ಉಪರಾಷ್ಟ್ರಪತಿಗಳ ಕಾರ್ಯಾಲಯ

ಯೋಗವನ್ನು ದೈನಂದಿನ ಜೀವನದ ಭಾಗವನ್ನಾಗಿಸಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ ಉಪರಾಷ್ಟ್ರಪತಿಗಳು


ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಯೋಗಾಭ್ಯಾಸ ಮಾಡಿದರು

Posted On: 21 JUN 2021 9:00AM by PIB Bengaluru

ಯೋಗವನ್ನು ದೈನಂದಿನ ಜೀವನದ ಭಾಗವನ್ನಾಗಿಸಿಕೊಳ್ಳುವಂತೆ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಇಂದು ಜನತೆಗೆ ಮನವಿ ಮಾಡಿದರು.

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜನತೆಗೆ ಶುಭಾಶಯ ಕೋರಿದ ಅವರು, ಯೋಗವು ನಮಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಹಾಯ ಮಾಡುವುದಲ್ಲದೆ, ಸಮಾಜದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಎಂದರು. "ಇದು ಜನರಿಗೆ ಹಾಗೂ ದೇಶಕ್ಕೆ ಒಳ್ಳೆಯದು" ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಶ್ರೀ ನಾಯ್ಡು ಅವರು ತಮ್ಮ ಪತ್ನಿ ಶ್ರೀಮತಿ ಉಷಾಮ್ಮ  ಅವರೊಂದಿಗೆ ಉಪ-ರಾಷ್ಟ್ರಪತಿ ನಿವಾಸದ ಹುಲ್ಲುಹಾಸಿನ ಮೇಲೆ ಯೋಗಾಭ್ಯಾಸ ಮಾಡಿದರು.

***(Release ID: 1728965) Visitor Counter : 227