ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

8,26,740ಕ್ಕೆ ತಲುಪಿದ ಭಾರತದ ಸಕ್ರಿಯ ಪ್ರಕರಣಗಳ ಹೊರೆ; 71 ದಿನಗಳ ಬಳಿಕ ಅತ್ಯಂತ ಕನಿಷ್ಠ


ಕಳೆದ 24 ಗಂಟೆಗಳಲ್ಲಿ 67,208 ಹೊಸ ಪ್ರಕರಣಗಳು ವರದಿಯಾಗಿವೆ

ಸತತ 35ನೇ ದಿನ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸಿದ ದೈನಂದಿನ ಚೇತರಿಕೆ ಪ್ರಕರಣಗಳು

ಚೇತರಿಕೆ ದರ ಮತ್ತಷ್ಟು ಹೆಚ್ಚಾಗಿದ್ದು, ಶೇ. 95.93%ಕ್ಕೆ ತಲುಪಿದೆ

ದೈನಂದಿನ ಪಾಸಿಟಿವಿಟಿ ದರವು ಶೇ. 3.48% ರಷ್ಟಿದೆ; ಸತತ 10 ದಿನಗಳಿಂದ ಶೇ. 5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ

Posted On: 17 JUN 2021 10:31AM by PIB Bengaluru

ಭಾರತದ ದೈನಂದಿನ ಹೊಸ ಕೋವಿಡ್ ಪ್ರಕರಣಗಳಲ್ಲಿ ನಿರಂತರ ಕುಸಿತ ಮುಂದುವರಿದಿದ್ದು, ಕಳೆದ  24 ಗಂಟೆಗಳಲ್ಲಿ ದೇಶದಲ್ಲಿ 67,208 ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ.

ಸತತವಾಗಿ ಕಳೆದ 10 ದಿನಗಳಿಂದ 1 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ.  ಇದು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರಂತರ ಹಾಗೂ ಸಹಯೋಗದ ಪ್ರಯತ್ನಗಳ ಫಲವಾಗಿದೆ.

https://static.pib.gov.in/WriteReadData/userfiles/image/image001TDE3.jpg

ಭಾರತವು ಸಕ್ರಿಯ ಪ್ರಕರಣಗಳ ಹೊರೆಯಲ್ಲಿ ನಿರಂತರ ಕುಸಿತಕ್ಕೆ ಸಾಕ್ಷಿಯಾಗಿದೆ. ದೇಶದ ಸಕ್ರಿಯ ಪ್ರಕರಣಗಳ ಹೊರೆ ಇಂದು 8,26,740 ರಷ್ಟಿದೆ. ಇದು 71 ದಿನಗಳ ನಂತರ ಸಕ್ರಿಯ ಪ್ರಕರಣಗಳಲ್ಲಿ ಅತ್ಯಂತ ಕನಿಷ್ಠ ಮಟ್ಟವೆನಿಸಿದೆ.

ಕಳೆದ 24 ಗಂಟೆಗಳಲ್ಲಿ ನಿವ್ವಳ 38,692  ಪ್ರಕರಣಗಳ ಕುಸಿತ ಕಂಡು ಬಂದಿದೆ ಮತ್ತು ಈಗ ದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳು ಪ್ರಮಾಣ ಕೇವಲ 2.78% ರಷ್ಟು ಮಾತ್ರ.

https://static.pib.gov.in/WriteReadData/userfiles/image/image002PYXX.jpg

ಕೋವಿಡ್-19 ಸೋಂಕಿನಿಂದ ಹೆಚ್ಚಿನ ಜನರು ಚೇತರಿಸಿಕೊಳ್ಳುತ್ತಿರುವುದರಿಂದ, ಭಾರತದ ದೈನಂದಿನ ಚೇತರಿಕೆಗಳು ಈಗ ಸತತ 35 ದಿನಗಳಿಂದ ಹೊಸ ಪ್ರಕರಣಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿವೆ.  ಕಳೆದ 24 ಗಂಟೆಗಳಲ್ಲಿ 1,03,570 ಚೇತರಿಕೆಗಳು ದಾಖಲಾಗಿವೆ.

ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ 36 ಸಾವಿರಕ್ಕೂ ಹೆಚ್ಚು (36,362)  ಚೇತರಿಕೆಗಳು ವರದಿಯಾಗಿವೆ.

https://static.pib.gov.in/WriteReadData/userfiles/image/image0031RO1.jpg

ಸಾಂಕ್ರಾಮಿಕದ ಆರಂಭದಿಂದ ಕೋವಿಡ್‌ -19 ಸೋಂಕಿಗೆ ಒಳಗಾದವರ ಪೈಕಿ ಈಗಾಗಲೇ 2,84,91,670 ಜನರು ಚೇತರಿಸಿಕೊಂಡಿದ್ದಾರೆ  ಮತ್ತು ಕಳೆದ 24 ಗಂಟೆಗಳಲ್ಲಿ 1,03,570 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದು ಒಟ್ಟಾರೆ 95.93% ಚೇತರಿಕೆ ದರವನ್ನು ಸೂಚಿಸುತ್ತದೆ ಮತ್ತು ಪ್ರಮಾಣದಲ್ಲಿ ನಿರಂತರ ಹೆಚ್ಚಳ ಪ್ರವೃತ್ತಿ ಕಂಡು ಬಂದಿದೆ.

https://static.pib.gov.in/WriteReadData/userfiles/image/image004JKCA.jpg

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 19,31,249 ಪರೀಕ್ಷೆಗಳನ್ನು ನಡೆಸಲಾಯಿತು. ಒಟ್ಟಾರೆಯಾಗಿ, ಭಾರತವು ಇಲ್ಲಿಯವರೆಗೆ 38.52 ಕೋಟಿ (38,52,38,220) ಪರೀಕ್ಷೆಗಳನ್ನು ನಡೆಸಿದೆ.

ಒಂದು ಕಡೆ ದೇಶಾದ್ಯಂತ ಪರೀಕ್ಷೆಯನ್ನು ಹೆಚ್ಚಿಸಿದ್ದರೂ, ಸಾಪ್ತಾಹಿಕವಾಗಿ ಪ್ರಕರಣಗಳ ಪಾಸಿಟಿವಿಟಿಯಲ್ಲಿ(ಕಳೆದ  7 ದಿನಗಳ ಸರಾಸರಿ)  ನಿರಂತರ ಕುಸಿತ ಕಂಡು ಬಂದಿದೆ. ಸಾಪ್ತಾಹಿಕ ಪಾಸಿಟಿವಿಟಿ ದರವು ಪ್ರಸ್ತುತ 3.99%  ರಷ್ಟಿದ್ದರೆ,  ದೈನಂದಿನ ಪಾಸಿಟಿವಿಟಿ ದರವು ಇಂದು 3.48% ರಷ್ಟಿದೆ. ಇದು ಈಗ ಸತತ 10 ದಿನಗಳಿಂದ 5% ಗಿಂತಲೂ ಕಡಿಮೆ ಮಟ್ಟದಲ್ಲೇ ಉಳಿದಿದೆ.

https://static.pib.gov.in/WriteReadData/userfiles/image/image005ME3T.jpg

ಭಾರತದ ಒಟ್ಟಾರೆ ಲಸಿಕೆ ವ್ಯಾಪ್ತಿ ಇಂದು 26.55 ಕೋಟಿ ಮೀರಿದೆ. ಇಂದು ಬೆಳಿಗ್ಗೆ 7 ಗಂಟೆಯವರೆಗಿನ ವರದಿಯ ಪ್ರಕಾರ 36,58,159 ಸೆಷನ್‌ಗಳ ಮೂಲಕ ಒಟ್ಟು 26,55,19,251 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 34,63,961 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.  

ಇವುಗಳಲ್ಲಿ ಇವು ಸೇರಿವೆ:

ಆರೋಗ್ಯ ಕಾರ್ಯಕರ್ತರು

1ನೇ  ಡೋಸ್

1,00,88,081

2ನೇ  ಡೋಸ್

70,17,838

ಮುಂಚೂಣಿ ಕಾರ್ಯಕರ್ತರು

1ನೇ  ಡೋಸ್

1,69,56,515

2ನೇ  ಡೋಸ್

89,36,711

18-44 ವರ್ಷ ವಯೋಮಾನದವರು

1ನೇ  ಡೋಸ್

4,73,43,608

2ನೇ  ಡೋಸ್

9,69,085

45 ರಿಂದ 60 ವರ್ಷ ವಯೋಮಾನದವರು

1ನೇ  ಡೋಸ್

7,79,22,224

2ನೇ  ಡೋಸ್

1,22,96,349

60 ವರ್ಷ ಮೀರಿದವರು

1ನೇ  ಡೋಸ್

6,35,37,652

2ನೇ  ಡೋಸ್

2,04,51,188

ಒಟ್ಟು

26,55,19,251

***


(Release ID: 1727916) Visitor Counter : 215