ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ 19 ಲಸಿಕೆ: ತಪ್ಪು ಮತ್ತು ವಾಸ್ತವ ಸಂಗತಿಗಳು
ಲಸಿಕೆ ವಿತರಣೆಯನ್ನು ರಾಜ್ಯದ ಜನಸಂಖ್ಯೆ, ಪ್ರಕರಣಗಳ ಹೊರೆ, ರಾಜ್ಯಗಳ ಬಳಕೆಯ ದಕ್ಷತೆ ಮತ್ತು ಪೋಲಾಗುವ ಅಂಶಗಳ ಆಧಾರದ ಮೇಲೆ ಪಾರದರ್ಶಕ ರೀತಿಯಲ್ಲಿ ಮಾಡಲಾಗುತ್ತದೆ
Posted On:
24 JUN 2021 2:44PM by PIB Bengaluru
ಭಾರತದ ರಾಷ್ಟ್ರೀಯ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ವೈಜ್ಞಾನಿಕ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರೀಯ ಪುರಾವೆಗಳು, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳು ಮತ್ತು ಜಾಗತಿಕ ಮಟ್ಟದಲ್ಲಿ ಇರುವ ಅತ್ಯುತ್ತಮ ಅಭ್ಯಾಸಗಳ ಮೇಲೆ ರಚಿಸಲಾಗಿದೆ. ನೇರವಾಗಿ ತಲುಪಿಸುವ ವ್ಯವಸ್ಥಿತ ಯೋಜನೆಯ ಮೂಲಕ ಇದನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು ಜನರ ಪರಿಣಾಮಕಾರಿ ಭಾಗವಹಿಸುವಿಕೆಯ ಮೂಲಕ ಕಾರ್ಯಗತ ಗೊಳಿಸಲಾಗುತ್ತಿದೆ.
ಕೋವಿಡ್-19 ಲಸಿಕೆಗಳನ್ನು ರಾಜ್ಯಗಳಿಗೆ ಪಾರದರ್ಶಕವಾಗಿ ಹಂಚಿಕೆ ಮಾಡಲಾಗಿಲ್ಲ ಎಂದು ಕೆಲವು ಮಾಧ್ಯಮ ವರದಿಗಳು ಬಂದಿವೆ. ಈ ಆರೋಪಗಳು ಸಂಪೂರ್ಣವಾಗಿ ಯಾವುದೇ ಆಧಾರವಿಲ್ಲದ್ದು ಹಾಗು ಅಪೂರ್ಣವಾದ ಮಾಹಿತಿ.
ಕೋವಿಡ್-19 ಲಸಿಕೆಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪಾರದರ್ಶಕ ರೀತಿಯಲ್ಲಿ ಹಂಚಿಕೆ ಮಾಡುವುದನ್ನು ಭಾರತ ಸರ್ಕಾರ ಮುಂದುವರಿಸಿದೆ ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ. ಭಾರತ ಸರ್ಕಾರವು ಲಸಿಕೆ ಪೂರೈಕೆ, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಸುವ ರೀತಿ, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿರುವ, ಉಳಿದ ಮತ್ತು ಬಳಕೆಯಾಗದ ಲಸಿಕೆ ಡೋಸ್ ಗಳು ಮತ್ತು ಮುಂದೆಯೂ ಪೂರೈಕೆಯಾಗುವ ಬಗ್ಗೆ ಮಾಹಿತಿಯನ್ನು ನಿಯಮಿತವಾಗಿ ಪತ್ರಿಕಾ ಮಾಹಿತಿ ಬ್ಯೂರೋ ಮತ್ತು ಇತರ ವೇದಿಕೆಗಳ ಮೂಲಕ ಮಾಡುವ ಪ್ರಕಟಣೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ..
ಕೋವಿಡ್ 19 ಲಸಿಕೆಯ ವಿತರಣೆಯನ್ನು ಈ ಕೆಳಗಿನ ನಿಯತಾಂಕಗಳಲ್ಲಿ ಮಾಡಲಾಗುತ್ತದೆ:
- ರಾಜ್ಯದ ಜನಸಂಖ್ಯೆ
- ಪ್ರಕರಣಗಳ ಅಥವಾ ರೋಗದ ಹೊರೆ
- ರಾಜ್ಯದ ಬಳಸುವ ದಕ್ಷತೆ
ಲಸಿಕೆ ಪೋಲಾಗುವುದರಿಂದ ಹಂಚಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
***
(Release ID: 1730131)
Visitor Counter : 238