ಪ್ರಧಾನ ಮಂತ್ರಿಯವರ ಕಛೇರಿ

ಕಲ್ಯಾಣ್ ಸಿಂಗ್ ಜೀ ಶೀಘ್ರ ಚೇತರಿಸಿಕೊಳ್ಳಲಿ; ಪ್ರಧಾನ ಮಂತ್ರಿ ಸೇರಿದಂತೆ ಅಸಂಖ್ಯಾತರ ಜನರ ಪ್ರಾರ್ಥನೆ

ಪ್ರಕಟಣಾ ದಿನಾಂಕ: 09 JUL 2021 10:13AM by PIB Bengaluru

ತೀವ್ರ ಅಸ್ವಸ್ಥರಾಗಿ ಲಖನೌದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಲ್ಯಾಣ್ ಸಿಂಗ್ ಅವರ ಮೊಮ್ಮಗನ ಜತೆ ಆರೋಗ್ಯ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿ, ಧೈರ್ಯ ತುಂಬಿದರು. ಕಲ್ಯಾಣ ಸಿಂಗ್ ಜೀ ಅವರೊಂದಿಗೆ ಅನೇಕ ಬಾರಿ ನಡೆಸಿದ ಮಾತುಕತೆಯನ್ನು ನೆನಪು ಮಾಡಿಕೊಂಡ ಪ್ರಧಾನಿ ಅವರು, ಅವರೊಂದಿಗೆ ಮಾತನಾಡುವಾಗ ಸದಾ ಕಲಿಕೆಯ ಅನುಭವ ಉಂಟಾಗುತ್ತಿತ್ತು ಎಂದಿದ್ದಾರೆ.

ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ, “ಕಲ್ಯಾಣ್ ಸಿಂಗ್ ಜೀ ಅವರು ಶೀಘ್ರ ಗುಣುಮುಖರರಾಗಲಿ ಎಂದು ದೇಶಾದ್ಯಂತ ಅಸಂಖ್ಯಾತ ಜನರು ಪ್ರಾರ್ಥಿಸುತ್ತಿದ್ದಾರೆ. ನಾನು ಸಹ ಅವರೊಂದಿಗೆ ಸೇರಿ ಪ್ರಾರ್ಥಿಸುತ್ತೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರು ನಿನ್ನೆ ಆಸ್ಪತ್ರೆಗೆ ಭೇಟಿ ಕಲ್ಯಾಣ್ ಜೀ ಅವರ ಆರೋಗ್ಯ ವಿಚಾರಿಸಿದ್ದಾರೆ. ನಾನು ಅವರ ಮೊಮ್ಮಗನ ಜತೆ ದೂರವಾಣಿ ಮಾತುಕತೆ ನಡೆಸಿ, ಆರೋಗ್ಯ ಪರಿಸ್ಥಿತಿ ವಿಚಾರಿಸಿದೆಎಂದಿದ್ದಾರೆ.

ಜೆ.ಪಿ.ನಡ್ಡಾ ಅವರೊಂದಿಗೆ ಮಾತನಾಡುವಾಗ ಕಲ್ಯಾಣ್ ಸಿಂಗ್ ಜೀ ನನ್ನನ್ನು ನೆನಪಿಸಿಕೊಂಡರು ಎಂಬುದನ್ನು ಕೇಳಿ ಭಾವುಕನಾದೆ. ಕಲ್ಯಾಣ್ ಸಿಂಗ್ ಜೀ ಅವರೊಂದಿಗೆ ಅನೇಕ ಬಾರಿ ನಾನು ಮಾತನಾಡಿದ್ದೇನೆ. ನಾನು ಅವರೊಂದಿಗೆ ಮಾತನಾಡಿದಾಗಲೆಲ್ಲಾ ನನಗೆ ಕಲಿಕೆಯ ಅನುಭವವಾಗುತ್ತಿತ್ತು. ನೆನಪುಗಳು ನನ್ನ ಜೀವನದಲ್ಲಿ ಹಲವು ಬಾರಿ ಮರುಕಳಿಸಿವೆ. ಅವರೊಂದಿಗಿನ ಚರ್ಚೆ ಅಥವಾ ಮಾತುಕತೆ ಸದಾ ಕಲಿಕೆಯ ಅನುಭವವಾಗಿತ್ತುಎಂದು ಪ್ರಧಾನ ಮಂತ್ರಿ ಸ್ಮರಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1734164) ವಿಸಿಟರ್ ಕೌಂಟರ್ : 203