ಸಂಪುಟ

ನಾರ್ತ್ ಈಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಫೋಕ್ ಮೆಡಿಸಿನ್ (ಎನ್ಇಐಎಫ್ಎಂ) ಕೇಂದ್ರವನ್ನು ನಾರ್ತ್ ಈಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಆಂಡ್ ಫೋಕ್ ಮೆಡಿಸಿನ್ (ಎನ್ಇಐಎಎಫ್ಎಂಆರ್) ಎಂದು ಮರುನಾಮಕರಣ ಮಾಡುವುದನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

Posted On: 14 JUL 2021 3:59PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ನಾರ್ತ್ ಈಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಫೋಕ್ ಮೆಡಿಸಿನ್ (ಎನ್ಇಐಎಫ್ಎಂ) ಕೇಂದ್ರವನ್ನು (ಎನ್ಇಐಎಎಫ್ಎಂಆರ್) ನಾರ್ತ್ ಈಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಆಂಡ್ ಫೋಕ್ ಮೆಡಿಸಿನ್ (ಎನ್ಇಐಎಎಫ್ಎಂಆರ್) ಎಂದು ಮರುನಾಮಕರಣ ಮಾಡುವುದಕ್ಕೆ ಅನುಮೋದನೆ ನೀಡಿದೆ.

 

ವಿವರಗಳು:

ಪ್ರಸ್ತುತ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಅರುಣಾಚಲ ಪ್ರದೇಶದ ಪಾಸಿಘಾಟ್‌ನಲ್ಲಿ ಆಯುರ್ವೇದ ಮತ್ತು ಜಾನಪದ ಔಷಧದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗಾಗಿ ನಾರ್ತ್ ಈಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಫೋಕ್ ಮೆಡಿಸಿನ್ (ಎನ್ಇಐಎಫ್ಎಂ) ಕೇಂದ್ರವನ್ನು (ಎನ್ಇಐಎಎಫ್ಎಂಆರ್) ನಾರ್ತ್ ಈಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಆಂಡ್ ಫೋಕ್ ಮೆಡಿಸಿನ್ (ಎನ್ಇಐಎಎಫ್ಎಂಆರ್) ಎಂದು ಮರುನಾಮಕರಣ ಮಾಡುವುದಕ್ಕಾಗಿ ಪ್ರಸ್ತಾಪ ಮಾಡಲಾಗಿತ್ತು. ಇದಕ್ಕೆ ಸಂಬಂಧಪಟ್ಟ ಬದಲಾವಣೆಗಳನ್ನು ಸಂಸ್ಥೆಯ ನಿಯಮಾವಳಿ ಮತ್ತು ನಿಬಂಧನೆಗಳ ಪತ್ರದಲ್ಲಿಯೂ ಕೈಗೊಳ್ಳಲಾಗುವುದು.

 

ಪರಿಣಾಮ:

ಆಯುರ್ವೇದವನ್ನು ಸಂಸ್ಥೆಯ ಅಧಿಕಾರದೊಳಗೆ ಸೇರಿಸುವುದರಿಂದ ಈಶಾನ್ಯ ಪ್ರದೇಶದ ಜನರಿಗೆ ಆಯುರ್ವೇದ ಮತ್ತು ಜಾನಪದ ಔಷಧಿಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆ ನೀಡಲು ಹೆಚ್ಚು ಪ್ರಯೋಜನಕಾರಿಯಾಗಲಿದೆ. ಈ ಸಂಸ್ಥೆಯು ಆಯುರ್ವೇದ ಮತ್ತು ಜಾನಪದ ಔಷಧದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಮಾತ್ರವಲ್ಲದೆ ನೆರೆಯ ರಾಷ್ಟ್ರಗಳಾದ ಟಿಬೆಟ್, ಭೂತಾನ್, ಮಂಗೋಲಿಯಾ, ನೇಪಾಳ, ಚೀನಾ ಮತ್ತು ಮಧ್ಯ ಏಷ್ಯಾದ ಇತರ ದೇಶಗಳಿಗೂ ಅವಕಾಶಗಳನ್ನು ಒದಗಿಸುತ್ತದೆ.

 

ಹಿನ್ನೆಲೆ:

ಸಾಂಪ್ರದಾಯಿಕ ಜಾನಪದ ಔಷಧ ಮತ್ತು ಪ್ರದೇಶದ ಆರೋಗ್ಯ ರಕ್ಷಣೆಯ ಅಭ್ಯಾಸಗಳ ವ್ಯವಸ್ಥಿತ ಸಂಶೋಧನೆ, ದಾಖಲಾತಿ ಮತ್ತು ಮೌಲ್ಯಮಾಪನಕ್ಕಾಗಿ ಪಾಸಿಘಾಟ್‌ನಲ್ಲಿ ಎನ್ಇಐಎಫ್ಎಂ ಕೇಂದ್ರವನ್ನು ಸ್ಥಾಪಿಸಲಾಯಿತು. ಜಾನಪದ ಔಷಧದ ಎಲ್ಲಾ ಅಂಶಗಳಿಗೆ ಒಂದು ಉನ್ನತ ಸಂಶೋಧನಾ ಕೇಂದ್ರವಾಗಿ ಕಾರ್ಯನಿರ್ವಹಿಸುವುದು, ಸಾಂಪ್ರದಾಯಿಕ ವೈದ್ಯರು ಮತ್ತು ವೈಜ್ಞಾನಿಕ ಸಂಶೋಧನೆಯ ನಡವೆ ಸಂಪರ್ಕವನ್ನು ರಚಿಸುವುದು, ಸಮೀಕ್ಷೆ, ದಾಖಲಾತಿ ಮತ್ತು ಜಾನಪದ ಔಷಧಿ ಪದ್ಧತಿಗಳ ಮೌಲ್ಯಮಾಪನ, ಸಂಭವನೀಯ ಬಳಕೆಗಾಗಿ ಪರಿಹಾರಗಳು, ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ಭವಿಷ್ಯದ ಸಂಶೋಧನೆ ಇತ್ಯಾದಿಗಳ ಉದ್ದೇಶಕ್ಕಾಗಿ ಎನ್ಇಐಎಫ್ಎಂ ಕೇಂದ್ರವನ್ನು ಸ್ಥಾಪಿಸಲಾಗಿತ್ತು.

 

****



(Release ID: 1735676) Visitor Counter : 251