ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ಪರಿಸ್ಥಿತಿ ಕುರಿತು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ


ಈಶಾನ್ಯ ರಾಜ್ಯಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿ ತೋರಿದ ಪ್ರಧಾನಮಂತ್ರಿ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿಗಳು: ಕೋವಿಡ್ ಸಾಂಕ್ರಾಮಿಕ ನಿಭಾಯಿಸುವಲ್ಲಿ ಕೈಗೊಂಡ ಸಕಾಲಿಕ ಕ್ರಮಕ್ಕೆ ಧನ್ಯವಾದ ಸಲ್ಲಿಕೆ

ಪರಿಸ್ಥಿತಿ ಮೇಲೆ ಕಠಿಣ ನಿಗಾ ಇಡಬೇಕು ಮತ್ತು ಎಲ್ಲಾ ರೂಪಾಂತರವನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಒತ್ತಿ ಹೇಳಿದ ಪ್ರಧಾನಮಂತ್ರಿ

ಸೂಕ್ತ ಮುನ್ನೆಚ್ಚರಿಕೆ ಇಲ್ಲದೇ ಗಿರಿಧಾಮಗಳಲ್ಲಿ ಜನಸಂದಣಿಯಾಗುತ್ತಿರುವ ಬಗ್ಗೆ ಬಲವಾದ ಎಚ್ಚರಿಕೆ ರವಾನೆ

ಮೂರನೇ ಅಲೆ ನಿಯಂತ್ರಿಸುವುದು ಹೇಗೆ ಎಂಬುದು ನಮ್ಮ ಮನಸ್ಸಿನಲ್ಲಿರುವ ಮುಖ್ಯ ಪ್ರಶ್ನೆ: ಪ್ರಧಾನಮಂತ್ರಿ

ಲಸಿಕೆ ವಿರುದ್ಧದ ತಪ್ಪು ಕಲ್ಪನೆ ನಿವಾರಿಸಲು ಸಾಮಾಜಿಕ, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ವ್ಯಕ್ತಿಗಳು, ಧಾರ್ಮಿಕ ಸಂಘಟನೆಗಳ ನಂಬಿಕಸ್ಥರ ನೆರವು ಪಡೆಯಿರಿ - ಪ್ರಧಾನಮಂತ್ರಿ

“ಎಲ್ಲರಿಗೂ ಲಸಿಕೆ – ಎಲ್ಲರಿಗೂ ಉಚಿತ“ ಅಭಿಯಾನಕ್ಕೆ ಈಶಾನ್ಯ ರಾಜ್ಯಗಳಿಗೆ ಪ್ರಮುಖವಾದ್ದದ್ದು: ಪ್ರಧಾನಮಂತ್ರಿ

ವೈದ್ಯಕೀಯ ಮೂಲ ಸೌಕರ್ಯ ಸುಧಾರಣೆ ಮಾಡಲು ಇತ್ತೀಚೆಗೆ 23,000 ಕೋಟಿ ರೂಪಾಯಿ ಪ್ಯಾಕೇಜ್ ಗೆ ಅನುಮೋದನೆ: ಪ್ರಧಾನಮಂತ್ರಿ

ಪಿ.ಎಂ. ಕೇರ್ಸ್ ಆಮ್ಲಜನಕ ಘಟಕಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

Posted On: 13 JUL 2021 2:15PM by PIB Bengaluru

ಕೋವಿಡ್-19 ಪರಿಸ್ಥಿತಿ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಇಂದು ಸಂವಾದ ನಡೆಸಿದರು. ಸಂವಾದದಲ್ಲಿ ನಾಗಾಲ್ಯಾಂಡ್, ತ್ರಿಪುರ, ಸಿಕ್ಕಿಂ, ಮೇಘಾಲಯ, ಮಿಜೋರಾಂ, ಅರುಣಾಚಲ ಪ್ರದೇಶ, ಮಣೀಪುರ ಮತ್ತು ಅಸ್ಸಾಂ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಕೋವಿಡ್ ಸಾಂಕ್ರಾಮಿಕ ನಿಭಾಯಿಸುವಲ್ಲಿ ಕೈಗೊಂಡ ಸಕಾಲಿಕ ಕ್ರಮಕ್ಕೆ ಧನ್ಯವಾದ ಸಲ್ಲಿಸಿದರು. ಈಶಾನ್ಯ ರಾಜ್ಯಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿ ತೋರಿದ ಪ್ರಧಾನಮಂತ್ರಿ ಅವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು. ಸಂವಾದದಲ್ಲಿ ಮುಖ್ಯಮಂತ್ರಿಗಳಲ್ಲದೇ ಕೇಂದ್ರ ಗೃಹ, ರಕ್ಷಣೆ, ಆರೋಗ್ಯ, ಈಶಾನ್ಯ ರಾಜ್ಯಗಳ ಅಬಿವೃದ್ಧಿ ಕುರಿತ ಸಚಿವಾಲಯಡಿ..ಎನ್..ಆರ್ ಮತ್ತು  ಇತರೆ ಸಚಿವರು ಸಹ ಭಾಗವಹಿಸಿದ್ದರು.

ತಮ್ಮ ರಾಜ್ಯಗಳಲ್ಲಿನ ಲಸಿಕೆ ಪ್ರಗತಿ ಬಗ್ಗೆ ಮತ್ತು ದೂರದ ಪ್ರದೇಶಗಳ ಜನರಿಗೆ ಲಸಿಕೆ ನೀಡುವ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಲಸಿಕೆ ಪಡೆಯಲು ಹಿಂಜರಿಕೆ ಮತ್ತು ಇದರಿಂದ ಹೊರ ಬರಲು ತೆಗೆದುಕೊಂಡಿರುವ ಹಜ್ಜೆಗಳ ಬಗ್ಗೆಯೂ ಅವರು ಚರ್ಚಿಸಿದರು. ಕೋವಿಡ್ ಪ್ರಕರಣಗಳನ್ನು ಉತ್ತಮವಾಗಿ ನಿಭಾಯಿಸಲು ವೈದ್ಯಕೀಯ ಮೂಲ ಸೌಕರ್ಯ ಸುಧಾರಣೆಗಳ ಬಗ್ಗೆ ಮತ್ತು ಪಿಎಂ ಕೇರ್ಸ್ ನಿಧಿ ಮೂಲಕ ನೀಡಿದ ಬೆಂಬಲವನ್ನು ಮುಖ್ಯಮಂತ್ರಿಗಳು ಸ್ಮರಿಸಿದರು. ತಮ್ಮ ರಾಜ್ಯಗಳಲ್ಲಿ ಪಾಸಿಟಿವಿಟಿ  ದರ ಮತ್ತು ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ಸಕಾಲದಲ್ಲಿ ಕ್ರಮ ಕೈಗೊಳ್ಳುವ ವಾಗ್ದಾನವನ್ನು ಅವರು ನೀಡಿದರು.

ಕೇಂದ್ರ ಗೃಹ ಸಚಿವರು ಒಟ್ಟಾರೆ ಸೋಂಕು ಪ್ರಕರಣಗಳು ತಗ್ಗಿರುವ ಬಗ್ಗೆ ಮಾತನಾಡಿದರು. ಇದರಿಂದ ಒಂದು ಕಡೆ ನಿಯಂತ್ರಣ ಕ್ರಮಗಳು ಸಡಿಲಗೊಳ್ಳಬಾರದು ಮತ್ತು ನಿರ್ಲಕ್ಷ್ಯ ಸಲ್ಲದು ಎಂದು ಹೇಳಿದರು. ದೇಶದ ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಪಾಸಿಟಿವಿಟಿ ದರ ಇದೆ. ಇಂತಹ ಸಂದರ್ಭದಲ್ಲಿ ಸೋಂಕು ಪತ್ತೆ, ಪರೀಕ್ಷೆ, ಜಾಡು ಕಂಡು ಹಿಡಿಯವ ಜತೆಗೆ ಲಸಿಕೆಯ ಮಹತ್ವವನ್ನು ಸಹ ಅವರು ಒತ್ತಿ ಹೇಳಿದರು

ಕೇಂದ್ರ ಆರೋಗ್ಯ ಕಾರ್ಯದರ್ಶಿ ಅವರು ದೇಶದಲ್ಲಿ ಕೋವಿಡ್ ಪ್ರಕರಣಗಳ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು ಮತ್ತು ಈಶಾನ್ಯ ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಹೆಚ್ಚು ಪಾಸಿಟಿವಿಟಿ ದರ ಇರುವ ಕುರಿತಂತೆಯೂ ಚರ್ಚಿಸಿದರು. ವೈದ್ಯಕೀಯ ಆಮ್ಲಕಜನಕ ಪೂರೈಕೆಯನ್ನು ಹೆಚ್ಚಿಸಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು ಮತ್ತು ಲಸಿಕೆ ಪ್ರಗತಿಯನ್ನು ಅವಲೋಕಿಸಿದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಜನ, ಆರೋಗ್ಯ ಕಾರ್ಯಕರ್ತರು ಮತ್ತು ಈಶಾನ್ಯ ರಾಜ್ಯಗಳ ಶ್ರಮ ಶ‍್ಲಾಘನೀಯ. ರಾಜ್ಯಗಳ ಕಠಿಣ ಭೂ ಪ್ರದೇಶದ ಹೊರತಾಗಿಯೂ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆಗಾಗಿ ಮೂಲ ಸೌಕರ್ಯ ಕಲ್ಪಿಸಿರುವುದನ್ನು ಶ್ಲಾಘಿಸಿದರು.

ಕೆಲವು ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಪ್ರಧಾನಮಂತ್ರಿ ಅವರು ಆತಂಕ ವ್ಯಕ್ತಪಡಿಸಿದರು ಮತ್ತು ಚಿಹ್ನೆಗಳನ್ನು  ಪತ್ತೆ ಮಾಡಿ  ಸೂಕ್ಷ್ಮ ಹಂತದಲ್ಲಿ ಕಠಿಣ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಪರಿಸ್ಥಿತಿಯನ್ನು ನಿಭಾಯಿಸಲು ಕಂಟೈನ್ಮೆಂಟ್ ವಲಯದ ಸೂಕ್ಷ್ಮ ಶಿಷ್ಟಾಚಾರವನ್ನು ಅಳವಡಿಸಿಕೊಳ್ಳುವ ಕುರಿತು ವಿಶೇಷವಾಗಿ ಪ್ರಸ್ತಾಪಿಸಿದರು. ನಿಟ್ಟಿನಲ್ಲಿ ಕಳೆದ ಒಂದು, ಒಂದೂವರೆ ವರ್ಷಗಳಲ್ಲಿ ಪಡೆದಿರುವ ಅನುಭವ ಮತ್ತು ಉತ್ತಮ ಅಭ್ಯಾಸಗಳನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಅವರು ಸೂಚಿಸಿದರು

ವೈರಾಣು ವೇಗವಾಗಿ ರೂಪಾಂತರಗೊಳ್ಳುತ್ತಿರುವುದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ರೂಪಾಂತರವನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವ ಮತ್ತು ಕುರಿತು ನಿಗಾ ಇಡುವಂತೆ ಸಲಹೆ ಮಾಡಿದರು. ತಜ್ಞರು ರೂಪಾಂತರ ಮತ್ತು ಪರಿಣಾಮದ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿಯಂತ್ರಣ ಮತ್ತು ಚಿಕಿತ್ಸೆ ಅತ್ಯಂತ ಕ್ಲಿಷ್ಟಕರ, ಹೀಗಾಗಿ ಕೋವಿಡ್ ಸೂಕ್ತ ವರ್ತನೆ ಅಗತ್ಯ ಎಂದು ಒತ್ತಿ ಹೇಳಿದರು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ಜತೆಗೆ ಮುಖಗವಸು ಧರಿಸಬೇಕಲ್ಲದೇ ಲಸಿಕೆಯ ಉಪಯುಕ್ತಕತೆಯನ್ನು ಮನಗಾಣಬೇಕು. ಅಂತೆಯೇ ಜಾಡುಪತ್ತೆ, ಪರೀಕ್ಷೆ, ಚಿಕಿತ್ಸೆ ನಿಯಂತ್ರಣಕ್ಕೆ ಈಗಾಗಲೇ ನಿರೂಪಿತವಾಗಿರುವ ಕಾರ್ಯತಂತ್ರ ಸೂಕ್ತವಾಗಿದೆ ಎಂದು ಹೇಳಿದರು.

ಸಾಂಕ್ರಾಮಿಕದಿಂದ ಪ್ರವಾಸೋದ್ಯಮ ಮತ್ತು ವ್ಯಾಪಾರದ ಮೇಲೆ ಆಗಿರುವ ಪರಿಣಾಮಗಳ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳದೇ ಗಿರಿಧಾಮಗಳಲ್ಲಿ ಜನ ಜಮಾವಣೆಗೊಳ್ಳುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದರು. ಮೂರನೇ ಅಲೆ ಬರುವ ಮುನ್ನ ಜನತೆ ಆನಂದಿಸಲು ಬಯಸಿದ್ದಾರೆ ಎಂಬ ವಾದವನ್ನು ಅಲ್ಲಗಳೆದರು. ಮೂರನೇ ಅಲೆ ತನ್ನಷ್ಟಕ್ಕೆ ತಾನೇ ಬರುವುದಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೂರನೇ ಅಲೆಯನ್ನು ನಿಯಂತ್ರಿಸುವುದು ಹೇಗೆ ಎಂಬುದು ನಮ್ಮ ಮನಸ್ಸಿನಲ್ಲಿರುವ ಮುಖ್ಯ ಪ್ರಶ್ನೆಯಾಗಿದೆ. ತಜ್ಞರು ಉದಾಸೀನತೆ ಮತ್ತು ಜನ ಜಂಗುಳಿಯ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದು, ಇದರಿಂದ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ. ತಪ್ಪಿಸಲು ಸಾಧ್ಯವಿರುವ ಜನ ಸಂದಣಿಯನ್ನು ತಡೆಯಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.

ಎಲ್ಲರಿಗೂ ಲಸಿಕೆಎಲ್ಲರಿಗೂ ಉಚಿತಎಂಬುದು ಕೇಂದ್ರ ಸರ್ಕಾರದ ಅಭಿಯಾನವಾಗಿದ್ದು, ಈಶಾನ್ಯ ರಾಜ್ಯಗಳಿಗೂ ಇದು ಅಷ್ಟೇ ಮಹತ್ವದ್ದಾಗಿದೆ ಮತ್ತು ನಾವು ಲಸಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದರು.

ಲಸಿಕೆ ವಿರುದ್ಧದ ತಪ್ಪು ಕಲ್ಪನೆಗಳನ್ನು ನಿವಾರಿಸಲು ಸಾಮಾಜಿಕ, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ವ್ಯಕ್ತಿಗಳು, ಧಾರ್ಮಿಕ ಸಂಘಟನೆಗಳ ನಂಬಿಕಸ್ಥರ ನೆರವು ಪಡೆಯಬೇಕು. ಎಲ್ಲಿ ಸೋಂಕು ಹರಡುತ್ತದೆ ಅಂತಹ ಕಡೆಗಳಲ್ಲಿ ಲಸಿಕಾ ಅಭಿಯಾನ ತ್ವರಿತಗೊಳಿಸುವಂತೆ ಪ್ರಧಾನಮಂತ್ರಿ ಅವರು ಸಲಹೆ ಮಾಡಿದರು

ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಪರೀಕ್ಷೆ, ಚಿಕಿತ್ಸೆ ಸೇರಿ ವೈದ್ಯಕೀಯ ಮೂಲ ಸೌಕರ್ಯ ಸುಧಾರಣೆ ಮಾಡಲು 23,000 ಕೋಟಿ ರೂಪಾಯಿ ಪ್ಯಾಕೇಜ್ ಗೆ ಅನುಮೋದನೆ ನೀಡಿದ್ದು, ಪ್ಯಾಕೇಜ್ ನಿಂದ ಈಶಾನ್ಯ ರಾಜ್ಯಗಳಲ್ಲಿ ಆರೋಗ್ಯ ಮೂಲ ಸೌಕರ್ಯ ವರ್ಧನೆಗೆ ಸಹಕಾರಿಯಾಗಲಿದೆ. ಜತೆಗೆ ಈಶಾನ್ಯ ಭಾಗದಲ್ಲಿ ಪರೀಕ್ಷೆ, ರೋಗ ಪತ್ತೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಈಶಾನ್ಯ ಭಾಗದಲ್ಲಿ ಹಾಸಿಗೆಗಳು, ಆಮ್ಲಜನಕ ಸೌಲಭ್ಯ ಮತ್ತು ಮಕ್ಕಳ ಆರೈಕೆ ಮೂಲ ಸೌಲಭ್ಯ ಹೆಚ್ಚಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ  ಅವರು ಹೇಳಿದರು. ಪಿಎಂಕೇರ್ಸ್ ನಿಧಿಯಿಂದ ನೂರಾರು ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ಈಶಾನ್ಯ ರಾಜ್ಯಗಳು ಸಹ 150 ಆಮ್ಲಜನಕ ಘಕಟಕಗಳನ್ನು ಹೊಂದಲಿವೆಇಂತಹ ಘಟಕಗಳನ್ನು ಮುಖ್ಯಮಂತ್ರಿಗಳು ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ಪ್ರಧಾನಮಂತ್ರಿ ಅವರು ಮನವಿ ಮಾಡಿದರು.

ಈಶಾನ್ಯ ರಾಜ್ಯಗಳಲ್ಲಿನ ಬೌಗೋಳಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸುವ ಅಗತ್ಯವಿದೆ. ಆಮ್ಲಜನಕ ಘಟಕ, ಐಸಿಯು, ವಾರ್ಡ್ ಗಳು, ಎರಡನೇ ಬ್ಲಾಕ್ ಹಂತದ ಆಸ್ಪತ್ರೆಗಳಲ್ಲಿ ಹೊಸ ಯಂತ್ರೋಪಕರಣಗಳು ಬರುತ್ತಿದ್ದು, ಇಂತಹ ಕಡೆಗಳಲ್ಲಿ ತರಬೇತಾದ ಮಾನವ ಸಂಪನ್ಮೂಲ ಅಗತ್ಯವಾಗಿದ್ದು, ಇದಕ್ಕಾಗಿ ಸೂಕ್ತ ಮಾನವ ಸಂಪನ್ಮೂಲ ಸಜ್ಜುಗೊಳಿಸುವಂತೆ ಸಲಹೆ ಮಾಡಿದರು. ದಿಸೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಮಂತ್ರಿ ಅವರು ಆಶ್ವಾಸನೆ ನೀಡಿದರು.

ದೇಶದಲ್ಲಿ 20 ಲಕ್ಷ ಸೋಂಕು ಪತ್ತೆ ಪರೀಕ್ಷೆಗಳ ಸಾಮರ್ಥ್ಯ ಹೆಚ್ಚಾಗಿರುವ  ಕುರಿತು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಪೀಡಿತ ಜಿಲ್ಲೆಗಳಲ್ಲಿ ಪರೀಕ್ಷಾ ಮೂಲ ಸೌಕರ್ಯವನ್ನು ಆದ್ಯತೆ ಮೇರೆಗೆ ಹೆಚ್ಚಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಮಾದರಿ ಪರೀಕ್ಷೆಗಳ ಜತೆಗೆ ಒಟ್ಟಾರೆ ಪರೀಕ್ಷಾ ಸಾಮರ್ಥ್ಯ ತೀವ್ರಗೊಳ್ಳಬೇಕು. ಸಾಮೂಹಿಕ ಪ್ರಯತ್ನದಿಂದ ನಾವು ಖಂಡಿತವಾಗಿಯೂ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು ಎಂದು ಹೇಳಿದರು.

***



(Release ID: 1735087) Visitor Counter : 220