋಪಾಯವನ್ನು ರಕ್ಷಿಸಲು ಮಾತ್ರವಲ್ಲದೆ ಆಹಾರ ಸುರಕ್ಷತೆಯ ಬಗ್ಗೆಯೂ ಗಮನಹರಿಸಲು, ಮೀನುಗಾರಿಕೆ ವಲಯವನ್ನು ಅಭಿವೃದ್ಧಿಪಡಿಸಲು ಅಗತ್ಯವಾದ ನೀತಿಯನ್ನು ಹೊಂದಲು ಮತ್ತು ಯಾವುದೇ ಪರಿವರ್ತನೆಗೆ ಹೆಚ್ಚಿನ ಸಮಯದ ಅವಶ್ಯಕತೆ ಇದೆ ಎಂದರು.

ಯುಗ ಯುಗಗಳಿಂದಲೂ ಪರಿಸರ ಸಂರಕ್ಷಣೆ ಭಾರತೀಯ ನೀತಿಶಾಸ್ತ್ರದಲ್ಲಿ ಅಂತರ್ಗತವಾಗಿದೆ ಮತ್ತು ನಮ್ಮ ಪ್ರಧಾನಮಂತ್ರಿ ಅವರು ಪದೇ ಒದೇ ಇದನ್ನು ಪ್ರಮುಖವಾಗಿ ಉಲ್ಲೇಖಿಸುತ್ತಿದ್ದಾರೆ ಎಂದರು. ಸದ್ಯದ ಮತ್ತು ಭವಿಷ್ಯದ ಮೀನುಗಾರಿಕೆ ಅಗತ್ಯಗಳನ್ನು ಸಮತೋಲನಗೊಳಿಸಲು ಮತ್ತು ಭವಿಷ್ಯದ ಸಮಾನ ಮೀನುಗಾರಿಕಾ ಸಾಮರ್ಥ್ಯ ಹೊಂದಲು ಅವಕಾಶ ಕಾಯ್ದಿರಿಸುವುದು ಮತ್ತು ಯಾವುದೇ ಅಸಮತೋಲನಗಳಿಲ್ಲದ ಪರಿಣಾಮಕಾರಿ ಎಸ್ ಮತ್ತು ಡಿಟಿ ಹೊಂದಲು ಮಾತುಕತೆಗಳನ್ನು ಪೂರ್ಣಗೊಳಸಿಲು ಭಾರತ ಬದ್ಧವಾಗಿದೆ ಎಂದು ಶ್ರೀ ಗೋಯಲ್ ಹೇಳಿದರು.

***


(Release ID: 1735918) Visitor Counter : 438