ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 3 ಕೋಟಿ ದಾಟಿ ಹೊಸ ಮೈಲಿಗಲ್ಲು ಸ್ಥಾಪನೆ


37.73 ಕೋಟಿ ಡೋಸ್ ದಾಟಿದ ಭಾರತದ ಕೋವಿಡ್-19 ಲಸಿಕೆ ನೀಡಿಕೆ ಪ್ರಮಾಣ

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 37,154 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಸಕ್ರಿಯ ಪ್ರಕರಣಗಳ ಸಂಖ್ಯೆ 4,50,899ಕ್ಕೆ ಇಳಿಕೆ; ಪ್ರಸ್ತುತ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.47%ಗೆ ಕುಸಿತ

ದೈನಂದಿನ ಪಾಸಿಟಿವಿಟಿ ದರ ಸತತ 21ನೇ ದಿನದಲ್ಲಿ 3% ಮಟ್ಟದಿಂದ ಕೆಳಗೆ; ಪ್ರಸ್ತುತ 2.59%ಗೆ ಇಳಿಕೆ

Posted On: 12 JUL 2021 11:24AM by PIB Bengaluru

ಕೋವಿಡ್-19 ಸೋಂಕಿನ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿರುವ ಭಾರತ, ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದೆ. ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣುಖರಾದವರ ಒಟ್ಟು ಪ್ರಮಾಣ ಇದೀಗ 3 ಕೋಟಿಯ ಗಡಿ ದಾಟಿದೆ.

ದೇಶದಲ್ಲಿ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಒಟ್ಟು 3,00,14,713 ರೋಗಿಗಳು ಈಗಾಗಲೇ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 39,649 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟಾರೆ ಚೇತರಿಕೆ ದರವೀಗ 97.22%ಗೆ ಸುಧಾರಣೆ ಕಂಡಿದೆ. ಚೇತರಿಕೆ ದರ ಸುಸ್ಥಿರ ಏರಿಕೆ ಪ್ರವೃತ್ತಿ ಹಿಡಿದಿದೆ.

https://static.pib.gov.in/WriteReadData/userfiles/image/image0016RD5.jpg

ಮತ್ತೊಂದು ಕಡೆ, ದೇಶವ್ಯಾಪಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಇದುವರೆಗೆ ಲಸಿಕೆ ನೀಡಿಕೆ ಪ್ರಮಾಣ 37.73 ಕೋಟಿ ಡೋಸ್ ದಾಟಿದೆ. ಒಟ್ಟಾರೆ, 37,73,52,501 ಡೋಸ್ ಲಸಿಕೆ ಹಾಕಲಾಗಿದೆ. 48,51,209 ಅಭಿಯಾನಗಳಲ್ಲಿ ಕಾರ್ಯ ನಡೆದಿದೆ ಎಂಬುದು ಇಂದು ಬೆಳಗ್ಗೆ 7 ಗಂಟೆಗೆ ಲಭ್ಯವಾಗಿರುವ ತಾತ್ಕಾಲಿಕ ವರದಿಯಿಂದ ತಿಳಿದುಬಂದಿದೆ. ಕಳೆದ 24 ತಾಸುಗಳಲ್ಲಿ 12,35,287 ಡೋಸ್ ಲಸಿಕೆ ಹಾಕಲಾಗಿದೆ.

ಕೆಳಗಿನ ಗುಂಪುಗಳು ಅದರಲ್ಲಿ ಸೇರಿವೆ.

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

ಮೊದಲ ಡೋಸ್

1,02,49,021

2ನೇ ಡೋಸ್

74,07,589

ಮುಂಚೂಣಿ ಕಾರ್ಯಕರ್ತರು

ಮೊದಲ ಡೋಸ್

1,76,68,922

2ನೇ ಡೋಸ್

99,13,421

18-44 ವಯೋಮಾನದವರು

ಮೊದಲ ಡೋಸ್

11,24,48,511

2ನೇ ಡೋಸ್

37,46,523

45-59 ವಯೋಮಾನದವರು

ಮೊದಲ ಡೋಸ್

9,35,18,992

2ನೇ ಡೋಸ್

2,38,13,758

60 ವರ್ಷ ದಾಟಿದವರು

ಮೊದಲ ಡೋಸ್

7,01,33,406

2ನೇ ಡೋಸ್

2,84,52,358

ಒಟ್ಟು

37,73,52,501

ಕೋವಿಡ್-19 ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಕೋವಿಡ್-19 ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ನೀಡಲು ಬದ್ಧವಾಗಿದೆ.

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 37,154 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಸತತ ಕಳೆದ 15 ದಿನಗಳಿಂದ ಪತ್ತೆಯಾಗುತ್ತಿರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ 50 ಸಾವಿರ ಮಟ್ಟದಿಂದ ಕೆಳಗಿರುವುದು ಆಶಾದಾಯಕ ಬೆಳವಣಿಗೆ. ಕೇಂದ್ರ ಸರಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಜಂಟಿ ಪ್ರಯತ್ನಗಳ ಫಲವಾಗಿ ಹೊಸ ಪ್ರಕರಣಗಳ ಪ್ರಮಾಣ ಗಣನೀಯವಾಗಿ ತಗ್ಗುತ್ತಿದೆ.

https://static.pib.gov.in/WriteReadData/userfiles/image/image002RSZX.jpg

ಭಾರತದಲ್ಲಿ ಇಂದು ಸಕ್ರಿಯ ಪ್ರಕರಣಗಳ ಸಂಖ್ಯೆ 4,50,899ಕ್ಕೆ ಇಳಿಕೆ ಕಂಡಿದೆ. ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.46% ಇದೆ.

https://static.pib.gov.in/WriteReadData/userfiles/image/image00316BC.jpg

ದೇಶಾದ್ಯಂತ ಕೊರೊನಾ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಳೆದ 24 ತಾಸುಗಳಲ್ಲಿ 14,32,343 ಪರೀಕ್ಷೆಗಳನ್ನು ನಡೆಸಲಾಗಿದೆ. ದೇಶದಲ್ಲಿ ಇದುವರೆಗೆ ಒಟ್ಟು 43 ಕೋಟಿಗಿಂತ ಅಧಿಕ ಅಂದರೆ 43,23,17,813 ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ, ವಾರದ ಪಾಸಿಟಿವಿಟಿ ದರ ನಿರಂತರ ಇಳಿಕೆ ಕಾಣುತ್ತಿರುವುದನ್ನು ಗಮನಿಸಬಹುದು. ಅದೀಗ 2.32%ಗೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರ ಸತತ 21ನೇ ದಿನದಲ್ಲಿ 3% ಮಟ್ಟದಿಂದ ಕೆಳಗಿದ್ದು, ಪ್ರಸ್ತುತ 2.59% ಇದೆ. ನಿರಂತರ 35 ದಿನಗಳಿಂದ 5% ಮಟ್ಟದಿಂದ ಕೆಳಗೆ ಮುಂದುವರಿದಿದೆ.

https://static.pib.gov.in/WriteReadData/userfiles/image/image004UMHG.jpg

***



(Release ID: 1734757) Visitor Counter : 286