ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರಗಳಿಗಾಗಿ ನಿಯಮಗಳನ್ನು ಪ್ರಕಟಿಸಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ


01 ಜುಲೈ, 2021ರಿಂದ ಜಾರಿಗೆ ಬರಲಿವೆ

Posted On: 11 JUN 2021 2:10PM by PIB Bengaluru

ಮಾನ್ಯತೆ ಪಡೆದ ಚಾಲಕರ ತರಬೇತಿ ಕೇಂದ್ರಗಳು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (ಎಂಒಆರ್‌ಟಿಎಚ್) ಪ್ರಕಟಿಸಿದೆ. ಈ ನಿಯಮಗಳು 2021ರ ಜುಲೈ 01ರಿಂದ ಜಾರಿಗೆ  ಬರಲಿವೆ. ಇಂತಹ ಕೇಂದ್ರಗಳಲ್ಲಿ ದಾಖಲಾಗುವ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ಮತ್ತು ಜ್ಞಾನವನ್ನು ನೀಡಲು ಇದರಿಂದ ಸಹಾಯಕವಾಗಲಿದೆ. ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರಗಳ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿರಬೇಕು:-

1. ಅಭ್ಯರ್ಥಿಗಳಿಗೆ ಉತ್ತಮ ಗುಣಮಟ್ಟದ ತರಬೇತಿಯನ್ನು ಒದಗಿಸಲು ಕೇಂದ್ರವು ಸಿಮ್ಯುಲೇಟರ್‌ಗಳು ಮತ್ತು ಪ್ರತ್ಯೇಕ ಚಾಲನಾ ಪರೀಕ್ಷಾ ಟ್ರ್ಯಾಕ್ ಅನ್ನು ಹೊಂದಿರಬೇಕು.

2. ಮೋಟಾರು ವಾಹನ ಕಾಯ್ದೆ-1988ರ ಅಡಿಯಲ್ಲಿ, ಈ ಕೇಂದ್ರಗಳಲ್ಲಿ ಅಗತ್ಯಗಳಿಗೆ ಅನುಗುಣವಾಗಿ ಪರಿಹಾರ ಮತ್ತು ಪುನಶ್ಚೇತನ ಕೋರ್ಸ್‌ಗಳನ್ನು ಪಡೆಯಲು ಅವಕಾಶವಿರಬೇಕು.

3. ಈ ಕೇಂದ್ರಗಳಲ್ಲಿ ನಡೆಸುವ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ, ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಪ್ರಸ್ತುತ ಪ್ರಾದೇಶಿಕ ಸಾರಿಗೆ (ಆರ್‌ಟಿಒ) ಕಚೇರಿಗಳಲ್ಲಿ ನಡೆಸಲಾಗುತ್ತಿರುವ ಚಾಲನಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು. ಇದರಿಂದ ಇಂತಹ ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪೂರ್ಣಗೊಳಿದ ಬಳಿಕ ಚಾಲನಾ ಪರವಾನಗಿಯನ್ನು ಪಡೆಯಲು ಚಾಲಕರಿಗೆ ಸಹಾಯಕವಾಗಲಿದೆ.

4. ಈ ಕೇಂದ್ರಗಳು ಕೈಗಾರಿಕಾ-ನಿರ್ದಿಷ್ಟ ವಿಶೇಷ ತರಬೇತಿಯನ್ನು ಒದಗಿಸಲು ಅವಕಾಶವಿರುತ್ತದೆ.

ನುರಿತ ಚಾಲಕರ ಕೊರತೆಯು ಭಾರತೀಯ ರಸ್ತೆ ಮಾರ್ಗ ಕ್ಷೇತ್ರದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ.  ರಸ್ತೆ ನಿಯಮಗಳ ಜ್ಞಾನದ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ-2019ರ ಸೆಕ್ಷನ್ 8 ಚಾಲಕ ತರಬೇತಿ ಕೇಂದ್ರಗಳ ಮಾನ್ಯತೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ಅಧಿಕಾರ ನೀಡುತ್ತದೆ.

***(Release ID: 1726267) Visitor Counter : 253