ಪ್ರಧಾನ ಮಂತ್ರಿಯವರ ಕಛೇರಿ

ಹೂಡಿಕೆ ಹೆಚ್ಚಳ ಮತ್ತು ಉದ್ಯಮ ವ್ಯವಹಾರ ಸುಧಾರಣೆಗೆ ಉತ್ತರ ಪ್ರದೇಶ ಸರ್ಕಾರ ನಡೆಸಿರುವ ಪ್ರಯತ್ನಗಳಿಗೆ ಪ್ರಧಾನಮಂತ್ರಿ ಶ್ಲಾಘನೆ

Posted On: 02 JUL 2021 8:10PM by PIB Bengaluru

ಹೂಡಿಕೆ ಹೆಚ್ಚಿಸಲು ಮತ್ತು ಸುಲಭವಾಗಿ ಉದ್ಯಮ ವ್ಯವಹಾರ ನಡೆಸಲು ಉತ್ತರ ಪ್ರದೇಶ ಸರ್ಕಾರ ಕಳೆದ 4 ವರ್ಷಗಳಿಂದ ಕೈಗೊಳ್ಳುತ್ತಾ ಬಂದಿರುವ ಸುಧಾರಣೆ ಕ್ರಮಗಳು ಮತ್ತು ಪ್ರಯತ್ನಗಳನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಕಾರ್ಯಾಲಯ ಮಾಡಿರುವ ಟ್ವೀಟ್|ಗೆ ಪ್ರತಿಕ್ರಿಯೆ ನೀಡಿರುವ ಅವರು, ಉತ್ತರ ಪ್ರದೇಶ ರಾಜ್ಯದ ಗ್ರಾಮೀಣ ಪ್ರದೇಶಗಳು ಮತ್ತು ಸಣ್ಣ ಪಟ್ಟಣಗಳಲ್ಲೂ ಸಹ ಹೂಡಿಕೆ ಹೆಚ್ಚಳ ಮತ್ತು ಉದ್ಯಮ ವ್ಯವಹಾರಗಳ ಸುಧಾರಣೆಗೆ ನಡೆಸಿರುವ ಪ್ರಯತ್ನಗಳು ಶ್ಲಾಘನೀಯ. ಗ್ರಾಮೀಣ ಭಾಗ ಮತ್ತು ಸಣ್ಣ ಪುಟ್ಟ ಪಟ್ಟಣಗಳು ಸಹ ಈ ಸಾಧನೆಗೆ ಸಾಕ್ಷಿಯಾಗಿವೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

***
 (Release ID: 1732483) Visitor Counter : 262