ಪ್ರಧಾನ ಮಂತ್ರಿಯವರ ಕಛೇರಿ

ಮಾಜಿ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್ ಅವರ 100ನೇ ಜನ್ಮದಿನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಗೌರವ ನಮನ

प्रविष्टि तिथि: 28 JUN 2021 9:32AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಜಿ ಪ್ರಧಾನ ಮಂತ್ರಿ ದಿವಂಗತ ಶ್ರೀ ನರಸಿಂಹರಾವ್ ಜೀ ಅವರ 100ನೇ ಜನ್ಮ ದಿನದ ಅಂಗವಾಗಿ ಗೌರವ ನಮನ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ನರೇಂದ್ರ ಮೋದಿ ಅವರು, “ಮಾಜಿ ಪ್ರಧಾನಿ ದಿವಂಗತ ಶ್ರೀ ಪಿ.ವಿ. ನರಸಿಂಹರಾವ್ ಜೀ ಅವರಿಗೆ 100ನೇ ಜನ್ಮದಿನದ ಶುಭಾಶಯಗಳು. ದೇಶದ ಅಭಿವೃದ್ಧಿ ಮತ್ತು ಏಳಿಗೆಗೆ ನರಸಿಂಹರಾವ್ ಅವರು ನೀಡಿರುವ ವಿಶಿಷ್ಟ ಮತ್ತು ವಿಸ್ತೃತ ಕೊಡುಗೆಗಳನ್ನು ಇಡೀ ದೇಶವೇ ಸ್ಮರಿಸುತ್ತಿದೆ ನೆನಪಿಸಿಕೊಳ್ಳುತ್ತಿದೆ. ಅವರು ಅಪಾರ ಜ್ಞಾನ ಮತ್ತು ಬುದ್ಧಿಶಕ್ತಿ ಹೊಂದಿದ್ದರು.

ಅವರ ಬಗ್ಗೆ ಆಡಿರುವ ಮಾತುಗಳನ್ನು ನಾನು ಕಳೆದ ವರ್ಷ ಜೂನ್|ನಲ್ಲಿ ನಡೆದ ರೇಡಿಯೊ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್ (#MannKiBaat)ನಲ್ಲಿ ಹಂಚಿಕೊಂಡಿದ್ದೇನೆ.”

 


***


(रिलीज़ आईडी: 1730819) आगंतुक पटल : 348
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam