ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಶಿಕ್ಷಣ ಸಚಿವರು ನಾಳೆ ನಿಪುಣ್ ಭಾರತ್ ಅನ್ನು ಪ್ರಾರಂಭಿಸಲಿದ್ದಾರೆ

Posted On: 04 JUL 2021 12:14PM by PIB Bengaluru

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಚಿವಾಲಯವು ನಾಳೆ ಅಂದರೆ ಜುಲೈ 5, 2021ರಂದು ತಿಳುವಳಿಕೆ ಮತ್ತು ಸಂಖ್ಯಾಶಾಸ್ತ್ರದೊಂದಿಗೆ ಓದುವ  ಪ್ರಾವೀಣ್ಯತೆಗಾಗಿ ರಾಷ್ಟ್ರೀಯ ಉಪಕ್ರಮವನ್ನು ಪ್ರಾರಂಭಿಸುತ್ತದೆ. ಇದಕ್ಕೆ ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಚಾಲನೆ ನೀಡಲಿದ್ದಾರೆ.   ಈ ಕಾರ್ಯಕ್ರಮದಲ್ಲಿ ಎನ್ಐಪಿಯುಎನ್ ಭಾರತ್  (ನಿಪುಣ್ ಭಾರತ್) ಕುರಿತು ಕಿರು ವಿಡಿಯೋ, ಗೀತೆ ಮತ್ತು ಅನುಷ್ಠಾನ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಲಾಗುವುದು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಲಾ ಶಿಕ್ಷಣ ವಿಭಾಗದ ಹಿರಿಯ ಅಧಿಕಾರಿಗಳು, ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಂಸ್ಥೆಗಳ ಮುಖ್ಯಸ್ಥರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 


ಎನ್ಐಪಿಯುಎನ್ ಭಾರತ್ (ನಿಪುಣ್) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ, ಇದು ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಷ್ಠಾನಕ್ಕೆ ಕೈಗೊಂಡ ಕ್ರಮಗಳ ನಡುವೆ, ಜುಲೈ 29, 2020 ರಂದು ಬಿಡುಗಡೆಯಾಯಿತು.

2026-27ರ ವೇಳೆಗೆ 3 ನೇ ತರಗತಿಯ ಅಂತ್ಯದ ವೇಳೆಗೆ ಪ್ರತಿ ಮಗು  ಓದು, ಬರವಣಿಗೆ ಮತ್ತು ಸಂಖ್ಯಾಶಾಸ್ತ್ರದಲ್ಲಿ ಅಪೇಕ್ಷಿತ ಕಲಿಕೆಯ ಸಾಮರ್ಥ್ಯವನ್ನು ಸಾಧಿಸುವ ಸಲುವಾಗಿ, ತಳಹದಿಯ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಸಾರ್ವತ್ರಿಕ  ಜ್ಞಾನವನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸುವುದು ನಿಪುಣ್ ಭಾರತ್ ಮಿಷನ್ ನ ಗುರಿಯಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ನಿಪುಣ್ ಭಾರತ್ ಜಾರಿಗೆ ಬರಲಿದೆ ಮತ್ತು ಕೇಂದ್ರೀಯ ಪ್ರಾಯೋಜಿತ ಯೋಜನೆಯ ಆಶ್ರಯದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ-ರಾಜ್ಯ- ಜಿಲ್ಲಾ- ಬ್ಲಾಕ್- ಶಾಲಾ ಮಟ್ಟದಲ್ಲಿ ಐದು ಹಂತದ ‘ಸಮಗ್ರ ಶಿಕ್ಷಣ’ ದ ಅನುಷ್ಠಾನ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು.

***



(Release ID: 1732679) Visitor Counter : 238