ಪ್ರಧಾನ ಮಂತ್ರಿಯವರ ಕಛೇರಿ

ಕೇಂದ್ರೀಯ ನೆರವಿನ ತಾಂತ್ರಿಕ ಸಂಸ್ಥೆಗಳ ನಿರ್ದೇಶಕರೊಂದಿಗೆ ಪ್ರಧಾನಮಂತ್ರಿ ಸಂವಾದ


ತ್ವರಿತ ತಾಂತ್ರಿಕ ಪರಿಹಾರ ಒದಗಿಸುತ್ತಿರುವ ಯುವ ನಾವೀನ್ಯ ವಲಯದ ಪ್ರಯತ್ನವನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಕಲಿಯುವವರ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವ, ತಡೆರಹಿತ ಮತ್ತು ಕಲಿಕೆ ಅವಕಾಶಗಳನ್ನು ಒದಗಿಸಲು ಸಮರ್ಥವಾಗಿರುವ ಶಿಕ್ಷಣ ಮಾದರಿಯಲ್ಲಿ ಪ್ರಗತಿ ಅತ್ಯಗತ್ಯ: ಪ್ರಧಾನಮಂತ್ರಿ

ಮುಂದಿನ ದಶಕದಲ್ಲಿ ನಮ್ಮ ತಾಂತ್ರಿಕ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗಳು “ಭಾರತದ ತಾಂತ್ರಿಕ ದಶಕ” ದಡಿ ಪ್ರಮುಖ ಪಾತ್ರ ವಹಿಸಲಿವೆ – ಪ್ರಧಾನಮಂತ್ರಿ

ಪ್ರಸ್ತುತ ನಡೆಯುತ್ತಿರುವ, ಅದರಲ್ಲೂ ವಿಶೇಷವಾಗಿ ಕೋವಿಡ್ ಸಂಬಂಧಿತ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸ ಶ್ಲಾಘನೀಯ – ಪ್ರಧಾನಮಂತ್ರಿ 

Posted On: 08 JUL 2021 2:07PM by PIB Bengaluru

ಕೇಂದ್ರೀಯ ನೆರವಿನ ತಾಂತ್ರಿಕ ಸಂಸ್ಥೆಗಳೊಂದಿಗೆ 2021, ಜುಲೈ 8 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಡಿಯೋ ಸಂವಾದ ನಡೆಸಿದರು. ಪ್ರಧಾನಮಂತ್ರಿ ಅವರ ಸಂವಾದದಲ್ಲಿ 100 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಕೋವಿಡ್ ಸೃಷ್ಟಿಸಿರುವ ಸವಾಲುಗಳನ್ನು ಎದುರಿಸಲು ಸಂಸ್ಥೆಗಳು ನಡೆಸುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳು ಶ್ಲಾಘನೀಯ. ತ್ವರಿತ ತಾಂತ್ರಿಕ ಪರಿಹಾರ ಒದಗಿಸುತ್ತಿರುವ ಯುವ ನಾವೀನ್ಯ ವಲಯದ ಪ್ರಯತ್ನವನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು.

ಬದಲಾಗುತ್ತಿರುವ ಸನ್ನಿವೇಶ ಮತ್ತು ಎದುರಾಗುತ್ತಿರುವ ಸವಾಲುಗಳಿಗೆ ಅನುಗುಣವಾಗಿ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣವನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ದೇಶ ಮತ್ತು ಸಮಾಜದ ಪ್ರಸ್ತುತ ಹಾಗೂ ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಸಂಸ್ಥೆಗಳು ತಮ್ಮನ್ನು ಮರುಶೋಧಿಸಿಕೊಳ್ಳಲು ಮತ್ತು ಮರು ಮೌಲ್ಯ ಮಾಪನ ಮಾಡಲು ಪರ್ಯಾಯ ಮತ್ತು ನವೀನ ಮಾದರಿಗಳನ್ನು ಅಭಿವೃದ್ಧಿಪಡಿಸಲು ಇಂತಹ ಕ್ರಮ ಅಗತ್ಯವಾಗಿದೆ ಎಂದು ಹೇಳಿದರು. ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು, ನಮ್ಮ ಯುವ ಸಮೂಹವನ್ನು ನಿರಂತರ ಅಡೆತಡೆಗಳು ಮತ್ತು ಬದಲಾವಣೆಗಳಿಗೆ ಸನ್ನದ್ಧಗೊಳಿಸಲು ಸಮರ್ಥವಾಗಿರುವ ಶಿಕ್ಷಣ ಮಾದರಿಯಲ್ಲಿ ಪ್ರಗತಿ ಅತ್ಯಗತ್ಯ. ಶಿಕ್ಷಣ ಮಾದರಿಗಳಲ್ಲಿ ಪ್ರವೇಶಿಸುವ, ಕೈಗೆಟುಕುವ, ನೀತಿ ಮತ್ತು ಗುಣಮಟ್ಟ ಶಿಕ್ಷಣ ಮಾದರಿಯ ಪ್ರಮುಖ ಮೌಲ್ಯಗಳಾಗಿರಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತ [ಜಿ.ಆರ್.]ದಲ್ಲಿ ಸುಧಾರಣೆಯಾಗುತ್ತಿರುವುದನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಉನ್ನತ ಶಿಕ್ಷಣದಲ್ಲಿ ಡಿಜಿಟಲೀಕರಣದಿಂದ ಜಿ..ಆರ್ ಅನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಶಿಕ್ಷಣವನ್ನು ಸುಲಭವಾಗಿ ಪಡೆಯಬಹುದು ಎಂದರು. ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಮೂಲಕ ಬ್ಯಾಚುಲರ್ ಮತ್ತು ಮಾಸ್ಟರ್ ಪದವಿ ಕಾರ್ಯಕ್ರಮಗಳಂತಹ ಡಿಜಿಟಲೀಕರಣ ಕಾರ್ಯಕ್ರಮಗಳನ್ನು ಸಂಸ್ಥೆಗಳು ಕೈಗೊಂಡಿರುವುದನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.

ಭಾರತೀಯ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣದ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಮತ್ತು ಜಾಗತಿಕ ನಿಯತಕಾಲಿಕಗಳನ್ನು ಪ್ರಾದೇಶಿಕ ಭಾಷೆಗಳಿಗೆ ತರ್ಜುಮೆ ಮಾಡಬೇಕಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಸ್ವಾತಂತ್ರ್ಯೋತ್ಸವದ 100 ನೇ ವರ್ಷಾಚರಣೆ ಆಚರಿಸುವಾಗ ಅಂದರೆ ಮುಂದಿನ 25 ವರ್ಷಗಳಲ್ಲಿ ಭಾರತದ ಕನಸುಗಳು ಮತ್ತು ಆಕಾಂಕ್ಷೆಗಳ ಆಧಾರವನ್ನು ಆತ್ಮನಿರ್ಭರ್ ಭಾರತ್ ಅಭಿಯಾನ ರೂಪಿಸುತ್ತದೆ. ನಮ್ಮ ತಾಂತ್ರಿಕ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗಳು ಮುಂದಿನ ದಶಕದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಇದನ್ನು ಭಾರತದ ತಾಂತ್ರಿಕ ದಶಕಎಂದು ಸಹ ಕರೆಯಲಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಸೈಬರ್ ತಂತ್ರಜ್ಞಾನ, ರಕ್ಷಣೆ, ಕೃಷಿ, ಆರೋಗ್ಯ ವಲಯ, ಶಿಕ್ಷಣ ಕ್ಷೇತ್ರಗಳಲ್ಲಿ ಭವಿಷ್ಯದ ಪರಿಹಾರಗಳನ್ನು ಅಭಿವೃದ್ಧಿಪಡಿಸುವತ್ತ ನಾವು ಗಮನಹರಿಸಬೇಕಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಕೃತಕ ಬುದ್ದಿಮತ್ತೆ, ಸ್ಮಾರ್ಟ್ ಆಗಿ ಧರಿಸಬಲ್ಲ ವಸ್ತುಗಳು, ವರ್ಧಿತ ವಾಸ್ತವಿಕ ವ್ಯವಸ್ಥೆಗಳು, ಡಿಜಿಟಲ್ ನೆರವು ಸಾಮಾನ್ಯ ಜನರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಮೂಲ ಸೌಕರ್ಯಗಳಿವೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ನಾವು ಕೈಗೆಟುವ, ವ್ಯಕ್ತಿಗತವಲ್ಲದ ಮತ್ತು  ಎಐ ಚಾಲಿತ ಶಿಕ್ಷಣದತ್ತ ಗಮನಹರಿಸಬೇಕು ಎಂದರು

ಸಂವಾದ ಸಂದರ್ಭದಲ್ಲಿ ಬೆಂಗಳೂರಿನ ಐಐಎಸ್ಸಿಯ ಫ್ರೊಫೆಸರ್ ಗೋವಿಂದನ್ ರಂಗರಾಜನ್, ಬಾಂಬೆ ಐಐಟಿಯ ಪ್ರೊಫೆಸರ್ ಸುಬಾಸಿಸ್ ಚೌಧರಿ, ಮದ್ರಾಸ್ ಐಐಟಿಯ ಪ್ರೊಫೆಸರ್ ಭಾಸ್ಕರ್ ರಾಮಮೂರ್ತಿ ಮತ್ತು ಕಾನ್ಪುರದ ಐಐಟಿಯ ಪ್ರೊಫೆಸರ್ ಅಭಯ್ ಕರಂದಿಕರ್ ಅವರು ಪ್ರಧಾನಮಂತ್ರಿ ಅವರಿಗೆ ಪ್ರಾತ್ಯಕ್ಷಿಕೆ ನೀಡಿದರು ಮತ್ತು ಹಲವಾರು ಚಾಲ್ತಿಯಲ್ಲಿರುವ ಯೋಜನೆಗಳು, ಶೈಕ್ಷಣಿಕ ಕೆಲಸ ಮತ್ತು ದೇಶದಲ್ಲಿನ ಹೊಸ ಸಂಶೋಧನೆಗಳ ಕುರಿತು ಮಾಹಿತಿ ನೀಡಿದರು.

ಕೋವಿಡ್ ಸಂಬಂಧಿತ ಸಂಶೋಧನೆಗಳನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು. ಅಲ್ಲದೇ ಹೊಸ ಪರೀಕ್ಷಾ ತಾಂತ್ರಜ್ಞಾನ, ಕೋವಿಡ್ ಲಸಿಕೆ ಅಭಿವೃದ್ಧಿ ಪ್ರಯತ್ನಗಳು, ಪರೀಕ್ಷಾ ತಂತ್ರಗಳು, ದೇಶೀಯ ಆಮ್ಲಜನಕ ಸಾಂದ್ರಕಗಳು, ಆಮ್ಲಜನಕ ಉತ್ಪಾದನೆ, ಕ್ಯಾನ್ಸರ್ ಸೆಲ್ ಚಿಕಿತ್ಸೆ, ಆಸ್ಪತ್ರೆ ಮಾದರಿಗಳು, ಹಾಟ್ ಸ್ಪಾಟ್ ಪ್ರಿಡಿಕ್ಷನ್, ವೆಂಟಿಲೇಟರ್ ಉತ್ಪಾದನಾ ವಲಯದ ಕ್ರಮಗಳು. ರೊಬೊಟಿಕ್ಸ್, ಡ್ರೋನ್ ಗಳು, ಆನ್ ಲೈನ್ ಶಿಕ್ಷಣ, ಬ್ಯಾಟರಿ ತಂತ್ರಜ್ಞಾನ ಪ್ರಯತ್ನಗಳ ಬಗ್ಗೆ ಪ್ರಧಾನಮಂತ್ರಿ ಅವರಿಗೆ ವಿವರ ನೀಡಲಾಯಿತು. ಆರ್ಥಿಕತೆ ಮತ್ತು ತಂತ್ರಜ್ಞಾನದ ಬದಲಾಗುತ್ತಿರುವ ಸ್ವರೂಪಕ್ಕೆ ಅನುಗುಣವಾಗಿ ಹೊಸ ಶೈಕ್ಷಣಿಕ ಕೋರ್ಸ್ ಗಳ ಬಗ್ಗೆ ವಿಶೇಷವಾಗಿ ಆನ್ ಲೈನ್ ಕೋರ್ಸ್ ಗಳ ಬಗ್ಗೆಯೂ ಪ್ರಧಾನಮಂತ್ರಿ ಅವರಿಗೆ ಮಾಹಿತಿ ನೀಡಲಾಯಿತು.

ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಸಚಿವರು ಮತ್ತು ಶೈಕ್ಷಣಿಕ ಖಾತೆ ರಾಜ್ಯ ಸಚಿವರು ಸಂವಾದಲ್ಲಿ ಪಾಲ್ಗೊಂಡಿದ್ದರು.

***(Release ID: 1733992) Visitor Counter : 317