ಹಣಕಾಸು ಸಚಿವಾಲಯ
44 ನೇ ಜಿಎಸ್ ಟಿ ಮಂಡಳಿ ಸಭೆಯ ಶಿಫಾರಸುಗಳು
ಕೋವಿಡ್ -19 ಪರಿಹಾರ ಮತ್ತು ನಿರ್ವಹಣೆಯಲ್ಲಿ ಬಳಸಲಾಗುವ ಸರಕುಗಳ ಮೇಲಿನ ಜಿಎಸ್ ಟಿ ದರಗಳಲ್ಲಿ ಬದಲಾವಣೆ
Posted On:
12 JUN 2021 3:39PM by PIB Bengaluru
44ನೇ ಜಿಎಸ್ ಟಿ ಮಂಡಳಿ ಸಭೆಯು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಇಂದು ಇಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯಿತು. ಮಂಡಳಿಯು ತನ್ನ ಸಭೆಯಲ್ಲಿ ಕೋವಿಡ್ -19 ಪರಿಹಾರ ಮತ್ತು ನಿರ್ವಹಣೆಯಲ್ಲಿ ಬಳಸಲಾಗುವ ನಿರ್ದಿಷ್ಟ ವಸ್ತುಗಳ ಮೇಲಿನ ಜಿಎಸ್ ಟಿ ದರವನ್ನು ಸೆಪ್ಟೆಂಬರ್ 30, 2021ರವರೆಗೆ ಕಡಿತ ಮಾಡಲು ನಿರ್ಧರಿಸಿದೆ.
ಸಭೆಯಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಮಂತ್ರಿಗಳು ಮತ್ತು ಹಣಕಾಸು ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಶಿಫಾರಸುಗಳ ವಿವರಗಳು ಹೀಗಿವೆ:
ಕ್ರಮ ಸಂಖ್ಯೆ
|
ವಿವರ
|
ಪ್ರಸ್ತುತ
ಜಿ ಎಸ್ ಟಿ ದರ
|
ಜಿ ಎಸ್ ಟಿ ಮಂಡಳಿ ಶಿಫಾರಸು ಮಾಡಿರುವ
ಜಿ ಎಸ್ ಟಿ ದರ
|
- ಔಷಧಿಗಳು
|
1.
|
ಟೋಸಿಲಿಜುಮಾಬ್
|
5%
|
Nil
|
2.
|
ಆಂಫೊಟೆರಿಸಿನ್ ಬಿ
|
5%
|
Nil
|
3.
|
ಹೆಪಾರಿನ್ ನಂತಹ ಆಂಟಿ ಕೋಗುಲಂಟ್ ಗಳು
|
12%
|
5%
|
4.
|
ರೆಮ್ ಡೆಸಿವಿರ್
|
12%
|
5%
|
5.
|
ಕೋವಿಡ್ ಚಿಕಿತ್ಸೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಔಷಧ ಇಲಾಖೆ ಶಿಫಾರಸು ಮಾಡಿದ ಯಾವುದೇ ಔಷಧಿ
|
ಅನ್ವಯಿಸುವ ದರ
|
5%
|
- ಆಮ್ಲಜನಕ, ಆಮ್ಲಜನಕ ಉತ್ಪಾದನಾ ಉಪಕರಣಗಳು ಮತ್ತು ಸಂಬಂಧಿತ ವೈದ್ಯಕೀಯ ಸಾಧನಗಳು
|
1.
|
ವೈದ್ಯಕೀಯ ದರ್ಜೆಯ ಆಮ್ಲಜನಕ
|
12%
|
5%
|
2.
|
ಆಕ್ಸಿಜನ್ ಸಾಂದ್ರಕ / ಜನರೇಟರ್ ವೈಯಕ್ತಿಕ ಆಮದನ್ನೂ ಸೇರಿಸಿ
|
12%
|
5%
|
3.
|
ವೆಂಟಿಲೇಟರ್‌ಗಳು
|
12%
|
5%
|
4.
|
ವೆಂಟಿಲೇಟರ್ ಮುಖಕವಚಗಳು / ಕ್ಯಾನುಲಾ / ಹೆಲ್ಮೆಟ್
|
12%
|
5%
|
5.
|
ಬೈಪಾಪ್ ಯಂತ್ರ
|
12%
|
5%
|
6.
|
ಹೈ ಫ್ಲೋ ನಾಸಲ್ ಕ್ಯಾನುಲಾ (ಎಚ್‌ಎಫ್‌ಎನ್‌ಸಿ) ಉಪಕರಣ
|
12%
|
5%
|
- Testing Kits and Machines
|
1.
|
ಕೋವಿಡ್ ಪರೀಕ್ಷಾ ಕಿಟ್‌ಗಳು
|
12%
|
5%
|
2.
|
ಡಿ-ಡೈಮರ್, ಐಎಲ್ -6, ಫೆರಿಟಿನ್ ಮತ್ತು ಎಲ್ ಡಿಹೆಚ್ ನಂತಹ ನಿರ್ದಿಷ್ಟಪಡಿಸಿದ ರೋಗನಿರ್ಣಯ ಕಿಟ್‌ಗಳು,
|
12%
|
5%
|
- ಇ. ಇತರ ಕೋವಿಡ್ -19 ಸಂಬಂಧಿತ ಪರಿಹಾರ ಸಾಮಗ್ರಿಗಳು
|
1.
|
ಪಲ್ಸ್ ಆಕ್ಸಿಮೀಟರ್‌ಗಳು ವೈಯಕ್ತಿಕ ಆಮದನ್ನೂ ಸೇರಿಸಿ
|
12%
|
5%
|
2.
|
ಹ್ಯಾಂಡ್ ಸ್ಯಾನಿಟೈಸರ್
|
18%
|
5%
|
3.
|
ತಾಪಮಾನ ತಪಾಸಣೆ ಉಪಕರಣಗಳು
|
18%
|
5%
|
4.
|
ಸ್ಮಶಾನಕ್ಕಾಗಿ ಅನಿಲ / ವಿದ್ಯುತ್ / ಇತರ ಕುಲುಮೆಗಳು, ಅವುಗಳ ಸ್ಥಾಪನೆ ಸೇರಿದಂತೆ.
|
18%
|
5%
|
5.
|
ಆಂಬ್ಯುಲೆನ್ಸ್
|
28%
|
12%
|
ಈ ದರ ಕಡಿತ / ವಿನಾಯಿತಿಗಳು ಸೆಪ್ಟೆಂಬರ್ 30, 2021 ರವರೆಗೆ ಜಾರಿಯಲ್ಲಿರುತ್ತವೆ.
***
(Release ID: 1726655)
Visitor Counter : 335
Read this release in:
Telugu
,
Punjabi
,
Gujarati
,
Odia
,
Malayalam
,
English
,
Urdu
,
Marathi
,
Hindi
,
Assamese
,
Bengali
,
Tamil