ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
35 ಕೋಟಿ ಗಡಿ ದಾಟಿದ ಭಾರತದ ಕೋವಿಡ್-19 ಲಸಿಕೆ ವ್ಯಾಪ್ತಿ
ಕಳೆದ ಒಂದು ವಾರದಿಂದ 50,000 ಕ್ಕಿಂತ ಕಡಿಮೆ ದೈನಂದಿನ ಪ್ರಕರಣಗಳು ವರದಿಯಾಗುತ್ತಿವೆ
ಭಾರತದ ಸಕ್ರಿಯ ಪ್ರಕರಣಗಳ ಹೊರೆ 4,85,350ಕ್ಕೆ ಕುಸಿತ ಕಂಡಿದೆ; ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು ಪ್ರಕರಣಗಳಲ್ಲಿ ಕೇವಲ 1.59% ಮಾತ್ರ ಇದೆ
ದೈನಂದಿನ ಪಾಸಿಟಿವಿಟಿ ದರವು (2.34%) ಸತತ 27 ದಿನಗಳಿಂದ 5% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ
Posted On:
04 JUL 2021 9:48AM by PIB Bengaluru
ಭಾರತದ ಒಟ್ಟು ಲಸಿಕೆ ವ್ಯಾಪ್ತಿಯು ನಿನ್ನೆ 35 ಕೋಟಿಯ ಹೆಗ್ಗುರುತನ್ನು ದಾಟಿದೆ. ಇಂದು ಬೆಳಿಗ್ಗೆ 7ಗಂಟೆಯವರೆಗಿನ ವರದಿಯ ಪ್ರಕಾರ, 46,04,925 ಸೆಷನ್‌ಗಳ ಮೂಲಕ ಒಟ್ಟು 35,12,21,306 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 63,87,849 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
ಇದರಲ್ಲಿ ಇವು ಸೇರಿವೆ:
ಆರೋಗ್ಯ ಕಾರ್ಯಕರ್ತರು
|
1ನೇ ಡೋಸ್
|
1,02,27,957
|
2ನೇ ಡೋಸ್
|
73,08,968
|
ಮುಂಚೂಣಿ ಕಾರ್ಯಕರ್ತರು
|
1ನೇ ಡೋಸ್
|
1,75,81,755
|
2ನೇ ಡೋಸ್
|
96,55,149
|
18-44 ವರ್ಷ ವಯೋಮಾನದವರು
|
1ನೇ ಡೋಸ್
|
9,98,28,219
|
2ನೇ ಡೋಸ್
|
27,26,338
|
45-59 ವರ್ಷ ವಯೋಮಾನದವರು
|
1ನೇ ಡೋಸ್
|
9,05,89,022
|
2ನೇ ಡೋಸ್
|
1,86,76,107
|
60 ವರ್ಷ ಮೀರಿದ ವಯೋಮಾನದವರು
|
1ನೇ ಡೋಸ್
|
6,89,10,208
|
2ನೇ ಡೋಸ್
|
2,57,17,583
|
ಒಟ್ಟು
|
35,12,21,306
|
2021ರ ಜೂನ್ 21ರಿಂದ ಕೋವಿಡ್-19 ಲಸಿಕೆಯ ಸಾರ್ವತ್ರಿಕರಣದ ಹೊಸ ಹಂತವು ಪ್ರಾರಂಭವಾಗಿದೆ. ಕೋವಿಡ್-19 ಲಸಿಕೆಯ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಅದರ ವೇಗವನ್ನು ಹೆಚ್ಚಿಸಲು ಕೇಂದ್ರ ಸರಕಾರ ಬದ್ಧವಾಗಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 43,071 ಹೊಸ ಪ್ರಕರಣಗಳು ವರದಿಯಾಗಿವೆ.
ಸತತ ಏಳು ದಿನಗಳಿಂದ 50,000ಕ್ಕಿಂತಲೂ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರಂತರ ಹಾಗೂ ಸಹಯೋಗದ ಪ್ರಯತ್ನಗಳ ಫಲಿತಾಂಶವಾಗಿದೆ.
ಭಾರತದ ಸಕ್ರಿಯ ಪ್ರಕರಣಗಳ ಹೊರೆಯಲ್ಲಿ ನಿರಂತರ ಕುಸಿತ ದಾಖಲಾಗಿದೆ. ದೇಶದ ಸಕ್ರಿಯ ಪ್ರಕರಣಗಳ ಹೊರೆ ಇಂದು 4,85,350 ರಷ್ಟಿದೆ.
ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳಲ್ಲಿ ನಿವ್ವಳ 10,183 ಪ್ರಕರಣಗಳಷ್ಟು ಕುಸಿತವಾಗಿದ್ದು, ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಕೇವಲ 1.59% ಮಾತ್ರ.
ಕೋವಿಡ್-19 ಸೋಂಕಿನಿಂದ ಹೆಚ್ಚಿನ ಜನರು ಚೇತರಿಸಿಕೊಳ್ಳುತ್ತಿರುವುದರಿಂದ, ಭಾರತದ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಗಿಂತಲೂ ದೈನಂದಿನ ಚೇತರಿಕೆಗಳ ಪ್ರಮಾಣ ಸತತ 52 ದಿನಗಳಿಂದ ಅಧಿಕ ಮಟ್ಟದಲ್ಲಿ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ 52,299 ಚೇತರಿಕೆಗಳು ದಾಖಲಾಗಿವೆ.
ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ 9,000 ಕ್ಕೂ ಹೆಚ್ಚು (9,228) ಚೇತರಿಕೆಗಳು ವರದಿಯಾಗಿವೆ.
ಸಾಂಕ್ರಾಮಿಕದ ಆರಂಭದಿಂದ ಇದುವರೆಗೂ ಕೋವಿಡ್-19 ಸೋಂಕಿಗೆ ಒಳಗಾದವರಲ್ಲಿ ಈಗಾಗಲೇ 2,96,58,078 ಜನರು ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 52,299 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದು ಒಟ್ಟಾರೆ 97.09% ಚೇತರಿಕೆ ದರವನ್ನು ಸೂಚಿಸುತ್ತದೆ ಮತ್ತು ಈ ದರದಲ್ಲಿ ನಿರಂತರ ಹೆಚ್ಚಳ ಪ್ರವೃತ್ತಿ ಮುಂದುವರಿದಿದೆ.
ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 18,38,490 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆಯಾಗಿ, ಭಾರತವು ಇದುವರೆಗೂ 41.82 ಕೋಟಿ(41,82,54,953) ಪರೀಕ್ಷೆಗಳನ್ನು ನಡೆಸಿದೆ.
ಒಂದಡೆ, ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿದ್ದರೂ, ಪ್ರಕರಣಗಳ ಸಾಪ್ತಾಹಿಕ ಪಾಸಿಟಿವಿಟಿಯಲ್ಲಿ ನಿರಂತರ ಕುಸಿತ ಕಂಡುಬರುತ್ತಿದೆ. ಸಾಪ್ತಾಹಿಕ ಪಾಸಿಟಿವಿಟಿ ದರವು ಪ್ರಸ್ತುತ 2.44% ರಷ್ಟಿದ್ದರೆ, ದೈನಂದಿನ ಪಾಸಿಟಿವಿಟಿ ದರವು ಇಂದು 2.34% ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಸತತ 27 ದಿನಗಳಿಂದ 5% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ
****
(Release ID: 1732686)
Visitor Counter : 277
Read this release in:
Tamil
,
Telugu
,
English
,
Urdu
,
Hindi
,
Marathi
,
Bengali
,
Punjabi
,
Gujarati
,
Odia
,
Malayalam