ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ನಾಳೆ ವರ್ಚುವಲ್ ರೂಪದಲ್ಲಿ ಸ್ಮಾರ್ಟ್ ಸಿಟಿ ಮಿಷನ್, ಅಮೃತ್ ಮತ್ತು ಪಿಎಂಎವೈ-ಯು 6ನೇ ವಾರ್ಷಿಕೋತ್ಸವ ಆಚರಣೆ


ಕಾರ್ಯಕ್ರಮದ ವೇಳೆ ಇಂಡಿಯಾ  ಸ್ಮಾರ್ಟ್ ಸಿಟೀಸ್ ಅವಾರ್ಡ್ ಕಂಟೆಸ್ಟ್ (ಐಎಸ್ ಎಸಿ) ಮತ್ತು ಕ್ಲೈಮೆಟ್ ಸ್ಮಾರ್ಟ್ ಸಿಟೀಸ್ ಅಸೆಸ್ ಮೆಂಟ್ ಪ್ರೇಮ್ ವರ್ಕ್ (ಸಿಎಸ್ ಸಿಎಎಫ್ ) ಫಲಿತಾಂಶ  ಕೂಡ ಘೋಷಣೆ

ವಿದ್ಯಾರ್ಥಿಗಳು, ಯುವಜನಾಂಗ, ಎನ್ ಜಿಒಗಳು, ಸಂಸ್ಥೆಗಳು ಸಾರ್ವಜನಿಕರು/ಗುಂಪುಗಳಿಗೆ ಪಿಎಂಎವೈ-ಯು ಕುರಿತ ಕಿರು ಚಿತ್ರ ಸ್ಪರ್ಧೆಗೆ  ಚಾಲನೆ

Posted On: 24 JUN 2021 2:46PM by PIB Bengaluru

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ(ಎಂಒಎಚ್ ಯುಎ) 2021 ಜೂನ್ 25ರಂದು ಸ್ಮಾರ್ಟ್ ಸಿಟಿ ಮಿಷನ್(ಎಸ್ ಸಿಎಂ), ಅಮೃತ್ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆ-ನಗರ(ಪಿಎಂಎವೈ-ಯು) ಮೂರು ಪರಿವರ್ತನಾತ್ಮಕ ನಗರ ಯೋಜನೆಗಳು ಆರಂಭವಾಗಿ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 6ನೇ ವಾರ್ಷಿಕೋತ್ಸವವನ್ನು ಆನ್ ಲೈನ್ ಕಾರ್ಯಕ್ರಮವನ್ನಾಗಿ ಆಯೋಜಿಸಿದೆ. ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2015 ಜೂನ್ 25ರಂದು ಚಾಲನೆ ನೀಡಿದ್ದರು. ಮೂರು ಯೋಜನೆಗಳು ನಗರ ನವೀಕರಣ, ದೂರದೃಷ್ಟಿ ಉದ್ದೇಶದ ಭಾಗವಾಗಿವೆ ಮತ್ತು ಭಾರತದ ಶೇ.40ಕ್ಕೂ ಅಧಿಕ ಜನಸಂಖ್ಯೆ ನಗರಗಳಲ್ಲಿ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಆಶೋತ್ತರಗಳನ್ನು ಈಡೇರಿಸಲು ಬಹು ಹಂತದ ಕಾರ್ಯತಂತ್ರ ವಿಧಾನವನ್ನು ವಿನ್ಯಾಸಗೊಳಿಸಲಾಗಿದೆ.

ಕಳೆದ ಆರು ವರ್ಷಗಳಿಂದೀಚೆಗೆ ನಗರ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಒಟ್ಟಾರೆ ಸುಮಾರು 12 ಲಕ್ಷ ಕೋಟಿ ಮೊತ್ತದ ಬಂಡವಾಳವನ್ನು ಹೂಡಿಕೆ ಮಾಡಲಾಗಿದೆ. 2004 ರಿಂದ 2014 ನಡುವಿನ ಅವಧಿಯಲ್ಲಿ 1.5 ಲಕ್ಷ ಕೋಟಿ ರೂ. ಮಾತ್ರ ಹೂಡಿಕೆ ಮಾಡಲಾಗಿತ್ತು. ಅದಕ್ಕೆ ಹೋಲಿಸಿದರೆ ಭಾರಿ ಮೊತ್ತ ವಿನಿಯೋಗಿಸಲಾಗುತ್ತಿದೆ. ಯೋಜನೆಗಳನ್ನು ಮೂರು ಮಿಷನ್ ಗಳಡಿ ಅನುಷ್ಠಾನ ಗೊಳಿಸುತ್ತಿರುವುದರಿಂದ ಭಾರತದ ನಗರವಾಸಿಗಳ ಜೀವನದಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿದೆ. ಮಿಷನ್ ಗಳಿಂದಾಗಿ ಕೇವಲ ನಗರ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿರುವುದೇ ಅಲ್ಲದೆ, ಉತ್ತಮ ನೀರಿನ ಸಂಪರ್ಕ, ನೈರ್ಮಲ್ಯ, ಸರ್ವರಿಗೂ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜೊತೆಗೆ ದತ್ತಾಂಶ ಮತ್ತು ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನು ನಮ್ಮ ನಗರಗಳ ಯೋಜನೆ ಮತ್ತು ನಿರ್ವಹಣೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಯೋಜನೆಗಳು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದು, ಸಾಂಕ್ರಾಮಿಕದಿಂದ ಬಾಧಿತವಾದ ಜನರ ಜೀವನಕ್ಕೆ ನೆಮ್ಮದಿ ತಂದಿವೆ.

(ಎಂಒಎಚ್ ಯುಎ) ಅನುಷ್ಠಾನಗೊಳಿಸಿರುವ ಹಲವು ಪ್ರಮುಖ ಉಪಕ್ರಮಗಳನ್ನು ವಾರ್ಷಿಕೋತ್ಸವದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವ(ಸ್ವತಂತ್ರ ಹೊಣೆಗಾರಿಕೆ) ಶ್ರೀ ಹರ್ ದೀಪ್ ಸಿಂಗ್ ಪುರಿ ಅಧ್ಯಕ್ಷತೆ ವಹಿಸಲಿದ್ದಾರೆ. ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ಶ್ರೀ ದುರ್ಗಾಶಂಕರ್ ಮಿಶ್ರಾ ಎಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಮುಖ ನಗರ ಪಾಲುದಾರರನ್ನು ಅಂದರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳು, ನಗರಗಳ ಮುನಿಸಿಪಲ್ ಕಮಿಷನರ್ ಗಳು, ಸ್ಮಾರ್ಟ್ ಸಿಟಿಗಳ ವ್ಯವಸ್ಥಾಪಕ ನಿರ್ದೇಶಕರು/ಸಿಇಒಗಳು ರಾಜ್ಯ ಮಟ್ಟದ ನೋಡಲ್ ಏಜೆನ್ಸಿಗಳು/ ಯೋಜನಾ ನಿರ್ದೇಶಕರು, ಅಧಿಕಾರಿಗಳು ಮತ್ತು ಅವರ ತಂಡದ ಸದಸ್ಯರು, ವೃತ್ತಿಪರರು, ಉದ್ಯಮದ ಪ್ರತಿನಿಧಿಗಳು, ಮಾಧ್ಯಮದವರು ಮತ್ತು ಶೈಕ್ಷಣಿಕ ವಲಯದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದಾರೆ

ಅಲ್ಲದೆ ಇದೇ ದಿನ, ಎಂಒಎಚ್ ಯುಎ ಸ್ವಾಯತ್ತ ಸಂಸ್ಥೆ ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆ ಸ್ಥಾಪನೆಯಾಗಿ 45 ವರ್ಷ ಪೂರ್ಣಗೊಳ್ಳಲಿದೆ. ಇದು ನಗರೀಕರಣಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ರೂಢಿಯಲ್ಲಿರುವ ಪದ್ದತಿ ನಡುವಿನ ಅಂತರವನ್ನು ನಿವಾರಿಸುವ ಉದ್ದೇಶ ಹೊಂದಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ- ನಗರ

ಸರ್ವರಿಗೂ ವಸತಿಉದ್ದೇಶದಿಂದ ಪಿಎಂಎವೈ-ಯು ಆಶ್ರಯದಲ್ಲಿ ನಗರ ವಸತಿ ಕೊರತೆಯನ್ನು ನೀಗಿಸಲಾಗುತ್ತಿದ್ದು, ಕೊಳೆಗೇರಿ ನಿವಾಸಿಗಳು ಸೇರಿದಂತೆ ಎಲ್ಲ ಇಡಬ್ಲ್ಯೂಎಸ್/ಎಲ್ಐಜಿ ಮತ್ತು ಎಂಐಜಿ ವರ್ಗದವರಿಗೆ 2022ನೇ ಇಸವಿ ವೇಳೆಗೆ ಅಂದರೆ  ಸ್ವಾತಂತ್ರಗಳಿಸಿ ರಾಷ್ಟ್ರ 75ನೇ ವರ್ಷ ಪೂರೈಸುವ ವೇಳೆಗೆ ಎಲ್ಲ ಅರ್ಹ ನಗರ ವಾಸಿಗಳಿಗೆ ಪಕ್ಕಾಮನೆ ಖಾತ್ರಿಪಡಿಸುವ ಗುರಿ ಹೊಂದಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು) ಅಡಿಯಲ್ಲಿ ಈವರೆಗೆ ಒಟ್ಟು 1.12 ಕೋಟಿ ಮನೆಗಳಿಗೆ ಅನುಮೋದನೆ ನೀಡಲಾಗಿದೆ. ಪೈಕಿ 82.5 ಲಕ್ಷ ಮನೆಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಮತ್ತು 48 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಭಾಗವಾಗಿ ಪಿಎಂಎವೈ-ಯು ವಿದ್ಯಾರ್ಥಿಗಳು, ಯುವ ಜನಾಂಗ, ಸರ್ಕಾರೇತರ ಸಂಸ್ಥೆಗಳು, ಸಂಘಟನೆಗಳು ಮತ್ತು ಸಾರ್ವಜನಿಕರು/ಗುಂಪುಗಳಿಗೆ ಕಿರುಚಿತ್ರ ಸ್ಪರ್ಧೆಯನ್ನು ಘೋಷಿಸಲಿದೆ. ಅಲ್ಲದೆ 75 ನಗರಗಳ ಶಾಲೆಗಳು/ಕಾಲೇಜುಗಳಲ್ಲಿ/ಸಂಸ್ಥೆಗಳಲ್ಲಿ 15 ದಿನಗಳ ಕಾಲ ಆವಾಸ್ ಪರ್ ಸಂವಾದ(ಟೌನ್ ಹಾಲ್) ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ

ಅಮೃತ್ ಮಿಷನ್

ಅಟಲ್ ನಗರ ನವೀಕರಣ ಮತ್ತು ಪರಿವರ್ತನಾ ಯೋಜನೆ(ಅಮೃತ್)ಅನ್ನು ನೀರಿನ ಪೂರೈಕೆ, ಒಳಚರಂಡಿ, ಮಲಗುಂಡಿಗಳ ಹಾಗು ಒಳಚರಂಡಿ ನಿರ್ವಹಣೆ, ಪ್ರವಾಹ ತಗ್ಗಿಸುವುದು, ಮೋಟಾರು ರಹಿತ ನಗರ ಸಂಚಾರ ಮತ್ತು ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ 500 ನಗರಗಳಲ್ಲಿ ಹಸಿರು ಜಾಗ/ಪಾರ್ಕ್ ಗಳ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಯೋಜನೆ ಅಡಿ ಮಾಡಿರುವ ಪ್ರಮುಖ ಸಾಧನೆಗಳನ್ನು ಕೆಳಗಿನಂತಿವೆ.

  • ಒಟ್ಟು ನಲ್ಲಿ ನೀರಿನ ಸಂಪರ್ಕ: 139 ಲಕ್ಷ ನಲ್ಲಿ ನೀರು ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದ್ದು, 105 ಲಕ್ಷಕ್ಕೂ ಅಧಿಕ ಸಂಪರ್ಕ ಈಗಾಗಲೇ ಕಲ್ಪಿಸಲಾಗಿದೆ..
  • ಒಳಚರಂಡಿ ಮತ್ತು ಮಲಗುಂಡಿ ಸಂಪರ್ಕ: 145 ಲಕ್ಷ ಗುರಿ ಇದ್ದು, 78 ಲಕ್ಷಕ್ಕೂ ಅಧಿಕ ಸಂಪರ್ಕ ಕಲ್ಪಿಸಲಾಗಿದೆ.
  • ಸಂಸ್ಕರಣಾ ಸಾಮರ್ಥ್ಯ ಅಭಿವೃದ್ಧಿ: 1240 ಎಂಎಲ್ ಡಿ ಮತ್ತು 4960 ಎಂಎಲ್ ಡಿ ಸಾಮರ್ಥ್ಯದ ಎಸ್ ಟಿಪಿಗಳ ಕಾರ್ಯ ಪ್ರಗತಿಯಲ್ಲಿ.
  • 1,840 ಜಲಾವೃತವಾಗುವ ಪ್ರದೇಶಗಳನ್ನು ನಿರ್ಮೂಲನೆ.
  • ಹಸಿರು ಜಾಗ ಮತ್ತು ಪಾರ್ಕ್ ಗಳು: 1850 ಪಾರ್ಕ್ ಮತ್ತು 3770 ಎಕರೆ ಪ್ರದೇಶದಲ್ಲಿ ಹಸಿರು ಜಾಗ ಅಭಿವೃದ್ಧಿ
  • ಮುನಿಸಿಪಲ್ ಬಾಂಡ್: 10 ನಗರಗಳಲ್ಲಿ 3,840 ಕೋಟಿ ರೂ. ಮುನಿಸಿಪಲ್ ಬಾಂಡ್ ಗಳ ಮೂಲಕ ಎತ್ತುವಳಿ.
  • 2,465 ನಗರಗಳಲ್ಲಿ ಆನ್ ಲೈನ್ ಕಟ್ಟಡ ಅನುಮತಿ ವ್ಯವಸ್ಥೆ ಜಾರಿ
  • ಬೀದಿ ದೀಪ:  88 ಲಕ್ಷ ಬೀದಿ ದೀಪಗಳನ್ನು ಬದಲಾಯಿಸಲಾಗಿದ್ದು, ಇದರಿಂದ ವಾರ್ಷಿಕ 192 ಕೋಟಿ ರೂ. ಮೌಲ್ಯದ ವಿದ್ಯುತ್ ಉಳಿತಾಯವಾಗುವುದಲ್ಲದೆ 15 ಲಕ್ಷ ಟನ್ ಇಂಗಾಲ ಹೊರ ಉಗುಳುವುದು ತಗ್ಗಲಿದೆ.

ಸ್ಮಾರ್ಟ್ ಸಿಟಿ ಮಿಷನ್

ಸ್ಮಾರ್ಟ್ ಸಿಟಿ ಮಿಷನ್ ಪರಿವರ್ತನಾತ್ಮಕ ಯೋಜನೆಯಾಗಿದ್ದು, ದೇಶದ ನಗರಾಭಿವೃದ್ಧಿ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರುವ ಗುರಿ ಹೊಂದಿದೆ. ಎಸ್ ಸಿಎಂ ಅಡಿಯಲ್ಲಿ ಒಟ್ಟು ಉದ್ದೇಶಿಸಲಾಗಿರುವ 1,78,500 ಕೋಟಿ(ಶೇ.87ರಷ್ಟು) ಮೌಲ್ಯ  5,890 (ಶೇ.114ರಷ್ಟು) ಯೋಜನೆಗಳಿಗೆ ಈವರೆಗೆ ಟೆಂಡರ್ ಆಗಿದೆ ಮತ್ತು  1,45,600 ಕೋಟಿ(ಶೇ.71ರಷ್ಟು) ಮೌಲ್ಯದ 5,195  (ಶೇ.101 ರಷ್ಟು) ಯೋಜನೆಗಳಿಗೆ ಕಾರ್ಯಾದೇಶಗಳನ್ನು ವಿತರಿಸಲಾಗಿದೆ. 45,000 ಕೋಟಿ ಮೌಲ್ಯದ(ಶೇ.22ರಷ್ಟು) 2,655 ಯೋಜನೆಗಳು(ಶೇ.51ರಷ್ಟು) ಕಾಮಗಾರಿ ಪೂರ್ಣಗೊಂಡಿದ್ದು, ಅವುಗಳು ಕಾರ್ಯಾರಂಭ ಮಾಡಿವೆ.

ಸ್ಮಾರ್ಟ್ ಸಿಟಿ ಮಿಷನ್ ಅಡಿ ಅಭಿವೃದ್ಧಿಗೊಳಿಸಿರುವ ಯೋಜನೆಗಳು ಬಹು ವಲಯದವಾಗಿದ್ದು ಮತ್ತು ಅವು ಸ್ಥಳೀಯ ಜನರ ಆಶೋತ್ತರಗಳ ಕೈಗನ್ನಡಿಯಾಗಿವೆ. ಈವರೆಗೆ 69 ಸ್ಮಾರ್ಟ್ ಸಿಟಿಗಳಲ್ಲಿ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳನ್ನು(ಐಸಿಸಿಸಿಗಳನ್ನು) ಅಭಿವೃದ್ಧಿಗೊಳಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಐಸಿಸಿಸಿಗಳು ಕೋವಿಡ್ ನಿರ್ವಹಣೆಗೆ ವಾರ್ ರೂಮ್ ಗಳಾಗಿ ಕಾರ್ಯ ನಿರ್ವಹಿಸಿದವು ಮತ್ತು ಇತರೆ ಸ್ಮಾರ್ಟ್ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಸಹಕರಿಸಿದವು. ನಗರಗಳಿಗೆ ಮಾಹಿತಿ ಪ್ರಸರಣ, ಸಂವಹನ ಸುಧಾರಣೆ, ಮುನ್ನೆಚ್ಚರಿಕೆಯ ವಿಶ್ಲೇಷಣೆಗಳು ಮತ್ತು ಪರಿಣಾಮಕಾರಿ ನಿರ್ವಹಣೆಗೆ ಬೆಂಬಲ ನೀಡುವ ಮೂಲಕ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ನೆರವಾದವು

6ನೇ ವಾರ್ಷಿಕೋತ್ಸವ ಕಾರ್ಯಕ್ರಮ(ಎಂಒಎಚ್ ಯುಎ) ವೇಳೆ ಇಂಡಿಯಾ  ಸ್ಮಾರ್ಟ್ ಸಿಟೀಸ್ ಅವಾರ್ಡ್ ಕಂಟೆಸ್ಟ್ (ಐಎಸ್ ಎಸಿ) 2020ಅನ್ನು ಪ್ರಕಟಿಸಲಾಗುವುದು ಹಾಗೂ ಬಹು ನಿರೀಕ್ಷಿತ ಡಾಟಾ ಮೆಚ್ಯುರಿಟಿ ಅಸೆಸ್ ಮೆಂಟ್ ಫ್ರೇಮ್ ವರ್ಕ್(ಡಿಎಂಎಫ್) ಮತ್ತು  ಕ್ಲೈಮೆಟ್ ಸ್ಮಾರ್ಟ್ ಸಿಟೀಸ್ ಅಸೆಸ್ ಮೆಂಟ್ ಪ್ರೇಮ್ ವರ್ಕ್ (ಸಿಎಸ್ ಸಿಎಎಫ್ ) ಫಲಿತಾಂಶಗಳನ್ನೂ ಸಹ ಬಿಡುಗಡೆ ಮಾಡಲಾಗುವುದು. ಅಲ್ಲದೆ ಕಾರ್ಯಕ್ರಮದಲ್ಲಿ ಇಂಡಿಯಾ ಸ್ಮಾರ್ಟ್ ಸಿಟಿ ಫೆಲೋಶಿಪ್ ವರದಿ, ಟ್ಯುಲಿಪ್ ವಾರ್ಷಿಕ ವರದಿ ಮತ್ತು ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆ(ಎನ್ಐಯುಎ) ಅಭಿವೃದ್ಧಿಪಡಿಸಿರುವ ಜ್ಞಾನಾಧಾರಿತ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು.  

***


(Release ID: 1730137) Visitor Counter : 288