ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದ ಕೋವಿಡ್-19 ಲಸಿಕೆ ಡೋಸ್ ನೀಡಿಕೆ ಪ್ರಮಾಣ 34.46 ಕೋಟಿಗೆ ಹೆಚ್ಚಳ


ಸತತ 6 ದಿನಗಳಿಂದ 50 ಸಾವಿರ ಮಟ್ಟದಿಂದ ಕೆಳಕ್ಕೆ ಇಳಿದ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ

97 ದಿನಗಳ ನಂತರ 5 ಲಕ್ಷ ಮಟ್ಟದಿಂದ ಕೆಳಕ್ಕೆ ತಗ್ಗಿದ ಸಕ್ರಿಯ ಪ್ರಕರಣಗಳ ಸಂಖ್ಯೆ

ನಿರಂತರ 26ನೇ ದಿನದಲ್ಲಿ 2.35%ಗೆ (5% ಮಟ್ಟದಿಂದ ಕೆಳಗೆ) ಇಳಿಕೆ ಕಂಡ ದೈನಂದಿನ ಪಾಸಿಟಿವಿಟಿ ದರ

Posted On: 03 JUL 2021 10:38AM by PIB Bengaluru

ಭಾರತದಲ್ಲಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ನಿನ್ನೆ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ದೇಶಾದ್ಯಂತ ಇದುವರೆಗೆ 45,60,088 ಆಂದೋಲನಗಳ (ಕಾರ್ಯಕ್ರಮಗಳು) ಮೂಲಕ 34 ಕೋಟಿ ಲಸಿಕಾ ಡೋಸ್ ಅಂದರೆ 34,46,11,291 ಲಸಿಕೆ ಡೋಸ್|ಗಳನ್ನು ಹಾಕಲಾಗಿದೆ. ಇಂದು ಬೆಳಗ್ಗೆ 7 ಗಂಟೆಗೆ ಲಭ್ಯವಾಗಿರುವ ತಾತ್ಕಾಲಿಕ ವರದಿಯಿಂದ ಇದು ತಿಳಿದುಬಂದಿದೆ. ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 43,99,298 ಲಸಿಕೆ ಡೋಸ್ ನೀಡಲಾಗಿದೆ.

ಈ ಕೆಳಗಿನ ಗುಂಪುಗಳು ಇದರಲ್ಲಿ ಸೇರಿವೆ.

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು 

ಮೊದಲ ಡೋಸ್

1,02,22,008

2ನೇ ಡೋಸ್ 

72,87,445

ಮುಂಚೂಣಿ ಕಾರ್ಯಕರ್ತರು 

ಮೊದಲ ಡೋಸ್ 

1,75,60,592

2ನೇ ಡೋಸ್ 

95,89,619

18-44 ವಯೋಮಾನದವರು

ಮೊದಲ ಡೋಸ್ 

9,64,91,993

2ನೇ ಡೋಸ್

23,80,048

45-59 ವಯೋಮಾನದವರು

ಮೊದಲ ಡೋಸ್ 

8,98,65,131

2ನೇ ಡೋಸ್ 

1,75,25,281

60 ವರ್ಷ ದಾಟಿದವರು

ಮೊದಲ ಡೋಸ್ 

6,86,03,725

2ನೇ ಡೋಸ್ 

2,50,85,449

ಒಟ್ಟು

34,46,11,291


ಕೋವಿಡ್-19 ಲಸಿಕಾ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ ಜೂನ್ 21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಕೋವಿಡ್-19 ಲಸಿಕೆ ಆಂದೋಲನದ ವ್ಯಾಪ್ತಿ ಹೆಚ್ಚಿಸಲು ಮತ್ತು ಅಭಿಯಾನಕ್ಕೆ ವೇಗ ನೀಡಲು ಬದ್ಧವಾಗಿದೆ.

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 44,111 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 

ಸತತ  ದಿನಗಳಿಂದ ದೇಶದಲ್ಲಿ 50 ಸಾವಿರಕ್ಕಿಂತ ಕಡಿಮೆ ಪ್ರಮಾಣದ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸುಸ್ಥಿರ ಮತ್ತು ಸಹಭಾಗಿತ್ವದ ಪ್ರಯತ್ನಗಳಿಂದಾಗಿ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿದೆ.

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಗಣನೀಯವಾಗಿ ತಗ್ಗುತ್ತಿದೆ. 97 ದಿನಗಳ ನಂತರ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5 ಲಕ್ಷ ಮಟ್ಟದಿಂದ ಕೆಳಕ್ಕೆ ಇಳಿದಿದ್ದು, ಅದೀಗ 4,95,533ಕ್ಕೆ ಇಳಿಕೆ ಕಂಡಿದೆ.

ಕಳೆದ 24 ತಾಸುಗಳಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 14,104ರಷ್ಟು ಇಳಿಕೆಯಾಗಿದೆ. ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಪ್ರಮಾಣ 1.62%ಗೆ ತಗ್ಗಿದೆ.

ಹೆಚ್ಚಿನ ಸಂಖ್ಯೆಯ ಜನರು ಕೋವಿಡ್-19 ಸೋಂಕಿನಿಂದ ಗುಣಮುಖರಾಗುತ್ತಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಸತತ 51 ದಿನಗಳಿಂದ ಭಾರತದ ದೈನಂದಿನ ಚೇತರಿಕೆ ಪ್ರಮಾಣವು ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಕೊರೊನಾ ಪ್ರಕರಣಗಳ ಪ್ರಮಾಣವನ್ನು ಹಿಂದಿಕ್ಕುತ್ತಿದೆ. ಕಳೆದ 24 ತಾಸುಗಳಲ್ಲೇ 57,477 ಸೋಂಕಿತರು ಗುಣಮುಖರಾಗಿದ್ದಾರೆ.

ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ, ಕಳೆದ 24 ತಾಸುಗಳಲ್ಲಿ 13,366 ಹೆಚ್ಚಿನ ಸೋಂಕಿತರು ಚೇತರಿಸಿಕೊಂಡಿರುವುದು ವಿಶೇಷ.  

ದೇಶದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದ ಇಲ್ಲಿಯ ತನಕ 2,96,05,779 ಜನರು ಈಗಾಗಲೇ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಚೇತರಿಕೆ ದರವೀಗ 97.06%ಗೆ ಸುಧಾರಣೆ ಕಂಡಿದೆ. ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಸುಸ್ಥಿರ ಏರಿಕೆ ಪ್ರವೃತ್ತಿ ಮುಂದುವರೆದಿದೆ.

ದೇಶಾದ್ಯಂತ ಗಂಟಲು ಮತ್ತು ಮೂಗು ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಕಳೆದ 24 ತಾಸುಗಳಲ್ಲೇ 18,76,036 ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೆ ದೇಶಾದ್ಯಂತ 41,64,16,463 ಪರೀಕ್ಷೆ(41.64 ಕೋಟಿ)ಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿರುವುದರಿಂದ, ವಾರದ ಪಾಸಿಟಿವಿಟಿ ದರ ನಿರಂತರ ಇಳಿಕೆ ಆಗುತ್ತಿರುವುದನ್ನು ಗಮನಿಸಬಹುದು. ಪ್ರಸ್ತುತ, ವಾರದ ಪಾಸಿಟಿವಿಟಿ ದರ 2.50% ಮತ್ತು ದೈನಂದಿನ ಪಾಸಿಟಿವಿಟಿ ದರ2.35%ಗೆ ಇಳಿದಿದೆ. ದೈನಂದಿನ ಪಾಸಿಟಿವಿಟ ದರ ಸತತ 26ನೇ ದಿನದಲ್ಲೂ 5% ಮಟ್ಟದಿಂದ ಕೆಳಗೆ ಇದ್ದು, ಇಳಿಕೆ ಪ್ರವೃತ್ತಿ ಮುಂದುವರೆದಿದೆ.

****



(Release ID: 1732521) Visitor Counter : 243