ಪ್ರಧಾನ ಮಂತ್ರಿಯವರ ಕಛೇರಿ

ವಿತ್ತ ಸಚಿವರು ಘೋಷಿಸಿದ ಕ್ರಮಗಳ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ


ವೈದ್ಯಕೀಯ ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ

ಮಕ್ಕಳಿಗೆ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವತ್ತ ವಿಶೇಷ ಗಮನ

ರೈತರು, ಸಣ್ಣ ಉದ್ಯಮಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ವಿಧದ ಉಪಕ್ರಮಗಳು

ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು, ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಹಾಗೂ ಉದ್ಯೋಗವಕಾಶ ಸೃಷ್ಟಿಗೆ ಈ ಕ್ರಮಗಳು ಸಹಾಯ ಮಾಡುತ್ತವೆ: ಪ್ರಧಾನಿ

ಈ ಕ್ರಮಗಳು ಸುಧಾರಣೆ ವಿಚಾರದಲ್ಲಿ ನಮ್ಮ ಸರಕಾರದ ನಿರಂತರ ಬದ್ಧತೆಯನ್ನು ಪ್ರದರ್ಶಿಸುತ್ತವೆ: ಪ್ರಧಾನಿ

Posted On: 28 JUN 2021 7:14PM by PIB Bengaluru

ವಿತ್ತ ಸಚಿವರು ಇಂದು ಘೋಷಿಸಿರುವ ಕ್ರಮಗಳು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು, ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಹಾಗೂ ಉದ್ಯೋಗ ಸೃಷ್ಟಿಸಲು ಸಹಾಯ ಮಾಡುತ್ತವೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಆರೋಗ್ಯ ರಕ್ಷಣೆ, ಮಕ್ಕಳ ಆರೋಗ್ಯ ಸೇವೆ ಸೌಲಭ್ಯಗಳು, ರೈತರು, ಸಣ್ಣ ಉದ್ಯಮಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಅವರು ಒತ್ತಿ ಹೇಳಿದರು.

ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿರುವ ಪ್ರಧಾನಿ,

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಅವರು ಘೋಷಿಸಿದ ಕ್ರಮಗಳು ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ವೃದ್ಧಿಗೆ ದಾರಿ ಮಾಡಲಿವೆ. ವಿಶೇಷವಾಗಿ ಇಂತಹ ಸೌಲಭ್ಯಗಳಿಂದ ವಂಚಿತವಾಗಿರುವ ಪ್ರದೇಶಗಳಿಗೆ ನೆರವಾಗಲಿವೆ. ವೈದ್ಯಕೀಯ ಮೂಲಸೌಕರ್ಯಗಳಲ್ಲಿ ಖಾಸಗಿ ಹೂಡಿಕೆ ಹೆಚ್ಚಳ ಮತ್ತು ಪ್ರಮುಖ ಮಾನವ ಸಂಪನ್ಮೂಲವನ್ನು ಕ್ರಮಗಳು ವೃದ್ಧಿಸುತ್ತವೆ. ನಮ್ಮ ಮಕ್ಕಳ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವತ್ತ ವಿಶೇಷ ಗಮನ ಹರಿಸಲಾಗಿದೆ.

ನಮ್ಮ ರೈತರಿಗೆ ಸಹಾಯ ಮಾಡಲು ಮಹತ್ವ ನೀಡಲಾಗಿದೆ. ಅವರ ವೆಚ್ಚವನ್ನು ಕಡಿಮೆ ಮಾಡಿ, ಆದಾಯವನ್ನು ಹೆಚ್ಚಿಸುವಂತಹ ಹಾಗೂ ಕೃಷಿ ಚಟುವಟಿಕೆಗಳ ನಿರಂತರತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವ ಅನೇಕ ಉಪಕ್ರಮಗಳನ್ನು ಘೋಷಿಸಲಾಗಿದೆ.

ನಮ್ಮ ಸಣ್ಣ ಉದ್ಯಮಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಅವರ ವ್ಯಾಪಾರ ಚಟುವಟಿಕೆಗಳನ್ನು ಉಳಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಮತ್ತು ಅವುಗಳನ್ನು ಇನ್ನಷ್ಟು ವಿಸ್ತರಿಸಲು ಹೆಚ್ಚಿನ ಬೆಂಬಲವನ್ನು ಘೋಷಿಸಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದವರಿಗೆ ಸಹಾಯ ಹಸ್ತ ಚಾಚಲು ಹಣಕಾಸಿನ ನೆರವು ಸೇರಿದಂತೆ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.

ಕ್ರಮಗಳು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು, ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಮತ್ತು ಉದ್ಯೋಗ ಸೃಷ್ಟಿಗೆ ಸಹಾಯ ಮಾಡುತ್ತವೆ. ಫಲಿತಾಂಶ ಆಧರಿತ ವಿದ್ಯುತ್ ವಿತರಣಾ ಯೋಜನೆ; ಪಿಪಿಪಿ ಯೋಜನೆಗಳು ಮತ್ತು ಆಸ್ತಿ ನಗದೀಕರಣದಂತಹ ಸುವ್ಯವಸ್ಥಿತ ಪ್ರಕ್ರಿಯೆಗಳ ಸುಧಾರಣೆಗಳಿಗೆ ನಮ್ಮ ಸರಕಾರದ ನಿರಂತರ ಬದ್ಧತೆಯನ್ನು ಪ್ರದರ್ಶಿಸುತ್ತವೆ.ಎಂದು ಹೇಳಿದ್ದಾರೆ.

 

ಪ್ಯಾಕೇಜ್ಕುರಿತು ವಿತ್ತ ಸಚಿವಾಲಯದ ಪ್ರಕಟಣೆಯನ್ನು ಇಲ್ಲಿನೋಡಬಹುದು:

https://pib.gov.in/PressReleseDetail.aspx?PRID=1730963

***



(Release ID: 1731040) Visitor Counter : 258