ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದ ದೈನಿಕ ಹೊಸ ಪ್ರಕರಣಗಳ ಸಂಖ್ಯೆ 81 ದಿನಗಳ ಬಳಿಕ  60,000 ಕ್ಕಿಂತ ಕಡಿಮೆ , ಕಳೆದ 24 ಗಂಟೆಗಳಲ್ಲಿ ವರದಿಯಾದ ದೈನಿಕ ಹೊಸ ಪ್ರಕರಣಗಳು 58,419  ಎರಡು ತಿಂಗಳಲ್ಲಿಯೇ ಕನಿಷ್ಠ


ಭಾರತದ ಸಕ್ರಿಯ ಪ್ರಕರಣಗಳ ಹೊರೆ ಇನ್ನಷ್ಟು ಇಳಿಕೆಯಾಗಿ 7,29,243ರಲ್ಲಿದೆ

ಸತತ 38 ನೇ ದಿನವೂ ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು

ಗುಣಮುಖ ದರ 96.27% ಗೆ  ಏರಿಕೆ

ದೈನಿಕ ಪಾಸಿಟಿವ್ ದರ 3.22%,ರಲ್ಲಿದೆ. ಸತತ 13 ನೇ ದಿನವೂ ಪಾಸಿಟಿವ್ ದರ 5% ಗಿಂತ ಕೆಳಗಿದೆ

Posted On: 20 JUN 2021 10:11AM by PIB Bengaluru

ಪ್ರಮುಖ ಬೆಳವಣಿಗೆಯೊಂದರಲ್ಲಿ ಕಳೆದ 81 ದಿನಗಳ ಬಳಿಕ ಭಾರತದಲ್ಲಿ ದೈನಿಕ 60,000 ಕ್ಕಿಂತ    ಕಡಿಮೆ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ  ಕಳೆದ 24 ಗಂಟೆಗಳಲ್ಲಿ 58,419 ಹೊಸ ಪ್ರಕರಣಗಳು ವರದಿಯಾಗಿವೆ. ದೈನಂದಿನ  ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಭಾರತವು ನಿರಂತರವಾಗಿ ಸುಸ್ಥಿರ ಇಳಿಕೆಯನ್ನು ದಾಖಲಿಸುತ್ತಿದೆ.

ಸತತ 13 ನೇ ದಿನವೂ ದೈನಿಕ 1 ಲಕ್ಷಕ್ಕಿಂತ ಕಡಿಮೆ ಹೊಸ ಪ್ರಕರಣಗಳು  ದಾಖಲಾಗುತ್ತಿವೆ. ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು  ಸಂಯುಕ್ತವಾಗಿ ಅನುಸರಿಸಿದ  ಪ್ರಯತ್ನಗಳಿಗೆ ದೊರೆತ ಫಲ ಇದಾಗಿದೆ.

https://static.pib.gov.in/WriteReadData/userfiles/image/image001ZJ0X.jpg

ಭಾರತದ ಸಕ್ರಿಯ ಪ್ರಕರಣಗಳ ಹೊರೆ ಸತತ ಇಳಿಕೆಯಾಗುತ್ತಿದೆ. ಇಂದು ದೇಶದ ಸಕ್ರಿಯ ಪ್ರಕರಣಗಳ ಹೊರೆ 7,29,243 ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ 30,776 ನಿವ್ವಳ ಇಳಿಕೆ ಕಂಡು ಬಂದಿದೆ. ಮತ್ತು ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಬರೇ 2.44% ರಷ್ಟಿದೆ.

https://static.pib.gov.in/WriteReadData/userfiles/image/image002HLJN.jpg

ಕೋವಿಡ್ -19 ಸೋಂಕಿನಿಂದ ಹೆಚ್ಚು ಜನರು ಗುಣಮುಖರಾಗುತ್ತಿದ್ದು, ಭಾರತದ ದೈನಿಕ ಚೇತರಿಕೆ/ಗುಣಮುಖ ಪ್ರಕರಣಗಳ ಸಂಖ್ಯೆ ಸತತ 38 ನೇ ದಿನವೂ  ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 87,619 ಮಂದಿ ಗುಣಮುಖರಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೈನಿಕ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖ ಪ್ರಕರಣಗಳು 29 ಸಾವಿರದಷ್ಟು (29,200)   ಹೆಚ್ಚಾಗಿವೆ.

https://static.pib.gov.in/WriteReadData/userfiles/image/image003E8SZ.jpg

ಜಾಗತಿಕ ಸಾಂಕ್ರಾಮಿಕ ಆರಂಭಗೊಂಡಂದಿನಿಂದ ಸೋಂಕಿತರಾಗಿದ್ದವರಲ್ಲಿ  2,87,66,009 ಮಂದಿ ಈಗಾಗಲೇ ಕೋವಿಡ್ -19 ರಿಂದ ಗುಣಮುಖರಾಗಿದ್ದಾರೆಮತ್ತು ಕಳೆದ 24 ಗಂಟೆಗಳಲ್ಲಿ 87,619 ಮಂದಿ ಗುಣಮುಖರಾಗಿದ್ದಾರೆ. ಇದರಿಂದ  ಒಟ್ಟು  ಗುಣಮುಖ ದರ 96.27%, ಆಗಿದೆ, ಅದು ಸುಸ್ಥಿರ ಹೆಚ್ಚಳದ ಪ್ರವೃತ್ತಿಯನ್ನು ದಾಖಲಿಸುತ್ತಿದೆ.

https://static.pib.gov.in/WriteReadData/userfiles/image/image00444NT.jpg

ದೇಶದಲ್ಲಿ ಕಳೆದ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ ಒಟ್ಟು 18,11,446 ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಭಾರತವು ಇದುವರೆಗೆ ಒಟ್ಟು 39.10ಕೋಟಿ (39,10,19,083) ಪರೀಕ್ಷೆಗಳನ್ನು ನಡೆಸಿದೆ.

ಒಂದೆಡೆ ದೇಶಾದ್ಯಂತ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದರೆ, ಸಾಪ್ತಾಹಿಕವಾಗಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಸತತ ಇಳಿಕೆ ಕಂಡು ಬಂದಿದೆ. ಸಾಪ್ತಾಹಿಕ ಪಾಸಿಟಿವ್ ದರ ಪ್ರಸ್ತುತ 3.43% ಇದೆ, ದೈನಿಕ ಪಾಸಿಟಿವ್ ದರ ಇಂದು 3.22% ಆಗಿದೆ. ಅದು ಸತತ 13ನೇ ದಿನವೂ 5% ಗಿಂತ ಕೆಳಗಿದೆ.

https://static.pib.gov.in/WriteReadData/userfiles/image/image005P0D8.jpg

ಇಂದು ಬೆಳಗ್ಗೆ 7 ಗಂಟೆಯವರೆಗಿನ  ತಾತ್ಕಾಲಿಕ ವರದಿಗಳ ಪ್ರಕಾರ ಒಟ್ಟು 37,91,686 ಕಾರ್ಯಕ್ರಮಗಳ ಮೂಲಕ 27,66,93,572 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ  38,10,554 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ.

ವಿವರಗಳು ಕೆಳಗಿನಂತಿವೆ:

ಎಚ್.ಸಿ.ಡಬ್ಲ್ಯು

1ನೇ ಡೋಸ್

1,01,19,241

2ನ್ ಡೋಸ್

70,65,889

ಎಫ್.ಎಲ್.ಡಬ್ಲ್ಯು.

1ನೇ ಡೋಸ್

1,71,08,593

2ನ್ ಡೋಸ್

90,32,813

18-44 ವರ್ಷ ವಯೋಗುಂಪಿನವರು

1ನೇ ಡೋಸ್

5,42,21,110

2ನ್ ಡೋಸ್

12,27,088

45 ರಿಂದ 59 ವರ್ಷ ವಯೋಗುಂಪಿನವರು

1ನೇ ಡೋಸ್

7,98,16,559

2ನ್ ಡೋಸ್

1,26,54,117

60ವರ್ಷಕ್ಕಿಂತ ಮೇಲ್ಪಟ್ಟವರು

1ನೇ ಡೋಸ್

6,44,21,583

2ನ್ ಡೋಸ್

2,10,26,579

ಒಟ್ಟು

27,66,93,572

***(Release ID: 1728753) Visitor Counter : 254