ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೆ ಇಂದಿನ ಪರಿಷ್ಕೃತ ವರದಿ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 29.35 ಕೋಟಿಗಿಂತ ಹೆಚ್ಚಿನ ಲಸಿಕೆ ಡೋಸ್ ವಿತರಣೆ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 2.14 ಕೋಟಿಗಿಂತ ಹೆಚ್ಚಿನ ಲಸಿಕೆ ಡೋಸ್ ಲಭ್ಯ
Posted On:
22 JUN 2021 10:45AM by PIB Bengaluru
ಕೋವಿಡ್-19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತ ನಿನ್ನೆಯಿಂದ ಆರಂಭವಾಗಿದೆ. ಕೋವಿಡ್-19 ಸೋಂಕು ನಿಯಂತ್ರಣ ಮತ್ತು ನಿರ್ವಹಣೆ ಮಾಡುವ ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರದಲ್ಲಿ ಲಸಿಕೆ ನೀಡಿಕೆ ಆಂದೋಲನವು ಅವಿಭಾಜ್ಯ ಆಧಾರಸ್ತಂಭವಾಗಿದೆ. ಇದರ ಜತೆಗೆ, ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆ, ಸೋಂಕಿನ ಪತ್ತೆ ಮತ್ತು ಸೋಂಕಿಗೆ ಚಿಕಿತ್ಸೆ ಹಾಗೂ ಕೋವಿಡ್-19 ಸೂಕ್ತ ನಡವಳಿಕೆಗಳಿಗೆ ಆದ್ಯತೆಯ ಗಮನ ನೀಡುತ್ತಾ ಬರಲಾಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್-19 ಲಸಿಕಾ ಆಂದೋಲನದ ವೇಗವನ್ನು ಹೆಚ್ಚಿಸಲು ಮತ್ತು ವ್ಯಾಪ್ತಿ ವಿಸ್ತರಿಸಲು ಬದ್ಧವಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಜನವರಿ 16ರಂದು ದೇಶವ್ಯಾಪಿ ಬೃಹತ್ ಕೋವಿಡ್-19 ಲಸಿಕಾ ಆಂದೋಲನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಲಸಿಕೆ ಲಭ್ಯತೆಯ ಮೂಲಕ ದೇಶಾದ್ಯಂತ ಆಂದೋಲನವನ್ನು ವ್ಯಾಪಕಗೊಳಿಸಲಾಗುತ್ತಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ಆಂದೋಲನವನ್ನು ವ್ಯಾಪಕಗೊಳಿಸುವ ಮತ್ತು ಸಮರ್ಪಕವಾಗಿ ಲಸಿಕೆ ನೀಡಿಕೆ ಯೋಜನೆಯನ್ನು ಸಕ್ರಿಯಗೊಳಿಸುವ ಸಲುವಾಗಿ ಲಸಿಕೆಯ ಮುಂಗಡ ಲಭ್ಯತೆಯನ್ನು ಖಚಿತಪಡಿಸಲಾಗುತ್ತಿದೆ.
ದೇಶವ್ಯಾಪಿ ನಡೆಯುತ್ತಿರುವ ಬೃಹತ್ ಲಸಿಕಾ ಆಂದೋಲನದ ಭಾಗವಾಗಿ, ಭಾರತ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಸುತ್ತಿದೆ. ಕೋವಿಡ್-19 ಲಸಿಕೆ ಆಂದೋಲನದ ಸಾರ್ವತ್ರೀಕರಣದ ಹೊಸ ಹಂತದಲ್ಲಿ, ದೇಶದ ಔಷಧ ಉತ್ಪಾದಕರು ತಯಾರಿಸುವ 75% ಲಸಿಕೆಯನ್ನು ಕೇಂದ್ರ ಸರ್ಕಾರವೇ ಖರೀದಿಸಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಕೆ ಮಾಡಲಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 29.35 ಕೋಟಿ (29,35,04,820) ಲಸಿಕಾ ಡೋಸ್|ಗಳನ್ನು ಒದಗಿಸಲಾಗಿದೆ. ಕೇಂದ್ರ ಸರ್ಕಾರ ಉಚಿತವಾಗಿ ಮತ್ತು ನೇರ ಖರೀದಿಗೆ ರಾಜ್ಯಗಳಿಗೆ ಅವಕಾಶ ಕಲ್ಪಿಸುವ ಮೂಲಕ ಈ ಪೂರೈಕೆ ಮಾಡಲಾಗಿದೆ.
ಇಂದು ಬೆಳಗ್ಗೆ 8 ಗಂಟೆಗೆ ಲಭ್ಯವಾಗಿರುವ ದತ್ತಾಂಶದ ಪ್ರಕಾರ, ವ್ಯರ್ಥವಾದುವೂ ಸೇರಿದಂತೆ 27,20,14,523 ಡೋಸ್ ಲಸಿಕೆ ಬಳಕೆಯಾಗಿದೆ.
2.14 ಕೋಟಿ (2,14,90,297) ಗಿಂತ ಹೆಚ್ಚಿನ ಲಸಿಕಾ ಡೋಸ್|ಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿವೆ.
ಹೆಚ್ಚಿನದಾಗಿ, 33,80,590ಕ್ಕಿಂತ ಅಧಿಕ ಲಸಿಕಾ ಡೋಸ್|ಗಳು ಸದ್ಯದಲ್ಲೇ ಲಭ್ಯವಾಗಲಿದ್ದು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಣೆ ಆಗಲಿದೆ.
***
(Release ID: 1729321)
Visitor Counter : 219
Read this release in:
Tamil
,
English
,
Urdu
,
Marathi
,
Hindi
,
Bengali
,
Punjabi
,
Gujarati
,
Odia
,
Telugu
,
Malayalam