ಹಣಕಾಸು ಸಚಿವಾಲಯ

ಅನುಸರಣೆಗಳ ವೇಳಾಪಟ್ಟಿಯಲ್ಲಿ ಸರ್ಕಾರವು ಮತ್ತಷ್ಟು ವಿಸ್ತರಣೆಯನ್ನು ನೀಡಿದೆ


ಕೋವಿಡ್ 19 ಚಿಕಿತ್ಸೆಯ ವೆಚ್ಚಕ್ಕೆ ಮತ್ತು ಕೋವಿಡ್-19ರಿಂದಾಗಿ ಸಾವು ಸಂಭವಿಸಿ ಪಡೆದ ಅನುಗ್ರಹ ಪೂರ್ವಕ ಪಾವತಿಗೆ  ತೆರಿಗೆ ವಿನಾಯಿತಿಯನ್ನು ಘೋಷಿಸಿದೆ

Posted On: 25 JUN 2021 6:51PM by PIB Bengaluru

ಆದಾಯ ತೆರಿಗೆ ಕಾಯ್ದೆಯಡಿ ಅನುಸರಣೆಗಳ ಸಮಯವನ್ನು ಇನ್ನಷ್ಟು ವಿಸ್ತರಿಸಲು ಸರ್ಕಾರ ಅನುಮತಿ ನೀಡಿದೆ. ಕೋವಿಡ್ 19 ಚಿಕಿತ್ಸೆಯ ವೆಚ್ಚಕ್ಕೆ ಮತ್ತು ಕೋವಿಡ್-19ರಿಂದಾಗಿ ಸಾವು ಸಂಭವಿಸಿ ಪಡೆದ ಅನುಗ್ರಹ ಪೂರ್ವಕ ಪಾವತಿಗೆ (ಎಕ್ಸ್-ಗ್ರೇಷಿಯಾ) ತೆರಿಗೆ ವಿನಾಯಿತಿಯನ್ನು ಘೋಷಿಸಿದೆ. ಅದರ ವಿವರಗಳು ಹೀಗಿವೆ:

. ತೆರಿಗೆ ವಿನಾಯಿತಿ

  1. ಕೋವಿಡ್ -19 ಚಿಕಿತ್ಸೆಗಾಗಿ ಮಾಡಿದ ಖರ್ಚುಗಳನ್ನು ನಿಭಾಯಿಸಲು  ಅನೇಕ ತೆರಿಗೆದಾರರು ತಮ್ಮ ಉದ್ಯೋಗದಾತರು ಮತ್ತು ಹಿತೈಷಿಗಳಿಂದ ಹಣಕಾಸಿನ ಸಹಾಯವನ್ನು ಪಡೆದಿದ್ದಾರೆ. ಇದರಿಂದಾಗಿ ಯಾವುದೇ ಆದಾಯ ತೆರಿಗೆ ಹೊರೆಯು ಉದ್ಭವಿಸಬಾರದು ಎನ್ನುವುದನ್ನು  ಖಚಿತಪಡಿಸಿಕೊಳ್ಳಲು, 2019-20 ಹಣಕಾಸು ವರ್ಷದ ಅವಧಿಯಲ್ಲಿ ಮತ್ತು ನಂತರದ ವರ್ಷಗಳಲ್ಲಿ ಕೋವಿಡ್ -19 ಚಿಕಿತ್ಸೆಗಾಗಿ ಉದ್ಯೋಗದಾತರಿಂದ ಅಥವಾ ಯಾವುದೇ ವ್ಯಕ್ತಿಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಪಡೆದ ಮೊತ್ತಕ್ಕೆ ಆದಾಯ ತೆರಿಗೆ ವಿನಾಯಿತಿಯನ್ನು ನೀಡಲು ನಿರ್ಧರಿಸಲಾಗಿದೆ.   
  2. ದುರದೃಷ್ಟವಶಾತ್, ಕೋವಿಡ್-19ರಿಂದಾಗಿ ಕೆಲವು ತೆರಿಗೆದಾರರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಂತಹ ತೆರಿಗೆದಾರರ ಉದ್ಯೋಗದಾತರು ಮತ್ತು ಹಿತೈಷಿಗಳು ಕುಟುಂಬದ ಸದಸ್ಯರಿಗೆ ಹಣಕಾಸಿನ ನೆರವು ನೀಡಿದ್ದು, ಇದರಿಂದಾಗಿ ಕುಟುಂಬದ ಆಸರೆಯಾಗಿರುವ ಸದಸ್ಯರ ಹಠಾತ್ ನಿಧನದಿಂದಾಗಿ ಉಂಟಾಗುವ ತೊಂದರೆಗಳನ್ನು ನಿಭಾಯಿಸಬಹುದು. ಅಂತಹ ತೆರಿಗೆ ಪಾವತಿದಾರರ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವ ಸಲುವಾಗಿ, ಸಂಬಂಧಪಟ್ಟ   ವ್ಯಕ್ತಿಯ ಕುಟುಂಬ ಸದಸ್ಯರು ಅಂತಹ ವ್ಯಕ್ತಿಯ ಮರಣದ ನಂತರ ಉದ್ಯೋಗದಾತರಿಂದ ಅಥವಾ ಇತರರಿಂದ ಪಡೆದ ಅನುಗ್ರಹಪೂರ್ವಕ ಪಾವತಿಗೆ ಆದಾಯ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. 2019-20ನೇ ಹಣಕಾಸು ವರ್ಷಮತ್ತು ನಂತರದ ವರ್ಷಗಳಲ್ಲಿ ಕೋವಿಡ್-19ರಿಂದಾಗಿ  ವ್ಯಕ್ತಿ. ಉದ್ಯೋಗದಾತರಿಂದ ಪಡೆದ ಮೊತ್ತಕ್ಕೆ ಯಾವುದೇ ಮಿತಿಯಿಲ್ಲದೆ ವಿನಾಯಿತಿಯನ್ನು ಅನುಮತಿಸಲಾಗುವುದು ಮತ್ತು ಇತರ ಯಾವುದೇ ವ್ಯಕ್ತಿಗಳಿಂದ ಒಟ್ಟು 10 ಲಕ್ಷ ರೂಪಾಯಿಗಳವರೆಗೆ ಪಡೆದ ಮೊತ್ತಕ್ಕೆ ವಿನಾಯಿತಿಯನ್ನು ಸೀಮಿತಗೊಳಿಸಲಾಗಿದೆ.

ಮೇಲಿನ ನಿರ್ಧಾರಗಳಿಗೆ ಅಗತ್ಯವಾದ ಶಾಸಕಾಂಗ ತಿದ್ದುಪಡಿಗಳನ್ನು ಸರಿಯಾದ ಸಮಯಕ್ಕೆ ಪ್ರಸ್ತಾಪಿಸಲಾಗುವುದು.

ಬಿ. ಅನುಸರಣೆಗಳ ವೇಳಾಪಟ್ಟಿಯಲ್ಲಿ ಮತ್ತಷ್ಟು ವಿಸ್ತರಣೆ

ಕೋವಿಡ್-19 ಸಾಂಕ್ರಾಮಿಕದಿಂದಾಗಿ, ತೆರಿಗೆದಾರರು ಕೆಲವು ತೆರಿಗೆ ಅನುಸರಣೆಗಳನ್ನು ಪೂರೈಸುವಲ್ಲಿ ಮತ್ತು ವಿವಿಧ ನೋಟಿಸ್ಗಳಿಗೆ ಪ್ರತಿಕ್ರಿಯೆ ಸಲ್ಲಿಸುವಲ್ಲಿ ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ತೆರಿಗೆದಾರರು ಮಾಡಬೇಕಾದ ಅನುಸರಣೆಗಳನ್ನು  ಸರಾಗಗೊಳಿಸುವ ಸಲುವಾಗಿ, ಅಧಿಸೂಚನೆಗಳ ಸಂಖ್ಯೆ 74/2021 ಮತ್ತು 75/2021 ದಿನಾಂಕ 25 ಜೂನ್, 2021   ಮತ್ತು ಸುತ್ತೋಲೆ ಸಂಖ್ಯೆ 12/2021 ದಿನಾಂಕ ಜೂನ್ 25,2021 ಮೂಲಕ ಪರಿಹಾರಗಳನ್ನು ನೀಡಲಾಗುತ್ತಿದೆ.   ಪರಿಹಾರಗಳು ಹೀಗಿವೆ:

  1. ಆದಾಯ ತೆರಿಗೆ ಕಾಯ್ದೆ, 1961 ಸೆಕ್ಷನ್ 144 ಸಿ ಅಡಿಯಲ್ಲಿ ವಿವಾದ ಪರಿಹಾರ ಸಮಿತಿ (ಡಿಆರ್ಪಿ) ಮತ್ತು ಮೌಲ್ಯಮಾಪನ ಅಧಿಕಾರಿಯ ಆಕ್ಷೇಪಣೆಗಳು (ಇನ್ನು ಮುಂದೆ ಇದನ್ನುಆಕ್ಟ್ಎಂದು ಕರೆಯಲಾಗುತ್ತದೆ) ಇದಕ್ಕಾಗಿ ವಿಭಾಗದ ಅಡಿಯಲ್ಲಿ ಸಲ್ಲಿಸುವ ಕೊನೆಯ ದಿನಾಂಕ ಜೂನ್ 1, 2021 ಅಥವಾ ಅದರ ನಂತರ, ವಿಭಾಗದಲ್ಲಿ ಒದಗಿಸಿದ ಸಮಯದೊಳಗೆ ಅಥವಾ 2021 ಆಗಸ್ಟ್ 31 ರೊಳಗೆ ಯಾವುದು ನಂತರದದಾದರೂ ಸಲ್ಲಿಸಬಹುದು.
  2. ಆದಾಯ ತೆರಿಗೆ ನಿಯಮಗಳು, 1962 ನಿಯಮ 31 ಅಡಿಯಲ್ಲಿ 2021 ಮೇ 31 ರಂದು ಅಥವಾ ಅದಕ್ಕೂ ಮೊದಲು ಒದಗಿಸಬೇಕಾದ 2020-21 ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದ ತೆರಿಗೆಯನ್ನು ಕಡಿತಗೊಳಿಸುವ ವಿವರಗಳನ್ನು (“ನಿಯಮಗಳು"), 2021 ಜೂನ್ 30 ರವರೆಗೆ ವಿಸ್ತರಿಸಿದ್ದುಇದರ ಬದಲಾಗಿ ಸುತ್ತೋಲೆ ಸಂಖ್ಯೆ 9ರಲ್ಲಿ ತಿಳಿಸಿದಂತೆ ದಿನಾಂಕ ಜುಲೈ 15,2021 ಅಥವಾ ಅದಕ್ಕೂ ಮೊದಲು ಒದಗಿಸಬಹುದು.
  3. ಫಾರ್ಮ್ ನಂ .16 ರಲ್ಲಿ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ ಪ್ರಮಾಣಪತ್ರವನ್ನು 2021 ಜೂನ್ 15 ರೊಳಗೆ ನಿಯಮ 31 ಅಡಿಯಲ್ಲಿ ಸುತ್ತೋಲೆ ಸಂಖ್ಯೆ 9 ಪ್ರಕಾರ ಜುಲೈ 15 2021ರವರೆಗೆ ಬದಲಾಗಿ  ಜುಲೈ 31, 2021 ಅಥವಾ ಅದಕ್ಕೂ ಮೊದಲು ಸಲ್ಲಿಸಬೇಕು.
  4.  ಹಿಂದಿನ ವರ್ಷ 2020-21 ಫಾರ್ಮ್ ನಂ.64 ಡಿ ಯಲ್ಲಿ ಹೂಡಿಕೆ ನಿಧಿಯಿಂದ ಪಾವತಿಸಿದ ಅಥವಾ ಜಮಾ ಮಾಡಿದ ಆದಾಯದ ಹೇಳಿಕೆ, ನಿಯಮಗಳ 12 ಸಿಬಿ ಅಡಿಯಲ್ಲಿ 2021 ಜೂನ್ 15 ರಂದು ಅಥವಾ ಮೊದಲು ಒದಗಿಸಬೇಕಾಗಿತ್ತು, ಇದನ್ನು ಸುತ್ತೋಲೆ ಸಂಖ್ಯೆ 9 ಪ್ರಕಾರ 30 ನೇ ಜೂನ್, 2021 ವರೆಗು  ಬದಲಾಗಿ  ಜುಲೈ 15 2021  ಅಥವಾ ಅದಕ್ಕೂ ಮೊದಲು ಸಲ್ಲಿಸಬೇಕು.
  5. ಹಿಂದಿನ ವರ್ಷ 2020-21 ಫಾರ್ಮ್ ಸಂಖ್ಯೆ 64 ಸಿ ಯಲ್ಲಿ ಹೂಡಿಕೆ ನಿಧಿಯಿಂದ ಪಾವತಿಸಿದ ಅಥವಾ ಜಮಾ ಮಾಡಿದ ಆದಾಯದ ಹೇಳಿಕೆ, ನಿಯಮಗಳ 12 ಸಿಬಿ ಅಡಿಯಲ್ಲಿ ಜೂನ್ 30 2021 ರಂದು ಅಥವಾ ಮೊದಲು ಒದಗಿಸಬೇಕಾಗಿದೆ, ಇದನ್ನು ಸುತ್ತೋಲೆ ಸಂಖ್ಯೆ 9 ಪ್ರಕಾರ 15 ಜುಲೈ, 2021ರವರೆಗೆ ವಿಸ್ತರಿಸಿದಂತೆ  ಈಗ ಜುಲೈ31 ರಂದು ಅಥವಾ ಮೊದಲು ಸಲ್ಲಿಸಬಹುದು.
  6. ನೋಂದಣಿ / ತಾತ್ಕಾಲಿಕ ನೋಂದಣಿ / ಮಾಹಿತಿ / ಫಾರ್ಮ್ ಸಂಖ್ಯೆ 10 / ಫಾರ್ಮ್ ನಂ .10 ಎಬಿ ಯಲ್ಲಿ ಕಾಯ್ದೆಯ ಸೆಕ್ಷನ್ 10 (23 ಸಿ), 12 ಎಬಿ, 35 (1) (ii) /(ii) / (iii) ಮತ್ತು 80 ಜಿ ಅಡಿಯಲ್ಲಿ ಅರ್ಜಿ ಸಲ್ಲಿಸಿದವರು  2021 ಜೂನ್ 30 ರಂದು ಅಥವಾ ಅದಕ್ಕೂ ಮೊದಲು ಟ್ರಸ್ಟ್ಗಳು / ಸಂಸ್ಥೆಗಳು / ಸಂಶೋಧನಾ ಸಂಘಗಳು ಇತ್ಯಾದಿಗಳ ಮಾಡಬೇಕಾದ ಅನುಮೋದನೆ / ತಾತ್ಕಾಲಿಕ ಅನುಮೋದನೆಯನ್ನು, ಆಗಸ್ಟ್ 31, 2021ರಂದು ಅಥವಾ ಮೊದಲು ಮಾಡಬಹುದಾಗಿದೆ.
  7.  ಕಾಯಿದೆಯ ಸೆಕ್ಷನ್ 54 ರಿಂದ 54ಜಿಬಿಯಲ್ಲಿರುವ ನಿಬಂಧನೆಗಳ ಅಡಿಯಲ್ಲಿ ಯಾವುದೇ ವಿನಾಯಿತಿ ಪಡೆಯುವ ಉದ್ದೇಶದಿಂದ ತೆರಿಗೆ ಪಾವತಿದಾರರು ಹೂಡಿಕೆ, ಠೇವಣಿ, ಪಾವತಿ, ಸ್ವಾಧೀನ, ಖರೀದಿ, ನಿರ್ಮಾಣ ಅಥವಾ ಇತರ ಯಾವುದೇ ಕ್ರಿಯೆಯನ್ನು, ಯಾವ ಹೆಸರಿನಿಂದ ಕರೆದರೂ, ಅದಕ್ಕಾಗಿ ಕೊನೆಯ ದಿನಾಂಕ 2021 ಏಪ್ರಿಲ್ 1 ರಿಂದ 2021 ಸೆಪ್ಟೆಂಬರ್ 29 ರವರೆಗೆ ಬರುತ್ತದೆ (ಎರಡೂ ದಿನಗಳು ಸೇರಿ), ಇದನ್ನು ಸೆಪ್ಟೆಂಬರ್ 30 2021 ರಂದು ಅಥವಾ ಅದಕ್ಕೂ ಮೊದಲು ಪೂರ್ಣಗೊಳಿಸಬಹುದು.
  8. ಜೂನ್ 30, 2021ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಪಾವತಿಗಳಿಗೆ ಸಂಬಂಧಿಸಿದಂತೆ ಅಧಿಕೃತ ವಿತರಕರಿಂದ ನೀಡಬೇಕಾದ ಫಾರ್ಮ್ ಸಂಖ್ಯೆ 15ಸಿಸಿ ಯಲ್ಲಿನ ತ್ರೈಮಾಸಿಕ ಹೇಳಿಕೆ, ನಿಯಮಗಳ 37 ಬಿಬಿ ಅಡಿಯಲ್ಲಿ ಜುಲೈ 15 2021 ರಂದು ಅಥವಾ ಮೊದಲು ಒದಗಿಸಬೇಕಾಗಿರುವುದನ್ನು  ಜುಲೈ 31 2021ರಂದು ಅಥವಾ ಮೊದಲು ಒದಗಿಸಬಹುದಾಗಿದೆ.
  9. 2021 ಜೂನ್ 30 ರಂದು ಅಥವಾ ಅದಕ್ಕೂ ಮೊದಲು ಸಲ್ಲಿಸಬೇಕಾದ 2020-21 ಹಣಕಾಸು ವರ್ಷದ ಫಾರ್ಮ್ ಸಂಖ್ಯೆ 1 ರಲ್ಲಿನ  ಈಕ್ವಲೈಸೇಷನ್ ಲೆವಿ ಸ್ಟೇಟ್ ಮೆಂಟ್ ಅನ್ನು  2021 ಜುಲೈ 31 ರಂದು ಅಥವಾ ಅದಕ್ಕೂ ಮೊದಲು ಸಲ್ಲಿಸಬಹುದು.
  10.  2020-21 ಹಣಕಾಸು ವರ್ಷಕ್ಕೆ ಫಾರ್ಮ್ ಸಂಖ್ಯೆ 3 ಸಿಇಕೆ ಯಲ್ಲಿ ಅರ್ಹ ಹೂಡಿಕೆ ನಿಧಿಯಿಂದ ಕಾಯಿದೆಯ ಸೆಕ್ಷನ್ 9 ಉಪವಿಭಾಗ (5) ಅಡಿಯಲ್ಲಿ ವಾರ್ಷಿಕ ಹೇಳಿಕೆಯನ್ನು ನೀಡಬೇಕಾಗಿದೆ, ಇದನ್ನು ಜೂನ್ 29ರಂದು ಅಥವಾ ಮೊದಲು ಸಲ್ಲಿಸಬೇಕಾಗುತ್ತಿತ್ತು. ಈಗ ಇದನ್ನು ಜುಲೈ 31, 2021ರಂದು ಅಥವಾ ಮೊದಲು ಸಲ್ಲಿಸಬಹುದು.
  11.  2021 ಜೂನ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಫಾರ್ಮ್ ಸಂಖ್ಯೆ 15 ಜಿ / 15 ಹೆಚ್ನಲ್ಲಿ ಸ್ವೀಕರಿಸುವವರಿಂದ ಪಡೆದ ಘೋಷಣೆಗಳನ್ನು 2021 ಜುಲೈ 15 ರಂದು ಅಥವಾ ಮೊದಲು ಅಪ್ಲೋಡ್ ಮಾಡುವುದನ್ನು, ಆಗಸ್ಟ್ 31  2021ರೊಳಗೆ ಅಪ್ಲೋಡ್ ಮಾಡಬಹುದು.
  12.  ಫಾರ್ಮ್ ಸಂಖ್ಯೆ 34 ಬಿಬಿ ಯಲ್ಲಿ ಕಾಯಿದೆಯ ಸೆಕ್ಷನ್ 245 ಎಂ ಉಪವಿಭಾಗ (1) ಅಡಿಯಲ್ಲಿ ಬಾಕಿ ಇರುವ ಅರ್ಜಿಯನ್ನು ಹಿಂಪಡೆಯುವ ಆಯ್ಕೆಯನ್ನು (ಹಿಂದಿನ ಆದಾಯ ತೆರಿಗೆ ಇತ್ಯರ್ಥ ಆಯೋಗದ ಮುಂದೆ ಸಲ್ಲಿಸಲಾಗಿರುವ), ಇದನ್ನು 2021 ಜೂನ್ 27 ರಂದು ಅಥವಾ ಮೊದಲು ಮಾಡಬೇಕಾಗುರುವುದನ್ನು ಈಗ 2021 ಜುಲೈ 31 ರಂದು ಅಥವಾ ಅದಕ್ಕೂ ಮೊದಲು ಮಾಡಬಹುದು.
  13.  ಕಾಯಿದೆಯ ಸೆಕ್ಷನ್ 139 ಎಎ ಅಡಿಯಲ್ಲಿ ಪ್ಯಾನ್ನೊಂದಿಗೆ ಆಧಾರ್ ಜೋಡಿಸುವ  ಕೊನೆಯ ದಿನಾಂಕವನ್ನು ಮೊದಲು ಜೂನ್ 30 ಕ್ಕೆ ವಿಸ್ತರಿಸಲಾಯಿತು,  ಈಗ ಸೆಪ್ಟೆಂಬರ್ 30, 2021 ಕ್ಕೆ ವಿಸ್ತರಿಸಲಾಗಿದೆ.
  14.  ವಿವಾದ್ ಸೆ ವಿಶ್ವಾಸ್ (ಹೆಚ್ಚುವರಿ ಮೊತ್ತವಿಲ್ಲದೆ) ಅಡಿಯಲ್ಲಿ ಮೊತ್ತವನ್ನು ಪಾವತಿಸುವ ಕೊನೆಯ ದಿನಾಂಕವನ್ನು ಮೊದಲು 2021 ಜೂನ್ 30 ಕ್ಕೆ ವಿಸ್ತರಿಸಲಾಗಿತ್ತು, ಇದನ್ನು 2021 ಆಗಸ್ಟ್ 31 ಕ್ಕೆ ವಿಸ್ತರಿಸಲಾಗಿದೆ.
  15.  ವಿವಾದ್ ಸೆ ವಿಶ್ವಾಸ್ (ಹೆಚ್ಚುವರಿ ಮೊತ್ತದೊಂದಿಗೆ) ಅಡಿಯಲ್ಲಿ ಮೊತ್ತವನ್ನು ಪಾವತಿಸುವ ಕೊನೆಯ ದಿನಾಂಕವನ್ನು ಅಕ್ಟೋಬರ್ 31, 2021 ಎಂದು ತಿಳಿಸಲಾಗಿದೆ.
  16.  ಮೌಲ್ಯಮಾಪನ ಆದೇಶವನ್ನು ರವಾನಿಸುವ ಸಮಯ ಮಿತಿಯನ್ನು ಮೊದಲು 2021 ಜೂನ್ 30ಕ್ಕೆ ವಿಸ್ತರಿಸಲಾಯಿತು. ಈಗ ಇದನ್ನು 2021 ಸೆಪ್ಟೆಂಬರ್ 30 ಕ್ಕೆ ವಿಸ್ತರಿಸಲಾಗಿದೆ..
  17.  ಪೆನಾಲ್ಟಿ ಆದೇಶವನ್ನು ರವಾನಿಸುವ ಸಮಯ ಮಿತಿಯನ್ನು ಮೊದಲು 2021 ಜೂನ್ 30 ಕ್ಕೆ ವಿಸ್ತರಿಸಲಾಯಿತು. ಇದನ್ನು 2021 ಸೆಪ್ಟೆಂಬರ್ 30 ಕ್ಕೆ ವಿಸ್ತರಿಸಲಾಗಿದೆ.
  18.  ಈಕ್ವಲೈಸೇಶನ್ ಲೆವಿ ರಿಟರ್ನ್ಸ್ ಅನ್ನು ಪ್ರಕ್ರಿಯೆಗೊಳಿಸಲು ಸಮಯ ಮಿತಿಯನ್ನು ಮೊದಲು ಜೂನ್ 30, 2021 ಕ್ಕೆ ವಿಸ್ತರಿಸಲಾಯಿತು. ಈಗ ಇದನ್ನು 2021 ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿದೆ.

***



(Release ID: 1730490) Visitor Counter : 267