ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಇ-ಕಚೇರಿಯ ಅಳವಡಿಕೆಯೊಂದಿಗೆ ಶೇ.100ರಷ್ಟು ಕಾಗದ ರಹಿತವಾದ ಪ್ರಸಾರ ಭಾರತಿ

Posted On: 24 JUN 2021 1:47PM by PIB Bengaluru

ತಂತ್ರಜ್ಞಾನದ ಬಳಕೆಯು ಪ್ರಸಾರ ಭಾರತಿಯ ಕಾರ್ಯಾಚರಣೆಗಳನ್ನು ಬದಲಾಯಿಸಿದೆ. ಇದು ಹಿಂದಿನ ವಹಿವಾಟಿನಂತಿಲ್ಲ. 2 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ, 577 ಕೇಂದ್ರಗಳು ಮತ್ತು ಡಿಡಿ, ಆಕಾಶವಾಣಿಯ 22,348 ಉದ್ಯೋಗಿಗಳು -ಆಫೀಸ್ ಕಾರ್ಯಾಚರಣೆಯನ್ನು ಅಳವಡಿಸಿಕೊಂಡಿದ್ದಾರೆ.

ಅತ್ಯುತ್ತಮವಾಗಿ ಸ್ಥಾಪಿತವಾದ ಐಟಿ-ಶಕ್ತ ಪ್ರಸಾರ ಭಾರತಿಯ ಕಾರ್ಯ ವಿನ್ಯಾಸ -ಆಫೀಸ್ ಮೂಲಕ ಸಾಂಕ್ರಾಮಿಕದ ಸಮಯದಲ್ಲಿ ದೇಶಾದ್ಯಂತ ಸಿಬ್ಬಂದಿ ಲಾಕ್ಡೌನ್ ಸಮಯದಲ್ಲಿ ಮತ್ತು ನಂತರವೂ ಹಲವಾರು ಮಿತಿಗಳಲ್ಲಿ ಕಾರ್ಯ ನಿರ್ವಹಿಸ ಬೇಕಾಗಿರುವಾಗ ತುಂಬಾ ಉಪಯುಕ್ತವಾಗಿದೆ.

ಪ್ರಸಾರ ಭಾರತಿ ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಕಾಗದ ರಹಿತವಾಗಿಸುವ ದೃಷ್ಟಿಯಿಂದ, -ಆಫೀಸ್ ಅನ್ನು ಆಗಸ್ಟ್ 2019ರಲ್ಲಿ ಪರಿಚಯಿಸಲಾಯಿತು. ದೇಶಾದ್ಯಂತ 577 ಪ್ರಸಾರ ಭಾರತಿ ಕೇಂದ್ರಗಳಲ್ಲಿ, 2019ರಲ್ಲಿ (ಆಗಸ್ಟ್ - ಡಿಸೆಂಬರ್) ಶೇ.10ರಷ್ಟು, 2020ರಲ್ಲಿ ಶೇ.74 ಮತ್ತು ಉಳಿದ ಶೇ.16 ಸಿಬ್ಬಂದಿ 2021 ಜೂನ್ 18 ರೊಳಗೆ ಇದನ್ನು ಅಳವಡಿಸಿಕೊಂಡರು.

ಸಂಸ್ಥೆಯ ಕಾರ್ಯದಲ್ಲಿ ವೇಗ ಮತ್ತು ಪಾರದರ್ಶಕತೆಯನ್ನು ತರುವ ವಿಷಯದಲ್ಲಿ, ಆನ್ಲೈನ್ನಲ್ಲಿ ಲಭ್ಯವಿರುವ ಪ್ರತಿಯೊಂದು ಕಡತದ ಸ್ಥಿತಿಯೊಂದಿಗೆ 50 ಸಾವಿರಕ್ಕೂ ಹೆಚ್ಚು -ಕಡತಗಳನ್ನು ರೂಪಿಲಾಗಿದೆ. ಆಂತರಿಕವಾಗಿ, ಸಂಬಂಧಪಟ್ಟ ಇಲಾಖೆಗಳು ತಮ್ಮ ಕಡತಗಳನ್ನು ಸಂಚಲನೆಯಲ್ಲಿದ್ದರೂ ಅಥವಾ ಒಂದೆಡೆ ನಿಂತಿದ್ದರೂ ಅಥವಾ ಮುಚ್ಚಿದ್ದರೂ ಪತ್ತೆ ಹಚ್ಚಬಹುದಾಗಿದೆ.

ಸರಾಸರಿ, ಒಂದು ಭೌತಿಕ    ವಿಲೇವಾರಿಗೊಳಿಸುವ ಸಂಪೂರ್ಣ ಪ್ರಕ್ರಿಯೆಯು ಸುಮಾರು ಒಂದು ವಾರ ತೆಗೆದುಕೊಳ್ಳುತ್ತಿತ್ತು. -ಆಫೀಸ್ ಮೂಲಕ, ಇದನ್ನು ಸರಾಸರಿ 24 ಗಂಟೆಗಳಿದೆ ತೀವ್ರವಾಗಿ ತಗ್ಗಿಸಲಾಗಿದೆ, ಕೆಲವೊಮ್ಮೆ ಒಂದೆರಡು ಗಂಟೆಗಳಲ್ಲೂ ಆಗುತ್ತದೆ.

ಇದರ ಫಲವಾಗಿ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಲೇವಾರಿ ಮಾಡಲಾದ ಕಡತಗಳ ಒಟ್ಟು ಗಾತ್ರ ಮತ್ತು ಇದೇ ಅವಧಿಯಲ್ಲಿ ಪ್ರತಿ ತಿಂಗಳು ವಿಲೇವಾರಿಯಾದ ಕಡತಗಳ ಸರಾಸರಿ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ

ಪ್ರಸಾರ ಭಾರತಿಯೊಳಗೆ - ಕಡತಗಳನ್ನು ರೂಪಿಸುವ ತ್ತು ವಿಲೇವಾರಿ ಮಾಡಿರುವ ಅಗ್ರ 10 ಕಚೇರಿಗಳು (ಆಕಾಶವಾಣಿ ದೂರದರ್ಶನ) ಕೆಳಕಂಡಂತಿವೆ:

ಕಚೇರಿಗಳು

2019 ಆಗಸ್ಟ್ ನಿಂದ ವಿಲೇವಾರಿ ಮಾಡಲಾದ

-ಕಡತಗಳ ಒಟ್ಟು ಸಂಖ್ಯೆ

2019 ಆಗಸ್ಟ್ ನಿಂದ ವಿಲೇವಾರಿ ಮಾಡಲಾದ - ಕಡತಗಳ ಮಾಸಿಕ ಸರಾಸರಿ

ಸಿಇಓ ಕಚೇರಿ

11,186

500+

ಡಿಜಿ ಡಿಡಿ ಕಚೇರಿ

6897

300+

ಡಿಜಿ ಆಕಾಶವಾಣಿ ಕಚೇರಿ

5973

270+

ಡಿಜಿ ಡಿಡಿ ಸುದ್ದಿ ವಿಭಾಗ ಕಚೇರಿ

3872

170+

ಡಿಜಿ ಆಕಾಶವಾಣಿ ಸುದ್ದಿ ವಿಭಾಗದ ಕಚೇರಿ

721

30+

ತಂತ್ರಜ್ಞಾನ ಮುಖ್ಯಸ್ಥರು

3351

150+

ಎಚ್.ಆರ್. ಮುಖ್ಯಸ್ಥರು

13,331

600+

ಆಡಳಿತ ಮುಖ್ಯಸ್ಥರು

6121

275+

ಕಾರ್ಯಾಚರಣೆ ಮುಖ್ಯಸ್ಥರು

2751

125+

ಹಣಕಾಸು ಮುಖ್ಯಸ್ಥರು

3533

160+

ಉಪಕ್ರಮವು ಪ್ರಸಾರ ಭಾರತಿ ಕಾರ್ಯಾಚರಣೆಗಳನ್ನು ಕಾಗದರಹಿತ ಮಾಡಿದ್ದು, ಸಂಸ್ಥೆಯು ಕಾಗದದ ಮೇಲೆ ಮಾಡುತ್ತಿದ್ದ ವೆಚ್ಚವನ್ನು 2019 ಆಗಸ್ಟ್ ನಿಂದ 2021 ಜೂನ್ ವರೆಗೆ ಶೇ.45ರಷ್ಟು ಉಳಿತಾಯ ಮಾಡಿದೆ. ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವುದರ ಜೊತೆಗೆ, ಕಾಗದರಹಿತ ಕೆಲಸವು ಸಾಂಕ್ರಾಮಿಕದ ಸಮಯದಲ್ಲಿ ರಿಮೋಟ್ ವರ್ಕಿಂಗ್, ವರ್ಕ್ ಫ್ರಂ ಹೋಂ ಇತ್ಯಾದಿಗಳ ಮೂಲಕ ಕೋವಿಡ್ ಸುರಕ್ಷತೆಯನ್ನು ಹೆಚ್ಚಿಸಿತು, ಇದು ಸೋಂಕು ಹೆಚ್ಚುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

***


(Release ID: 1730130) Visitor Counter : 301