ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಇಂದಿನ ಪರಿಷ್ಕೃತ ವರದಿ

प्रविष्टि तिथि: 23 JUN 2021 9:14AM by PIB Bengaluru

ದೇಶಾದ್ಯಂತ ಹಮ್ಮಿಕೊಂಡಿರುವ ಬೃಹತ್ ಕೋವಿಡ್-19 ಲಸಿಕಾ ಆಂದೋಲನದ ಅಡಿ ನಿನ್ನೆ ಒಂದೇ ದಿನ 54.24 ಲಕ್ಷ ಲಸಿಕೆ ಡೋಸ್ ಹಾಕಲಾಗಿದೆ.
ದೇಶದಲ್ಲಿ ಇದುವರೆಗೆ ಒಟ್ಟು 29.46 ಲಸಿಕಾ ಡೋಸ್’ಗಳನ್ನು ನೀಡಲಾಗಿದೆ.
 ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 50,848 ಹಿಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಕಳೆದ 82 ದಿನಗಳಲ್ಲಿ ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 6,43,194ಕ್ಕೆ ಇಳಿಕೆ ಕಂಡಿದೆ.
ಇದುವರೆಗೆ ದೇಶಾದ್ಯಂತ 2,89,94,855 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ.
ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 68,817 ಮಂದಿ ರೋಗದಿಂದ ಚೇತರಿಸಿಕೊಂಡಿದ್ದಾರೆ.
 ದೈನಂದಿನ ಚೇತರಿಕೆ ಪ್ರಮಾಣ ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಹಿಂದಿಕ್ಕುತ್ತಿದೆ. 41 ದಿನದಲ್ಲೂ ಈ ಪ್ರವೃತ್ತಿ ಮುಂದುವರಿದಿದೆ.
ಇದರೊಂದಿಗೆ ಚೇತರಿಕೆ ದರವೀಗ 96.56%ಗೆ ಸುಧಾರಣೆ ಕಂಡಿದೆ.
ವಾರದ ಪಾಸಿಟಿವಿಟಿ ದರ (ಸೋಂಕಿತರ ಸಂಖ್ಯೆ) 5% ಮಟ್ಟದಿಂದ ಕೆಳಗೆ ಮುಂದುವರಿದಿದ್ದು, ಅದೀಗ 3.12% ಇದೆ.
ದೈನಂದಿನ ಪಾಸಿಟಿವಿಟಿ ದರವೂ 5% ಮಟ್ಟದಿಂದ ಕೆಳಗಿದ್ದು, ಅದೀಗ ಸತತ 16ನೇ ದಿನದಲ್ಲಿ 2.67%ಗೆ ತಗ್ಗಿದೆ.
ದೇಶದೆಲ್ಲೆಡೆ ಗಂಟಲು ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಇಲ್ಲಿಯ ತನಕ 39.59 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

***


(रिलीज़ आईडी: 1729685) आगंतुक पटल : 176
इस विज्ञप्ति को इन भाषाओं में पढ़ें: Urdu , English , Marathi , हिन्दी , Manipuri , Bengali , Punjabi , Gujarati , Odia , Tamil , Telugu , Malayalam