ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವಾರ್ತಾ ಮತ್ತು ಪ್ರಸಾರ ಸಚಿವರಾಗಿ ಶ್ರೀ ಅನುರಾಗ್ ಠಾಕೂರ್ ಅಧಿಕಾರ ಸ್ವೀಕಾರ

Posted On: 08 JUL 2021 12:04PM by PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವರಾಗಿ ಶ್ರೀ ಅನುರಾಗ್ ಠಾಕೂರ್ ಇಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮತನಾಡಿದ ಸಚಿವರು, ಕಳೆದ ಏಳು ವರ್ಷಗಳಲ್ಲಿ ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಹಳ ಶ್ರಮಪೂರ್ವಕ ನಿರಂತರ ಪ್ರಯತ್ನಗಳನ್ನು ಮಾಡಿದ್ದಾರೆ. ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಈ ಆಂದೋಲನವನ್ನು ಮುನ್ನಡೆಸಿಕೊಂಡು ಹೋಗುವುದು ತಮ್ಮ ಜವಾಬ್ದಾರಿ ಎಂದರು. ಪ್ರಧಾನ ಮಂತ್ರಿ ಅವರು ತಮ್ಮ ಮೇಲಿರಿಸಿರುವ ಜವಾಬ್ದಾರಿಯನ್ನು ನಿಭಾಯಿಸಲು ಸರ್ವಪ್ರಯತ್ನಗಳನ್ನು ಮಾಡುವುದಾಗಿ ಹೇಳಿದ ಶ್ರೀ ಠಾಕೂರ್ ಅವರು ಇದಕ್ಕೆ ಮಾಧ್ಯಮದ ಸಹಕಾರವನ್ನು ಎದುರು ನೋಡುತ್ತಿರುವುದಾಗಿಯೂ ಹೇಳಿದರು.

ಸಚಿವರನ್ನು ಅವರ ಕೊಠಡಿಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ ಅವರು ಸ್ವಾಗತಿಸಿದರು. ವಿವಿಧ ಮಾಧ್ಯಮ ಘಟಕಗಳ ಅಧಿಕಾರಿಗಳು ಮತ್ತು ಪ್ರಸಾರ ಭಾರತಿಯ ಅಧಿಕಾರಿಗಳ ಜೊತೆ ಸಂವಾದ ನಡೆಸಿದ ಶ್ರೀ ಠಾಕೂರ್ ಎಲ್ಲಾ ಮಾಧ್ಯಮ ಮುಖ್ಯಸ್ಥರ ಜೊತೆ ತಂಡವಾಗಿ ಕೆಲಸ ಮಾಡುವುದು ತಮ್ಮ ಇರಾದೆ ಎಂದರು.

https://static.pib.gov.in/WriteReadData/userfiles/image/image001BX7O.jpg

 

https://static.pib.gov.in/WriteReadData/userfiles/image/image002TEGS.jpg

https://static.pib.gov.in/WriteReadData/userfiles/image/image003M1E2.jpg

***


(Release ID: 1733793) Visitor Counter : 195