ಸಂಪುಟ ಕಾರ್ಯಾಲಯ

ಸಹಕಾರದ ನೂತನ ಸಚಿವಾಲಯ ಸೃಷ್ಟಿಸಲಿರುವ ಮೋದಿ ಸರ್ಕಾರ

Posted On: 06 JUL 2021 10:22PM by PIB Bengaluru

ಸಹಕಾರದಿಂದ ಸಮೃದ್ಧಿದೃಷ್ಟಿಕೋನದ ಸಾಕಾರಕ್ಕಾಗಿ ಐತಿಹಾಸಿಕ ಹೆಜ್ಜೆಯಿಟ್ಟಿರುವ ಮೋದಿ ಸರ್ಕಾರಸಹಕಾರ ಸಚಿವಾಲಯವನ್ನೇ ರೂಪಿಸಿದೆ.

ಸಚಿವಾಲಯವು ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸಲು ಪ್ರತ್ಯೇಕ ಆಡಳಿತಾತ್ಮಕ, ಕಾನೂನು ಮತ್ತು ನೀತಿ ಚೌಕಟ್ಟುಗಳನ್ನು ಒದಗಿಸುತ್ತದೆ.

ಇದು ಸಹಕಾರಿಗಳಿಗೆ ನೈಜ ಜನ ಆಧಾರಿತ ಚಳವಳಿಯೋಪಾದಿಯಲ್ಲಿ ಬೇರುಮಟ್ಟದವರೆಗೆ ತಲುಪಲು ನೆರವಾಗುತ್ತದೆ.

ನಮ್ಮ ದೇಶದಲ್ಲಿ, ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ ಮಾದರಿಯು ಬಹಳ ಪ್ರಸ್ತುತವಾಗಿದೆ, ಅಲ್ಲಿ ಪ್ರತಿಯೊಬ್ಬ ಸದಸ್ಯರೂ ಜವಾಬ್ದಾರಿಯ ಸ್ಫೂರ್ತಿಯಿಂದ ಕೆಲಸ ಮಾಡುತ್ತಾರೆ.

ಸಹಕಾರಿ ಸಂಸ್ಥೆಗಳಿಗೆವ್ಯವಹಾರವನ್ನು ಸುಲಭಗೊಳಿಸುವಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಬಹು-ರಾಜ್ಯ ಸಹಕಾರ ಸಂಘಗಳ (ಎಂ.ಎಸ್‌.ಸಿ.ಎಸ್) ಅಭಿವೃದ್ಧಿಯನ್ನು ಶಕ್ತಗೊಳಿಸಲು ಸಚಿವಾಲಯವು ಕಾರ್ಯ ನಿರ್ವಹಿಸುತ್ತದೆ.

ಸಮುದಾಯ ಆಧಾರಿತ ಅಭಿವೃದ್ಧಿ ಸಹಯೋಗಕ್ಕೆ ಕೇಂದ್ರ ಸರ್ಕಾರ ತನ್ನ ಆಳವಾದ ಬದ್ಧತೆಯನ್ನು ಸೂಚಿಸಿದೆ. ಸಹಕಾರಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸುವುದು ಹಣಕಾಸು ಸಚಿವರು ಮಾಡಿದ ಬಜೆಟ್ ಪ್ರಕಟಣೆಯ ಭರವಸೆಯನ್ನು ಸಹ ಈಡೇರಿಸುತ್ತದೆ.

***



(Release ID: 1733263) Visitor Counter : 506