ಪ್ರಧಾನ ಮಂತ್ರಿಯವರ ಕಛೇರಿ

ಹಿಮಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ ಶ್ರೀ ವೀರಭದ್ರ ಸಿಂಗ್ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ

ಪ್ರಕಟಣಾ ದಿನಾಂಕ: 08 JUL 2021 9:37AM by PIB Bengaluru

ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಶ್ರೀ ವೀರಭದ್ರ ಸಿಂಗ್ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಂಬನಿ ಮಿಡಿದಿದ್ದಾರೆ.

ಟ್ವಿಟರ್ ನಲ್ಲಿ ತೀವ್ರ ಸಂತಾಪ ಸೂಚಿಸಿರುವ ಪ್ರಧಾನ ಮಂತ್ರಿ, “ಶ್ರೀ ವೀರಭದ್ರ ಸಿಂಗ್ ಅವರು ಸುದೀರ್ಘ ಕಾಲ ರಾಜಕೀಯ ಜೀವನದಲ್ಲಿ ಇದ್ದು, ಶ್ರೀಮಂತ ಆಡಳಿತ ನಡೆಸಿದ, ಶಾಸನಸಭೆಯ ಗಟ್ಟಿ ಅನುಭವ ಹೊಂದಿದ್ದ ಧುರೀಣರಾಗಿದ್ದರು. ಹಿಮಾಚಲ ಪ್ರದೇಶದ ಪರಿವರ್ತನೆಗೆ ಸಿಂಗ್ ಜೀ ಅವರು ಗಣನೀಯ ಪಾತ್ರ ವಹಿಸಿದ್ದರು. ರಾಜ್ಯದ ಜನತೆಗೆ ಅಪಾರ ಸೇವೆ ಸಲ್ಲಿಸಿದ್ದರು. ಅವರ ನಿಧನವು ತುಂಬಾ ದು: ತಂದಿದೆ. ಅವರ ಕುಟುಂಬ ವರ್ಗಕ್ಕೆ, ಅಪಾರ ಬೆಂಬಲಿಗರಿಗೆ ದು: ಭರಿಸುವ ಶಕ್ತಿ ನೀಡಲಿ. ಅವರೆಲ್ಲರಿಗೂ ಸಂತಾಪಗಳು, ಓಂ ಶಾಂತಿ.” ಎಂದು ತಿಳಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1733584) ವಿಸಿಟರ್ ಕೌಂಟರ್ : 224