ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಡಿಜಿಟಲ್ ಶಿಕ್ಷಣ ಉಪಕ್ರಮಗಳ ಕುರಿತ ಸಚಿವಾಲಯದ ಪ್ರಗತಿ ಪರಿಶೀಲನೆ ನಡೆಸಿದ ಕೇಂದ್ರ ಶಿಕ್ಷಣ ಮಂತ್ರಿಗಳು

Posted On: 13 JUL 2021 1:27PM by PIB Bengaluru

ಡಿಜಿಟಲ್ ಶಿಕ್ಷಣ ಉಪ ಕ್ರಮಗಳ ಕುರಿತು ಕೇಂದ್ರ ಶಿಕ್ಷಣ ಮಂತ್ರಿ ಶ್ರೀ ಧರ್ಮೇಂದ್ರ ಪ್ರಧಾನ್ ಸಚಿವಾಲಯದ ಪ್ರಗತಿ ಪರಿಶೀಲನೆ ನಡೆಸಿದರು. ಪಿ.ಎಂ. ವಿದ್ಯಾ, ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ವಾಸ್ತುಶಿಲ್ಪ [ಎನ್.ಡಿ...ಆರ್], ಸ್ವಯಂ ಸೇರಿ ಇನ್ನಿತರ ಉಪಕ್ರಮಗಳನ್ನು ಅವರು ಪರಿಶೀಲಿಸಿದರು. ರಾಜ್ಯ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ, ಸಹಾಯಕ ಸಚಿವರಾದ ಶ್ರೀ ರಾಜ್ ಕುಮಾರ್ ರಂಜನ್ ಸಿಂಗ್ ಮತ್ತು ಸಹಾಯಕ ಸಚಿವರಾದ ಡಾ. ಸುಭಾಷ್ ಸರ್ಕಾರ್ ಮತ್ತಿತರರು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಚಿವಾಲಯದ ಹಿರಿಯ ಅಧಿಕಾರಿಗಳು ಡಿಜಿಟಲ್ ಉಪ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು

 

ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಮಹತ್ವ ಕುರಿತು ಮಾತನಾಡಿದ ಶ್ರೀ ಪ್ರಧಾನ್, ಮುಕ್ತ, ಎಲ್ಲರನ್ನೊಳಗೊಂಡ ಮತ್ತು ಕೈಗೆಟುವ ಶಿಕ್ಷಣದ ಗುರಿಗಳನ್ನು ಸಾಧಿಸಲು ತಂತ್ರಜ್ಞಾನ ಸಹಾಯ ಮಾಡುತ್ತದೆ ಎಂದು ಹೇಳಿದರು.

ಶಿಕ್ಷಣದಲ್ಲಿ ಉಜ್ವಲ ಡಿಜಿಟಲ್ ಪರಿಸರ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶಗಳನ್ನು ವಿಸ್ತರಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸತನ ಮತ್ತು ಉದ್ಯಮ ಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಕೋವಿಡ್-19 ಸಾಂಕ್ರಾಮಿಕದಿಂದಾಗಿ ಡಿಜಿಟಲ್ ಶಿಕ್ಷಣ ಮಾಧ್ಯಮಕ್ಕೆ ಬದಲಾಗಬೇಕಾಗಿರುವ ಅಗತ್ಯ ಕುರಿತು ಸಚಿವರು ಪ್ರಸ್ತಾಪಿಸಿದರು ಮತ್ತು ಸಚಿವಾಲಯ ಕೈಗೊಂಡಿರುವ ಡಿಜಿಟಲ್ ಕ್ರಮಗಳು ಶಿಕ್ಷಣದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಸಹಕಾರಿಯಾಗಿದ್ದು, ಇದರಿಂದ ಡಿಜಿಟಲ್ ಶಿಕ್ಷಣವನ್ನು ಮತ್ತಷ್ಟು ಬಲಪಡಿಸುವ ಜತೆಗೆ ಇದಕ್ಕೆ ಸಾಂಸ್ಥಿಕ ಸ್ವರೂಪ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು

***(Release ID: 1735046) Visitor Counter : 293