ಹಣಕಾಸು ಸಚಿವಾಲಯ

2021-22ರ ಹಣಕಾಸು ವರ್ಷದ ನಿವ್ವಳ ನೇರ ತೆರಿಗೆ ಸಂಗ್ರಹವು ಶೇ.100 ಕ್ಕಿಂತ ಹೆಚ್ಚಾಗಿದೆ


2021-22ರ ಹಣಕಾಸು ವರ್ಷದ ಮುಂಗಡ ತೆರಿಗೆ ಸಂಗ್ರಹವು ರೂ. 28,780 ಕೋಟಿಯಾಗಿದ್ದು ಇದು ಅಂದಾಜು ಶೇ.146 ನಷ್ಟು ತೋರಿಸುತ್ತದೆ

ಆರ್ಥಿಕತೆಯ ಮೇಲೆ ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾದ ಬಿಕ್ಕಟ್ಟಿನ ಹೊರತಾಗಿಯೂ 2021-22ರ ಹಣಕಾಸು ವರ್ಷದ ನಿವ್ವಳ ನೇರ ತೆರಿಗೆ ಸಂಗ್ರಹವು ಹೆಚ್ಚು ವೇಗವಾಗಿ ಬೆಳೆದಿದೆ

2021-22ರ ಹಣಕಾಸು ವರ್ಷದಲ್ಲಿ 30,731 ಕೋಟಿ ರೂ. ಗಳ ಮರುಪಾವತಿಯನ್ನು ಮಾಡಲಾಗಿದೆ

Posted On: 16 JUN 2021 4:44PM by PIB Bengaluru

ಜೂನ್ 15, 2021 ರಂತೆ 2021-22ರ ಹಣಕಾಸು ವರ್ಷದ ನೇರ ತೆರಿಗೆ ಸಂಗ್ರಹದ ಅಂಕಿಅಂಶಗಳ ಪ್ರಕಾರ, ನಿವ್ವಳ ಸಂಗ್ರಹವು ರೂ.1,85,871 ಕೋಟಿಗಳಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ರೂ.92,762 ಕೋಟಿಗಳಾಗಿದ್ದವು. ಇದು ಹಿಂದಿನ ವರ್ಷದ ಸಂಗ್ರಹಕ್ಕಿಂತ ಶೇ.100.4 ರಷ್ಟು ಹೆಚ್ಚಾಗಿರುವುದನ್ನು ತೋರಿಸುತ್ತದೆ. ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ ಕಾರ್ಪೊರೇಷನ್ ತೆರಿಗೆ (ಸಿಐಟಿ) ರೂ.74,356 ಕೋಟಿ (ಮರುಪಾವತಿಯ ನಿವ್ವಳ)  ಮತ್ತು ಭದ್ರತಾ ವಹಿವಾಟು ತೆರಿಗೆ (ಎಸ್ಟಿಟಿ) ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) ರೂ. 1,11,043 ಕೋಟಿ (ಮರುಪಾವತಿಯ ನಿವ್ವಳ) ಸೇರಿವೆ.

2021-22 ಹಣಕಾಸು ವರ್ಷದ ನೇರ ತೆರಿಗೆಗಳ ಒಟ್ಟು ಸಂಗ್ರಹ (ಮರುಪಾವತಿಗೆ ಹೊಂದಾಣಿಕೆ ಮಾಡುವ ಮೊದಲು) ಹಿಂದಿನ ವರ್ಷದ ಇದೇ ಅವಧಿಯಲ್ಲಿ ರೂ .1,37,825 ಕೋಟಿಗೆ ಹೋಲಿಸಿದರೆ ರೂ .2,16,602 ಕೋಟಿಗಳಷ್ಟಿದೆ. ಇದರಲ್ಲಿ ಕಾರ್ಪೊರೇಷನ್ ತೆರಿಗೆ (ಸಿಐಟಿ) ರೂ .96,923 ಕೋಟಿ ಮತ್ತು ಭದ್ರತಾ ವಹಿವಾಟು ತೆರಿಗೆ (ಎಸ್ಟಿಟಿ) ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) ರೂ .1,19,197 ಕೋಟಿ ಇದೆ.  ಇತರ ರೀತಿಯ ತೆರಿಗೆ ಸಂಗ್ರಹದಲ್ಲಿ ರೂ .28,780 ಕೋಟಿಗಳ ಮುಂಗಡ ತೆರಿಗೆ, ರೂ .1,56,824 ಕೋಟಿ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ, ಸ್ವ-ಮೌಲ್ಯಮಾಪನ ತೆರಿಗೆ ರೂ. 15,343 ಕೋಟಿ; ನಿಯಮಿತ ಮೌಲ್ಯಮಾಪನ ತೆರಿಗೆ ರೂ. 14,079 ಕೋಟಿ; ಡಿವಿಡೆಂಡ್ ವಿತರಣಾ ತೆರಿಗೆ ರೂ .1086 ಕೋಟಿ ಮತ್ತು ಇತರ ಸಣ್ಣ  ವಿಭಾಗದ ಅಡಿಯಲ್ಲಿನ ತೆರಿಗೆ ರೂ. 491 ಕೋಟಿ ಸೇರಿವೆ.

ಹೊಸ ಹಣಕಾಸಿನ ವರ್ಷದ ಆರಂಭಿಕ ತಿಂಗಳುಗಳ ಸವಾಲಿನ ಹೊರತಾಗಿಯೂ, 2021-22ರ ಮೊದಲ ತ್ರೈಮಾಸಿಕದಲ್ಲಿ ಮುಂಗಡ ತೆರಿಗೆ ಸಂಗ್ರಹವು  28,780 ಕೋಟಿ ರೂಪಾಯಿಗಳಾಗಿವೆ  ಇದು ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ  11,714 ಕೋಟಿ ರೂಪಾಯಿಗಳಾಗಿದ್ದವು. ಇದು ಸುಮಾರು ಶೇ.146 ನಷ್ಟು ಬೆಳವಣಿಗೆಯನ್ನು ತೋರಿಸುತ್ತದೆ. ಇದು ಕಾರ್ಪೊರೇಷನ್ ತೆರಿಗೆ(ಸಿಐಟಿ) 18,358 ಕೋಟಿ ರೂಪಾಯಿ ಮತ್ತು ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) 10,422 ಕೋಟಿ ರೂಪಾಯಿಗಳನ್ನು ಒಳಗೊಂಡಿವೆ.  ಬ್ಯಾಂಕುಗಳಿಂದ ಮತ್ತಷ್ಟು ಮಾಹಿತಿ ಬಂದ ನಂತರ ಈ ಮೊತ್ತ ಹೆಚ್ಚಾಗುವ ನಿರೀಕ್ಷೆಯಿದೆ.

2021-22 ಹಣಕಾಸು ವರ್ಷದಲ್ಲಿ  30,731 ಕೋಟಿ ರೂಪಾಯಿಗಳ ಮರುಪಾವತಿಯನ್ನು ಸಹ ನೀಡಲಾಗಿದೆ.

***
 (Release ID: 1727721) Visitor Counter : 205