ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಇಂದಿನ ಪರಿಷ್ಕೃತ ವರದಿ
Posted On:
21 JUN 2021 9:15AM by PIB Bengaluru
ದೇಶದಲ್ಲಿ ಕಾಣಿಸಿಕೊಂಡಿರುವ ಕೋವಿಡ್-19 2ನೇ ಅಲೆಯ ಸೋಂಕಿನ ವಿರುದ್ಧ ನಿರಂತರ ಹೋರಾಟಾ ನಡೆಸುತ್ತಾ ಬಂದಿರುವ ಭಾರತ ಸರ್ಕಾರ, ಇದೀಗ ಸೋಂಕು ನಿಯಂತ್ರಣದಲ್ಲಿ ಯಶಸ್ವಿಯಾಗುತ್ತಿದೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷದ ಮಟ್ಟದಿಂದ ಕೆಳಗಿದ್ದು, ಅದೀಗ 7,02,887 ಇಳಿಕೆ ಕಂಡಿದೆ.
81 ದಿನಗಳ ನಂತರ ದೈನಂದಿನ ಹೊಸ ಕೊರೊನಾ ಪ್ರಕಣಗಳ ಸಂಖ್ಯೆ 60 ಸಾವಿರ ಮಟ್ಟದಿಂದ ಕೆಳಗಿದ್ದು, ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 53,256 ಹೊಸ ಪ್ರಕರಣಗಳು ಪತ್ತೆಯಾಗಿವೆ.
ದೇಶಾದ್ಯಂತ ಇಲ್ಲಿಯ ತನಕ 2,88,44,199 ಸೋಂಕಿತರು ಗುಣಮುಖರಾಗಿದ್ದಾರೆ.
ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 78,1190 ರೋಗಿಗಳು ಗುಣಮುಖರಾಗಿದ್ದಾರೆ.
ಸತತ 39ನೇ ದಿನದಲ್ಲಿ ದೈನಂದಿನ ಚೇತರಿಕೆ ಪ್ರಕರಣಗಳು ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಹಿಂದಿಕ್ಕುತ್ತಿದೆ.
ಇದರೊದಿಗೆ ಚೇತರಿಕೆ ಪ್ರಮಾಣ 96.36%ಗೆ ಸುಧಾರಣೆ ಕಂಡಿದೆ.
ವಾರದ ಪಾಸಿಟಿವಿಟಿ ದರ 5% ಮಟ್ಟದಿಂದ ಕೆಳಗಿದ್ದು, ಅದೀಗ 3.32%ಗೆ ತಗ್ಗಿದೆ.
ಸತತ 14ನೇ ದಿನದಲ್ಲಿ ದೈನಂದಿನ ಪಾಸಿಟಿವಿಟಿ ದರ(ಸೋಂಕಿತರ ಸಂಖ್ಯೆ)ವೂ 5% ಒಳಗಿದ್ದು, ಅದೀಗ 3.83%ಗೆ ಇಳಿಕೆ ಕಂಡಿದೆ.
ದೇಶಾದ್ಯಂತ ಗಂಟಲು ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಇದುವರೆಗೆ 39.24 ಕೋಟಿ ಜನರಿಗೆ ಪರೀಕ್ಷೆ ನಡೆಸಲಾಗಿದೆ.
ದೇಶಾದ್ಯಂತ ನಡೆಯುತ್ತಿರುವ ಬೃಹತ್ ಲಸಿಕಾ ಆಂದೋಲನದಲ್ಲಿ ಇದುವರೆಗೆ 28.00 ಕೋಟಿ ಲಸಿಕೆ ಡೋಸ್|ಗಳನ್ನು ನೀಡಲಾಗಿದೆ.
***
(Release ID: 1728975)
Visitor Counter : 171
Read this release in:
English
,
Urdu
,
Marathi
,
Hindi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam