ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

33.28 ಕೋಟಿಗೆ ಏರಿದ ಭಾರತದ ಕೋವಿಡ್-19 ಲಸಿಕೆ ವ್ಯಾಪ್ತಿ


ಕಳೆದ 24 ಗಂಟೆಗಳಲ್ಲಿ 45,951 ಹೊಸ ಪ್ರಕರಣಗಳೊಂದಿಗೆ, ಭಾರತದ ಸಕ್ರಿಯ ಪ್ರಕರಣಗಳ ಹೊರೆಯು(5,37,064) ಒಟ್ಟು ಪ್ರಕರಣಗಳಲ್ಲಿ ಕೇವಲ 1.77% ರಷ್ಟಿದೆ

ಸತತ ಮೂರು ದಿನಗಳಿಂದ 50,000ಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ

ದೈನಂದಿನ ಪಾಸಿಟಿವಿಟಿ ದರ (2.34%) ಸತತ 23 ದಿನಗಳವರೆಗೆ 5% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ

Posted On: 30 JUN 2021 10:39AM by PIB Bengaluru

ಭಾರತದ ಒಟ್ಟಾರೆ ಲಸಿಕೆ ವ್ಯಾಪ್ತಿಯು ನಿನ್ನೆಗೆ 33 ಕೋಟಿ ದಾಟಿದೆ. ಇಂದು ಬೆಳಿಗ್ಗೆ 7 ಗಂಟೆಯವರೆಗೆ ತಾತ್ಕಾಲಿಕ ವರದಿಯ ಪ್ರಕಾರ, 44,33,853 ಸೆಷನ್‌ಗಳ ಮೂಲಕ ಒಟ್ಟು 33,28,54,527 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 36,51,983 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.  

ಇದರಲ್ಲಿ ಇವು ಸಹ ಸೇರಿವೆ:

ಆರೋಗ್ಯ ಕಾರ್ಯಕರ್ತರು

1ನೇ  ಡೋಸ್

1,02,08,162

2ನೇ  ಡೋಸ್

72,43,081

ಮುಂಚೂಣಿ ಕಾರ್ಯಕರ್ತರು

1ನೇ  ಡೋಸ್

1,74,84,539

2ನೇ  ಡೋಸ್

94,80,633

18-44 ವರ್ಷ ವಯೋಮಾನದವರು

1ನೇ  ಡೋಸ್

9,00,61,716

2ನೇ  ಡೋಸ್

20,87,331

45-59 ವರ್ಷ ವಯೋಮಾನದವರು

1ನೇ  ಡೋಸ್

8,82,70,464

2ನೇ  ಡೋಸ್

1,59,11,279

60 ವರ್ಷ ಮೀರಿದ ವಯೋಮಾನದವರು

1ನೇ  ಡೋಸ್

6,79,88,719

2ನೇ  ಡೋಸ್

2,41,18,603

ಒಟ್ಟು

33,28,54,527

ಕೋವಿಡ್-19 ಲಸಿಕೆಯ ಸಾರ್ವತ್ರಿಕೀಕರಣದ ಹೊಸ ಹಂತವು 2021ರ ಜೂನ್ 21ರಿಂದ ಪ್ರಾರಂಭವಾಯಿತು. ಕೋವಿಡ್-19 ಲಸಿಕೆಯ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಅದರ ವೇಗವನ್ನು ಹೆಚ್ಚಿಸಲು ಕೇಂದ್ರ ಸರಕಾರ ಬದ್ಧವಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 45,951 ಹೊಸ ಪ್ರಕರಣಗಳು ವರದಿಯಾಗಿವೆ.

ನಿರಂತರ  ಮೂರು  ದಿನಗಳಿಂದ 50,000 ಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು  ವರದಿಯಾಗಿವೆ.  ಇದು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರಂತರ ಹಾಗೂ ಸಹಯೋಗದ ಪ್ರಯತ್ನಗಳ ಫಲಿತಾಂಶವಾಗಿದೆ.

https://static.pib.gov.in/WriteReadData/userfiles/image/image00184E6.jpg

ಭಾರತದ ಸಕ್ರಿಯ ಪ್ರಕರಣಗಳ ಹೊರೆಯಲ್ಲಿ ನಿರಂತರ ಕುಸಿತವನ್ನು ಕಂಡು ಬಂದಿದೆ. ದೇಶದ ಸಕ್ರಿಯ ಪ್ರಕರಣಗಳ ಹೊರೆ ಇಂದು 5,37,064 ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ನಿವ್ವಳ 15,595 ರಷ್ಟು ಕಡಿಮೆಯಾಗಿದ್ದು, ದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳು ಪ್ರಮಾಣ ಈಗ ಕೇವಲ 1.77%  ಮಾತ್ರ.

https://static.pib.gov.in/WriteReadData/userfiles/image/image002Z10D.jpg

ಕೋವಿಡ್-19 ಸೋಂಕಿನಿಂದ ಹೆಚ್ಚಿನ ಜನರು ಚೇತರಿಸಿಕೊಳ್ಳುತ್ತಿರುವುದರಿಂದ, ಭಾರತದ ದೈನಂದಿನ ಚೇತರಿಕೆಗಳ ಸಂಖ್ಯೆಯು ಸತತ 48 ದಿನಗಳಿಂದ ದೈನಂದಿನ ಹೊಸ ಪ್ರಕರಣಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ 60,729  ಚೇತರಿಕೆಗಳು ದಾಖಲಾಗಿವೆ.

ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ 14,000 ಕ್ಕೂ ಹೆಚ್ಚು (14,778)  ಚೇತರಿಕೆಗಳು ವರದಿಯಾಗಿವೆ.

https://static.pib.gov.in/WriteReadData/userfiles/image/image003IGF1.jpg

ಸಾಂಕ್ರಾಮಿಕದ ಆರಂಭದಿಂದ ಇದುವರೆಗೂ ಕೋವಿಡ್-19 ಸೋಂಕಿಗೆ ಒಳಗಾದವರ ಪೈಕಿ ಈಗಾಗಲೇ 2,94,27,330 ಜನರು ಚೇತರಿಸಿಕೊಂಡಿದ್ದಾರೆ  ಮತ್ತು ಕಳೆದ 24 ಗಂಟೆಗಳಲ್ಲಿ 60,729 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದು ಒಟ್ಟಾರೆ 96.92% ಚೇತರಿಕೆ ದರವನ್ನು ಸೂಚಿಸುತ್ತದೆ ಹಾಗೂ ಚೇತರಿಕೆ ದರದಲ್ಲಿ ಸತತ ಏರಿಕೆ ಪ್ರವೃತ್ತಿ ಮುಂದುವರಿದಿದೆ.

https://static.pib.gov.in/WriteReadData/userfiles/image/image00429TC.jpg

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 19,60,757 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆಯಾಗಿ, ಭಾರತದಲ್ಲಿ ಇಲ್ಲಿಯವರೆಗೆ 41.01 ಕೋಟಿ(41,01,00,044)ಪರೀಕ್ಷೆಗಳನ್ನು ನಡೆಸಲಾಗಿದೆ.

ಒಂದೆಡೆ, ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿದ್ದರೂ, ಸಾಪ್ತಾಹಿಕ ಪ್ರಕರಣಗಳ ಪಾಸಿಟಿವಿಟಿಯಲ್ಲಿ ನಿರಂತರ ಕುಸಿತ ಕಂಡು ಬರುತ್ತಿದೆ. ಸಾಪ್ತಾಹಿಕ ಪಾಸಿಟಿವಿಟಿ ದರವು ಪ್ರಸ್ತುತ 2.69% ರಷ್ಟಿದ್ದರೆ,  ದೈನಂದಿನ ಪಾಸಿಟಿವಿಟಿ ದರವು ಇಂದು 2.34% ರಷ್ಟಿದೆ. ಇದು ಈಗ ಸತತ 23 ದಿನಗಳಿಂದ ಶೇ. 5ಕ್ಕಿಂತಲೂ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ.

https://static.pib.gov.in/WriteReadData/userfiles/image/image0058WFO.jpg 

***


(Release ID: 1731403) Visitor Counter : 306