ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ವ್ಯಕ್ತಿಗಳ ಕಳ್ಳಸಾಗಾಣಿಕೆ (ತಡೆಗಟ್ಟುವಿಕೆ, ಆರೈಕೆ, ಮತ್ತು ಪುನರ್ವಸತಿ) ವಿಧೇಯಕ, 2021ಕ್ಕೆ ಸಂಬಂಧಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಪ್ರತಿಕ್ರಿಯೆ/ಸಲಹೆಗಳ ಆಹ್ವಾನ.

Posted On: 04 JUL 2021 3:00PM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ವ್ಯಕ್ತಿಗಳ ಕಳ್ಳಸಾಗಾಣಿಕೆ (ತಡೆಗಟ್ಟುವಿಕೆ, ಆರೈಕೆ, ಮತ್ತು ಪುನರ್ವಸತಿ) ಕರಡು ವಿಧೇಯಕ, 2021ಕ್ಕೆ ಸಂಬಂಧಿಸಿ ಎಲ್ಲಾ ಭಾಗೀದಾರರಿಂದ ಪ್ರತಿಕ್ರಿಯೆ/ಸಲಹೆಗಳನ್ನು  ಆಹ್ವಾನಿಸಿದೆ. ವ್ಯಕ್ತಿಗಳ ಕಳ್ಳಸಾಗಾಣಿಕೆಯನ್ನು ತಡೆಯುವುದು ಮತ್ತು ಪ್ರತಿಬಂಧಿಸುವುದು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಾಣಿಕೆ ತಡೆ , ಇದರಲ್ಲಿ ಸಂತ್ರಸ್ಥರಾದವರಿಗೆ  ಆರೈಕೆ, ರಕ್ಷಣೆ ಮತ್ತು ಪುನರ್ವಸತಿ, ಅವರ ಹಕ್ಕುಗಳನ್ನು ರಕ್ಷಿಸುತ್ತಲೇ ಅವರ ಬೆಂಬಲಾರ್ಥ ಕಾನೂನು, ಆರ್ಥಿಕ ಮತ್ತು ಸಾಮಾಜಿಕ ಪರಿಸರದ ನಿರ್ಮಾಣ ಮಾಡುವುದು ಹಾಗು ಕಾನೂನು ಉಲ್ಲಂಘಿಸಿದ ಅಪರಾಧಿಗಳ ವಿಚಾರಣೆ ಮತ್ತು ಆ ಸಂಬಂಧಿತ ವಿಷಯಗಳು ಹಾಗು  ಪ್ರಾಸಂಗಿಕ ವಿಷಯಗಳು ಇದರಲ್ಲಿ ಅಡಕವಾಗಿವೆ. ವಿಧೇಯಕವನ್ನು ಒಮ್ಮೆ ಅಂತಿಮಗೊಳಿಸಿದ ಬಳಿಕ ಅದನ್ನು ಸಂಪುಟಕ್ಕೆ ಅನುಮೋದನೆಗಾಗಿ ಕಳುಹಿಸಲಾಗುವುದು ಮತ್ತು ಆ ಬಳಿಕ ಕಾಯ್ದೆಯಾಗಿಸಲು ಸಂಸತ್ತಿನ ಉಭಯ ಸದನಗಳ ಅಂಗೀಕಾರಕ್ಕಾಗಿ ಕಳುಹಿಸಲಾಗುವುದು. ಈ ಕಾಯ್ದೆಯು ಗಡಿಯಾಚೆ ವ್ಯಕ್ತಿಗಳನ್ನು ಕಳ್ಳಸಾಗಾಣಿಕೆ ಮಾಡುವ ಪ್ರತಿಯೊಂದು ಅಪರಾಧಕ್ಕೂ ಅನ್ವಯವಾಗುತ್ತದೆ.
ಮೇಲಿನ ಕರಡು ವಿಧೇಯಕಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಗಳು/ಸಲಹೆಗಳನ್ನು 14-7-2021 ರೊಳಗಾಗಿ ಮಿಂಚಂಚೆ ವಿಳಾಸ santanu.brajabasi[at]gov[dot]inಕ್ಕೆ ಕಳುಹಿಸಬಹುದು.

ಕರಡು ವಿಧೇಯಕಕ್ಕೆ ದಯವಿಟ್ಟು ಕೆಳಗಿನ ಕೊಂಡಿಯನ್ನು ಕ್ಲಿಕ್ ಮಾಡಿ

https://wcd.nic.in/acts/public-notice-and-draft-trafficking-persons-prevention-care-and-rehabilitation-bill-2021

***

 


(Release ID: 1732702) Visitor Counter : 300