ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಲಸಿಕೀಕರಣ ಕುರಿತ ಮಿಥ್ಯೆಗಳ ನಿವಾರಣೆ


ಕೋವಿಡ್-19 ಸಾಂಕ್ರಾಮಿಕ ಕೊನೆಗಾಣಿಸಲುಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಸಮಾನ ಲಭ್ಯತೆ ನಿರ್ಣಾಯಕ

ಕೋವಿಡ್-19 ಲಸಿಕೀಕರಣ ವ್ಯಾಪ್ತಿ, ಪೋಲಾಗುವುದು, ಬಳಕೆಯ ಮೇಲೆ ನಿಗಾವಹಿಸಲು ಕೋವಿಡ್-19 ಲಸಿಕೆ ವಿಚಕ್ಷಣಾ ಜಾಲ (ಕೋವಿನ್ ) ವ್ಯವಸ್ಥೆ

ಲಸಿಕೆ ಪೋಲಾಗುವುದನ್ನು ತಪ್ಪಿಸುವುದರಿಂದ ಲಸಿಕೀಕರಣ ವೃದ್ಧಿ

Posted On: 11 JUN 2021 2:51PM by PIB Bengaluru

ಭಾರತ ಸರ್ಕಾರ ಕೋವಿಡ್-19 ಲಸಿಕೆ ಪೋಲಾಗುವುದನ್ನು ತಡೆಯಲು ಸಕ್ರಿಯ ಪ್ರಯತ್ನಗಳನ್ನು ನಡೆಸುತ್ತಿದೆ ಮತ್ತು ಸಾಂಕ್ರಾಮಿಕದ ವಿರುದ್ಧ ವ್ಯವಸ್ಥಿತವಾಗಿ ಹೋರಾಟ ನಡೆಸಲು ಲಸಿಕೆ ಡೋಸ್ ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗದರ್ಶನ ನೀಡುತ್ತಿದೆ.

 

ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಲಸಿಕೆ ಪೋಲಾಗುವುದನ್ನು ಶೇ.1ಕ್ಕಿಂತ ಕಡಿಮೆ ಮಾಡುವಂತೆ ಒತ್ತಡ ಹೇರುತ್ತಿದೆ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ವರದಿಯಾಗಿರುವುದು ವಾಸ್ತವಕ್ಕೆ ದೂರವಾದ ಮತ್ತು ಅನಪೇಕ್ಷಿತ ಸಂಗತಿಯಾಗಿದೆ.

 

ಕೋವಿಡ್-19 ಸಾಂಕ್ರಾಮಿಕ ರೋಗವು ಕಳೆದ ಶತಮಾನದಲ್ಲಿ ಅನಿರೀಕ್ಷಿತ ಜಾಗತಿಕ ಆರೋಗ್ಯ ಬಿಕ್ಕಟ್ಟಾಗಿದ್ದು, ಅದು ಜಗತ್ತಿನ ಸಂವಹನ ಮತ್ತು ವರ್ತನೆಯ ವಿಧಾನವನ್ನು ಬದಲಾಯಿಸಲು ಕಾರಣವಾಗಿದೆ.  ಕೋವಿಡ್-19 ಸೋಂಕು ಮತ್ತು ಅದರ ಸಂಬಂಧಿ ಮರಣ ಹಾಗೂ ಅಸ್ವಸ್ಥತೆಯಿಂದ ರಕ್ಷಿಸಲು ಕೋವಿಡ್-19 ಲಸಿಕೆ ಅತ್ಯಂತ ಪ್ರಮುಖವಾಗಿದೆ. ಕೋವಿಡ್-19 ಸಾಂಕ್ರಾಮಿಕ ಕೊನೆಗಾಣಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಸಮಾನ ಲಭ್ಯವಾಗುವಂತೆ ಮಾಡುವುದು ಅತ್ಯಂತ ನಿರ್ಣಾಯಕಾಗಿದೆ. ಲಸಿಕೆ ಅಭಿವೃದ್ಧಿಗೆ ಸಾಕಷ್ಟು ಸಮಯ ಹಿಡಿಯುತ್ತದೆ ಮತ್ತು ಲಸಿಕೆಗಳಿಗೆ ಬೇಡಿಕೆ ಪೂರೈಕೆಯಾಗುತ್ತಿರುವುದಕ್ಕಿಂತ ಹಲವು ಪಟ್ಟು ಹೆಚ್ಚಿದೆ.  ಆದ್ದರಿಂದ ಸಾಂಕ್ರಾಮಿಕ ರೋಗವನ್ನು ಪರಿಹರಿಸಲು ಈ ಅಮೂಲ್ಯ ಅಸ್ತ್ರವನ್ನು ಸೂಕ್ತ ಮತ್ತು ನ್ಯಾಯಯುತವಾಗಿ ಬಳಸಿಕೊಳ್ಳಲು ಮೇಲ್ವಿಚಾರಣೆ ಮಾಡುವುದು ಮತ್ತು ಖಾತ್ರಿಪಡಿಸಿಕೊಳ್ಳುವುದು ಅತ್ಯಗತ್ಯ.

 

ಕೋವಿಡ್-19 ಲಸಿಕೆ ಅತ್ಯವಶ್ಯಕ ಸಾರ್ವಜನಿಕ ಆರೋಗ್ಯ ಸಾಮಗ್ರಿಯಾಗಿದ್ದು, ಅದಕ್ಕೆ ಜಾಗತಿಕ ಕೊರತೆ ಉಂಟಾಗಿದೆ. ಆದ್ದರಿಂದ ಲಸಿಕೆ ಪೋಲಾಗುವುದುನ್ನು ಕಡಿಮೆ ಮಾಡಬೇಕಿದೆ ಮತ್ತು ಹೆಚ್ಚಿನ ಜನರಿಗೆ ಲಸಿಕೆ ಲಭ್ಯವಾಗುವಂತೆ ಮಾಡಲು ಕನಿಷ್ಠ ಮಟ್ಟದಲ್ಲಿ ಪೋಲಾಗುವುದನ್ನು ಕಾಯ್ದುಕೊಳ್ಳಬೇಕಿದೆ. ಗೌರವಾನ್ವಿತ ಪ್ರಧಾನಮಂತ್ರಿ ಅವರು ಅಗ್ಗಾಗ್ಗೆ ಕನಿಷ್ಠ ಲಸಿಕೆ ಪೋಲಾಗುವುದನ್ನು ಖಾತ್ರಿಪಡಿಸಿಕೊಳ್ಳಬೇಕು, ಲಸಿಕೆ ಗರಿಷ್ಠ ಸಂಖ್ಯೆಯ ಜನರಿಗೆ ತಲುಪುವುದನ್ನು ಖಾತ್ರಿಪಡಿಸಬೇಕು ಎಂದು ಪ್ರತಿಪಾದಿಸುತ್ತಲೇ ಇದ್ದಾರೆ. 

 

ಲಸಿಕೆ ಪೋಲಾಗುವುದನ್ನು ತಗ್ಗಿಸುವುದು ಎಂದರೆ ಹೆಚ್ಚಿನ ಜನರಿಗೆ ಚುಚ್ಚುಮದ್ದು ಲಭಿಸುವಂತೆ ಮಾಡುವುದು ಮತ್ತು ಕೋವಿಡ್-19 ವಿರುದ್ಧ ಹೋರಾಟ ಬಲವರ್ಧನೆಗೊಳಿಸುವುದು ಎಂದರ್ಥ. ಪ್ರತಿಯೊಂದು ಡೋಸ್ ಉಳಿಸುವುದು ಎಂದರೆ ಮತ್ತೊಬ್ಬ ವ್ಯಕ್ತಿಗೆ ಲಸಿಕೆ ನೀಡುವುದು ಎಂದು. ಭಾರತ ಕೋವಿಡ್-10 ಲಸಿಕೆ ವಿಚಕ್ಷಣಾ ಜಾಲ( ಕೋ-ವಿನ್ ) ಅಂತರ್ಗತ ವ್ಯವಸ್ಥೆಯನ್ನು ಬಳಸುತ್ತಿದೆ, ಇದೊಂದು ಡಿಜಿಟಲ್ ವೇದಿಕೆಯಾಗಿದ್ದು, ಇದು ಫಲಾನುಭವಿಗಳನ್ನು ನೋಂದಾಯಿಸುವುದೇ ಅಲ್ಲದೆ, ದೇಶಾದ್ಯಂತ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿರುವ 29,000 ಶೈತ್ಯಾಗಾರಗಳಲ್ಲಿ ನಿರ್ದಿಷ್ಠ ತಾಪಮಾನದಲ್ಲಿ ಸಂಗ್ರಹ ಮಾಡಿರುವ ಲಸಿಕೆಗಳು ಮತ್ತು ಸೌಕರ್ಯಗಳ ಬಗ್ಗೆ ನೈಜ ಮಾಹಿತಿಯನ್ನು ಒದಗಿಸುತ್ತದೆ. 

 

ಸದ್ಯ ಕೋವಿಡ್-19 ಲಸಿಕೆಗಳಿಗೆ ‘ಮುಕ್ತ ವೈಯಲ್ ನೀತಿ’ ಯಿಲ್ಲ,  ಅಂದರೆ ಒಮ್ಮೆ ಬಾಟಲ್  ಅನ್ನು ತೆರೆದರೆ ಅದನ್ನು ನಿಗದಿತ ಸಮಯದೊಳಗೆ ಬಳಕೆ ಮಾಡಬೇಕು. ಲಸಿಕೆ ನೀಡುವವರು ಬಾಟಲಿಯನ್ನು ತೆರೆಯುವ ಸಮಯ ಮತ್ತು ದಿನಾಂಕವನ್ನು ನಮೂದಿಸುವಂತೆ ಸೂಚಿಸಲಾಗಿದೆ. ಎಲ್ಲಾ ತೆರೆದ ಬಾಟಲಿಯಲ್ಲಿನ ಲಸಿಕೆಯನ್ನು ನಾಲ್ಕು ಗಂಟೆಗಳೊಳಗೆ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಹಲವು ರಾಜ್ಯಗಳಲ್ಲಿ ಕೋವಿಡ್-19 ಲಸಿಕಾ ಅಭಿಯಾನವನ್ನು ಯಾವುದೇ ರೀತಿಯಲ್ಲಿ ಪೋಲಾಗದಂತೆ ಬಾಟಲಿಯಿಂದ ಹೆಚ್ಚಿನ ಡೋಸ್ ಗಳನ್ನು ಪಡೆದುಕೊಳ್ಳುವಂತೆ ಆಯೋಜಿಸುತ್ತಿವೆ. ಇದು ಋಣಾತ್ಮಕ ಪೋಲಾಗುವುದನ್ನು ತಪ್ಪಿಸುತ್ತದೆ. ಆದ್ದರಿಂದ ಲಸಿಕೆ ಪೋಲಾಗುವುದು ಶೇ.1ರಷ್ಟಿರಬೇಕು ಅಥವಾ ಅದಕ್ಕಿಂತ ಕಡಿಮೆ ಇರಬೇಕು ಎಂದು ನಿರೀಕ್ಷಿಸುವುದು ಅಸಮಂಜಸವಲ್ಲ. ಅದು ಸಮಂಜಸ, ಅಪೇಕ್ಷಿತ ಮತ್ತು ಕಾರ್ಯಸಾಧುವಾಗಿದೆ.

 

          ಅಲ್ಲದೆ ಪ್ರತಿಯೊಂದು ಲಸಿಕಾ ಸೆಷನ್ ಸಮಯದಲ್ಲಿ ಕನಿಷ್ಠ 100 ಫಲಾನುಭವಿಗಳಿಗೆ ಲಸಿಕೆ ಹಾಕುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಆದರೆ ದೂರದ ಗುಡ್ಡಗಾಡು ಅಥವಾ  ವಿರಳ ಜನಸಂಖ್ಯೆಯ ಪ್ರದೇಶಗಳಲ್ಲಿ ರಾಜ್ಯಗಳು ಯಾವುದೇ ಲಸಿಕೆ ಪೋಲಾಗುವುದನ್ನು ಖಾತ್ರಿಪಡಿಸಿಕೊಂಡು ಕಡಿಮೆ ಸಂಖ್ಯೆಯ ಫಲಾನುಭವಿಗಳಿಗೆ ಲಸಿಕಾ ಕಾರ್ಯವನ್ನು ಆಯೋಜಿಸಬಹುದು. ಸೂಕ್ತ ಸಂಖ್ಯೆಯ ಫಲಾನುಭವಿಗಳು ಲಭ್ಯವಿದ್ದಾಗ ಲಸಿಕಾ ಶಿಬಿರವನ್ನು ಆಯೋಜಿಸಬಹುದು. 

 

          ಲಸಿಕೆ ನಂತರದ ನಿಗಾ ಸಮಯದಲ್ಲಿ ಫಲಾನುಭವಿಗಳಿಗೆ ಕೋವಿಡ್ ಸೂಕ್ತ ನಡವಳಿಕೆಗಳು, ಲಸಿಕೆ ನಂತರದ ಸಂಭಾವ್ಯ ಅಡ್ಡ ಪರಿಣಾಮ(ಎಇಎಫ್ಐ)ಗಳು, ಹಾಗೂ ಒಂದು ವೇಳೆ ಅಡ್ಡ ಪರಿಣಾಮ ಬೀರಿದರೆ ಆಗ ಎಲ್ಲಿ ಹೋಗಬೇಕು ಎಂಬ ಕುರಿತು ಮಾರ್ಗದರ್ಶನ ನೀಡುವುದಕ್ಕೆ ಬಳಸಿಕೊಳ್ಳಬಹುದು. ಯಾವುದೇ ಲಸಿಕಾ ಕಾರ್ಯಕ್ರಮಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಲಸಿಕಾ ವ್ಯಾಪ್ತಿ ಹೆಚ್ಚಿಸಲು ಸಾಕಷ್ಟು ಸಂಖ್ಯೆಯ ಫಲಾನುಭವಿಗಳಿಗೆ ಲಸಿಕೆ ಹಾಕಬೇಕು. ಈ ಕುರಿತಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿರಂತರವಾಗಿ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ಅಲ್ಲದೆ ಲಸಿಕೆ ಪೋಲಾಗುವುದರ ಕುರಿತು ವಿಶ್ಲೇಷಣೆ ಸೇರಿದಂತೆ ಎಲ್ಲಾ ಹಂತಗಳಲ್ಲಿ ಕೋವಿಡ್-19 ಲಸಿಕೀಕರಣದ ಆಂದೋಲನದ ಮೇಲೆ ನಿರಂತರ ನಿಗಾ ಇರಿಸಲಾಗುತ್ತಿದೆ. ಯಾವುದೇ ರೀತಿಯಲ್ಲೂ ಲಸಿಕೆ ಪೋಲಾಗದಂತೆ ದೋಷವಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. 

 

ಲಸಿಕೀಕರಣ ಶಿಬಿರಗಳ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸುವಂತೆ ಮತ್ತು ಲಸಿಕೆ ಪೋಲಾಗುವ ಪ್ರಮಾಣವನ್ನು ಕನಿಷ್ಠ ಪ್ರಮಾಣದಲ್ಲಿ ಕಾಯ್ದುಕೊಳ್ಳುವಂತೆ ಸಂಬಂಧಿಸಿದ ಕೋವಿಡ್-19 ಲಸಿಕಾ ಕೇಂದ್ರಗಳ ವ್ಯವಸ್ಥಾಪಕರು ಮತ್ತು ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗುತ್ತಿದೆ.

****



(Release ID: 1726356) Visitor Counter : 269