ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದ ಬೃಹತ್ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನ; 37.21 ಕೋಟಿ ಡೋಸ್ ದಾಟಿದ ಲಸಿಕೆ ನೀಡಿಕೆ ಪ್ರಮಾಣ
ಕಳೆದ 24 ತಾಸುಗಳಲ್ಲಿ 42,766 ದೈನಂದಿನ ಹೊಸ ಕೊರೊನಾ ಪ್ರಕರಣಗಳು ಪತ್ತೆ
ಭಾರತದ ಸಕ್ರಿಯ ಪ್ರಕರಣಗಳ ಪ್ರಮಾಣ 4,55,033ಕ್ಕೆ ಇಳಿಕೆ; ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.48%
ಸತತ 1 ತಿಂಗಳಿಂದ 5% ಮಟ್ಟದಿಂದ ಕೆಳಗೆ ಕಾಯ್ದುಕೊಂಡ ದೈನಂದಿನ ಪಾಸಿಟಿವಿಟಿ ದರ; ಅದೀಗ 2.19%ಗೆ ಇಳಿಕೆ
Posted On:
10 JUL 2021 9:44AM by PIB Bengaluru
ಭಾರತದಲ್ಲಿ ನಡೆಯುತ್ತಿರುವ ಕೋವಿಡ್-19 ಬೃಹತ್ ಲಸಿಕಾ ಅಭಿಯಾನದಲ್ಲಿ ಲಸಿಕೆ ನೀಡಿಕೆ ಪ್ರಮಾಣ 37 ಕೋಟಿ ಡೋಸ್ ದಾಟಿದೆ. ದೇಶಾದ್ಯಂತ 48,04,423 ಕಾರ್ಯಕ್ರಮಗಳ ಮೂಲಕ ಒಟ್ಟು 37,21,96,268 ಡೋಸ್ ಲಸಿಕೆ ಹಾಕಲಾಗಿದೆ. ಇಂದು ಬೆಳಗ್ಗೆ 7 ಗಂಟೆಗೆ ಲಭ್ಯವಾಗಿರುವ ತಾತ್ಕಾಲಿಕ ಅಂಕಿಅಂಶದಿಂದ ಈ ಮಾಹಿತಿ ತಿಳಿದುಬಂದಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 30,55,802 ಜನರಿಗೆ ಲಸಿಕೆ ನೀಡಲಾಗಿದೆ.
ಈ ಕೆಳಗಿನ ಗುಂಪುಗಳು ಅದರಲ್ಲಿ ಸೇರಿವೆ.
ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು
|
ಮೊದಲ ಡೋಸ್
|
1,02,44,459
|
2ನೇ ಡೋಸ್
|
73,84,439
|
ಮುಂಚೂಣಿ ಕಾರ್ಯಕರ್ತರು
|
ಮೊದಲ ಡೋಸ್
|
1,76,51,159
|
2ನೇ ಡೋಸ್
|
98,42,138
|
18-44 ವಯೋಮಾನದವರು
|
ಮೊದಲ ಡೋಸ್
|
11,00,15,954
|
2ನೇ ಡೋಸ್
|
35,15,490
|
45-59 ವಯೋಮಾನದವರು
|
ಮೊದಲ ಡೋಸ್
|
9,29,29,982
|
2ನೇ ಡೋಸ್
|
2,27,96,218
|
60 ವರ್ಷ ದಾಟಿದವರು
|
ಮೊದಲ ಡೋಸ್
|
6,99,01,188
|
2ನೇ ಡೋಸ್
|
2,79,15,241
|
ಒಟ್ಟು
|
37,21,96,268
|
ಕೋವಿಡ್-19 ಲಸಿಕಾ ಆಂದೋಲನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಬೃಹತ್ ಲಸಿಕಾ ಆಂದೋಲನದ ವ್ಯಾಪ್ತಿ ಮತ್ತು ಈ ಕಾರ್ಯಕ್ರಮಕ್ಕೆ ಇನ್ನಷ್ಟು ವೇಗ ನೀಡಲು ಬದ್ಧವಾಗಿದೆ.
ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 42,766 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಸತತ 13ನೇ ದಿನದಲ್ಲೂ ಪತ್ತೆಯಾಗುತ್ತಿರುವ ಹೊಸ ಕೊರೊನಾ ಪ್ರಕರಣಗಳ ಪ್ರಮಾಣ 50 ಸಾವಿರ ಮಟ್ಟದಿಂದ ಕೆಳಗಿರುವುದು ಆಶಾದಾಯಕ ಬೆಳವಣಿಗೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸುಸ್ಥಿರ ಮತ್ತು ಜಂಟಿ ಪ್ರಯತ್ನಗಳ ಫಲವಾಗಿ ಹೊಸ ಪ್ರಕರಣಗಳು ಇಳಿಕೆಯಾಗುತ್ತಿವೆ.
ಭಾರತದ ಸಕ್ರಿಯ ಪ್ರಕರಣಗಳ ಪ್ರಮಾಣ ಇಂದು 4,55,033ಕ್ಕೆ ಇಳಿಕೆ ಕಂಡಿದೆ. ಒಟ್ಟು ಪಾಸಿಟಿವ್ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಇದೀಗ 1.48%ಗೆ ಕುಸಿದಿದೆ.
ಕೊರೊನಾ ಸಾಂಕ್ರಾಮಿಕ ಸೋಂಕು ದೇಶದಲ್ಲಿ ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ 2,99,33,538 ಸೋಂಕಿತರು ಗುಣಮುಖರಾಗಿದ್ದಾರೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 45,254 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟು ಚೇತರಿಕೆ ಪ್ರಮಾಣ 97.20%ಗೆ ಸುಧಾರಣೆ ಕಂಡಿದೆ. ಸುಧಾರಣೆ ಪ್ರಮಾಣ ಸುಸ್ಥಿರವಾಗಿ ಏರಿಕೆ ಕಾಣುತ್ತಿದೆ.
ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದ್ದು, ಕಳೆದ 24 ತಾಸುಗಳಲ್ಲಿ 19,55,225 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ದೇಶಾದ್ಯಂತ ಇಲ್ಲಿಯ ತನಕ 42.90 ಕೋಟಿಗಿಂತ ಹೆಚ್ಚಿನ ಅಂದರೆ 42,90,41,970 ಪರೀಕ್ಷೆಗಳನ್ನು ಮಾಡಲಾಗಿದೆ.
ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆಗಳನ್ನು ದೇಶಾದ್ಯಂತ ಹಚ್ಚಿಸಿರುವ ಹಿನ್ನೆಲೆಯಲ್ಲಿಲ ವಾರದ ಪಾಸಿಟಿವಿಟಿ ದರ ಗಣನೀಯವಾಗಿ ತಗ್ಗುತ್ತಿದೆ. ವಾರದ ಪಾಸಿಟಿವಿಟಿ ದರವೀಗ 2.34%ಗೆ ತಗ್ಗಿದೆ. ದೈನಂದಿನ ಪಾಸಿಟಿವಿಟಿ ದರ ಇಂದು 2.19%ಗೆ ಇಳಿಕೆ ಕಂಡಿದೆ. ಸತತ 19ನೇ ದಿನದಲ್ಲಿ ದೈನಂದಿನ ಪಾಸಿಟಿವಿಟಿ ದರ 3% ಮಟ್ಟದಿಂದ ಕೆಳಗೆ ಕಾಯ್ದಕೊಂಡು ಬಂದಿದೆ. ಜತೆಗೆ, ಸತತ 33ನೇ ದಿನದಲ್ಲೂ ಅದು 5% ಮಟ್ಟದ ಕೆಳಗಿದೆ.
***
(Release ID: 1734409)
Visitor Counter : 255